ದಿಢೀರನೇ ಹೊಸ ಪೆಟ್ರೋಲ್ ಬೈಕ್, ಸ್ಕೂಟರ್ ಬೆಲೆ ಏರಿಕೆ? ಇಲ್ಲಿದೆ ಮಾಹಿತಿ

ಕೈಗಾರಿಕಾ ಸಚಿವಾಲಯ Fame -II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ್ದು, ಬಹುತೇಕ ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯನ್ನು ಏರಿಸಿವೆ. ಇದರಿಂದ ಎಲೆಕ್ಟ್ರಿಕ್ ಬೈಕ್, ಸ್ಕೂಟರ್, ಖರೀದಿಸಲು ಗ್ರಾಹಕರು ಹಿಂದೇಟು ಹಾಕುವ ಸಾಧ್ಯತೆಯಿದ್ದು, ಇಂಧನ ಚಾಲಿತ ದ್ವಿಚಕ್ರ ವಾಹನಗಳ ಮೇಲೆ ತೆರಿಗೆ ವಿಧಿಸುವಂತೆ 'SMEV' ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಭಾರತದ ಎಲೆಕ್ಟ್ರಿಕ್ ವಾಹನ ತಯಾರಕ (ಇವಿ) ಕಂಪನಿಗಳ ಒಕ್ಕೂಟವಾಗಿರುವ 'ಸೊಸೈಟಿ ಆಫ್ ಮ್ಯಾನುಫ್ಯಾಕ್ಚರರ್ಸ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್' (SMEV), ಇಂಟರ್ನಲ್ ಕಂಬುಷ್ಷನ್ ಎಂಜಿನ್ (ICE) ಅಥವಾ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳ ಮೇಲೆ ಹಸಿರು ತೆರಿಗೆ (Green Tax) ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ದೊರೆಯುವ ಜೊತೆಗೆ ವಿದೇಶಗಳಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆಯಾಗಲಿದೆ ಎಂದು ಪ್ರತಿಪಾದಿಸಿದೆ.

ದಿಢೀರನೇ ಹೊಸ ಬೈಕ್, ಸ್ಕೂಟರ್ ಬೆಲೆ ಏರಿಕೆ? ಇಲ್ಲಿದೆ ಮಾಹಿತಿ

Fame -II (ಪಾಸ್ಟರ್ ಅಡಾಪ್ಷನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಹೈಬ್ರಿಡ್ & ಎಲೆಕ್ಟ್ರಿಕ್ ವೆಹಿಕಲ್) ಸಬ್ಸಿಡಿಯಲ್ಲಿ ಪರಿಷ್ಕರಣೆಯಿಂದ ತಿಂಗಳ ಆರಂಭದಿಂದಲೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳವಾಗಿದೆ. ಬೇಡಿಕೆ ಕುಸಿತವಾಗಲಿದೆ ಎಂಬ ಭೀತಿಯಲ್ಲಿ ಇವಿ ತಯಾರಕ ಕಂಪನಿಗಳು ಇದ್ದು, ಈ ಕಾರಣದಿಂದ ICE ಚಾಲಿತ ದ್ವಿಚಕ್ರ ವಾಹನಗಳ ಮೇಲೆ 100 ಬೇಸಿಸ್ ಪಾಯಿಂಟ್‌ ಗ್ರೀನ್ ಟ್ಯಾಕ್ಸ್ ಹೆಚ್ಚಿನಬೇಕೆಂದು ಕೇಳಿಕೊಂಡಿವೆ.

ಒಂದು ಲೆಕ್ಕಾಚಾರದ ಪ್ರಕಾರ, ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನವೊಂದು ಒಂದು ಕಿಲೋಮೀಟರ್‌ಗೆ ಸುಮಾರು 300 ಗ್ರಾಂ ಇಂಗಾಲವನ್ನು (CO2) ಹೊರಸೂಸುತ್ತದೆ. ಪ್ರತಿದಿನ ಒಂದು ವಾಹನವನ್ನು 30 ಕಿಮೀ ಓಡಿಸಿದರೇ 9 ಕೆಜಿ ಇಂಗಾಲ ವಾತಾವರಣಕ್ಕೆ ಸೇರುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಭಾರತದ ಮಾರುಕಟ್ಟೆಯಲ್ಲಿ 58,62,087 ದ್ವಿಚಕ್ರ ವಾಹನಗಳನ್ನು ಮಾರಾಟವಾಗಿದ್ದವು.

ದಿಢೀರನೇ ಹೊಸ ಬೈಕ್, ಸ್ಕೂಟರ್ ಬೆಲೆ ಏರಿಕೆ? ಇಲ್ಲಿದೆ ಮಾಹಿತಿ

ಇವು ದಿನಕ್ಕೆ ಏನಿಲ್ಲ ಅಂದರೂ 142 ಮಿಲಿಯನ್ ಕೆಜಿ ಇಂಗಾಲವನ್ನು ಹೊರಸೂಸುತ್ತಿದ್ದು, ಜಾಗತಿಕ ತಾಪಮಾನ ಏರಿಕೆಯೊಂದಿಗೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಜೊತೆಗೆ ದೇಶದ ಆರ್ಥಿಕತೆ ಮೇಲೆಯೂ ಪರಿಣಾಮ ಬೀರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದರೆ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಪರಿಸರ ಸ್ನೇಹಿಯಾಗಿದ್ದು, ಯಾವುದೇ ರೀತಿಯಲ್ಲಿ ಇಂಗಾಲವನ್ನು ಬಿಡುಗಡೆ ಮಾಡುವುದಿಲ್ಲ.

Fame -II ಸಬ್ಸಿಡಿ ಪರಿಷ್ಕರಣೆ ಬಳಿಕ, ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೆಲೆ ಎಷ್ಟು ಏರಿಕೆಯಾಗಿದೆ ಎಂದು ನೋಡುವುದಾದರೆ, ಹೀರೋ ಮೋಟೊಕಾರ್ಪ್ 'ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್' ಬೆಲೆಯನ್ನು ಒಟ್ಟು ರೂ.6,000 ಹೆಚ್ಚಳ ಮಾಡಿದೆ. ರೂ.1,25,900 ಎಕ್ಸ್ ಶೋರೂಂ (ದೆಹಲಿ) ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಬಜಾಬ್ ಕಂಪನಿ ತನ್ನ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ರೂ.22,000 ಏರಿಕೆ ಮಾಡಿದೆ.

ಬೆಂಗಳೂರು ಮೂಲದ ಓಲಾ ತನ್ನ ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ರೂ.15,000 ಹೆಚ್ಚಿಸಿದೆ. ಇದರಿಂದ ಎಸ್1 ಪ್ರೊ ರೂ.1,39,999, ಎಸ್1 (3KWh) ರೂ.1,29,999 ಮತ್ತು ಎಸ್1 ಏರ್ ರೂ.1,09,999 ದರದಲ್ಲಿ ಸಿಗಲಿದೆ. ಎಥರ್ ತನ್ನ 450X ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ದರವನ್ನು ರೂ.8,000 ಏರಿಸಿದೆ. 1,65,435 (ಎಕ್ಸ್ ಶೋರೂಂ) ಆಗಿದೆ.

ಇನ್ನು, ICE ಚಾಲಿತ ದ್ವಿಚಕ್ರ ವಾಹನಗಳ ಮಾರಾಟ ಮೇಲೆ ತೆರಗೆ ವಿಧಿಸಬೇಕು ಎಂಬ ಮನವಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ. ಒಂದೊಮ್ಮೆ ಸಕಾರಾತ್ಮಕ ಪ್ರತಿಕ್ರಿಯೆ ಬಂದರೇ ಪೆಟ್ರೋಲ್ ಬೈಕ್, ಸ್ಕೂಟರ್ ಬೆಲೆ ಏರಿಕೆ ಖಚಿತ ಎನ್ನುತ್ತಿದ್ದಾರೆ ತಜ್ಞರು.

Article Published On: Wednesday, June 7, 2023, 16:39 [IST]
English summary
Smev urges government to levy green tax on iec two wheelers details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+