ಭಾರತದಲ್ಲಿ ಧೂಳೆಬ್ಬಿಸಲು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿರುವ ಎಸ್‍ಯುವಿಗಳು

ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಮತ್ತು ಎಸ್‌ಯುವಿಗಳು ಭಾರಿ ಆಕರ್ಷಣೆಯನ್ನು ಗಳಿಸುತ್ತಿವೆ. ಇನ್ನೆರಡು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸರಣಿಯ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗಲಿವೆ. ಭಾರತದಲ್ಲಿ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳೊಂದಿಗೆ ಬಿಡುಗಡೆಯಾಗಲಿರುವ ಟಾಪ್ ಎಸ್‍ಯುವಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ಟಾಟಾ ಕರ್ವ್: ಟಾಟಾ ಕಂಪನಿಯು 2024ರಲ್ಲಿ ಕರ್ವ್ ಎಸ್‍ಯುವಿ ಕೂಪೆ ಕಾನ್ಸೆಪ್ಟ್ ಉತ್ಪಾದನಾ ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆ ಮಾಡಲಿದೆ. ಹೊಸ ಮಾದರಿಯು ಹೊಸ GEN 2 ಹೈಬ್ರಿಡ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ICE ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್ ಮಾದರಿಗಳಾಗಿ ಬರಲಿದೆ, ಪೆಟ್ರೋಲ್ ಆವೃತ್ತಿಯು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಎಂಜಿ ಆಸ್ಟರ್ ಮತ್ತು ಸ್ಕೋಡಾ ಕುಶಾಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿರುವ ಎಸ್‍ಯುವಿಗಳು

ಪೆಟ್ರೋಲ್ ಟಾಟಾ ಕರ್ವ್ ಮಾದರಿಯು 1.2-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯುತ್ತದೆ. ಇನ್ನು ಟಾಟಾ ಕರ್ವ್ ಎಲೆಕ್ಟ್ರಿಕ್ ಆವೃತ್ತಿಯು ಹೆಚ್ಚಿನ ರೇಂಜ್ ಅನ್ನು ನೀಡುವ ಬ್ಯಾಟರಿ ಪ್ಯಾಕ್ ಅನ್ನು ಪಡೆಯುವ ಸಾಧ್ಯತೆಯಿದೆ. ಈ ಟಾಟಾ ಕರ್ವ್ ಎಲೆಕ್ಟ್ರಿಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಎಂಜಿ ZS, ಹುಂಡೈ ಕೋನಾ ಮತ್ತು ಮಹೀಂದ್ರ XUV400 ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಟಾಟಾ ಸಿಯೆರಾ: ಟಾಟಾ ಮೋಟಾರ್ಸ್ 2023ರ ಆಟೋ ಎಕ್ಸ್ ಪೋದಲ್ಲಿ ಉತ್ಪಾದನೆಗೆ ಸಿದ್ಧವಾಗಿರುವ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಟಾಟಾದ ಕಾರುಗಳ ಸರಣಿಯಲ್ಲಿ ಸಫಾರಿ ಎಸ್‍ಯುವಿ ಮಾದರಿಯ ಮೇಲಿನ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಅಲ್ಲದೇ ಇದನ್ನು ಐಸಿಇ ರೂಪಾಂತರದಲ್ಲಿಯೂ ಬಿಡುಗಡೆಯಾಗಲಿದೆ, ಗ್ರೇಟರ್ ನೋಯ್ಡಾದಲ್ಲಿ ನಡೆದ 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದ ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ಕಾರುಗಳಲ್ಲಿ ಸಿಯೆರಾ ಇವಿ ಕೂಡ ಒಂದಾಗಿದೆ.

ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿರುವ ಎಸ್‍ಯುವಿಗಳು

ಟಾಟಾದ ಲೈನಪ್‌ನ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯು ICE ವಾಹನಗಳನ್ನು ಹುಟ್ಟುಹಾಕಲು ಬಳಸಬಹುದಾದ ಸ್ಕೇಲೆಬಲ್ ಪ್ಲಾಟ್‌ಫಾರ್ಮ್‌ನಲ್ಲಿದೆ. ಟಾಟಾ ಸಿಯೆರಾ ಇವಿ 2020ದಲ್ಲಿ ಆಟೋ ಎಕ್ಸ್‌ಪೋದ ಹಿಂದಿನ ಆವೃತ್ತಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕಾನ್ಸೆಪ್ಟ್ ಗಿಂತ ಹೆಚ್ಚು ಉತ್ಪಾದನೆಗೆ ಸಿದ್ಧವಾಗಿದೆ. ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯು ಸುಮಾರು 500 ಕಿ.ಮೀ ರೇಂಜ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಟಾಟಾ ಕಂಪನಿಯು ಜೆನ್ 2 ಇವಿಗಳೊಂದಿಗೆ ಗುರಿಯನ್ನು ಹೊಂದಿದೆ.

ಟಾಟಾ ಹ್ಯಾರಿಯರ್ ಮತ್ತು ಸಫಾರಿ: ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಮಿಡ್ ಸೈಜ್ ಎಸ್‍ಯುವಿಗಳಾದ ಹ್ಯಾರಿಯರ್ ಮತ್ತು ಸಫಾರಿಗೆ ಪ್ರಮುಖ ಬದಲಾವಣೆಯನ್ನು ನೀಡಲು ತಯಾರಿ ನಡೆಸುತ್ತಿದೆ. ಎರಡೂ ಎಸ್‍ಯುವಿಗಳು ಭಾರತೀಯ ರಸ್ತೆಗಳಲ್ಲಿ ಹಲವು ಬಾರಿ ಟೆಸ್ಟ್ ಮಾಡಲಾಗಿದೆ.. ಟಾಟಾ 2023ರ ಆಟೋ ಎಕ್ಸ್‌ಪೋದಲ್ಲಿ ಹ್ಯಾರಿಯರ್ ಇವಿ ಕಾನ್ಸೆಪ್ಟ್ ಅನ್ನು ಪ್ರದರ್ಶಿಸಿತ್ತು. ಹ್ಯಾರಿಯರ್ ಇವಿ ಅನ್ನು 2024 ರಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ದೃಢಪಡಿಸಿದೆ.

ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿರುವ ಎಸ್‍ಯುವಿಗಳು

ಇದೇ ರೀತಿ ಸಫಾರಿ ಎಸ್‍ಯುವಿಯನ್ನು 2024-25 ರಲ್ಲಿ ಎಲೆಕ್ಟ್ರಿಫೈಡ್ ಆವೃತ್ತಿಯನ್ನು ಹೊಂದಿರುತ್ತದೆ. ಈ ಹೊಸ ಎಸ್‍ಯುವಿಗಳು ಲ್ಯಾಂಡ್ ರೋವರ್ ಮೂಲದ OMEGA ಆರ್ಕ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ, ಇದನ್ನು ಟಾಟಾದ GEN 2 EV ಆರ್ಕಿಟೆಕ್ಚರ್‌ನೊಂದಿಗೆ ಸಂಯೋಜಿಸಲಾಗುತ್ತದೆ. ಈ ಹೊಸ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‍ಯುವಿಗಳ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.

ಹ್ಯುಂಡೈ ಕ್ರೆಟಾ: ಭಾರತ-ನಿರ್ದಿಷ್ಟ ಬದಲಾವಣೆಗಳೊಂದಿಗೆ ಹೊಸ ಕ್ರೆಟಾ ಎಸ್‍ಯುವಿಯನ್ನು 2024 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹುಂಡೈ ಕಂಪನಿಯು ಖಚಿತಪಡಿಸಿದೆ. ಹೊಸ ಮಾದರಿಯು ಗಮನಾರ್ಹವಾದ ವಿನ್ಯಾಸ ಬದಲಾವಣೆಗಳನ್ನು ಮತ್ತು ADAS ಕಾರ್ಯನಿರ್ವಹಣೆಗಳೊಂದಿಗೆ ನವೀಕರಿಸಿದ ಕ್ಯಾಬಿನ್ ಅನ್ನು ಪಡೆಯುತ್ತದೆ. ಇದು 3 ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ. ಇನ್ನು ಈ ಎಸ್‍ಯುವಿಯು ಎಲೆಕ್ಟ್ರಿಕ್ ಆವೃತ್ತಿಯಾಗಿಯು 2025 ರಲ್ಲಿ ಬಿಡುಗಡೆಯಾಗಲಿದೆ.

Article Published On: Sunday, March 19, 2023, 17:00 [IST]
English summary
Soon you can buy these suvs with ice and ev powertrains details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+