ಹೆಚ್ಚಿನ ಮೈಲೇಜ್‌ನೊಂದಿಗೆ ಅಗ್ಗದ ದರದಲ್ಲಿ ಸಿಗುವ ಟಾಟಾ, ಮಾರುತಿ ಸುಜುಕಿ CNG ಕಾರುಗಳು

ಭಾರತೀಯ ಗ್ರಾಹಕರು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಕಾರುಗಳನ್ನು ಖರೀದಿಸಲು ಹುಡುಕಾಟ ನಡೆಸುತ್ತಾರೆ. ಪೆಟ್ರೋಲ್, ಡಿಸೇಲ್ ದರಕ್ಕೆ ಹೋಲಿಕೆ ಮಾಡಿದರೆ, ಸಿಎನ್‌ಜಿ ಬೆಲೆ ತುಂಬಾ ಅಗ್ಗವೆಂದು ಹೇಳಬಹುದು. ಅದಕ್ಕಾಗಿ ಇಂತಹ ಕಾರುಗಳನ್ನು ಇಷ್ಟಪಡುತ್ತಾರೆ. ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಮಾರಾಟ ಮಾಡುವ ಸಿಎನ್‌ಜಿ ಕಾರುಗಳ ಬಗ್ಗೆ ತಿಳಿಯೋಣ.

ಮೊದಲಿಗೆ ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಕಾರಾಗಿರುವ ಆಲ್ಟೊ 800 LXI ಸಿಎನ್‌ಜಿ ಬಗ್ಗೆ ಹೇಳುವುದಾದರೆ, ಇದು ಅತ್ಯಂತ ಅಗ್ಗದ ಬೆಲೆಯ ಕಾರಾಗಿದೆ. 31.59 km/kg ಮೈಲೇಜ್ ನೀಡಲಿದ್ದು, ಬಹುತೇಕರು ಇಷ್ಟಪಟ್ಟು ಖರೀದಿಸುತ್ತಾರೆ. ನಾಲ್ಕು ಆಸನಗಳನ್ನು ಪಡೆದುಕೊಂಡಿದ್ದು, ರೂ.5.13 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಾಗಲಿದೆ. ಸಿಲ್ಕಿ ಸಿಲ್ವರ್, ಸಾಲಿಡ್ ವೈಟ್ ಸೇರಿದಂತೆ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಅಗ್ಗದ ಬೆಲೆಯಲ್ಲಿ ಸಿಗುವ ಟಾಟಾ, ಮಾರುತಿ ಸುಜುಕಿ CNG ಕಾರುಗಳು

ಈ ಕಾರಿನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, 796 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದೆ. ಇದು 40.36 bhp ಗರಿಷ್ಠ ಪವರ್ ಹಾಗೂ 60 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮ್ಯಾನುವಲ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯ ಜೊತೆಗೆ ಭರಪೂರ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅವುಗಳೆಂದರೆ, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಫ್ರಂಟ್ ಪವರ್ ವಿಂಡೋಸ್, ಡ್ಯೂಯಲ್ ಏರ್ ಬಾಗ್ಸ್, ಪವರ್ ಸ್ಟೀರಿಂಗ್, ಕ್ಲೇಮೇಟ್ ಕಂಟ್ರೋಲ್ ಅನ್ನು ಹೊಂದಿದೆ.

ಮಾರುತಿ ಸುಜುಕಿಯ ಮತ್ತೊಂದು ಬಹುನೀರಿಕ್ಷಿತ S presso VXI ಸಿಎನ್‌ಜಿ ಮಾದರಿ ರೂ.6.10 ಲಕ್ಷ ಬೆಲೆಯಲ್ಲಿ ಭಾರತದ ಗ್ರಾಹಕರಿಗೆ ಸಿಗಲಿದ್ದು, ಒಟ್ಟು ಆರು ವಿವಿಧ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. 998 ಸಿಸಿ ಎಂಜಿನ್ ಹೊಂದಿದ್ದು, 55.92 bhp ಗರಿಷ್ಠ ಪವರ್ ಹಾಗೂ 82.1 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಮ್ಯಾನುವಲ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, 32.73 km/kg ಮೈಲೇಜ್ ನೀಡಲಿದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಅಗ್ಗದ ಬೆಲೆಯಲ್ಲಿ ಸಿಗುವ ಟಾಟಾ, ಮಾರುತಿ ಸುಜುಕಿ CNG ಕಾರುಗಳು

ಟಾಟಾ ಮೋಟಾರ್ಸ್ ನ ಪ್ರಮುಖ ಸಿಎನ್‌ಜಿ ಕಾರಾಗಿರುವ ಟಿಯಾಗೊ XZ ಪ್ಲಸ್ ಬಗ್ಗೆ ಹೇಳುವುದಾದರೆ, ಇದು ರೂ.7.95 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದ್ದು, 26.49 km/kg ಮೈಲೇಜ್ ನೀಡಲಿದೆ. ಇದು ಮ್ಯಾನುವಲ್ ಟ್ರಾಸ್ಮಿಷನ್ ಆಯ್ಕೆಯನ್ನು ಪಡೆದುಕೊಂಡಿದ್ದು, 1199 ಸಿಸಿ ಎಂಜಿನ್ 72 bhp ಗರಿಷ್ಠ ಪವರ್ ಹಾಗೂ 95 nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಒಟ್ಟು ಐದು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಐದು ಆಸನಗಳ ಆಯ್ಕೆಯನ್ನು ಹೊಂದಿರುವ ಈ ಕಾರು, ಅತ್ಯುತ್ತಮ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅವುಗಳೆಂದರೆ, ಮಲ್ಟಿ -ಫಂಕ್ಷನ್ ಸ್ಟೀರಿಂಗ್ ವೀಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅಲಾಯ್ ವೀಲ್ಸ್, ಫಾಗ್ ಲೈಟ್ಸ್, ಫ್ರಂಟ್ ಹಾಗೂ ರೇರ್ ಪವರ್ ವಿಂಡೋಸ್ ಪಡೆದುಕೊಳ್ಳುವ ಮೂಲಕ ಈ ಕಾರು ಆಕರ್ಷವಾಗಿದ್ದು, ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು ಎಂದು ಹೇಳಬಹುದು.

ಮಾರುತಿ ಸುಜುಕಿ ಕಂಪನಿಯ ಬಹುಬೇಡಿಕೆಯಲ್ಲಿರುವ ಮತ್ತೊಂದು ಸಿಎನ್‌ಜಿ ಕಾರು, 'ವ್ಯಾಗನ್ ಆರ್ VXI' ರೂ.6.88 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. 34.05 km/kg ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 998 ಸಿಸಿ ಎಂಜಿನ್ ಪಡೆದಿದ್ದು, 55.92 bhp ಗರಿಷ್ಠ ಪವರ್ ಹಾಗೂ 82.1 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮ್ಯಾನುವಲ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಈ ಕಾರು, ಸಿಲ್ಕಿ ಸಿಲ್ವರ್, ಮ್ಯಾಗ್ಮಾ ಗ್ರೇ ಸೇರಿದಂತೆ ಒಟ್ಟು ಎಂಟು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಅಲಾಯ್ ವೀಲ್ಸ್, ಫಾಗ್ ಲೈಟ್ಸ್, ಫ್ರಂಟ್ ಹಾಗೂ ರೇರ್ ಪವರ್ ವಿಂಡೋಸ್ ಒಳಗೊಂಡಂತೆ ಮತ್ತಷ್ಟು ವೈಶಿಷ್ಟ್ಯಗಳನ್ನು ಪಡೆದಿದೆ. ಒಟ್ಟಾರೆ, ಮಾರುತಿ ಸುಜುಕಿ ಹಾಗೂ ಟಾಟಾ ಕಂಪನಿಯ ಈ ಕಾರುಗಳು ಅತ್ಯಂತ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಉತ್ತಮ ಮೈಲೇಜ್ ನೀಡುವುದರಿಂದ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು.

Article Published On: Friday, March 17, 2023, 8:30 [IST]
English summary
Tata maruti suzuki cng cars available low prices with high mileage details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+