ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇತ್ತೀಚೆಗೆ 25 ಮಿಲಿಯನ್ (2.5 ಕೋಟಿ) ದೇಶೀಯ ಮಾರಾಟದ ಮೈಲಿಗಲ್ಲನ್ನು ದಾಟಿದೆ. ಈ ಮೂಲಕ ಮಾರುತಿ ಸುಜುಕಿ ಈ ಮೈಲಿಗಲ್ಲು ಸಾಧಿಸಿದ ಭಾರತದ ಮೊದಲ ಕಾರು ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನವೆಂಬರ್ 2022 ರಲ್ಲಿ ಭಾರತದಲ್ಲಿ ಸಂಚಿತ ಉತ್ಪಾದನೆಯ ವಿಷಯದಲ್ಲಿ ಕಾರು ತಯಾರಕರು ಈ ಸಂಖ್ಯೆಯನ್ನು ಸಾಧಿಸಿದ್ದರು. ಇದಾದ ಕೇವಲ ಎರಡು ತಿಂಗಳಲ್ಲಿ 25 ಮಿಲಿಯನ್ ದೇಶೀಯ ಮಾರಾಟದ ಮೈಲಿಗಲ್ಲು ಸಾಧಿಸಲಾಗಿದೆ. ದೇಶೀಯ ಮಾರಾಟದ ಮೈಲಿಗಲ್ಲಿನ ಈ ಸಾಧನೆಗೆ ಸುಧೀರ್ಘ ವರ್ಷಗಳ ಇತಿಹಾಸವಿದೆ. ಜೊತೆಗೆ ಮಾರುತಿ ಸುಜುಕಿಯಿಂದ ಡಿಸೆಂಬರ್ 1983 ರಲ್ಲಿ ಹೊರಬಂದ ತನ್ನ ಮೊದಲ ಶ್ರೇಣಿಯ ಮಾರುತಿ 800 ಗೆ 40 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸಿದ್ಧವಾಗಿದೆ.

ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು

ಮೊದಲ ಮಾರುತಿ 800 ಹರಿಯಾಣದ ಗುರುಗ್ರಾಮ್‌ನಲ್ಲಿರುವ ಕಾರು ತಯಾರಕ ಘಟಕದಿಂದ ಹೊರಬಂದಿತು. ಅಂದಿನಿಂದ ಗುರುಗ್ರಾಮ್ ಮತ್ತು ಮಾನೇಸರ್‌ನಲ್ಲಿರುವ ತನ್ನ ಸೌಲಭ್ಯಗಳಿಂದ ಕಾರು ತಯಾರಕರು ಲಕ್ಷಾಂತರ ಕಾರುಗಳನ್ನು ಹೊರತಂದಿದ್ದಾರೆ. ಕಾರು ತಯಾರಕರು ಪ್ರಸ್ತುತ ವರ್ಷಕ್ಕೆ 1.5 ಮಿಲಿಯನ್ ಕಾರುಗಳನ್ನು ಉತ್ಪಾದಿಸುತ್ತಾರೆ. ಜೊತೆಗೆ ಹರಿಯಾಣದ ಖಾರ್ಖೋಡಾದಲ್ಲಿ 800 ಎಕರೆ ಜಾಗದಲ್ಲಿ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುವ ಮೂಲಕ ಅದರ ಉತ್ಪಾದನೆಯನ್ನು ಮತ್ತಷ್ಟು ವಿಸ್ತರಿಸಲು ಕಂಪನಿ ಸಿದ್ಧವಾಗಿದೆ.

ಮಾರುತಿ ಸುಜುಕಿ ಪ್ರಯಾಣವು 1982 ರಲ್ಲಿ ಮಾರುತಿ ಉದ್ಯೋಗ್ ಜೊತೆಗೆ ಸುಜುಕಿ ಜಂಟಿ ಉದ್ಯಮ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪ್ರಾರಂಭವಾಯಿತು. ಹೊಸದಾಗಿ ಬ್ಯಾಡ್ಜ್ ಮಾಡಲಾದ ಮಾರುತಿ ಸುಜುಕಿ ತನ್ನ ಮೊದಲ ಕಾರನ್ನು ಡಿಸೆಂಬರ್ 1983 ರಲ್ಲಿ ಮಾರುತಿ 800 ರೂಪದಲ್ಲಿ ಹೊರತಂದಿತು. ಮಾರುತಿ 800 ಭಾರತದ ಚಲಿಸುವ ಮಾರ್ಗವನ್ನು ಮಾರ್ಪಡಿಸಿ ಶೀಘ್ರದಲ್ಲೇ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರಾಗಿ ಗುರ್ತಿಸಿಕೊಂಡಿತು.

ಫೆಬ್ರವರಿ 2006 ರಲ್ಲಿ, ಮಾರುತಿ ಸುಜುಕಿಯು 5 ಮಿಲಿಯನ್ ಸಂಚಿತ ಮಾರಾಟದ ಮೈಲಿಗಲ್ಲನ್ನು ಸಾಧಿಸಿತು. ಆರು ವರ್ಷಗಳ ನಂತರ ಫೆಬ್ರವರಿ 2012 ರಲ್ಲಿ ಆ ಸಂಖ್ಯೆಯನ್ನು ದ್ವಿಗುಣಗೊಳಿಸಿತು. ಜುಲೈ 2019 ರಲ್ಲಿ ಮಾರುತಿ ಆ ಮೈಲಿಗಲ್ಲನ್ನು ಮುಟ್ಟುವುದರೊಂದಿಗೆ ಆ ಸಂಖ್ಯೆಯು ಮತ್ತೊಮ್ಮೆ 20 ಮಿಲಿಯನ್‌ಗೆ ದ್ವಿಗುಣಗೊಂಡಿದೆ. ಕೊರೊನಾ ಮತ್ತು ಪೂರೈಕೆ ಸರಪಳಿ ಸಮಸ್ಯೆಗಳ ನಡುವೆಯೂ ಮಾರುತಿ ನವೆಂಬರ್ 2022 ರಲ್ಲಿ 25 ಮಿಲಿಯನ್ ಸಂಚಿತ ಮಾರಾಟ ಸಂಖ್ಯೆಯನ್ನು ಮುಟ್ಟಿದೆ.

ಮಾರುತಿ ಪ್ರಸ್ತುತ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಆಲ್ಟೊ ಮತ್ತು ಎಸ್-ಪ್ರೆಸ್ಸೊದಂತಹ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್‌ಗಳಿಂದ ವಿಟಾರಾ ಬ್ರೆಜ್ಜಾ ಬಿ-ಸೆಗ್ಮೆಂಟ್ ಎಸ್‌ಯುವಿವರೆಗೆ 17 ವಿಭಿನ್ನ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಸಂಸ್ಥೆಯು ಪೆಟ್ರೋಲ್, ಸಿಎನ್‌ಜಿ ಮತ್ತು ಹೈಬ್ರಿಡ್ (ಸೌಮ್ಯ ಮತ್ತು ಬಲವಾದ ಎರಡೂ) ಸೇರಿದಂತೆ ವಿವಿಧ ಪವರ್‌ಟ್ರೇನ್‌ಗಳನ್ನು ನೀಡುತ್ತಿದೆ. ಇತ್ತೀಚಿನ ಆಟೋ ಎಕ್ಸ್‌ಪೋದಲ್ಲಿ ತನ್ನ ಮೂರು ಕಾರುಗಳನ್ನು ಅನಾವರಣಗೊಳಿಸಿ ಭವಿಷ್ಯದ ಕಾರುಗಳ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಮಾರುತಿಯು ಮೊದಲ ಬಾರಿಗೆ ಕಾರ್ಖಾನೆಯಲ್ಲಿ ಅಳವಡಿಸಲಾದ CNG ಸೆಟಪ್‌ಗಳೊಂದಿಗೆ ಕಾರುಗಳನ್ನು ಆಗಸ್ಟ್ 2010 ರಲ್ಲಿ ಮಾರಾಟ ಮಾಡಲು ಪ್ರಾರಂಭಿಸಿತು. ಕಳೆದ ವರ್ಷ ಫೆಬ್ರವರಿಯಲ್ಲಿ, ಮಾರುತಿ ಸುಜುಕಿಯ S-CNG ಮಾದರಿಗಳ ಮಾರಾಟವು 1 ಮಿಲಿಯನ್ ಸಂಚಿತ ಮಾರಾಟದ ಮಾರ್ಕ್ ಅನ್ನು ಮುಟ್ಟಿದೆ. ಹೈಬ್ರಿಡ್‌ನ ಸಂಚಿತ ಮಾರಾಟಗಳು (ಸೆಪ್ಟೆಂಬರ್ 2015 ರಲ್ಲಿ ಬೀದಿಗಿಳಿಯಲು ಪ್ರಾರಂಭಿಸಿದವು) ಮತ್ತು CNG ಮಾದರಿಗಳು ಸೇರಿ ಈಗ ಸರಿಸುಮಾರು 2.1 ಮಿಲಿಯನ್ ಯುನಿಟ್‌ಗಳಾಗಿವೆ.

ಗ್ರೇಟರ್ ನೋಯ್ಡಾದಲ್ಲಿ ಈ ವರ್ಷದ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ತನ್ನ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸಿದಾಗ ಅದು 2024 ರ ಆರ್ಥಿಕ ವರ್ಷದಲ್ಲಿ ಬೀದಿಗಿಳಿಯುವ ಇವಿಎಕ್ಸ್ ಕಾನ್ಸೆಪ್ಟ್ ಅನ್ನು ಬಹಿರಂಗಪಡಿಸಿತು. EVX 60kWh ಬ್ಯಾಟರಿ ಪ್ಯಾಕ್ ಮತ್ತು 550km ಚಾಲನಾ ಶ್ರೇಣಿಯನ್ನು ಹೊಂದಿದೆ. EVX ಬಳಿಕ ಮಾರುತಿ ಸುಜುಕಿ ಇನ್ನೂ ಆರು EV ಗಳ ಶ್ರೇಣಿಯನ್ನು ಹೊರತರಲಿದೆ. ಇವೆಲ್ಲವು 2030 ರ ವೇಳೆಗೆ ನಮ್ಮ ರಸ್ತೆಗಳಿಗೆ ಬರಲಿವೆ.

Most Read Articles

Kannada
English summary
Sales of 25 million cars a new record in the country by a popular company
Story first published: Tuesday, January 31, 2023, 14:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X