ಸ್ವಾತಂತ್ರ್ಯ ಸಂಭ್ರಮ: ಮಿಂಚಿ ಮರೆಯದ ಸುಪ್ರಸಿದ್ಧ ಸ್ವದೇಶಿ ಕಾರುಗಳಿವು

77ನೇ ಸ್ವಾಂತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಈಗಾಗಲೇ ಸಿದ್ಧಗೊಂಡಿದೆ. ಹರ್ ಘರ್ ತಿರಂಗ ಆಚರಿಸುವ ಉತ್ಸಾಹದಲ್ಲಿರುವಾಗ ನಮ್ಮ ದೇಶದಲ್ಲಿ ತಯಾರಾಗಿ (Made In India) ಮಿಂಚಿದ ಹಲವು ಕಾರುಗಳಿವೆ. ಈ ಕಾರುಗಳ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಭಾರತದಲ್ಲಿ ತಯಾರಾಗಿ ಮಾರುಕಟ್ಟೆಯಲ್ಲಿ ಮಿಂಚಿ ಮರೆಯಾದ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Reva: ಈ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ. ಈ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ತಯಾರಿಸಲಾಗಿದೆ. ಈ ಕಾರನ್ನು ಸ್ಥಳೀಯವಾಗಿ ಮತ್ತು 26 ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಯಿತು. ಈ ಕಂಪನಿಯನ್ನು ನಂತರ ಮಹೀಂದ್ರಾ ಸ್ವಾಧೀನಪಡಿಸಿಕೊಂಡಿತು. ಇನ್ನು 2011ರವರೆಗೆ ಈ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಮಾರಾಟವಾಗಿತ್ತು.

made in india cars

ಡಿಸಿ ಅವಂತಿ : ಡಿಸಿ ಅವಂತಿ ಮೊದಲ ಸ್ವದೇಶಿ ಸ್ಪೋರ್ಟ್ಸ್ ಕಾರ್ ಆಗಿದೆ. ಜನಸಾಮಾನ್ಯರಿಗೆ ಕೈಗೆಟುಕುವ ಸ್ಪೋರ್ಟ್ಸ್ ಕಾರನ್ನು ನಿರ್ಮಿಸಲು 'DC' ಯ ಒಂದು ಉತ್ತಮ ಮಾದರಿಯಾಗಿದೆ. ಇನ್ನು ಇದು ಆರಂಭಿಕ ಪ್ರಚಾರದ ನಂತರದಲ್ಲಿ ಈ ಕಾರು ಶೀಘ್ರದಲ್ಲೇ ವಿಫಲವಾಗಿತ್ತು. ಇನ್ನು ಈ ಕಾರಿನಲ್ಲಿ 2.0-ಲೀಟರ್ ಎಂಜಿನ್‌ ಅನ್ನು ಹೊಂದಿತ್ತು. ಈ ಎಂಜಿನ್ 248 bhp ಪವರ್ ಉತ್ಪಾದಿಸುತ್ತದೆ.

ಹಿಂದೂಸ್ತಾನ್ ಅಂಬಾಸಿಡರ್: ಹಿಂದೂಸ್ತಾನ್ ಅಂಬಾಸಿಡರ್ ಬಹುಶಃ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಐಕಾನಿಕ್ ಕಾರುಗಳಲ್ಲಿ ಒಂದಾಗಿದೆ. ಆರಂಭದಲ್ಲಿ, ಆಕ್ಸ್‌ಫರ್ಡ್ ಮೋರಿಸ್ ಅನ್ನು ಆಧರಿಸಿ, ದೇಶದಲ್ಲಿ ತಯಾರಿಸಿದ ಮೊದಲ ಕಾರುಗಳಲ್ಲಿ ಒಂದಾಗಿದೆ. ಅಂಬಾಸಿಡರ್ ಮೊದಲು 1958 ರಲ್ಲಿ ಪರಿಚಯಿಸಲಾಯಿತು ಮತ್ತು ಜನಸಾಮಾನ್ಯರಿಂದ ಪ್ರಧಾನಿಯವರೆಗೆ ಬಳಸುತ್ತಿದ್ದರು.

ಟಾಟಾ ಇಂಡಿಕಾ : ಈ ಟಾಟಾ ಇಂಡಿಕಾ ಹ್ಯಾಚ್‌ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ನ ಪ್ರಯಾಣಿಕ ವಾಹನ ವಿಭಾಗದಲ್ಲಿ ಪ್ರವೇಶಿಸಿದ ಮೊದಲ ಮಾದರಿಯಾಗಿದೆ. ಅಲ್ಲಿಯವರೆಗೆ ಕೇವಲ ವಾಣಿಜ್ಯ ವಾಹನಗಳನ್ನು ಉತ್ಪಾದಿಸಲು ಹೆಸರಾಗಿದ್ದ ಕಂಪನಿಯು ಮಾರುತಿ ಝೆನ್‌ಗೆ ಪ್ರತಿಸ್ಪರ್ಧಿಯಾಗಿ ಇಂಡಿಕಾವನ್ನು ತಂದಿತು. ಆದರೆ ಟಾಟಾ ಇಂಡಿಕಾ ಸಾಕಷ್ಟು ತಾಂತ್ರಕ ವೈಫಲ್ಯವನ್ನು ಅನುಭವಿಸುತ್ತಿದ್ದ ಕಾರುಗಳಾಗಿದೆ.

ಟಾಟಾ ಇಂಡಿಕಾ ಒಂದು ಹಂತದಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರು ಕೂಡ ಆಯಿತು. ಇಂಡಿಕಾದ ಯಶಸ್ಸು ಟಾಟಾ ಮೋಟಾರ್ಸ್ ಸೆಡಾನ್, ಎಸ್ಟೇಟ್ ಮತ್ತು ಕ್ಯಾಬ್‌ಗಳನ್ನು ಒಳಗೊಂಡಂತೆ ವಿವಿಧ ಆವೃತ್ತಿಗಳನ್ನು ಪರಿಚಯಿಸಲು ಕಾರಣವಾಯಿತು. ಟಾಟಾ ಇಂಡಿಕಾವನ್ನು ರೋವರ್ ಆಗಿ ರಿ-ಬ್ಯಾಡ್ಜ್ ಮಾಡಿತು ಮತ್ತು ಸಿಟಿರೋವರ್ ಎಂಬ ಹೆಸರಿನಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಯಿತು.

ಮಹೀಂದ್ರ ಸ್ಕಾರ್ಪಿಯೊ : ಟಾಟಾ ಇಂಡಿಕಾದಂತೆಯೇ, ಮಹೀಂದ್ರಾದಿಂದ ಸ್ಕಾರ್ಪಿಯೊ ಎಸ್‌ಯುವಿಯು ಪ್ರಯಾಣಿಕ ವಾಹನ ವಿಭಾಗಕ್ಕೆ ಬ್ರ್ಯಾಂಡ್‌ನ ಪ್ರವೇಶವನ್ನು ಗುರುತಿಸಿದೆ. ಮಹೀಂದ್ರಾ ಸ್ಕಾರ್ಪಿಯೊ ಮೊದಲ ಸಂಪೂರ್ಣ ಆಂತರಿಕವಾಗಿ ಅಭಿವೃದ್ಧಿಪಡಿಸಿದ ವಾಹನವಾಗಿದೆ. ಮಹೀಂದ್ರಾ ಸ್ಕಾರ್ಪಿಯೊ ಮೊದಲ ಬಾರಿಗೆ 2002 ರಲ್ಲಿ ಮಾರಾಟವಾಯಿತು ಮತ್ತು ಇಲ್ಲಿಯವರೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ಟಾಟಾ ನ್ಯಾನೋ: ಟಾಟಾ ನ್ಯಾನೋ 'ವಿಶ್ವದ ಅತ್ಯಂತ ಅಗ್ಗದ ಕಾರು' ಪರಿಚಯಿಸುವ ರತನ್ ಟಾಟಾ ಅವರ ಕನಸಿನ ಕೂಸು ಆಗಿದೆ. ನ್ಯಾನೊ ಭಾರತದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಕೈಗೆಟುಕುವ ಬದಲಿಯಾಗಿದೆ. ಪ್ರಪಂಚದ ಅತ್ಯಂತ ಅಗ್ಗದ ಕಾರು ಎಂಬ ಟ್ಯಾಗ್ ನ್ಯಾನೊ ಆರಂಭಿಕ ಪ್ರಚಾರವನ್ನು ಪಡೆಯಲು ಸಹಾಯ ಮಾಡಿತು.

ಭಾರತದ ಮಧ್ಯಮ ವರ್ಗದ ಕುಟುಂಬಗಳು ಸ್ಕೂಟರ್ ನಲ್ಲಿ ತಮ್ಮ ಕುಟುಂಬಸ್ಥರ ಜೊತೆ ಹಾಳು ಗುಂಡಿ ಬಿದ್ದ ರಸ್ತಗಳಲ್ಲಿನ ಪ್ರಯಾಣ ಮಾಡುವುದನ್ನು ತಪ್ಪಿಸಲು ರತನ್ ಟಾಟಾ ಅವರು ನ್ಯಾನೋ ಕಾರನ್ನು ಪರಿಚಯಿಸಿದ್ದರು. 1 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಈ ಟಾಟಾ ನ್ಯಾನೋ ಕಾರನ್ನು ಪರಿಚಯಿಸಲಾಗಿತ್ತು. ಆದರೆ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಸುರಕ್ಷತೆ ನಿಯಮ ಮತ್ತು ಬೇಡಿಕೆಯ ಕುಸಿತದಿಂದಾಗಿ 2019 ರಲ್ಲಿ ನ್ಯಾನೋ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Monday, August 14, 2023, 19:55 [IST]
English summary
Top made in india cars to celebrate independence day details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+