ಟೊಯೋಟಾ ಇನ್ನೋವಾ ಕ್ರಿಸ್ಟಾ vs 7-ಸೀಟರ್ SUVಗಳು: ಅದೇ ಬೆಲೆಗೆ ಪರ್ಯಾಯ ಆಯ್ಕೆಗಳು
ಇನ್ನೋವಾ ಹೈಕ್ರಾಸ್ ಎಂಟ್ರಿ ಬಳಿಕ ಇನ್ನೋವಾ ಕ್ರಿಸ್ಟಾವನ್ನು ಸ್ಥಗಿತಗೊಳಿಸುವುದು ಬಹುತೇಕ ಖಚಿತವೆಂದೇ ಭಾವಿಸಲಾಗಿತ್ತು. ಆದರೆ ಇನ್ನೋವಾ ಕ್ರಿಸ್ಟಾಗೆ ಇಂದಿಗೂ ಬೇಡಿಕೆ ಇದೆ ಎಂಬುದು ಸುಳ್ಳಲ್ಲ. ಹಾಗಾಗಿಯೇ ಟೊಯೋಟಾ ಕೊನೆಗೂ ಕ್ರಿಸ್ಟಾವನ್ನು ಕೈಬಿಡದೇ ಮರಳಿ ಮಾರುಕಟ್ಟೆಗೆ ಪರಿಚಯಿಸಿದ್ದು, ಇತ್ತೀಚೆಗೆ ಬೆಳಗಳನ್ನು ಘೋಷಿಸಿದೆ.
2023 ಇನ್ನೋವಾ ಕ್ರಿಸ್ಟಾ ಬೆಲೆಗಳು ರೂ. 19.99 ಲಕ್ಷದಿಂದ ಆರಮಭವಾಗಿ ರೂ. 25.43 ಲಕ್ಷದವರೆಗೆ (ಎಕ್ಸ್ ಶೋರೂಂ) ಹೋಗುತ್ತದೆ. ಆದರೆ ಇದೇ ಬೆಲೆಗಳಿಗೆ ಮಾರುಕಟ್ಟೆಯಲ್ಲಿ ಇತರ ಬ್ರಾಂಡ್‌ಗಳ 7 ಸೀಟರ್ ಕಾರುಗಳು ಮಾರಾಟಕ್ಕೆ ಲಭ್ಯವಿವೆ. ಹಾಗಾದ್ರೆ ಬೆಲೆಗೆ ತಕ್ಕಂತೆ ಕ್ರಿಸ್ಟಾಗೆ ಪೈಪೋಟಿ ನೀಡುವ ಒಂದಷ್ಟು ಮಾದರಿಗಳನ್ನು ಇಲ್ಲಿ ನೋಡೋಣ.

ಮೊದಲಿಗೆ ಇನ್ನೋವಾ ಕ್ರಿಸ್ಟಾ ಬೆಲೆಯನ್ನು ನೋಡುವುದಾದರೆ ಇಲ್ಲಿ ಅತಿ ಹೆಚ್ಚು ಎಂಟ್ರಿ ಲೆವಲ್ ಬೆಲೆಯನ್ನು ಕ್ರಿಸ್ಟಾ ಹೊಂದಿದೆ. ಇದು ಪ್ರವೇಶ ಮಟ್ಟದ ಸಫಾರಿ ಡಾರ್ಕ್‌ಗೆ ಹತ್ತಿರದಲ್ಲಿದ್ದು, 1 ಲಕ್ಷ ರೂ. ಅಂತರದೊಳಗೆ XUV700 ಮತ್ತು MG ಹೆಕ್ಟರ್ ಪ್ಲಸ್‌ನ ಮಧ್ಯಮ-ಸ್ಪೆಕ್ ರೂಪಾಂತರಗಳಲ್ಲಿದೆ. ಇದೇ ಬೆಲೆಗೆ ನೀವು ಪ್ರೀಮಿಯಂಗಾಗಿ ಟಾಪ್-ಸ್ಪೆಕ್ ಡೀಸೆಲ್ ಆಟೋ ಅಲ್ಕಾಜರ್ ಅನ್ನು ಖರೀದಿಸಬಹುದು.
ಮುಂದಿನ ಕ್ರಿಸ್ಟಾ ರೂಪಾಂತರದ ಬೆಲೆಯು ಸುಮಾರು 4 ಲಕ್ಷ ರೂ. ಹೆಚ್ಚಾಗಿದ್ದು, ಇದೇ ಬೆಲೆಗೆ ನೀವು ಟಾಪ್-ಸ್ಪೆಕ್ ಡೀಸೆಲ್-ಮ್ಯಾನ್ಯುವಲ್ XUV700 ಅಥವಾ ಅದರ ಡೀಸೆಲ್-ಆಟೋ AWD ಆಯ್ಕೆಯನ್ನು ನೋಡಬಹುದು. ಪರ್ಯಾಯವಾಗಿ, ಅಡ್ವೆಂಚರ್, ಡಾರ್ಕ್ ಮತ್ತು ರೆಡ್ ಡಾರ್ಕ್ ಆವೃತ್ತಿಗಳಲ್ಲಿಯೂ ಸಹ ಸಫಾರಿಯ ಒಂದು ಸ್ವಯಂಚಾಲಿತ ರೂಪಾಂತರವಿದೆ. ಹಾಗೆಯೇ ಟಾಪ್-ಸ್ಪೆಕ್ MG ಹೆಕ್ಟರ್ ಪ್ಲಸ್ ಮಿಡ್-ಸ್ಪೆಕ್ ಇನ್ನೋವಾ ಕ್ರಿಸ್ಟಾಗಿಂತ ಸುಮಾರು ಒಂದು ಲಕ್ಷ ಅಗ್ಗವಾಗಿದೆ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ: Innova Crysta ಮೊದಲಿದ್ದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಏಳು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, 8-ವೇ ಪವರ್ಡ್ ಡ್ರೈವರ್ ಸೀಟ್, ಹಿಂಭಾಗದ AC ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.
2023 MG ಹೆಕ್ಟರ್ ಪ್ಲಸ್ ಅನ್ನು ನೋಡುವುದಾದರೆ, 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಸನ್‌ರೂಫ್, ರನ್ನಿಂಗ್ ಟೈಲ್‌ಗೇಟ್, ವೈರ್‌ಲೆಸ್ ಫೋನ್ ಚಾರ್ಜರ್, EBD ಜೊತೆಗೆ ABS, ಆರು ಏರ್‌ಬ್ಯಾಗ್‌ಗಳು, ಟಿಪಿಎಮ್‌ಎಸ್ ಪಡೆಯುತ್ತೀರಿ. ESC ಮತ್ತು 360-ಡಿಗ್ರಿ ಕ್ಯಾಮೆರಾ, ಹೆಕ್ಟರ್ ಪ್ಲಸ್ ADAS ಆನ್ನು ಸಹ ನೀಡುತ್ತದೆ. ಇವು ಟಾಪ್-ಸ್ಪೆಕ್ ಟ್ರಿಮ್‌ನಲ್ಲಿ ಲಭ್ಯವಿದ್ದು, ಇನ್ನೋವಾ ಕ್ರಿಸ್ಟಾಕ್ಕಿಂತ ಹೆಚ್ಚಿನ ಬೆಲೆಯಿದೆ.

ಟಾಟಾ ಸಫಾರಿಯು, ಕ್ರಿಸ್ಟಾದ ಬೆಲೆ ಶ್ರೇಣಿಯಲ್ಲಿ, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಏಳು-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೆಂಟಿಲೇಟೆಡ್ ಮತ್ತು ಪವರ್-ಫ್ರಂಟ್ ಸೀಟುಗಳು, ಸನ್‌ರೂಫ್ ಅನ್ನು ನೀಡುತ್ತದೆ. ಹಾಗೆಯೇ ಆರು ಏರ್‌ಬ್ಯಾಗ್‌ಗಳು, ESP, TPMS, 360-ಡಿಗ್ರಿ ಕ್ಯಾಮೆರಾ, ಆಲ್ ವೀಲ್ ಡಿಸ್ಕ್ ಬ್ರೇಕ್, ADAS ಫಂಕ್ಷನ್‌ಗಳಾದ ಫಾರ್ವರ್ಡ್ ಕೊಲಿಷನ್, ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಅನ್ನು ಹೊಂದಿದೆ.
ಇನ್ನು ಕೊನೆಯದಾಗಿ ಹ್ಯುಂಡೈ ಅಲ್ಕಾಜರ್ ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನೋರಮಿಕ್ ಸನ್ ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸಹ ನೀಡುತ್ತದೆ. ಆರು ಏರ್‌ಬ್ಯಾಗ್‌ಗಳು, VSM, ESC, ಆಲ್-ವೀಲ್ ಡಿಸ್ಕ್ ಬ್ರೇಕ್, TPMS (ಟೈರ್ ಪ್ರೆಷರ್ ಮಾನಿಟರಿಂಗ್) ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬರುತ್ತದೆ.


Click it and Unblock the Notifications