ಬೆಟ್ಟದಷ್ಟು ನಿರೀಕ್ಷೆಗಳೊಂದಿಗೆ 2024 ರಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಟಾಪ್ 5 ಕಾರುಗಳಿವು!
2024 ರಲ್ಲಿ ಆಟೋ ಉತ್ಸಾಹಿಗಳಿಗೆ ಅದ್ಬುತ ವರ್ಷವೆಂದು ಹೇಳಬಹುದು, ಏಕೆಂದರೆ ಬಹುನಿರೀಕ್ಷಿತ ಟಾಪ್ 5 ಕಾರುಗಳು ಬಿಡುಗಡೆಯಾಗಲಿವೆ. ಮುಂಬರುವ ಈ ಕಾರುಗಳು ಆಟೋಮೋಟಿವ್ ಮಾರುಕಟ್ಟೆಗೆ ಹೊಸತನ ಮತ್ತು ಉತ್ಸಾಹದ ಹೊಸ ಅಲೆಯನ್ನು ತರಲಿವೆ. ಹಾಗಾದ್ರೆ 2024 ರಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಬಗ್ಗೆ ಇಲ್ಲಿ ವಿವರವಾಗಿ ನೋಡೋಣ.
1. ಹೊಸ ಜನ್ ಮಾರುತಿ ಸ್ವಿಫ್ಟ್: ಜನಪ್ರಿಯ ಮಾರುತಿ ಸ್ವಿಫ್ಟ್‌ನ ಹೊಸ ಜನ್ ಮಾದರಿಯು ಗಮನಾರ್ಹ ಬದಲಾವಣೆಗಳೊಂದಿಗೆ ಬರುವುದು ಖಚಿತವಾಗಿದೆ. ಹೊಸ ಹೆಡ್‌ಲೈಟ್‌ಗಳು, ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ಹೊಸ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿವೆ. ಡಿಸೈನ್ ವಿಷಯದಲ್ಲಿ ಈಗ ಮಾರಾಟದಲ್ಲಿರುವ ಸ್ವಿಫ್ಟ್‌ಗಿಂತ ಹೆಚ್ಚು ಭಿನ್ನವಾಗಿ ಮಿನಿ ಕೂಪರ್‌ನಿಂದ ಹೆಚ್ಚು ಪ್ರೇರಿತವಾಗಿದೆ ಎಂದು ತೋರುತ್ತದೆ.

ನಿಖರವಾದ ವಿಶೇಷತೆಗಳು ಇನ್ನೂ ನಿಗೂಢವಾಗಿಯೇ ಉಳಿದಿದ್ದರೂ, ಸ್ವಿಫ್ಟ್‌ನ ಹೊಸ ಕಾರು ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯುವ ನಿರೀಕ್ಷೆಯಿದೆ. ಇದು ಹೆಚ್ಚಿನ ಮೈಲೇಜ್ ನೀಡಲಿದ್ದು, ಇಂಧನ ಚಾಲಿತ ಕಾರುಗಳಲ್ಲಿ ಈ ಮಾದರೇ ಟಾಪ್ ಮೈಲೇಜ್ ಕಾರಾಗಲಿದೆ ಎಂದು ಆಟೋ ಮೂಲಗಳು ತಿಳಿಸಿರುವ ಕಾರಣ ಮುಂಬರುವ ಪ್ರಮುಖ ಬಿಡುಗಡೆಗಳಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ.
2. ಹುಂಡೈ ಕ್ರೆಟಾ ಫೇಸ್‌ಲಿಫ್ಟ್: ಹ್ಯುಂಡೈ ಕ್ರೆಟಾ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಬೆಸ್ಟ್ ಸೆಲ್ಲರ್ ಆಗಿದೆ. ಅದರ ಮುಂಬರುವ ಫೇಸ್‌ಲಿಫ್ಟ್ ಗಮನಾರ್ಹ ಬೇಡಿಕೆಯನ್ನು ಸೃಷ್ಟಿಸುತ್ತಿದೆ. ಸೋರಿಕೆಯಾದ ಹೊಸ ಕಾರಿನ ಫೋಟೊಗಳಲ್ಲಿ ಕಂಡುಬರುವಂತೆ, ಫೇಸ್‌ಲಿಫ್ಟೆಡ್ ಕ್ರೆಟಾವು ಪಾಲಿಸೇಡ್ ಎಸ್‌ಯುವಿಯಿಂದ ವಿನ್ಯಾಸ ಅಂಶಗಳನ್ನು ಎರವಲು ಪಡೆಡಿದೆ.

ಉದ್ದವಾದ ಹೆಡ್‌ಲ್ಯಾಂಪ್ ಕ್ಲಸ್ಟರ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಗ್ರಿಲ್ ಅನ್ನು ಒಳಗೊಂಡಿದೆ. ವೈಶಿಷ್ಟ್ಯಗಳ ವಿಷಯದಲ್ಲಿ ಕ್ರೆಟಾ 360-ಡಿಗ್ರಿ ಕ್ಯಾಮೆರಾ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅನ್ನು ಸಹ ಪಡೆಯಲಿದೆ. ಮೂರು ಎಂಜಿನ್ ಆಯ್ಕೆಗಳು ಬದಲಾಗದೆ ಉಳಿಯಲಿವೆ. ಕ್ರೆಟಾ ಫೇಸ್‌ಲಿಫ್ಟ್ ಅನ್ನು 2024 ರ ಆರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
3. ನ್ಯೂ-ಜೆನ್ ಮಾರುತಿ ಡಿಜೈರ್: ಮಾರುತಿ ಸುಜುಕಿ ಹೊಸ ಸ್ವಿಫ್ಟ್ ಜೊತೆಗೆ ಹೊಸ-ಜೆನ್ ಡಿಜೈರ್ ಅನ್ನು ಮುಂದಿನ ವರ್ಷ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ವಾಹನಗಳು ಸಂಯೋಜಿತ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಸಣ್ಣ ಮತ್ತು ಪರಿಣಾಮಕಾರಿ ಪವರ್‌ಟ್ರೇನ್ ಆಯ್ಕೆಗಳನ್ನು ಒಳಗೊಂಡಿರುತ್ತವೆ ಎಂದು ಮೂಲಗಳು ತಿಳಿಸಿವೆ.

ಮೈಲೆಜ್ ವಿಷಯದಲ್ಲಿ ಹೊಸ ಮಾನದಂಡವನ್ನು ಹೊಂದಿಸುತ್ತವೆ ಎನ್ನಲಾಗಿದೆ. ಪ್ರಬಲವಾದ ಹೈಬ್ರಿಡ್ ರೂಪಾಂತರಗಳು ಅವುಗಳ ಮೂಲ ರೂಪಗಳಿಗಿಂತ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ. ಡಿಜೈರ್ ಮತ್ತು ಸ್ವಿಫ್ಟ್ ತಮ್ಮ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿರುವ ಕಾರಣ ನವೀಕರಿಸಿದ ಮಾದರಿಗಳು ಈ ಪರಂಪರೆಯನ್ನು ಮುಂದುವರಿಸುವ ಗುರಿಯನ್ನು ಹೊಂದಿವೆ.
4. ಮಹೀಂದ್ರ ಥಾರ್ 5-ಬಾಗಿಲು: ಮಹೀಂದ್ರಾ ಥಾರ್ ಆಫ್-ರೋಡ್ ಉತ್ಸಾಹಿಗಳಲ್ಲಿ ಅಚ್ಚುಮೆಚ್ಚಿನದಾಗಿದೆ. ಶೀಘ್ರದಲ್ಲೇ ಇದು ಹೆಚ್ಚು ಪ್ರಾಯೋಗಿಕ, 5-ಬಾಗಿಲಿನ ಆವೃತ್ತಿಯೊಂದಿಗೆ ಬರುವುದು ಖಚಿತವಾಗಿದೆ. ಇತ್ತೀಚಿನ ಸೋರಿಕೆಯಾದ ಚಿತ್ರಗಳು LED ಹೆಡ್‌ಲೈಟ್‌ಗಳು, LED DRL ರಿಂಗ್‌ಗಳು ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನಂತಹ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿವೆ.

ಉಳಿದಂತೆ ಮುಂಬರುವ ಹೊಸ ಥಾರ್ ಒಳಾಂಗಣವು ಹೆಚ್ಚು ಪ್ರೀಮಿಯಂ ಆಗಬಹುದು ಎಂದು ನಾವು ನಿರೀಕ್ಷಿಸಿದ್ದೇವೆ. ಈ SUV 2.2 ಲೀಟರ್ ಟರ್ಬೊ ಡೀಸೆಲ್ ಮತ್ತು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ಗಳನ್ನು ಪಡೆಯುತ್ತದೆ. ಇದು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳನ್ನು ನೀಡುತ್ತದೆ.
5. ಟಾಟಾ Curvv ಕೂಪೆ SUV: ಟಾಟಾ ಮೋಟಾರ್ಸ್ Curvv Coupe SUV ಬಿಡುಗಡೆಗೆ ಸಜ್ಜಾಗುತ್ತಿದೆ, ಇದು ಎಲೆಕ್ಟ್ರಿಕ್ ಮತ್ತು ಇಂಧನ ಚಾಲಿತ (ICE) ಆಯ್ಕೆಗಳೊಂದಿಗೆ ಲಭ್ಯವಿರಲಿದೆ. ಎಲೆಕ್ಟ್ರಿಕ್ ಆವೃತ್ತಿಯು 2024 ರ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಒಂದೇ ಚಾರ್ಜ್‌ನಲ್ಲಿ ಸುಮಾರು 500 ಕಿ.ಮೀಗಳಷ್ಟು ಗಮನಾರ್ಹ ರೇಂಜ್ ನೀಡಲಿದೆ. ICE ಆವೃತ್ತಿಯು 1.2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ಗಳೊಂದಿಗೆ ಲಭ್ಯವಿರಲಿದೆ.


Click it and Unblock the Notifications