ಟಾಟಾ ಹ್ಯಾರಿಯರ್, ಸಫಾರಿ ಫೇಸ್‌ಲಿಫ್ಟ್ ಶೀಘ್ರ ಬಿಡುಗಡೆ: ಏನೆಲ್ಲ ಹೊಸತನ ಹೊಂದಿವೆ..

ಭಾರತದಲ್ಲಿ ಟಾಟಾ ಮೋಟಾರ್ಸ್ ತಯಾರಿಸುವ ಕಾರುಗಳನ್ನು ಅತಿಹೆಚ್ಚಿನ ಸಂಖ್ಯೆಯ ಗ್ರಾಹಕರು ಖರೀದಿಸುತ್ತಾರೆ. ಅವುಗಳ ಸುರಕ್ಷತಾ ವೈಶಿಷ್ಟ್ಯಗಳು, ಹೊಸ ರೀತಿಯ ವಿನ್ಯಾಸ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಅದರಂತೆ ಕಂಪನಿಯು ಖರೀದಿದಾರರ ಅಭಿರುಚಿಗೆ ತಕ್ಕಂತೆ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತದೆ.

ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್ ಫೇಸ್‌ಲಿಫ್ಟ್ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳನ್ನು ಪ್ರದರ್ಶಿಸುವ ನಿರೀಕ್ಷೆ ಇತ್ತು. ಆದರೆ, ಹ್ಯಾರಿಯರ್‌ನ ಇತರೆ ಎರಡು ಹೊಸ ಆವೃತ್ತಿಗಳನ್ನು ಅನಾವರಣ ಮಾಡಿತು. ಅವುಗಳೆಂದರೆ, ಹ್ಯಾರಿಯರ್ ಇವಿ, ಹ್ಯಾರಿಯರ್ ರೆಡ್ ಡಾರ್ಕ್ ಆವೃತ್ತಿ (ಜೊತೆಗೆ ಸಫಾರಿ ರೆಡ್ ಡಾರ್ಕ್). ಮುಂಬರಲಿರುವ ಟಾಟಾ ಹ್ಯಾರಿಯರ್, ಸಫಾರಿ ಫೇಸ್‌ಲಿಫ್ಟ್ ಆವೃತ್ತಿಗಳು ಹೇಗಿರಲಿವೆ ಎಂಬುದರ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ.

ಟಾಟಾ ಹ್ಯಾರಿಯರ್, ಸಫಾರಿ ಫೇಸ್‌ಲಿಫ್ಟ್ ಶೀಘ್ರ ಬಿಡುಗಡೆ: ಏನೆಲ್ಲ ಹೊಸತನ ಹೊಂದಿವೆ..

ಹ್ಯಾರಿಯರ್ ಇವಿಯು ಹೊಸ ಹ್ಯಾರಿಯರ್ ಫೇಸ್‌ಲಿಫ್ಟ್‌ನ ಹೊರಭಾಗದ ವಿನ್ಯಾಸವು ಹೇಗಿರಲಿದೆ ಎಂಬುದನ್ನು ತಿಳಿಸಿದರೆ, ಹ್ಯಾರಿಯರ್ ರೆಡ್ ಡಾರ್ಕ್ ಆವೃತ್ತಿಯು ಕ್ಯಾಬಿನ್‌ನೊಳಗೆ ಬದಲಾವಣೆಗಳ ಕುರಿತು ಹೇಳುತ್ತದೆ. ಫ್ರಂಟ್ ಎಂಡ್ ಅನ್ನು ನವೀಕರಿಸಿದ ಸ್ಪ್ಲಿಟ್-ಹೆಡ್‌ಲ್ಯಾಂಪ್‌ಗಳೊಂದಿಗೆ ಮರುವಿನ್ಯಾಸಗೊಳಿಸಬಹುದು. ಜೊತೆಗೆ LED DRLಗಳು ಒಟ್ಟಿಗೆ ಕನೆಕ್ಟ್ ಆಗಿರಬಹುದು. ರೀ-ಡಿಸೈನ್ ಮಾಡಿದ ಫ್ರಂಟ್ ಬಂಪರ್ ಹೊಂದಿರಬಹುದು. ಜೊತೆಗೆ ಹೊಸ ಅಲಾಯ್ ವೀಲ್ಸ್ ಹೊರತಾಗಿ ಸೈಡ್ ಪ್ರೊಫೈಲ್ ಬದಲಾಗದೆ ಹಾಗೆಯೇ ಉಳಿಯಬಹುದು. ಅಲ್ಲದೆ, ಹ್ಯಾರಿಯರ್ ಇವಿಯಂತೆ ರೇರ್ ಎಂಡ್ ಟೈಲ್‌ಗೇಟ್‌ನಲ್ಲಿ ಸಂಪೂರ್ಣವಾಗಿ LED ಟೈಲ್ ಲೈಟ್‌ ಇರಬಹುದು.

ಒಳಭಾಗದ ವಿನ್ಯಾಸದ ವೈಶಿಷ್ಟ್ಯದ ಬಗ್ಗೆ ಮಾತನಾಡುವುದಾದರೆ, ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್ ಆವೃತ್ತಿಗಳು ಹೊಸ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯಬಹುದು. ಅದರ ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿದರೆ, ಪ್ರಸ್ತುತ ಈ ಎಸ್‌ಯುವಿಗಳು 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿರಲಿವೆ. ಹ್ಯಾರಿಯರ್ ಮತ್ತು ಸಫಾರಿ ರೆಡ್ ಡಾರ್ಕ್ ಮತ್ತು ಆಲ್ಟ್ರೊಜ್ ರೇಸರ್ ಸೇರಿದಂತೆ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಎಲ್ಲ ಹೊಸ ಕಾರುಗಳು ನೂತನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆದಿವೆ ಎಂದು ಹೇಳಬಹುದು.

ಟಾಟಾ ಹ್ಯಾರಿಯರ್, ಸಫಾರಿ ಫೇಸ್‌ಲಿಫ್ಟ್ ಶೀಘ್ರ ಬಿಡುಗಡೆ: ಏನೆಲ್ಲ ಹೊಸತನ ಹೊಂದಿವೆ..

ಸಫಾರಿ ಮತ್ತು ಹ್ಯಾರಿಯರ್ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊರತುಪಡಿಸಿ, ಸುರಕ್ಷತೆ ದೃಷ್ಟಿಯಿಂದಲ್ಲೂ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರಲಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇವು 360-ಡಿಗ್ರಿ ಕ್ಯಾಮೆರಾ, ಆಟೋ-ಎಮರ್ಜೆನ್ಸಿ ಬ್ರೇಕಿಂಗ್, ರೇರ್ ಕ್ರಾಸ್-ಟ್ರಾಫಿಕ್ ಅಲರ್ಟ್, ಲೇನ್ ಕೀಪ್ ಅಸಿಸ್ಟ್ ಸೇರಿದಂತೆ ADAS (ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ) ತಂತ್ರಜ್ಞಾನವನ್ನು ಹೊಂದಿರಬಹುದು. ಇವೆಲ್ಲವೂ ಮಾರುಕಟ್ಟೆಗೆ ಈ ಕಾರು ಬಂದ ಮೇಲೆ ತಿಳಿಯುತ್ತದೆ. ಸದ್ಯ ಪ್ರತಿಯೊಬ್ಬ ಹೊಸ ಕಾರು ಖರೀದಿದಾರರು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಾರೆ.

ಟಾಟಾ ಹ್ಯಾರಿಯರ್, ಸಫಾರಿ ಫೇಸ್‌ಲಿಫ್ಟ್ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇವು 170 PS ಗರಿಷ್ಠ ಪವರ್ ಮತ್ತು 350 Nm ಪೀಕ್ ಟಾರ್ಕ್ ಉತ್ಪಾದಿಸುವ 2.0-ಲೀಟರ್ ಕ್ರಿಯೋಟೆಕ್ ಡೀಸೆಲ್ ಎಂಜಿನ್‌ ಅನ್ನು (ಈಗಿರುವ ಮಾದರಿಗಳಲ್ಲಿ ಉಪಯೋಗಿಸಲಾಗುತ್ತದೆ) ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಆದರೂ, ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್ ಹೊಸ 1.5 - ಲೀಟರ್ ಟರ್ಬೊ ಪೆಟ್ರೋಲ್ ಮೋಟರ್ ಅನ್ನು ಸಹ ಪಡೆಯುವ ಸಾಧ್ಯತೆಯಿದೆ.

ಇಷ್ಟೇಅಲ್ಲದೆ, ಹೊಸದಾಗಿ ಅಭಿವೃದ್ಧಿಪಡಿಸಿದ 4 ಸಿಲಿಂಡರ್ TGDi ಮೋಟಾರ್ ಅನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು. ಇದರ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 170 PS ಗರಿಷ್ಠ ಪವರ್ ಮತ್ತು 280 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ. ಮುಂಬರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ 6-ಸ್ಪೀಡ್ MT (ಮ್ಯಾನುವಲ್ ಟ್ರಾನ್ಸ್ಮಿಷನ್) ಹೊರತುಪಡಿಸಿ, ಹೊಸ ಪೆಟ್ರೋಲ್ ಎಂಜಿನ್ ಅನ್ನು ಐಚ್ಛಿಕ ಡ್ಯುಯಲ್ - ಕ್ಲಚ್ ಆಟೋಮ್ಯಾಟಿಕ್‌ನೊಂದಿಗೆ ಕೊಡಬಹುದು.

ಹೊಸ ಎಸ್‌ಯುವಿಗಳು ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಸಾಧ್ಯತೆ ಇದೆ. ಸದ್ಯಕ್ಕೆ, ಹ್ಯಾರಿಯರ್ ಬೆಲೆ ರೂ.14.80 ಲಕ್ಷದಿಂದ 22.35 ಲಕ್ಷದವರೆಗೆ ಇದೆ. ಸಫಾರಿ ಬೆಲೆ ರೂ.15.45 ಲಕ್ಷದಿಂದ 23.76 ಲಕ್ಷದವರೆಗೆ ಇದೆ (ಎಕ್ಸ್ ಶೋರೂಂ ಪ್ರಕಾರ). ಎರಡು ನವೀಕರಿಸಿದ ಎಸ್‌ಯುವಿಗಳ ಬಿಡುಗಡೆ ದಿನಾಂಕವನ್ನು ಕಂಪನಿಯು ಈವರೆಗೆ ಖಚಿತಪಡಿಸಿಲ್ಲ. ಆದರೆ, ಮುಂದಿನ ವರ್ಷದೊಳಗೆ ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಇವುಗಳ ಮೇಲೆ ಗ್ರಾಹಕರಿಗೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Tata harrier safari facelift to launch soon heres what expect details kannada
Story first published: Tuesday, January 24, 2023, 6:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X