Citroen E-C3 vs ಟಾಟಾ ಕಾರುಗಳು:ನಿಮ್ಮ ಬಜೆಟ್‌ಗೆ ಯಾವ ಎಲೆಕ್ಟ್ರಿಕ್ ಕಾರು ಸೂಕ್ತ?
ದೇಶದಲ್ಲಿ ಇಂಧನ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಇದರಿಂದ ಜನರು ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಈ ವೇಳೆ ಟಾಟಾ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ.
ಸದ್ಯ ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಇತ್ತೀಚೆಗೆ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಕೂಡ ಬಿಡುಗಡೆಗೊಳಿಸಿತು. ಈ ಹೊಸ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಆರಂಭಿಕ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ.8.49 ಲಕ್ಷಕ್ಕೆ ಬಿಡುಗಡೆಗೊಳಿಸಿದ್ದಾರು. ಈ ಬೆಲೆಗಳು ಮೊದಲ 20,000 ಖರೀದಿದಾರರಿಗೆ ಮಾತ್ರ ಅನ್ವಯಿಸುತ್ತದೆ. ಇದೀಗ ಪರಿಚಯತ್ಮಕ ಬೆಲೆಯು ಅಂತ್ಯಗೊಂಡಿದೆ.

ಇದರ ನಡುವೆ ಫ್ರೆಂಚ್ ಆಟೋ ದೈತ್ಯ ಸಿಟ್ರನ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಆಯ್ಕೆಯು ಹೆಚ್ಚಾಗಿದೆ. ಈ ಹೊಸ ಸಿಟ್ರನ್ ಇಸಿ3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ರೂ.11.50 ಲಕ್ಷ ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ರೂ.12 ಲಕ್ಷದೊಳಗಿನ ಬೆಲೆಯ ಎಲೆಕ್ಟ್ರಿಕ್ ಕಾರುಗಳ ಪಟ್ಟೆಯಲ್ಲಿ ಇದು ಭಾರತದ ಮೂರನೇ ಎಲೆಕ್ಟ್ರಿಕ್ ಕಾರ್ ಆಗಿದೆ.
ಇದರಲ್ಲಿ ಟಾಟಾ ಟಿಯಾಗೊ ಇವಿ ಮತ್ತು ಟಿಗೋರ್ ಇವಿಯು ಸಹ ಸೇರಿಕೊಂಡಿದೆ. ಸಿಟ್ರನ್ ಇಸಿ3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾದ ಟಿಯಾಗೊ ಮತ್ತು ಟಿಗೋರ್ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಸಿಟ್ರನ್ ಇ-ಸಿ3 ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.50 ಲಕ್ಷವಾಗಿದೆ. ಇದು ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರಿನ ಟಾಪ್ ರೂಪಾಂತರಗಿಂತ ಹೆಚ್ಚು ದುಬಾರಿಯಾಗಿದೆ.
ಈ ವರ್ಷದ ಆರಂಭದಲ್ಲಿ ಪರಿಚಯಿಸಲಾದ ಬೆಲೆಗಳನ್ನು ಹಿಂತೆಗೆದುಕೊಂಡ ನಂತರ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ, ಆರಂಭಿಕ ಬೆಲೆಯು ರೂ.8.69 ಲಕ್ಷವಾಗಲಿದೆ. ಇದು ಭಾರತದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರ್ ಆಗಿದೆ. ಸಿಟ್ರನ್ ಇ-ಸಿ3 ಎಲೆಕ್ಟ್ರಿಕ್ ಕಾರಿನ ಎಂಟ್ರಿ ಲೆವೆಲ್ ರೂಪಾಂತರಕ್ಕಿಂತ ಹೆಚ್ಚು ದುಬಾರಿಯಾದ Tiago ಎಲೆಕ್ಟ್ರಿಕ್ ಕಾರಿನ ಸಿಂಗಲ್ ರೂಪಾಂತರಗಳು 7.2 kW ಚಾರ್ಜರ್‌ಗಳೊಂದಿಗೆ ಬರುವ ಟಾಪ್-ಸ್ಪೆಕ್ ಆವೃತ್ತಿಗಳಾಗಿವೆ.
ಸಿಟ್ರನ್ E-C3 ಅನ್ನು ಲೈವ್, ಫೀಲ್, ಫೀಲ್ ವೈಬ್ ಪ್ಯಾಕ್ ಮತ್ತು ಫೀಲ್ ವೈಬ್ ಪ್ಯಾಕ್‌ನ ಟಾಪ್-ಎಂಡ್ ಡ್ಯುಯಲ್-ಟೋನ್ ಆವೃತ್ತಿಯನ್ನು ಒಳಗೊಂಡಿರುವ ನಾಲ್ಕು ರೂಪಾಂತರಗಳಲ್ಲಿ ನೀಡುತ್ತದೆ. ಟಾಟಾ ಮೋಟಾರ್ಸ್ ಸಹ XE, XT, XZ+ ಮತ್ತು XZ+ ಲಕ್ಸ್ ಅನ್ನು ಒಳಗೊಂಡಿರುವ ನಾಲ್ಕು ರೂಪಾಂತರಗಳಲ್ಲಿ Tigor ಎಲೆಕ್ಟ್ರಿಕ್ ಸೆಡಾನ್ ಅನ್ನು ನೀಡುತ್ತದೆ. ವೇರಿಯಂಟ್ ಅನ್ನು ವೇರಿಯಂಟ್‌ನೊಂದಿಗೆ ಹೋಲಿಸಿದಾಗ, E-C3 ಮಾದರಿಯು ಟಿಗೋರ್ ಎಲೆಕ್ಟ್ರಿಕ್ ಕಾರಿಗಿಂತ ಹೆಚ್ಚು ಕೈಗೆಟುಕುವ ಆಯ್ಕೆಯಾಗಿದೆ.
ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.12.49 ಲಕ್ಷದಿಂದ ಪ್ರಾರಂಭವಾಗುತ್ತದೆ. ಸಿಟ್ರನ್ ಇ-ಸಿ3 ಮೂಲ ರೂಪಾಂತರಕ್ಕಿಂತ ಸುಮಾರು ಒಂದು ಲಕ್ಷ ಹೆಚ್ಚು ದುಬಾರಿಯಾಗಿದೆ. ಟಿಗೋರ್ ಎಲೆಕ್ಟ್ರಿಕ್ ಕಾರಿನ ಟಾಪ್-ಎಂಡ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13.75 ಲಕ್ಷವಾಗಿದೆ. ಇದು ಸುಮಾರು ರೂ.32 ಲಕ್ಷ ಹೆಚ್ಚು ದುಬಾರಿಯಾಗಿದೆ.
ಟಿಗೋರ್ ಇವಿ ಸ್ವಲ್ಪ ಚಿಕ್ಕದಾದ ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ಯಾಕ್ ಮಾಡಲ್ಪಟ್ಟಿದ್ದರೂ, ಇದು ಸಿಟ್ರನ್ E-C3 ಆಫರ್‌ಗಳಿಗೆ ಸಮಾನವಾದ ರೇಂಜ್ ಅನ್ನು ನೀಡುತ್ತದೆ. ಎರಡೂ ಎಲೆಕ್ಟ್ರಿಕ್ ಕಾರುಗಳು 3.3 kW ಚಾರ್ಜರ್‌ನೊಂದಿಗೆ ಬರುತ್ತವೆ ಮತ್ತು DC ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು ಒಂದು ಗಂಟೆಯೊಳಗೆ ಅವುಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಒಟ್ಟಾರೆಯಾಗಿ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ.


Click it and Unblock the Notifications