ಟೊಯೊಟಾ ಇನ್ನೋವಾ ಹೈಕ್ರಾಸ್, ಸ್ಕಾರ್ಪಿಯೊ ಸೇರಿದಂತೆ ಈ ಕಾರುಗಳಿಗೆ ವರ್ಷಗಟ್ಟಲೇ ಕಾಯಬೇಕು..

ಭಾರತದ ಮಾರುಕಟ್ಟೆಯಲ್ಲಿ ಟೊಯೊಟಾ ಹಾಗೂ ಮಹೀಂದ್ರಾ ಸಂಸ್ಥೆಯ ಕಾರುಗಳು ಬಹು ಬೇಡಿಕೆಯನ್ನು ಪಡೆದುಕೊಂಡಿವೆ. ಅವುಗಳ ವಿವಿಧ ಮಾದರಿಗಳನ್ನು ವಿತರಣೆ ಪಡೆಯಲು ವರ್ಷಗಟ್ಟಲೇ ಕಾಯಬೇಕು. ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿಯ ಕೆಲವು ರೂಪಾಂತರಗಳು ಬರೋಬ್ಬರಿ 18 ತಿಂಗಳ ಬಳಿಕ ಗ್ರಾಹಕರ ಕೈಸೇರಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಟೊಯೊಟಾ ಕಿರ್ಲೋಸ್ಕರ್ ಮೋಟರ್‌ ಭಾರತದ ಮಾರುಕಟ್ಟೆಯಲ್ಲಿ ಇನ್ನೋವಾ ಹೈಕ್ರಾಸ್ ಆಯ್ದ ರೂಪಾಂತರಗಳ ವಿತರಣೆ ಪಡೆಯಲು ಗ್ರಾಹಕರು ಕನಿಷ್ಠವೆಂದರೂ 18 ತಿಂಗಳು ಕಾಯಬೇಕಾಗಿದೆ. ಈ ನೂತನ ಇನ್ನೋವಾ ಹೈಕ್ರಾಸ್ ಎಂಪಿವಿ, TNGA-C ಪ್ಲಾಟ್‌ಫಾರ್ಮ್ ಆಧರಿಸಿದ್ದು, ಸಾಕಷ್ಟು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಅಲ್ಲದೆ, ಫ್ರಂಟ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಪಡೆದಿದ್ದು, ರೂ.18.30 ಲಕ್ಷದಿಂದ ರೂ.28.97 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್, ಸ್ಕಾರ್ಪಿಯೊ ಸೇರಿದಂತೆ ಈ ಕಾರುಗಳಿಗೆ ವರ್ಷಗಟ್ಟಲೇ ಕಾಯಬೇಕು..

ಈ ಕಾರು, ಏಳು ಅಥವಾ ಎಂಟು ಆಸನ ಆಯ್ಕೆಯಲ್ಲಿ ದೊರೆಯಲಿದ್ದು, ಇದರ 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 174 PS ಪವರ್, 205 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ 186 PS ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, e-CVT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿದೆ. 21 kmpl ಮೈಲೇಜ್ ನೀಡಲಿದೆ. 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಮಹೀಂದ್ರಾ ಥಾರ್ 3 ಡೋರ್ ವಿತರಣೆ ಪಡೆಯಲು ಗ್ರಾಹಕರು 17 ತಿಂಗಳು ಕಾಯಬೇಕು. ಇತ್ತೀಚೆಗೆ ಕಂಪನಿಯು RWD (ರೇರ್ ವೀಲ್ ಡ್ರೈವ್) ಥಾರ್ ಆವೃತ್ತಿ ಡೆಲಿವರಿಯನ್ನು ಪ್ರಾರಂಭಿಸಿದೆ. ಜೊತೆಗೆ ಬೆಲೆಯು ಏರಿಕೆಯಾಗಿದೆ. ರೂ.9.99 ಲಕ್ಷದಿಂದ ರೂ.13.49 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದೆ. ಥಾರ್ 3 ಡೋರ್, 1.5 ಲೀಟರ್ ಡಿಸೇಲ್, 2.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಆಫ್-ರೋಡ್ ಎಸ್‌ಯುವಿ ಮುಂಬರುವ ದಿನಗಳಲ್ಲಿ 5 ಡೋರ್ ಆಯ್ಕೆಯಲ್ಲಿ ಬಿಡುಗಡೆಯಾಗಬಹುದು.

ಟೊಯೊಟಾ ಇನ್ನೋವಾ ಹೈಕ್ರಾಸ್, ಸ್ಕಾರ್ಪಿಯೊ ಸೇರಿದಂತೆ ಈ ಕಾರುಗಳಿಗೆ ವರ್ಷಗಟ್ಟಲೇ ಕಾಯಬೇಕು..

ಈ ಮಹೀಂದ್ರಾ ಥಾರ್ 3 ಡೋರ್, 4 ಆಸನಗಳ ಜೊತೆಗೆ ಹಲವು ವೈಶಿಷ್ಟ್ಯದೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. 7 ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್, ಎಲ್‌ಇಡಿ ಡಿಆರ್‌ಎಲ್ಸ್, ಹ್ಯಾಲೊಜೆನ್ ಹೆಡ್‌ಲೈಟ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ 15.2 kmpl ಮೈಲೇಜ್ ನೀಡಲಿದ್ದು, ಆಫ್-ರೋಡ್ ಚಾಲನೆಯನ್ನು ಲೈಕ್ ಮಾಡುವವರೂ ಇಷ್ಟಪಟ್ಟು ಖರೀದಿಸುತ್ತಾರೆ.

ಟೊಯೊಟಾ ಕಂಪನಿಯ ಮತ್ತೊಂದು ಬಹುನಿರೀಕ್ಷಿತ ಎಸ್‌ಯುವಿ, 'ಅರ್ಬನ್ ಕ್ರೂಸರ್ ಹೈರಿಡರ್' ವಿತರಣೆ ಪಡೆಯಲು 15 ತಿಂಗಳ ಗರಿಷ್ಠ ಸಮಯ ಹಿಡಿಯಲಿದೆ. ಇದು 1.5-ಲೀಟರ್ ಮೈಲ್ಡ್ ಹೈಬ್ರಿಡ್, 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಹೊಂದಿದ್ದು, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಆಕರ್ಷಕ ಸನ್ ರೂಫ್, ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬಾಗ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದ್ದು, ರೂ.10.48 - 19.49 ಲಕ್ಷ ಬೆಲೆಯಲ್ಲಿ ದೊರೆಯಲಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್, ಸ್ಕಾರ್ಪಿಯೊ ಸೇರಿದಂತೆ ಈ ಕಾರುಗಳಿಗೆ ವರ್ಷಗಟ್ಟಲೇ ಕಾಯಬೇಕು..

ಮಹೀಂದ್ರಾ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಬಹುಬೇಡಿಕೆಯ ಸ್ಕಾರ್ಪಿಯೊ ಎನ್, ಕ್ಲಾಸಿಕ್ ಎಸ್‌ಯುವಿಗಳನ್ನು ಮಾರಾಟ ಮಾಡುತ್ತಿದೆ. ಅವುಗಳ ಕೆಲವು ರೂಪಾಂತರಗಳನ್ನು ವಿತರಣೆ ಪಡೆಯಲು 15 ತಿಂಗಳು ಕಾಯಲೇಬೇಕು ಮಹೀಂದ್ರಾ ಸ್ಕಾರ್ಪಿಯೊ ಎನ್, ರೂ.12.74 ಲಕ್ಷದಿಂದ ರೂ.24.05 ಲಕ್ಷ ಬೆಲೆಯನ್ನು ಇದ್ದು, ಸ್ಕಾರ್ಪಿಯೊ ಕ್ಲಾಸಿಕ್ ರೂ.12.64 -16.14 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ ಫೆಬ್ರವರಿಯಲ್ಲಿ 6,950 ಯುನಿಟ್ ಮಾರಾಟ ಮಾಡಿದ್ದು, 166% ಪ್ರಗತಿ ಸಾಧಿಸಿದೆ.

ಮಹೀಂದ್ರಾ XUV700 ಎಸ್‌ಯುವಿಯನ್ನು ಕೂಡ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಈ ಕಾರಿನ ವಿವಿಧ ಮಾದರಿಗಳನ್ನು ಇವತ್ತು ಬುಕ್ ಮಾಡಿದರೂ 11 ತಿಂಗಳ ಬಳಿಕ ವಿತರಣೆಯಾಗಲಿದೆ. ರೂ.13.95 ಲಕ್ಷದಿಂದ ರೂ.23.59 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 2-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2-ಲೀಟರ್ ಡಿಸೇಲ್ ಎಂಜಿನ್. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದ ಗೋಬಲ್-NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ.

Article Published On: Saturday, March 11, 2023, 16:30 [IST]
English summary
Top 5 cars waiting period in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+