ಟಾಟಾ ಎಲೆಕ್ಟ್ರಿಕ್ ಕಾರುಗಳಿಂದ ಯಾರು ಊಹಿಸದ ಸಾಧನೆ, ಅಂಕಿ ಅಂಶದಿಂದ ಬಯಲು

ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳು ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ದೇಶದ ವಿಶ್ವಾಸಾರ್ಹ ವಾಹನ ತಯಾರಕ ಟಾಟಾ (Tata) ಈ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಿದೆ. 2023ರ ಎರಡನೇ ತ್ರೈಮಾಸಿಕದಲ್ಲಿ ಮಾರಾಟಗೊಂಡ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯ ಟಾಪ್ 3ಯಲ್ಲಿ ಕಂಪನಿಯ ಇವಿಗಳೇ ಸ್ಥಾನ ಪಡೆದಿದ್ದು, ನಂತರ ಮಹೀಂದ್ರಾವಿದೆ.

ಮೊದಲಿಗೆ ಎಲೆಕ್ಟ್ರಿಕ್ ಕಾರು (Electric cars) ಮಾರುಕಟ್ಟೆಯಲ್ಲಿ ಬಹುಪಾಲನ್ನು ಆವರಿಸಿಕೊಂಡಿರುವ ಟಾಟಾ ಟಿಯಾಗೊ ಇವಿ ಬಗ್ಗೆ ಮಾತನಾಡೋಣ. ಇದು, ದೇಶದಲ್ಲಿ ಮಾರಾಟವಾಗುವ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರಾಗಿದ್ದು, 2023ರ ಎರಡನೇ ತ್ರೈಮಾಸಿಕದಲ್ಲಿ ಟಾಟಾ, ಬರೋಬ್ಬರಿ 10,695 ಟಿಯಾಗೊ ಇವಿಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದೆ. ಈ ಕಾರು, ರೂ.8.69 ಲಕ್ಷದಿಂದ ರೂ.12.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಟಾಟಾ ಎಲೆಕ್ಟ್ರಿಕ್ ಕಾರುಗಳಿಂದ ಯಾರು ಊಹಿಸದ ಸಾಧನೆ, ಅಂಕಿ ಅಂಶದಿಂದ ಬಯಲು

ಈ ಟಿಯಾಗೊ ಇವಿ ಕೂಡ ಕಾಯುವಿಕೆ ಅವಧಿಯನ್ನು ಹೊಂದಿದ್ದು, ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆಗೆ 2-3 ತಿಂಗಳು ಹಿಡಿಯುತ್ತದೆ. ಇದರಲ್ಲಿ 19.2 kWh ಮತ್ತು 24 kWh ಬ್ಯಾಟರಿ ಪ್ಯಾಕ್ ಉಪಯೋಗಿಸಲಾಗಿದ್ದು, ಅದಕ್ಕೆ ತಕ್ಕಂತೆ ಫುಲ್ ಚಾರ್ಜ್ ನಲ್ಲಿ 250 km ರಿಂದ 315 km ರೇಂಜ್ ನೀಡುತ್ತದೆ. 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4 ಸ್ವೀಕರ್ ಸೌಂಡ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ನೆಕ್ಸಾನ್ ಇವಿ ಎರಡನೇ ಸ್ಥಾನದಲ್ಲಿದ್ದು, ಕಂಪನಿಯು ಸುಮಾರು, 5,072 ಕಾರುಗಳನ್ನು ಮಾರಾಟ ಮಾಡಿದೆ. ಈ ಕಾರು, 2-3 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದ್ದು, ನೆಕ್ಸಾನ್ ಇವಿ ಪ್ರೈಮ್ ರೂ.14.49 - ರೂ.17.19 ಲಕ್ಷ, ನೆಕ್ಸಾನ್ ಇವಿ ಮ್ಯಾಕ್ಸ್ ರೂ.16.49 - ರೂ.19.54 ಲಕ್ಷ ದರದಲ್ಲಿ ಸಿಗುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 312 km ರಿಂದ 453 km ರೇಂಜ್ ನೀಡುತ್ತದೆ.

ಟಾಟಾ ಎಲೆಕ್ಟ್ರಿಕ್ ಕಾರುಗಳಿಂದ ಯಾರು ಊಹಿಸದ ಸಾಧನೆ, ಅಂಕಿ ಅಂಶದಿಂದ ಬಯಲು

ಜೊತೆಗೆ ನೆಕ್ಸಾನ್ ಇವಿ, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಂಡಂತೆ ವಿವಿಧ ಸೇಫ್ಟಿ ಫೀಚರ್ಸ್ ಹೊಂದಿದೆ. ಕಂಪನಿಯು ನವೀಕರಿಸಿದ ನೆಕ್ಸಾನ್ ಇವಿಯನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.

ಟಾಟಾ ಮತ್ತೊಂದು ಎಲೆಕ್ಟ್ರಿಕ್ ಕಾರು, ಟಿಗೂರ್ ಇವಿಯು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿದೆ. 2023ರ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯು 3,257 ಇವಿಗಳನ್ನು ಸೇಲ್ ಮಾಡಿದೆ. ಈ ಕಾರು, ವಾಣಿಜ್ಯ ಬಳಕೆಗೆ ಮಾತ್ರ ಖರೀದಿಗೆ ದೊರೆಯುತ್ತದೆ. ಇದು, ರೂ.12.49 ಲಕ್ಷದಿಂದ ರೂ.13.75 ಲಕ್ಷ ಬೆಲೆಯಲ್ಲಿ ಲಭ್ಯವಿದೆ. ಇದರಲ್ಲಿ 26 kWh ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 315 km ರೇಂಜ್ ನೀಡುತ್ತದೆ.

ಟಾಟಾ ಎಲೆಕ್ಟ್ರಿಕ್ ಕಾರುಗಳಿಂದ ಯಾರು ಊಹಿಸದ ಸಾಧನೆ, ಅಂಕಿ ಅಂಶದಿಂದ ಬಯಲು

ಟಾಪ್ ಮೂರು ಸ್ಥಾನಗಳನ್ನು ಟಾಟಾ ಕಂಪನಿ ಆವರಿಸಿಕೊಂಡಿದ್ದರೆ, ಆ ನಂತರದ ಸ್ಥಾನದಲ್ಲಿ ಮಹೀಂದ್ರಾವಿದ್ದು, ಅದರ XUV400 ಎಲೆಕ್ಟ್ರಿಕ್ ಕಾರಿಗೆ ಉತ್ತಮ ಬೇಡಿಕೆಯಿದೆ. ಬರೋಬ್ಬರಿ 2,234 ಕಾರುಗಳನ್ನು ಕಂಪನಿ ಮಾರಾಟ ಮಾಡಿದೆ. ಇದು, ರೂ.15.99 ಲಕ್ಷದಿಂದ 18.99 ದರದಲ್ಲಿ ಸಿಗಲಿದೆ. ಸದ್ಯ, ಇದರಲ್ಲಿ ಬಳಕೆ ಮಾಡಿರುವ ಬ್ಯಾಟರಿ ಪ್ಯಾಕ್, ಸಂಪೂರ್ಣ ಚಾರ್ಜಿನಲ್ಲಿ 375 ರೇಂಜ್ ನೀಡುತ್ತದೆ. ಈ ಕಾರು, 7.0 ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿ ವಿವಿಧ ಫೀಚರ್ಸ್ ಪಡೆದಿದೆ.

ಇತ್ತೀಚೆಗೆ ಬಿಡುಗಡೆಯಾದ ಪುಟ್ಟ 2 ಡೋರ್ ಎಂಜಿ ಕಾಮೆಟ್ ಇವಿ ಐದನೇ ಸ್ಥಾನದಲ್ಲಿದ್ದು, ಎರಡನೇ ತ್ರೈಮಾಸಿಕದಲ್ಲಿ ಕಂಪನಿಯು ಬರೋಬ್ಬರಿ 1,914 ಕಾರುಗಳನ್ನು ಮಾರಾಟ ಮಾಡಿದೆ. ಇದು ಸಹ 2-3 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದ್ದು, ರೂ.7.98 ಲಕ್ಷದಿಂದ ರೂ.9.98 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದರಲ್ಲಿ ಬಳಕೆ ಮಾಡಿರುವ 17.3 kWh ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜಿನಲ್ಲಿ 230 km ರೇಂಜ್ ನೀಡುತ್ತದೆ.

ಇನ್ನುಳಿದಂತೆ, 2023ರ ಎರಡನೇ ತ್ರೈಮಾಸಿಕದಲ್ಲಿ ಎಂಜಿ ZS ಇವಿ 1,747, ಸಿಟ್ರಸ್ ಇಸಿ3 ಕಾರು 576, ಬಿವೈಡಿ ಅಟ್ಟೊ3 ಕಾರು 412, ಕಿಯಾ EV6 ಕಾರು 279 ಹಾಗೂ ಹುಂಡೈ ಕೋನಾ ಇವಿ 159 ಮಾರಾಟವಾಗಿವೆ. ಇವುಗಳ ಸಂಖ್ಯೆಯನ್ನು ಲೆಕ್ಕಹಾಕಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೈಗೆಟುಕುವ ಬೆಲೆಯ ಟಾಟಾ ಟಿಯಾಗೊ ಇವಿಯನ್ನು ಖರೀದಿಸಲು ಮನಸ್ಸು ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Article Published On: Friday, July 28, 2023, 14:57 [IST]
English summary
Top 10 evs sold q2 2023 tiago ev is best details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+