ಕರ್ನಾಟಕದಲ್ಲಿ ಬಾರ್ನ್‌ಫ್ರೀ ಮೋಟಾರ್ಸ್ ಅನ್ನು ಅಧಿಕೃತ ಡೀಲರ್ ಆಗಿ ಘೋಷಿಸಿದ ಪೊಲಾರಿಸ್

ಆಫ್ ರೋಡ್ ವಾಹನಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಪೊಲಾರಿಸ್ ಆಫ್ ರೋಡ್ ವೆಹಿಕಲ್ಸ್ (ORV), ಇದೀಗ M/S Bornfree Motors LLP ಅನ್ನು ಅಧಿಕೃತ ಡೀಲರ್ ಆಗಿ ನೇಮಿಸುವ ಮೂಲಕ ಕರ್ನಾಟಕದಲ್ಲೂ ಮತ್ತೊಂದು ಮಹತ್ವದ ಮೈಲಿಗಲ್ಲು ದಾಖಲಿಸಿದೆ. ಈ ಬಾರ್ನ್‌ಫ್ರೀ ಮೋಟಾರ್ಸ್ ಎಲ್‌ಎಲ್‌ಪಿ ನೇತೃತ್ವವನ್ನು ಪೃಥ್ವಿ ಪ್ರಸಾದ್ ಅವರು ವಹಿಸಿದ್ದಾರೆ.

ಬೋರ್ನ್‌ಫ್ರೀ ಮೋಟಾರ್ಸ್ ಎಲ್‌ಎಲ್‌ಪಿ ನಿರ್ದೇಶಕರಾಗಿರುವ ಪೃಥ್ವಿ ಪ್ರಸಾದ್, ಬಾಲ್ಯದಿಂದಲೂ ಉತ್ಸಾಹಭರಿತ ಆಫ್-ರೋಡರ್ ಆಗಿದ್ದಾರೆ. ಪೊಲಾರಿಸ್ ಉತ್ಪನ್ನಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ. ಕರ್ನಾಟಕದಲ್ಲಿ ಇತ್ತೀಚೆಗೆ ಪೋಲಾರಿಸ್ ಒಆರ್‌ವಿ ಡೀಲರ್ ಆಗಿ ನೇಮಕಗೊಳ್ಳುವುದರೊಂದಿಗೆ ಅವರ ವೃತ್ತಿಯೊಂದಿಗೆ ಅವರ ಉತ್ಸಾಹವನ್ನು ವಿಲೀನಗೊಳಿಸುವ ಅವರ ದೀರ್ಘಕಾಲದ ಕನಸು ನನಸಾಗಿದೆ ಎಂದು ಹೇಳಿಕೊಂಡಿದ್ದಾರೆ.

polaris-has-announced-bornfree-motors-llp-as-the-authorized-dealer-in-karnataka

ಪೃಥ್ವಿ ಪ್ರಸಾದ್ ಅವರು ಅನುಭವಿ ಆಫ್-ರೋಡರ್ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನಲ್ಲಿ ಕ್ರಿಕೆಟ್ ತರಬೇತುದಾರರೂ ಆಗಿದ್ದು, ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. ಪೊಲಾರಿಸ್‌ನೊಂದಿಗೆ ಅಧಿಕೃತ ಡೀಲರ್ ಆಗಿ ಸಂಬಂಧ ಹೊಂದಲು ಖುಷಿಯಾಗಿದೆ. ಕರ್ನಾಟಕದ ಆಫ್-ರೋಡ್ ಉತ್ಸಾಹಿಗಳಿಗೆ ವಿಶ್ವದರ್ಜೆಯ ಪೊಲಾರಿಸ್ ORVಗಳನ್ನು ತರಲು ಉತ್ಸುಕನಾಗಿದ್ದೇನೆ. ಇದು ಉತ್ತಮ ಯಶಸ್ಸನ್ನು ನೀಡುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದರು.

ಪೊಲಾರಿಸ್' ಕರ್ನಾಟಕವನ್ನು ಆಫ್-ರೋಡ್ ವಾಹನಗಳಿಗೆ ಮಹತ್ವದ ವ್ಯಾಪಾರ ಸ್ಥಳವೆಂದು ಗುರುತಿಸಿದೆ. ಬಾರ್ನ್‌ಫ್ರೀ ಮೋಟಾರ್ಸ್ LLP ಯೊಂದಿಗಿನ ಪಾಲುದಾರಿಕೆಯು ಈ ಪ್ರದೇಶದಲ್ಲಿ ಬ್ರ್ಯಾಂಡ್‌ನ ಉಪಸ್ಥಿತಿಯನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ. ಕಳೆದ ಕೆಲವು ವರ್ಷಗಳಿಂದ ಪೊಲಾರಿಸ್ ವಾಹನಗಳಲ್ಲಿ ರಾಜ್ಯವು ಸ್ಥಿರವಾದ ಬೆಳವಣಿಗೆ ಮತ್ತು ಆಸಕ್ತಿಯನ್ನು ಪ್ರದರ್ಶಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

polaris-has-announced-bornfree-motors-llp-as-the-authorized-dealer-in-karnataka

ಪೊಲಾರಿಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಲಲಿತ್ ಶರ್ಮಾ ಅವರು ಪಾಲುದಾರಿಕೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕವು ನಮಗೆ ಕಾರ್ಯತಂತ್ರದ ಮಾರುಕಟ್ಟೆ ಎಂದು ಸಾಬೀತಾಗಿದೆ. ಪೃಥ್ವಿ ಪ್ರಸಾದ್ ಅವರ ನಾಯಕತ್ವದಲ್ಲಿ ಬಾರ್ನ್‌ಫ್ರೀ ಮೋಟಾರ್ಸ್ ಎಲ್‌ಎಲ್‌ಪಿ ನಮ್ಮ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುತ್ತದೆ ಎಂದು ನಾವು ನಂಬುತ್ತೇವೆ ಎಂದರು.

ಬಾರ್ನ್‌ಫ್ರೀ ಮೋಟಾರ್ಸ್ ಎಲ್‌ಎಲ್‌ಪಿಯನ್ನು ಕರ್ನಾಟಕದಲ್ಲಿ ನಮ್ಮ ಅಧಿಕೃತ ಡೀಲರ್ ಆಗಿ ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಪೃಥ್ವಿ ಪ್ರಸಾದ್ ಅವರ ಆಫ್-ರೋಡಿಂಗ್‌ನೊಂದಿಗಿನ ವೈಯಕ್ತಿಕ ಸಂಪರ್ಕ ಮತ್ತು ಪೊಲಾರಿಸ್ ಉತ್ಪನ್ನಗಳಿಗೆ ಅವರ ಸಮರ್ಪಣೆ ಅವರನ್ನು ನಮಗೆ ಆದರ್ಶ ಪಾಲುದಾರರನ್ನಾಗಿ ಮಾಡಿದೆ. ನಾವು ಯಶಸ್ವಿ ಸಹಯೋಗವನ್ನು ಎದುರು ನೋಡುತ್ತಿದ್ದೇವೆ ಎಂದು ಪೊಲಾರಿಸ್‌ನ ರಾಷ್ಟ್ರೀಯ ಮಾರಾಟ ವಿಭಾಗದ ಮುಖ್ಯಸ್ಥ ಆಶಿಶ್ ಸಿಂಗ್ ಹೇಳಿದರು.

ಪೋಲಾರಿಸ್ ಇಂಡಿಯಾ ಪ್ರೈ. Ltd ಅನ್ನು ಪೋಲಾರಿಸ್ Inc. (USA) ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿ ಸ್ಥಾಪಿಸಲಾಯಿತು. ಕಂಪನಿಯು ಆಲ್-ಟೆರೈನ್ ವೆಹಿಕಲ್ಸ್ (ATVs), Polaris RANGER: RZR® ಸೈಡ್-ಬೈ-ಸೈಡ್ ಮತ್ತು ಸ್ನೋಮೊಬೈಲ್ಸ್ ಸೇರಿದಂತೆ ಪ್ರಮುಖ ಉತ್ಪನ್ನಗಳನ್ನು 24ನೇ ಆಗಸ್ಟ್ 2011 ರಂದು ಭಾರತದಲ್ಲಿ ಪ್ರಾರಂಭಿಸಿದೆ.

ಪೋಲಾರಿಸ್ ಇಂಡಿಯಾವು 10 ಡೀಲರ್‌ಶಿಪ್‌ಗಳ ಪ್ರಬಲ ನೆಟ್‌ವರ್ಕ್ ಅನ್ನು ಹೊಂದಿದೆ. ಆಫ್-ರೋಡ್ ರೈಡಿಂಗ್ ಸಂಸ್ಕೃತಿಯನ್ನು ಮುಂದಕ್ಕೆ ಕೊಂಡೊಯ್ಯಲು ಅತ್ಯಾಧುನಿಕ ಪೊಲಾರಿಸ್ ಅನುಭವ ವಲಯಗಳನ್ನು (ಆಫ್-ರೋಡ್ ಟ್ರ್ಯಾಕ್‌ಗಳು) ಹೊಂದಿದೆ. ಪೋಲಾರಿಸ್ ನೆಟ್‌ವರ್ಕ್‌ಗಳು ಜಮ್ಮು ಮತ್ತು ಕಾಶ್ಮೀರ, ದೆಹಲಿ, ಅಹಮದಾಬಾದ್, ದಿಮಾಪುರ್, ಚೆನ್ನೈ, ಕೊಚ್ಚಿನ್, ಹೈದರಾಬಾದ್, ಜೈಪುರ, ಮುಂಬೈ ಮತ್ತು ಬೆಂಗಳೂರಿನಲ್ಲಿ ನೆಲೆಗೊಂಡಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, December 13, 2023, 17:00 [IST]
English summary
Polaris announced bornfree motors llp as the authorized dealer in karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+