ಹೊಸ ಕ್ರಾಂತಿಗೆ ನಾಂದಿ: ಎಲೆಕ್ಟ್ರಿಕ್ ಕಾರಾಗಲಿದೆ ಜಿಮ್ನಿ..!

ಆಫ್-ರೋಡ್ ಎಸ್‌ಯುವಿಯಾಗಿರುವ ಮಾರುತಿ ಸುಜುಕಿ ಜಿಮ್ನಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, ಕೆಲ ದಿನಗಳ ಹಿಂದೆಯಷ್ಟೇ ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ 5 ಡೋರ್ ಜಿಮ್ನಿಯನ್ನು ಅನಾವರಣಗೊಳಿಸಲಾಗಿತ್ತು. ಈಗಾಗಲೇ ಬುಕಿಂಗ್ ಆರಂಭವಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಇದೀಗ ಜಿಮ್ನಿ ಕುರಿತಂತೆ ದೊಡ್ಡದಾದ ಸುದ್ದಿಯೊಂದು ದೊರೆತಿದೆ.

ಭಾರತದ ಪ್ರಮುಖ ವಾಹನ ತಯಾರಕ 'ಮಾರುತಿ'ಯ ಪಾಲುದಾರ ಸಂಸ್ಥೆಯಾಗಿರುವ ಜಪಾನ್ ಮೂಲದ ಸುಜುಕಿ ಮೋಟರ್ ಕಾರ್ಪೋರೇಷನ್ ಜಾಗತಿಕ ಕಾರ್ಯತಂತ್ರ ಯೋಜನೆಗಳ ಕುರಿತಂತೆ ಮಾಹಿತಿಯನ್ನು ಹಂಚಿಕೊಂಡಿದೆ. ಅದರ ಭಾಗವಾಗಿ ಯುರೋಪಿಯನ್ ಮಾರುಕಟ್ಟೆಗೆ 2024ರೊಳಗೆ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲು ತೀರ್ಮಾನ ಮಾಡಿದ್ದು, 2050ರ ಹೊತ್ತಿಗೆ ಶೂನ್ಯ ಇಂಗಾಲ ಹೊರಸೂಸುವ ವಾಹನಗಳನ್ನು ವಿಶ್ವಾದ್ಯಂತ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿಯಂತೆ. ಈಗಾಗಲೇ, ಭಾರತದಲ್ಲೂ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲು ಮಾರುತಿ ಸುಜುಕಿ ಯೋಜಿಸಿದೆ.

ಹೊಸ ಕ್ರಾಂತಿಗೆ ನಾಂದಿ: ಎಲೆಕ್ಟ್ರಿಕ್ ಕಾರಾಗಲಿದೆ ಜಿಮ್ನಿ..!

'ಸುಜುಕಿ' ಯುರೋಪ್ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ರೆಡಿ ಮಾಡುತ್ತಿರುವ ಐದು ಎಲೆಕ್ಟ್ರಿಕ್ ಕಾರುಗಳನ್ನು ಪಟ್ಟಿ ಮಾಡಿದೆ. ಅದರಲ್ಲೊಂದನ್ನು 'EVX' (Concept) ಅನ್ನು ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಲಾಗಿತ್ತು. ಅಲ್ಲದೆ, ಈ ಪಟ್ಟಿಯಲ್ಲಿ ಬಾಕ್ಸಿ ಆಕಾರದ ಮಾದರಿಯ ಕಾರೊಂದು ಇರುವುದನ್ನು ಕಾಣಬಹುದು. ಇದು ಬಹುತೇಕ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗಲಿರುವ ಸಣ್ಣ ಎಸ್‌ಯುವಿಯಾಗಿರುವ ಜಿಮ್ನಿಗೆ ಹೋಲುತ್ತಿದೆ. ಇದರರ್ಥ ಶೀಘ್ರದಲ್ಲೇ ಬಹುನೀರಿಕ್ಷಿತ ಜಿಮ್ನಿ ಎಲೆಕ್ಟ್ರಿಕ್ ಆವೃತ್ತಿಯಾಗಿ ಗ್ರಾಹಕರಿಗೆ ಸಿಗಲಿದೆ.

ಇನ್ನುಳಿನದಂತೆ, ಮೂರು ಎಲೆಕ್ಟ್ರಿಕ್ ವಾಹನಗಳಲ್ಲಿ ಸಣ್ಣದೊಂದು ಹ್ಯಾಚ್‌ಬ್ಯಾಕ್ ಅಥವಾ ಎಂಪಿವಿ ಹಾಗೂ ಇತರೆ ಎರಡು ಎಸ್‌ಯುವಿಗಳು ಸೇರಿರಲಿವೆ ಎಂದು ವರದಿಯಾಗಿದೆ. ಈಗಾಗಲೇ ಪ್ರದರ್ಶಿಲಾಗಿರುವ EVX ಕಾನ್ಸೆಪ್ಟ್ ಹೊಂದಿರುವ ಕಾರು, 60 kWh ಬ್ಯಾಟರಿ ಪ್ಯಾಕ್ ಹೊಂದಿರುವ ಎಲೆಕ್ಟ್ರಿಕ್ ಮೋಟಾರ್ ನೊಂದಿಗೆ 2025ರ ವೇಳೆಗೆ ಗ್ರಾಹರಿಕರಿಗೆ ಖರೀದಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದ್ದು, ಎಲೆಕ್ಟ್ರಿಕ್ ಆವೃತ್ತಿಯಾಗಿ ಬದಲಾಗಲಿರುವ ಜಿಮ್ನಿ ಕೂಡ ಅದೇ ಬ್ಯಾಟರಿ ಪ್ಯಾಕ್ ಪಡೆದಿರುವ ನಿರೀಕ್ಷೆ ಇದೆ. ಆದರೆ, ಇದರ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿ ನೀಡಿದ ಮೇಲೆ ಎಲ್ಲವು ತಿಳಿಯಲಿದೆ.

ಹೊಸ ಕ್ರಾಂತಿಗೆ ನಾಂದಿ: ಎಲೆಕ್ಟ್ರಿಕ್ ಕಾರಾಗಲಿದೆ ಜಿಮ್ನಿ..!

ಪ್ರಸ್ತುತ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಪೆಟ್ರೋಲ್ ಚಾಲಿತ ಮಾರುತಿ ಸುಜುಕಿ ಜಿಮ್ನಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ಕಾರಾಗಿ ಬದಲಾಗಲಿರುವ ಜಿಮ್ನಿ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಸಾಧ್ಯತೆಯಿದೆ. ಅದು 100 bhp ಗರಿಷ್ಠ ಪವರ್ ಹಾಗೂ 129 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿರಲಿದ್ದು, ಬಹುತೇಕ ಆಫ್-ರೋಡ್ ಎಸ್‌ಯುವಿಯಾಗಿಯೇ ಉಳಿಯಲಿದೆ. ಈಗಿರುವ ಜಿಮ್ನಿ ರೀತಿಯಲ್ಲೇ ಹಲವು ನವೀನ ಬಗೆಯ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಜೊತೆಗೆ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿಯೇ ಖರೀದಿಗೆ ಸಿಗಲಿದೆ.

ಸದ್ಯ ಭಾರತದಲ್ಲಿ ಖರೀದಿಗೆ ದೊರೆಯುವ 4WD (ಫೋರ್ ವೀಲ್ ಡ್ರೈವ್) ಆಯ್ಕೆಯೊಂದಿರುವ ಮಾರುತಿ ಸುಜುಕಿ 5 ಡೋರ್ ಜಿಮ್ನಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.5 ಲೀಟರ್ K15B ಪೆಟ್ರೋಲ್ ಎಂಜಿನ್ ಹೊಂದಿದ್ದು, 103 bhp ಪವರ್ ಮತ್ತು 134 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟೆಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆದಿದೆ ಎಂದು ಹೇಳಬಹುದು.

ಹೊಸ ಕ್ರಾಂತಿಗೆ ನಾಂದಿ: ಎಲೆಕ್ಟ್ರಿಕ್ ಕಾರಾಗಲಿದೆ ಜಿಮ್ನಿ..!

ಈಗಾಗಲೇ ಜಿಮ್ನಿಯ ಬುಕಿಂಗ್ ಕೂಡ ಆರಂಭವಾಗಿದ್ದು, ಗ್ರಾಹಕರು ರೂ.25000 ಮುಂಗಡ ಹಣ ಪಾವತಿಸಿ, ಬುಕ್ ಮಾಡಬಹುದು. ಕಂಪನಿಯು ಜಿಮ್ನಿ ಬೆಲೆಯನ್ನು ಬಹಿರಂಗಪಡಿಸಲ್ಲ. ಆದರೆ, ರೂ.10-12 ಲಕ್ಷ ದರ ಹೊಂದರಬಹುದು ಎಂದು ಅಂದಾಜಿಸಲಾಗಿದ್ದು, ಇದು ಸಾಕಷ್ಟು ಹೊಸ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, ಸ್ಟಾರ್ಟ್/ಸ್ಟಾಪ್ ಬಟನ್, ಹೆಡ್‌ಲೈಟ್ ವಾಷರ್, ಆಟೋಮೆಟಿಕ್ ಎಲ್‌ಇಡಿ ಲೈಟ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುವ 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆದಿದೆ.

ಇನ್ನು, ಯುರೋಪ್ ಮಾರುಕಟ್ಟೆಯಲ್ಲಿ 2030ರ ವೇಳೆಗೆ ಶೇಕಡ 80% ಬ್ಯಾಟರಿ ಎಲೆಕ್ಟ್ರಿಕ್ ವಾಹನ (BEVs)ಗಳನ್ನು ಹಾಗೂ ಶೇಕಡ 20% ಹೈಬ್ರಿಡ್ ಚಾಲಿತ ವಾನಹಗಳನ್ನು ಹೊಂದಿರಲು ಸುಜುಕಿ ಬಯಸಿದ್ದು, ಅದರ ಭಾಗವಾಗಿ ಐದು ಎಲೆಕ್ಟ್ರಿಕ್ ಕಾರುಗಳನ್ನುಲಾಂಚ್ ಮಾಡಲು ಯೋಜನೆ ರೂಪಿಸಿದೆ. ವಿಶೇಷವಾಗಿ ಅದರಲ್ಲಿ ಜಿಮ್ನಿಯು ಸೇರಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಕೆಲವೇ ದಿನಗಳಲ್ಲಿ ಬಹುತೇಕ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳು ಕಣ್ಮರೆಯಾಗುವ ಕಾಲ ಸನ್ನಿಹಿತವಾಗಿದ್ದು, ಕೆಲವೇ ವರ್ಷಗಳಲ್ಲಿ ಜಿಮ್ನಿ ಎಲೆಕ್ಟ್ರಿಕ್ ಆವೃತ್ತಿಗೆ ಗ್ರಾಹಕರಿಗೆ ಖರೀದಿಗೆ ಸಿಗಬಹುದು.

Most Read Articles

Kannada
English summary
The suzuki jimny is going electric details kannada
Story first published: Tuesday, January 31, 2023, 10:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X