ಬಿಡುಗಡೆಯಾಗಿ ದಶಕಗಳು ಕಳೆದ್ರೂ ಕಟ್ಟಾ ಅಭಿಮಾನಿಗಳನ್ನು ಹೊಂದಿರುವ ಕಾರುಗಳಿವು... ಒಪ್ಪುತ್ತೀರಾ?

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ, ಕೆಲವು ಕಾರುಗಳು ತಮ್ಮದೇ ಆದ ವಿಶೇಷ ಅಭಿಮಾನಿಗಳನ್ನು ಹೊಂದಿವೆ. ಬಿಡುಗಡೆಯಾಗುವ ಪ್ರತಿ ಕಾರಿಗೂ ಇಂತಹ ಸ್ವಾಗತ ಸಿವುದಿಲ್ಲ, ಒಮ್ಮೆ ಬಿಡುಗಡೆಯಾಗಿ ಗ್ರಾಹಕರ ಮನಗೆಲ್ಲುವುದು ಕೆಲವು ಮಾತ್ರ. ಇಂತಹ ಕಾರುಗಳು ಜಮಾನದಲ್ಲಿ ಬಿಡುಗಡೆಯಾಗಿ ಇಂದಿಗೂ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿವೆ.

ಅಂತಹ ಟಾಪ್ 5 ಕಾರುಗಳನ್ನು ಪಟ್ಟಿ ಮಾಡಿದ್ದೇವೆ, ಇದರಲ್ಲಿ ಟಾಟಾ ಮೋಟಾರ್ಸ್, ಹೋಂಡಾ, ಮಹೀಂದ್ರಾ, ಟೊಯೋಟಾ ಮತ್ತು ಮಾರುತಿ ಸುಜುಕಿಯ ಕಾರುಗಳಿವೆ. ಈ ಕಾರುಗಳ ಗ್ರಾಹಕರು ಹಲವು ದಶಕಗಳು ಕಳೆದರೂ ಮತ್ತದೇ ಕಾರುಗಳನ್ನು ಖರೀದಿಸುತ್ತಾರೆ. ಹೆಚ್ಚು ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ಆ 5 ಕಾರುಗಳನ್ನು ಈ ಕೆಳಗೆ ನೋಡೋಣ.

Cars that still have fans decades after launch

ಟಾಟಾ ಸಫಾರಿ: 1998 ರಲ್ಲಿ ಬಿಡುಗಡೆಯಾಗಿ ಸಖತ್ ಸದ್ದು ಮಾಡಿದ್ದ ಟಾಟಾ ಸಫಾರಿ SUV, ಶೀಘ್ರವಾಗಿ ಯಶಸ್ಸನ್ನು ಖಂಡಿತು. ಸಫಾರಿಯು ಭಾರತೀಯ ರಸ್ತೆಗಳಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದೆ, ಅದರನ ವಿನ್ಯಾಸಕ್ಕೆ ಬಹುದೊಡ್ಡ ಅಭಿಮಾನಿಗಳಿದ್ದಾರೆ. ಟಾಟಾ ಸಫಾರಿಯನ್ನು 2021 ರಲ್ಲಿ ಹೊಸ ಅವತಾರದಲ್ಲಿ ಮರುಪರಿಚಯಿಸಲಾಯಿತು. ದಶಕಗಳೇ ಕಳೆದರೂ ಇನ್ನೂ ತನ್ನ ಗತ್ತನ್ನು ಹಾಗೆಯೇ ಉಳಿಸಿಕೊಂಡು ಅದರ ನಿಷ್ಠಾವಂತ ಅಭಿಮಾನಿಗಳ ಸಂಖ್ಯೆಯನ್ನು ಬೆಳೆಸಿಕೊಳ್ಳುತ್ತಲೇ ಇದೆ.

ಟೊಯೋಟಾ ಫಾರ್ಚುನರ್: ಟೊಯೊಟಾ ಫಾರ್ಚುನರ್ ಭಾರತದಲ್ಲಿನ ಅತ್ಯಂತ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದು ತನ್ನ ಬಾಳಿಕೆ, ಸೌಕರ್ಯ ಮತ್ತು ಆಫ್-ರೋಡ್ ಸಾಮರ್ಥ್ಯಗಳಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದೆ. ಸುಮಾರು ಒಂದು ದಶಕದಿಂದಲೂ ಮಾರುಕಟ್ಟಯಲ್ಲಿದೆ. ಇದರ ಪವರ್‌ಪುಲ್ ಎಂಜಿನ್, ವಿಶಾಲವಾದ ಒಳಾಂಗಣ ಮತ್ತು ಅತ್ಯಾಕರ್ಷಕವಾದ ದೈತ್ಯ ವಿನ್ಯಾಸವು ಅಭಿಮಾನಿಗಳಿಗೆ ಜನಪ್ರಿಯ ಆಯ್ಕೆಯಾಗಿದೆ.

Cars that still have fans decades after launch

ಮಾರುತಿ ಸುಜುಕಿ ಆಲ್ಟೊ: ಮಾರುತಿ ಸುಜುಕಿ ಆಲ್ಟೊ ಎರಡು ದಶಕಗಳಿಂದ ಬಜೆಟ್ ಭಾರತೀಯ ಖರೀದಿದಾರರಿಗೆ ಉತ್ತಮ ಆಯ್ಕೆಯಾಗಿದೆ. ಇದರ ಕಾಂಪ್ಯಾಕ್ಟ್ ವಿನ್ಯಾಸ, ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚಗಳು ಭಾರತೀಯ ಕುಟುಂಬಗಳಲ್ಲಿ ಜನಪ್ರಿಯ ಆಯ್ಕೆಯನ್ನಾಗಿ ಮಾಡಿದೆ. ಆಲ್ಟೊ ಪ್ರವೇಶ ಮಟ್ಟದ ವಿಭಾಗದಲ್ಲಿ ಮಾರಾಟದ ಪಟ್ಟಿಯಲ್ಲಿ ಸತತವಾಗಿ ಅಗ್ರಸ್ಥಾನದಲ್ಲಿದೆ. ಪ್ರತಿ ವರ್ಷವೂ ಅದರ ಅಭಿಮಾನಿಗಳ ಸಂಖ್ಯೆ ಬೆಳೆಯುತ್ತಲೇ ಇದೆ.

ಮಹೀಂದ್ರ ಸ್ಕಾರ್ಪಿಯೋ ಕ್ಲಾಸಿಕ್: ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಒಂದು SUV ಆಗಿದ್ದು, ತನ್ನ ಒರಟಾದ ವಿನ್ಯಾಸ, ಪವರ್‌ಪುಲ್ ಎಂಜಿನ್ ಮತ್ತು ಆಫ್-ರೋಡ್ ಸಾಮರ್ಥ್ಯಗಳಿಂದಲೇ ಅಭಿಮಾನಿಗಳನ್ನು ಇಂದಿಗೂ ಹಿಡಿದಿಟ್ಟುಕೊಂಡಿದೆ. ಸ್ಕಾರ್ಪಿಯೋ ಕ್ಲಾಸಿಕ್ ಕಾಲಕ್ಕೆ ತಕ್ಕಂತೆ ಹಲವಾರು ಬಾರಿ ನವೀಕರಣಗಳಿಗೆ ಒಳಗಾಗಿದೆ. ಆದರೆ ಇದು ಇನ್ನೂ ತನ್ನ ಹಳೆಯ ಮೋಡಿಯನ್ನು ಹಾಗೆಯೇ ಉಳಿಸಿಕೊಂಡಿದ್ದು, ಜನಸಾಮಾನ್ಯರಲ್ಲಿ ಜನಪ್ರಿಯ ಆಯ್ಕೆಯಾಗಿದೆ.

Cars that still have fans decades after launch

ಹೋಂಡಾ ಸಿಟಿ: ಹೋಂಡಾ ಸಿಟಿ ಮಧ್ಯಮ ಗಾತ್ರದ ಸೆಡಾನ್ ಆಗಿದ್ದು, ಇದು ಎರಡು ದಶಕಗಳಿಂದಲೂ ಇದೆ. ಸಿಟಿ ತನ್ನ ಸ್ಪೋರ್ಟಿ ವಿನ್ಯಾಸ, ಮೈಲೇಜ್ ಮತ್ತು ಆರಾಮದಾಯಕ ಇಂಟೀರಿಯರ್ ಅನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಸಿಟಿ ಕಳೆದ ಹಲವು ವರ್ಷಗಳಲ್ಲಿ ಹಲವಾರು ನವೀಕರಣಗಳಿಗೆ ಒಳಗಾಗಿದ್ದು, ಇನ್ನೂ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಇದು ಕಾರು ಖರೀದಿದಾರರಲ್ಲಿ ಜನಪ್ರಿಯ ಆಯ್ಕೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬದಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Thursday, May 11, 2023, 18:47 [IST]
English summary
Top 5 cars still fans decades after launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+