ಟಾಟಾಗೆ ಸೆಡ್ಡು ಹೊಡೆಯಲು 6 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮಾರುತಿ ಸುಜುಕಿ

ಸುಜುಕಿ ಮೋಟಾರ್ ಕಾರ್ಪೊರೇಷನ್ ತನ್ನ ಜಾಗತಿಕ ಉತ್ಪನ್ನ ಕಾರ್ಯತಂತ್ರವನ್ನು ಇತ್ತೀಚೆಗೆ ಬಹಿರಂಗಪಡಿಸಿದೆ, ಇದರಲ್ಲಿ BEV (ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು), HEV (ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು) ಮತ್ತು ICE (ಆಂತರಿಕ ದಹನಕಾರಿ ಎಂಜಿನ್) ಮಾದರಿಗಳು ಜೊತೆಗೆ ಎಥೆನಾಲ್, CNG, ಬಯೋಗ್ಯಾಸ್ ಚಾಲನೆಯಲ್ಲಿರುವ ಮಾದರಿಗಳು ಕೂಡ ಸೇರಿವೆ.

ಈ ಮೇಲಿನ ಎಲ್ಲಾ ವಾಹನಗಳು 2030ರ ವೇಳೆಗೆ ಮಾರುಕಟ್ಟೆಗೆ ಬರಲಿದೆ. ಭಾರತೀಯ ಮಾರುಕಟ್ಟೆಯ ಕುರಿತು ಮಾತನಾಡುತ್ತಾ, ಮಾರುತಿ ಸುಜುಕಿ ಕಂಪನಿಯು ಆರು ಹೊಸ ಬ್ಯಾಟರಿ ಎಲೆಕ್ಟ್ರಿಕ್ ಕಾರುಗಳನ್ನು ಟೊಯೋಟಾ-ಸುಜುಕಿ ಪಾಲುದಾರಿಕೆಯ ಅಡಿಯಲ್ಲಿ ಸಹ ಅಭಿವೃದ್ಧಿಪಡಿಸಿದ ಮಾದರಿಗಳು ಕೂಡ ಒಳಗೊಂಡಿರುತ್ತದೆ. ಮೊದಲ ಮಾರುತಿ ಎಲೆಕ್ಟ್ರಿಕ್ ಕಾರು 2025ರ ವೇಳೆಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ನಂತರ 2030ರ ವೇಳೆಗೆ ಉಳಿದ ಐದು ಮಾರುತಿ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿವೆ.

6 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮಾರುತಿ ಸುಜುಕಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಇವಿಎಕ್ಸ್ ಕಾನ್ಸೆಪ್ಟ್ ಅನ್ನು ಆಧರಿಸಿರುತ್ತದೆ. ಮಾರುತಿ ಕಾರುಗಳು ಯಾವಾಗಲೂ ಕೈಗೆಟುಕುವ ಬೆಲೆಗಳಿಂದ ಹೆಚ್ಚು ಜನಪ್ರಿಯತೆ ಗಳಿಸಿದೆ. ಹೊಸ ಮಾರುತಿ ಎಲೆಕ್ಟ್ರಿಕ್ ಕಾರು ವೈಶಿಷ್ಟ್ಯಗಳು, ರೇಂಜ್ ಮತ್ತು ಬೆಲೆಯ ವಿಷಯದಲ್ಲಿ ಸಮತೋಲಿತ ವಿಧಾನವು ಸಾಧ್ಯತೆಯಿದೆ. 2023ರ ಮಾರುತಿ EVX ಎಲೆಕ್ಟ್ರಿಕ್ ಎಸ್‍ಯುವಿಯು 60 kWh ಬ್ಯಾಟರಿ ಪ್ಯಾಕ್‌ನೊಂದಿಗೆ 550 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಈ ಹೊಸ ಮಾರುತಿ ಎಲೆಕ್ಟ್ರಿಕ್ ಎಸ್‍ಯುವಿಯು ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಗೆ ಪೈಪೋಟಿಯಾಗಿ ಬರಲಿದೆ. ಹೊಸ ಮಾರುತಿ ಇವಿಯ ಉತ್ಪಾದನೆ ಸಿದ್ಧ ಆವೃತ್ತಿಯು 2025ರ ಆರಂಭದಲ್ಲಿ (ಬಹುಶಃ ಜನವರಿ ಅಥವಾ ಫೆಬ್ರವರಿಯಲ್ಲಿ) ಮಾರುಕಟ್ಟೆ ಬಿಡುಗಡೆಗೆಯಾಗಬಹುದು ಎಂದು ಹೇಳಲಾಗುತ್ತಿದೆ. ಇನ್ನು ಮುಂಬರುವ ಹೊಸ ಮಾರುತಿ ಎಲೆಕ್ಟ್ರಿಕ್ ಕಾರುಗಳ ಹೆಸರನ್ನು ಕಂಪನಿಯು ಬಹಿರಂಗಪಡಿಸಿಲ್ಲವಾದರೂ, ವ್ಯಾಗನ್ಆರ್ ಹ್ಯಾಚ್‌ಬ್ಯಾಕ್, ಬಲೆನೊ ಇವಿ, ಜಿಮ್ನಿ ಇವಿ, ಫೋರ್ನ್‌ಎಕ್ಸ್ ಇವಿ ಮತ್ತು ಗ್ರ್ಯಾಂಡ್ ವಿಟಾರಾ ಇವಿಗಳ ಎಲೆಕ್ಟ್ರಿಕ್ ಪುನರಾವರ್ತನೆಯನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಈ ಸುಜುಕಿಯ ICE-ಚಾಲಿತ ಮಾದರಿಗಳು 2030ರ ವೇಳೆಗೆ ದೇಶೀಯ ಮಾರುಕಟ್ಟೆಯ 60 ಪ್ರತಿಶತವನ್ನು ಇರುತ್ತದೆ ಎಂದು ಅಧಿಕೃತ ದಾಖಲೆ ಹೇಳುತ್ತದೆ. ಇನ್ನು ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು ಶೇಕಡಾ 15 ರಷ್ಟಿದ್ದರೆ, ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಶೇಕಡಾ 25 ರಷ್ಟು ಆಗಿರುತ್ತದೆ. ಇನ್ನು 4.39 ಲಕ್ಷ ಕೋಟಿ ರೂಪಾಯಿಗಳ ವಹಿವಾಟು ಮತ್ತು ಕಾರ್ಬನ್ ನ್ಯೂಟ್ರಲ್ ಪೋರ್ಟ್ಫೋಲಿಯೊವನ್ನು ಸಾಧಿಸುವ ಗುರಿಯೊಂದಿಗೆ, ಸುಜುಕಿ ಕಂಪನಿಯು 4.5 ಟ್ರಿಲಿಯನ್ ಯೆನ್ (ಅಂದಾಜು ರೂ.2.82 ಲಕ್ಷ ಕೋಟಿ) ಹೂಡಿಕೆ ಮಾಡಲಿದೆ.

2030ರ ಆರ್ಥಿಕ ಬೆಳವಣಿಗೆಯ ಕಾರ್ಯತಂತ್ರದ ಅಡಿಯಲ್ಲಿ, ಜಪಾನಿನ ವಾಹನ ತಯಾರಕರು "ಶೋ-ಶೋ-ಕೀ-ಟಾನ್-ಬಿ (Smaller, Fewer, Lighter, Shorter and Beauty)" ತಯಾರಿಕೆಯ ತತ್ವವನ್ನು ಅನುಸರಿಸುತ್ತಾರೆ. ಇದು "ಗ್ರಾಹಕರ ಮೇಲೆ ಕೇಂದ್ರೀಕರಿಸಿದ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯನಿರ್ವಹಿಸುವ ದೇಶಗಳು ಮತ್ತು ಪ್ರದೇಶಗಳೊಂದಿಗೆ ಬೆಳೆಯಲು" ಒತ್ತು ನೀಡುತ್ತದೆ. ಸುಜುಕಿ ಕಂಪನಿಯು ಭಾರತದಲ್ಲಿ 2070ರ ವೇಳೆಗೆ ಮತ್ತು ಜಪಾನ್ ಮತ್ತು ಯುರೋಪ್ ನಲ್ಲಿ 2050ರ ವೇಳೆಗೆ ಇಂಗಾಲದ ತಟಸ್ಥತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂದ ಇವಿಎಕ್ಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಎಸ್‌ಯುವಿ ಮಾದರಿಯನ್ನು ಟೊಯೊಟಾದೊಂದಿಗೆ ಸಹ-ಅಭಿವೃದ್ಧಿಪಡಿಸಲಾಗುವುದು ಮತ್ತು ಜಪಾನಿನ ವಾಹನ ತಯಾರಕರು ಭಾರತದಲ್ಲಿ ಅದರ ರಿ-ಬ್ಯಾಡ್ಜ್ ಆವೃತ್ತಿಯನ್ನು ಮಾರಾಟ ಮಾಡಲಿದ್ದಾರೆ. ಹೊಸ ಮಾರುತಿ ಎಲೆಕ್ಟ್ರಿಕ್ ಎಸ್‍ಯುವಿಯು ಮಾರುತಿ ಸುಜುಕಿಯ ಗುಜರಾತ್ ಮೂಲದ ಘಟಕದಲ್ಲಿ ತಯಾರಿಸಲಾಗುವುದು.4.2 ಮೀಟರ್‌ಗಿಂತಲೂ ಹೆಚ್ಚು ಅಳತೆಯನ್ನು ಹೊಂದಿದ್ದು, ಹೊಸ ಮಾರುತಿ ಇವಿಎಕ್ಸ್ ಎಸ್‌ಯುವಿ ಕಾನ್ಸೆಪ್ಟ್ ಮಾದರಿಯು ಹ್ಯುಂಡೈ ಕ್ರೆಟಾದಷ್ಟು ದೊಡ್ಡದಾಗಿ ಕಾಣುತ್ತದೆ.

ಇದು 2700mm ಉದ್ದದ ವೀಲ್‌ಬೇಸ್ ಅನ್ನು ಹೊಂದಿದ್ದು, ಬ್ಯಾಟರಿ ಪ್ಯಾಕ್ ಅನ್ನು ಸರಿಹೊಂದಿಸಲು ಸಾಕಷ್ಟು ಜಾಗವನ್ನು ಸೃಷ್ಟಿಸುತ್ತದೆ. ಈ eVX ಎಲೆಕ್ಟ್ರಿಕ್ ಕಾನ್ಸೆಪ್ಟ್ ಎಸ್‌ಯುವಿ ಮಾದರಿಯು ಟೊಯೊಟಾದ 40PL ಜಾಗತಿಕ ಆರ್ಕಿಟೆಕ್ಚರ್ ಪಡೆದ 27PL ಪ್ಲಾಟ್‌ಫಾರ್ಮ್‌ಗೆ ಆಧಾರವಾಗಿದೆ. ಮುಂಭಾಗದಲ್ಲಿ, ಇದು ಆಕರ್ಷಕ ಗ್ರಿಲ್ ಮತ್ತು LED DRL ಗಳೊಂದಿಗೆ ನಯವಾದ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಈ ಇವಿ ಕಾನ್ಸೆಪ್ಟ್ ಮಾದರಿಯು ಪ್ರಮುಖವಾದ ವ್ಹೀಲ್ ಅರ್ಚಾರ್ ಗಳು, ಅಲಾಯ್ ವ್ಹೀಲ್ ಗಳು, ಕೂಪ್ ತರಹದ ರೂಫ್ ಮತ್ತು ಸಣ್ಣ ಓವರ್‌ಹ್ಯಾಂಗ್‌ನೊಂದಿಗೆ ಸಹ ಹೊಂದಿದೆ.

Most Read Articles

Kannada
English summary
Suzuki to introduce 6 battery evs in india by 2030 details in kannada
Story first published: Saturday, January 28, 2023, 17:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X