ಸಿಂಹದಂತಹ 5 ಕಾರುಗಳು.. ಇವಕ್ಕೆ ಪೈಪೋಟಿ ಇಲ್ಲ.. ಬಜೆಟ್ ಬೆಲೆಯಲ್ಲಿ 4 ರಿಂದ 7 ಸೀಟ್ ಕಾರುಗಳು
ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಕಾರುಗಳು ವಿವಿಧ ವಿಭಾಗದಲ್ಲಿ ಮಾರಾಟವಾಗುತ್ತವೆ. ಸಣ್ಣ ಹ್ಯಾಚ್‌ಬ್ಯಾಕ್ (Hatchback) ಕಾರುಗಳ ನಂತರ, ಕಾಂಪ್ಯಾಕ್ಟ್ ಎಸ್‌ಯುವಿಗಳು, ಸೆಡಾನ್‌ಗಳು ಮತ್ತು ಪೂರ್ಣ ಗಾತ್ರದ ಎಸ್‌ಯುವಿಗಳು ಹೆಚ್ಚು ಮಾರಾಟವಾಗುತ್ತಿವೆ. ಆಯಾ ವಿಭಾಗಗಳಲ್ಲಿ ಯಾವ ಕಾರುಗಳು ಮಾರುಕಟ್ಟೆಯನ್ನು ಮುನ್ನಡೆಸುತ್ತಿವೆ ಎಂಬುದನ್ನು ಇಲ್ಲಿ ನೋಡೋಣ.
ಮೈಕ್ರೋ ಎಸ್‌ಯುವಿ ನೋಡುವುದಾದ್ರೆ, ಟಾಟಾ ಪಂಚ್ (punch), ಹ್ಯುಂಡೈ ಎಕ್ಸೆಟರ್ (exter) ನಂತಹ ಕಾರುಗಳು ಉತ್ತಮವಾಗಿ ಮಾರಾಟವಾಗುತ್ತಿವೆ. ಈ ವಿಭಾಗದಲ್ಲಿ ಟಾಟಾ ಪಂಚ್ ಹೆಚ್ಚು ಮಾರಾಟವಾಗುವ ಕಾರಾಗಿದೆ. ಅಕ್ಟೋಬರ್‌ನಲ್ಲಿ ಈ ಮೈಕ್ರೋ ಎಸ್‌ಯುವಿಯ 15,317 ಯುನಿಟ್‌ಗಳು ಮಾರಾಟವಾಗಿವೆ. ಸುರಕ್ಷತೆಯ ವಿಷಯದಲ್ಲಿ ಟಾಟಾ ಪಂಚ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಇದರ ಎಕ್ಸ್ ಶೋರೂಂ ಬೆಲೆ ರೂ.6 ಲಕ್ಷದಿಂದ ಪ್ರಾರಂಭವಾಗಿ ರೂ.10.10 ಲಕ್ಷದವರೆಗೆ ಇದೆ.

ಹ್ಯಾಚ್‌ಬ್ಯಾಕ್‌ಗಳನ್ನು ನೋಡುವುದಾದ್ರೆ, ಈ ವಿಭಾಗದಲ್ಲಿ ಅತಿಹೆಚ್ಚು ಮಾರಾಟವಾಗುವ ಕಾರು ಮಾರುತಿ ವ್ಯಾಗನ್ಆರ್. ಕಂಪನಿಯು ಅಕ್ಟೋಬರ್ 2023 ರಲ್ಲಿ 22,080 ಯುನಿಟ್ ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟ ಮಾಡಿದೆ. ವ್ಯಾಗನ್ಆರ್ ಬೆಲೆ 5.54 ಲಕ್ಷ (ಎಕ್ಸ್ ಶೋ ರೂಂ) ದಿಂದ ಆರಂಭವಾಗಿ 7.42 ಲಕ್ಷ (ಎಕ್ಸ್ ಶೋ ರೂಂ) ವರೆಗೆ ಇದೆ. ಕಂಪನಿಯು ಇದನ್ನು 1 ಲೀ. ಮತ್ತು 1.2 ಲೀ ಎಂಜಿನ್ ಆಯ್ಕೆಗಳಲ್ಲಿ ನೀಡುತ್ತಿದೆ.
ಕಾಂಪ್ಯಾಕ್ಟ್ SUV ಬಗ್ಗೆ ಮಾತನಾಡುವುದಾದ್ರೆ, ಟಾಟಾ ನೆಕ್ಸಾನ್ (nexon) ಮತ್ತು ಮಾರುತಿ ಬ್ರೆಝಾ (brezza) ಈ ವಿಭಾಗದಲ್ಲಿ ಕಠಿಣ ಸ್ಪರ್ಧೆಯನ್ನು ಹೊಂದಿವೆ. ಕಳೆದ ತಿಂಗಳು, ಟಾಟಾ ನೆಕ್ಸಾನ್ 16,887 ಯುನಿಟ್‌ಗಳ ಮಾರಾಟದೊಂದಿಗೆ ದೇಶದಲ್ಲಿ ಮೂರನೇ ಅತಿ ಹೆಚ್ಚು ಮಾರಾಟವಾದ ಕಾರಾಗಿತ್ತು. ಈ 5-ಸ್ಟಾರ್ ಸುರಕ್ಷತೆಯ nexon ಕಾಂಪ್ಯಾಕ್ಟ್ SUV ಬೆಲೆ ರೂ. 8.10 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ.

ಸೆಡಾನ್ ಕಾರುಗಳ ವಿಷಯಕ್ಕೆ ಬರುವುದಾದ್ರೆ, ಮಾರುತಿ ಸುಜುಕಿ ಡಿಜೈರ್ ಈ ವಿಭಾಗದಲ್ಲಿ ಹೆಚ್ಚು ಮಾರಾಟ ಕಾಣುವ ಸೆಡಾನ್ ಆಗಿದೆ. ಮಾರುತಿಯ ಕಾಂಪ್ಯಾಕ್ಟ್ ಸೆಡಾನ್ ಡಿಜೈರ್ ಬೆಲೆ ರೂ.6.51 ಲಕ್ಷದಿಂದ ಆರಂಭವಾಗಿ ರೂ. 9.39 ಲಕ್ಷ (ಎಕ್ಸ್ ಶೋರೂಂ) ವೆರೆಗೆ ಇದೆ. ಡಿಜೈರ್ ದೀರ್ಘಕಾಲದಿಂದ ಗ್ರಾಹಕರ ಬೆಂಬಲವನ್ನು ಪಡೆಯುತ್ತಿದೆ. ಟ್ಯಾಕ್ಸಿ ಫ್ಲೀಟ್‌ನಲ್ಲಿ ಅತ್ಯುತ್ತಮ ಬೇಡಿಕೆಯನ್ನು ಹೊಂದಿದೆ.
7 ಆಸನಗಳ MVP ಕಾರುಗಳ ಬಗ್ಗೆ ಮಾತನಾಡುವುದಾದ್ರೆ, ಮಾರುತಿ ಎರ್ಟಿಗಾ ಈ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಾಣುವ ಎಂಪಿವಿ ಆಗಿದೆ. ಎರ್ಟಿಗಾ ಬೆಲೆ ರೂ. 8.64 ಲಕ್ಷದಿಂದ ಆರಂಭವಾಗಿ ರೂ. 13.08 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ. ಈ ಕಾರು ಎರಡು ಪೆಟ್ರೋಲ್ ಮತ್ತು CNG ಆಯ್ಕೆಗಳಲ್ಲಿ ಲಭ್ಯವಿದೆ.

ಈ ಎಲ್ಲಾ ಕಾರುಗಳು ಸದ್ಯ ಭಾರತದಲ್ಲಿ ಅತೀ ಹೆಚ್ಚು ಮಾರಾಟ ಕಾಣುವ ಕಾರುಗಳಾಗಿದ್ದು, ತಮ್ಮ ವಿಭಾಗಗಳಲ್ಲಿ ಕಂಪನಿಗಳಿಗೆ ಬಹುಪಾಲು ಲಾಭವನ್ನು ತಂದುಕೊಡುತ್ತಿವೆ. ಅಲ್ಲದೇ ದೀರ್ಘಕಾಲದಿಂದಲೂ ಕಠಿಣ ಪೈಪೋಟಿ ನಡುವೆಯೂ ಗ್ರಾಹಕರ ಬೇಡಿಕೆಯನ್ನು ಉಳಿಸಿಕೊಂಡಿರುವ ಕಾರುಗಳೆಂದೇ ಹೇಳಬಹುದು. ಇಲ್ಲಿನ ಈ ಕಾರುಗಳಲ್ಲಿ ನಿಮ್ಮ ನೆಚ್ಚಿನದ್ದನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications