ಟೊಯೊಟಾ-ಸುಜುಕಿ-ದೈಹತ್ಸು ಎಲೆಕ್ಟ್ರಿಕ್ ವ್ಯಾನ್... ಸಿಂಗಲ್ ಚಾರ್ಜ್, 200 ಕಿ.ಮೀ ರೇಂಜ್

ಜಾಮಾ (ಜಪಾನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್) ಆಯೋಜಿಸಿದ್ದ ಆಟೋಮೋಟಿವ್ ಉದ್ಯಮದ ಪ್ರದರ್ಶನದಲ್ಲಿ ಟೊಯೊಟಾ-ಸುಜುಕಿ-ದೈಹತ್ಸು ಕಂಪನಿಗಳು ಒಟ್ಟಾಗಿ ತಮ್ಮ ಮುಂಬರುವ ಮಿನಿ ಎಲೆಕ್ಟ್ರಿಕ್ ವ್ಯಾನ್ ಅನ್ನು ಅನಾವರಣಗೊಳಿಸಿವೆ. ಈ ಕಾರ್ಯಕ್ರಮವು ಮೇ 18 ರಿಂದ 27 ರವರೆಗೆ ಜಿ7 ಹಿರೋಷಿಮಾ ಶೃಂಗಸಭೆಯೊಂದಿಗೆ ನಡೆಯಲಿದೆ ಎಂದು ವರದಿಯಾಗಿದೆ.

ಈ ಮಿನಿ ಎಲೆಕ್ಟ್ರಿಕ್ ವ್ಯಾನ್ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 200 ಕಿ.ಮೀ ವ್ಯಾಪ್ತಿಯನ್ನು ನೀಡಲಿದೆ. ಈ ಮಿನಿ ವ್ಯಾನ್ ಒಂದೇ ಪ್ಲಾಟ್‌ಫಾರ್ಮ್ ನಲ್ಲಿ ನಿರ್ಮಾಣವಾದರೂ ಮೂರು ಕಂಪನಿಗಳು ತಮ್ಮ ವಿನ್ಯಾಸಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಿಕೊಳ್ಳಲಿವೆ. ಮೂರು ತಯಾರಕರು ಒಂದೇ ಎಲೆಕ್ಟ್ರಿಕ್ ಮಿನಿವ್ಯಾನ್ ನ ಬ್ಯಾಡ್ಜ್-ಎಂಜಿನಿಯರ್ ಆವೃತ್ತಿಯನ್ನು ಪ್ರದರ್ಶಿಸಲಿದ್ದಾರೆ.

Suzuki-Toyota-Daihatsu electric van

ಈ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಗಳನ್ನು ಸುಜುಕಿ ಎವೆರಿ, ಟೊಯೊಟಾ ಪಿಕ್ಸಿಸ್ ವ್ಯಾನ್ ಮತ್ತು ದೈಹತ್ಸು ಹಿಜೆಟ್ ಕಾರ್ಗೋ ಎಂದು ಹೆಸರಿಸಲಾಗಿದೆ. ಟೊಯೊಟಾ, ಸುಜುಕಿ, ದೈಹತ್ಸು ಹಿಜೆಟ್ ಕಾರ್ಗೋ ಕೊನೆಯ ಮೈಲಿ ಲಾಜಿಸ್ಟಿಕ್ಸ್ ಉದ್ಯಮವನ್ನು ಗುರಿಯಾಗಿಸಿಕೊಂಡಿವೆ. ಹಾಗಾಗಿ ಸಿಜೆಪಿಟಿಸಿ (ಕಮರ್ಷಿಯಲ್ ಜಪಾನ್ ಪಾರ್ಟ್ನರ್ಶಿಪ್ ಟೆಕ್ನಾಲಜಿ ಕಾರ್ಪೊರೇಷನ್) ಪಿಕ್ಸಿಸ್ ವ್ಯಾನ್, ಎವೆರಿ ಮತ್ತು ಹಿಜೆಟ್ ಕಾರ್ಗೋವನ್ನು ತಯಾರಿಸುವ ಕೆಲಸವನ್ನು ದೈಹತ್ಸುಗೆ ವಹಿಸಿದ್ದಾರೆ.

ಈ ಎಲೆಕ್ಟ್ರಿಕ್ ಮಿನಿವ್ಯಾನ್ ನ ಉತ್ಪಾದನಾ ಆವೃತ್ತಿಯು 200 ಕಿ.ಮೀ ವ್ಯಾಪ್ತಿಯ ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಈ ಎಲೆಕ್ಟ್ರಿಕ್ ಮಿನಿವ್ಯಾನ್ ಯೋಜನೆಯಲ್ಲಿ, ಟೊಯೊಟಾ ಎಲೆಕ್ಟ್ರಿಕ್ ಪವರ್ ಟ್ರೇನ್‌ಗೆ ಕೊಡುಗೆ ನೀಡುತ್ತಿದೆ. ಹಾಗೆಯೇ ಸುಜುಕಿ ಮತ್ತು ದೈಹತ್ಸು ವ್ಯಾನ್‌ಗಳ ತಯಾರಿಕೆ ಮತ್ತು ಒಳಾಂಗಣ, ಬಾಹ್ಯಾ ಎಂಜಿನಿಯರಿಂಗ್ ನಲ್ಲಿ ತಮ್ಮ ಪರಿಣತಿಯೊಂದಿಗೆ ಕೊಡುಗೆ ನೀಡುತ್ತವೆ.

Suzuki-Toyota-Daihatsu electric van
ವಿನ್ಯಾಸ: ಟೊಯೊಟಾ ಪಿಕ್ಸಿಸ್ ವ್ಯಾನ್, ಸುಜುಕಿ ಎವೆರಿ ಮತ್ತು ದೈಹತ್ಸು ಹಿಜೆಟ್ ಕಾರ್ಗೋ ಒಂದೇ ರೀತಿಯ ವಿನ್ಯಾಸವನ್ನು ಹೊಂದಿರುತ್ತವೆ. ಸುಜುಕಿ ಎವೆರಿ ಹೊರತುಪಡಿಸಿ ಇದು ವಿಭಿನ್ನ ಫ್ರಂಟ್ ಬಂಪರ್ ಅನ್ನು ಪಡೆಯುತ್ತದೆ. ಫ್ರಂಟ್ ಚಾರ್ಜಿಂಗ್ ಪೋರ್ಟ್ ಸಹ ಇದೆ ಎಂದು ಹೇಳಲಾಗಿದೆ. ಸ್ವಲ್ಪ ಉದ್ದವಾಗಿದ್ದು, ಸುಂದರವಾದ ಆಕರ್ಷಣೆಯ ಜೊತೆಗೆ ಬಾಕ್ಸೀ ವಿನ್ಯಾಸವನ್ನು ಹೊಂದಿದೆ.

ಟೊಯೊಟಾ ಪಿಕ್ಸಿಸ್ ವ್ಯಾನ್, ಸುಜುಕಿ ಎವೆರಿ ಮತ್ತು ದೈಹತ್ಸು ಹಿಜೆಟ್ ಕಾರ್ಗೋಗಳು ಫಿಯೆಟ್ ಇ-ಡುಕಾಟೊ, ಮುಂಬರುವ ವಿಡಬ್ಲ್ಯೂ ಐಡಿ ಬಜ್ ಕಾರ್ಗೋ ಮುಂತಾದ ದೊಡ್ಡ ಎಲೆಕ್ಟ್ರಿಕ್ ವ್ಯಾನ್‌ಗಳ ಜೊತೆಗೆ ಸ್ಪರ್ಧಿಸುವುದಿಲ್ಲ. ಬದಲಾಗಿ, ಇವು ಜಪಾನ್ ಮಾರುಕಟ್ಟೆ ಮತ್ತು ಕೀ ಕಾರುಗಳು ಸಾಮಾನ್ಯವಾಗಿರುವ ಇತರ ಏಷಿಯಾನ್ ಮಾರುಕಟ್ಟೆಗಳಿಗೆ ಮಾತ್ರ ಸೀಮಿತವಾಗಲಿವೆ ಎನ್ನಲಾಗಿದೆ.

Suzuki-Toyota-Daihatsu electric van

ಈ ಮೂರೂ ಕಂಪನಿಗಳು ವಾಣಿಜ್ಯ ಮತ್ತು ಸರಕು ಅನ್ವಯಿಕೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಬಿ 2 ಬಿ ಮತ್ತು ಬಿ 2 ಸಿ ಮಾದರಿಗಳಿಗೆ ಉತ್ತಮ ಇಂಟ್ರಾ ಸಿಟಿ ಡೆಲಿವರಿ ವ್ಯಾನ್ ಆಗಿ ನಾವು ಇದನ್ನು ನೋಡಬಹುದಾದ್ದರಿಂದ ಭಾರತದಲ್ಲೂ ಮಾರಾಟವಾಗುವ ನಿರೀಕ್ಷೆಗಳಿವೆ. ಸದ್ಯ ಅನಾವರಣದ ಬಳಿಕ ಬಿಡುಗಡೆ ಬಗ್ಗೆ ಮುಂಬರುವ ತಿಂಗಳಿಗಳಲ್ಲಿ ಹೆಚ್ಚಿನ ಮಾಹಿತಿ ಹೊರಬೀಳಬಹುದು.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Friday, May 19, 2023, 15:40 [IST]
English summary
Suzuki toyota daihatsu electric van unveil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+