ಬಹು ಕೋಟಿ ಬೆಲೆಯ ಫೆರಾರಿ ರೋಮಾ ಸೂಪರ್ ಕಾರು ಖರೀದಿಸಿದ Zomato ಸಂಸ್ಥಾಪಕ
Zomato ಸಿಇಒ ಮತ್ತು ಸಂಸ್ಥಾಪಕ ದಿಪಿಂದರ್ ಗೋಯಲ್ ಅವರಿಗೆ ದುಬಾರಿ ಕಾರುಗಳೆಂದರೆ ಬಲು ಇಷ್ಟ. ವಿಶೇಷವಾಗಿ ತಮ್ಮ ಝೊಮಾಟೊ ಕಂಪನಿ ಫೇಮಸ್ ಆದ ಬಳಿಕ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದಾರೆ. ಇತ್ತೀಚೆಗೆ ಅವರು 4.3 ಕೋಟಿ ರೂ. ಮೌಲ್ಯದ ಹೊಚ್ಚಹೊಸ ಫೆರಾರಿ ರೋಮಾವನ್ನು ಖರೀದಿಸಿದ್ದಾರೆ.
ಅವರ ಹೊಸ ಫೆರಾರಿಯು ಹರಿಯಾಣದ ಗುರುಗ್ರಾಮ್‌ನಲ್ಲಿ ಝೊಮಾಟೊ ಪ್ರಧಾನ ಕಛೇರಿ ಇರುವ ರಸ್ತೆಗಳಲ್ಲಿ ಕಂಡುಬಂದಿದೆ. ಫೆರಾರಿ ರೋಮಾ ಝೊಮಾಟೊ ಬಣ್ಣದಂತೆಯೇ ಕೆಂಪು ಬಣ್ಣದಲ್ಲಿದೆ. ಈ ಕಾರನ್ನು 2021 ರಲ್ಲಿ ಫೆರಾರಿ ಕಂಪನಿ ಬಿಡುಗಡೆ ಮಾಡಿದೆ. ಇನ್ನು ಭಾರತದಲ್ಲಿ ಹೊಸ ಫೆರಾರಿ ರೋಮಾ ಮಾದರಿಯ ಕೆಲವೇ ಘಟಕಗಳಿವೆ. ಹೊಸ ಕಾರು ಗಮನಾರ್ಹ ವಿನ್ಯಾಸವನ್ನು ಹೊಂದಿದ್ದು, ಇತರ ಫೆರಾರಿ ಕಾರುಗಳಿಗೆ ಹೋಲಿಸಿಕೊಂಡರೆ ತುಂಬಾ ಭಿನ್ನವಾಗಿ ಕಾಣುತ್ತದೆ.

ಇದರ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ ಸೆಂಟರ್ ಕನ್ಸೋಲ್‌ನಲ್ಲಿ 8.4 ಇಂಚಿನ ಟ್ಯಾಬ್ಲೆಟ್ ಶೈಲಿಯ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದೆ. ಕಾರು 16 ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕೆಪ್ಯಾಸಿಟಿವ್ ಬಟನ್‌ಗಳೊಂದಿಗೆ ಹೊಸ ಸ್ಟೀರಿಂಗ್ ವೀಲ್‌ನೊಂದಿಗೆ ಬರುತ್ತದೆ. ರೋಮಾ 3.9 ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್ V8 ಎಂಜಿನ್‌ನಿಂದ ಪವರ್ ಪಡೆಯುತ್ತದೆ. ಇದು ಗರಿಷ್ಠ 690 ಪಿಎಸ್ ಪವರ್ ಮತ್ತು 760 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಹೊಸ ಫೆರಾರಿ ರೋಮಾ ಕಾರಿನ ವಿನ್ಯಾಸದ ಕುರಿತು ಹೇಳುವುದಾದರೆ, ಇಂಟಿಗ್ರೇಟೆಡ್ ಡಿಆರ್‌ಎಲ್‌ಗಳು ಮತ್ತು ನಾಲ್ಕು ಟೈಲ್ ಲ್ಯಾಂಪ್‌ಗಳೊಂದಿಗೆ ಸ್ಲಿಮ್ ಆಲ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಇದು ಕ್ವಾಡ್ ಎಕ್ಸಾಸ್ಟ್ ಸೆಟಪ್ ಮತ್ತು ಎಲೆಕ್ಟ್ರಾನಿಕ್ ಕಂಟ್ರೋಲ್ ಸ್ಪಾಯ್ಲರ್‌ನೊಂದಿಗೆ ಬರುತ್ತದೆ. ಹೊಸ ಫೆರಾರಿ ರೋಮಾದ ಕ್ಯಾಬಿನ್ ಸಹ ಹಳೆಯ ಫೆರಾರಿಗಳಿಗೆ ಹೋಲಿಸಿದರೆ ಸಂಪೂರ್ಣವಾಗಿ ವಿಭಿನ್ನವಾಗಿದೆ. ಚಾಲಕ ಮತ್ತು ಸಹ-ಚಾಲಕನಿಗಾಗಿ ಇದರಲ್ಲಿ ಎರಡು ಪ್ರತ್ಯೇಕ ಸೆಲ್‌ಗಳನ್ನು ನೋಡಬಹುದು.

ದೀಪಿಂದರ್ ಗೋಯಲ್ ಅವರ ಇತರ ಕಾರುಗಳು
ದೀಪಿಂದರ್ ಗೋಯಲ್ ಅವರು ಲಂಬೋರ್ಘಿನಿ ಉರುಸ್ ಮತ್ತು ಪೋರ್ಷೆ 911 ಕ್ಯಾರೆರಾ ಎಸ್ ಅನ್ನು ಸಹ ಹೊಂದಿದ್ದಾರೆ. ಲಂಬೋರ್ಘಿನಿ ಉರುಸ್ ಬ್ರ್ಯಾಂಡ್‌ನ ಮೊದಲ ಆಧುನಿಕ SUV ಆಗಿದ್ದು, ಇದು ಪ್ರಪಂಚದಾದ್ಯಂತ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಇದು ಅತ್ಯಂತ ವೇಗವಾಗಿ ಮಾರಾಟವಾಗುವ ಲಂಬೋರ್ಗಿನಿಯಾಗಿದ್ದು, ಬ್ರ್ಯಾಂಡ್ ಭಾರತದಲ್ಲಿ ಉನ್ನತ-ಕಾರ್ಯಕ್ಷಮತೆಯ SUV ಯ 200 ಕ್ಕೂ ಹೆಚ್ಚು ಘಟಕಗಳನ್ನು ವಿತರಿಸಿದೆ.
ಭಾರತದಲ್ಲಿ ಬಹಳಷ್ಟು ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಉರುಸ್ ಅನ್ನು ಹೊಂದಿದ್ದಾರೆ. ಬಾಲಿವುಡ್ ನಟರಾದ ರಣವೀರ್ ಸಿಂಗ್ ಮತ್ತು ಕಾರ್ತಿಕ್ ಆರ್ಯನ್ ಮತ್ತು ಅಂಬಾನಿ ಕುಟುಂಬ ಕೂಡ ಈ ಕಾರನ್ನು ಹೊಂದಿದೆ. ಇದು ಹಲವು ವರ್ಷಗಳಿಂದಲೂ ಇದೆ. ಕೆಲವು ಆಯ್ದ ಆಟೋಮೊಬೈಲ್ ಉತ್ಸಾಹಿಗಳು ಮಾತ್ರ ಈ ಕಾರನ್ನು ಆಯ್ಕೆ ಮಾಡಿ ಖರೀದಿಸುತ್ತಾರೆ. ಇದರ ವಿಶೇಷತೆಗಳನ್ನು ಹೇಳುವುದಾದರೆ, ಟ್ವಿನ್ ಟರ್ಬೋಚಾರ್ಜರ್‌ಗಳೊಂದಿಗೆ 3.0-ಲೀಟರ್ ಫ್ಲಾಟ್-ಸಿಕ್ಸ್ ಸಿಲಿಂಡರ್ ಬಾಕ್ಸರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.

450 Bhp ಪೀಕ್ ಪವರ್ ಮತ್ತು 530 Nm ಪೀಕ್ ಟಾರ್ಕ್ ಅನ್ನು ಇದರ ಫ್ಲಾಟ್-ಸಿಕ್ಸ್ ಮೋಟಾರ್ ಉತ್ಪಾದಿಸುತ್ತದೆ. 911 ಕ್ಯಾರೆರಾ S ಕಾರಿನಲ್ಲಿ 4 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 100 ಕಿ.ಮೀ ವೇಗವನ್ನು ತಲುಪಬಹುದು. ಗೇರ್ ಶಿಫ್ಟಿಂಗ್ ಅನ್ನು 8-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ಮೂಲಕ ನಿರ್ವಹಿಸಲಾಗುತ್ತದೆ, ಇದು ವಿಶ್ವದ ಇನ್ಯಾವುದೇ ಕಾರಿನಲ್ಲಿ ಕಂಡುಬರದ ತ್ವರಿತ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲಿ ಒಂದಾಗಿದೆ ಎಂಬುದನ್ನು ಗಮನಿಸಬೇಕಾದ ಸಂಗತಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








