Toyota Rumion: ಗರಿಷ್ಠ ಮೈಲೇಜ್‌ನ ಟೊಯೊಟಾ ರೂಮಿಯನ್ ಬಿಡುಗಡೆ, ಬೆಲೆ ಕಡಿಮೆ.. ಭರ್ಜರಿ ವಿಶೇಷತೆಗಳಿವೆ
ಭಾರತದಲ್ಲಿ ಟೊಯೊಟಾ ಜನಪ್ರಿಯ ಕಾರು ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಈಗಾಗಲೇ, ಕಂಪನಿಯ ಇನ್ನೋವಾ ಸರಣಿ ಎಂಪಿವಿಗಳು ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿವೆ. ಈ ವಿಭಾಗಕ್ಕೆ ಹೊಸ ಸೇರ್ಪಡೆಯಾಗಿ, ಮಾರುತಿ ಸುಜುಕಿ ಎರ್ಟಿಗಾ ರೀ-ಬ್ಯಾಡ್ಜ್ ಆವೃತ್ತಿ ಟೊಯೊಟಾ ರೂಮಿಯನ್ (Toyota Rumion) ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಿದೆ.
ಟೊಯೊಟಾ ರೂಮಿಯನ್, ಬೇಸ್ ವೇರಿಯೆಂಟ್ ಬೆಲೆ ರೂ.10.29 ಲಕ್ಷದಿಂದ ಆರಂಭವಾಗಲಿದ್ದು, ಟಾಪ್ ಎಂಡ್ ವೇರಿಯೆಂಟ್ ದರ ರೂ.13.68 ಲಕ್ಷದವರೆಗೆ ತಲುಪುತ್ತದೆ. (ಎಕ್ಸ್ ಶೋರೂಂ) ಈ ಕಾರು, ಗೇರ್ ಬಾಕ್ಸ್ ಆಯ್ಕೆ ಅನ್ವಯ ವಿವಿಧ ರೂಪಾಂತರಗಳಲ್ಲಿ ಸಿಗುತ್ತದೆ. ಅವುಗಳೆಂದರೆ, 'ಎಸ್' ಎಂಟಿ (ಪೆಟ್ರೋಲ್), 'ಎಸ್' ಎಟಿ (ಪೆಟ್ರೋಲ್), 'ಜಿ' ಎಂಟಿ (ಪೆಟ್ರೋಲ್), 'ವಿ' ಎಂಟಿ (ಪೆಟ್ರೋಲ್), 'ವಿ' ಎಟಿ (ಪೆಟ್ರೋಲ್) ಮತ್ತು 'ಎಸ್' ಎಂಟಿ (ಸಿಎನ್‌ಜಿ).

ನೂತನ ಟೊಯೊಟಾ ರೂಮಿಯನ್ ಆರು ಬೇರೆ - ಬೇರೆ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ಲಭ್ಯವಿದೆ. ಸದ್ಯ, ಈ ಎಂಪಿವಿ ಬುಕ್ಕಿಂಗ್ ಆರಂಭವಾಗಿದ್ದು, ಆಸಕ್ತ ಗ್ರಾಹಕರು, ರೂ.11,000 ಪಾವತಿಸಿ, ಕಾಯ್ದಿರಿಸಬಹುದು. ನಿಮಗೆ ಗೊತ್ತಿರಲಿ.. ದೇಶದಲ್ಲಿ ಮಾರುತಿ ಸುಜುಕಿ ಹಾಗೂ ಟೊಯೊಟಾ ಕಂಪನಿಗಳು ಪಾಲುದಾರಿಕೆ ಹೊಂದಿದ್ದು, ಅದರ ಭಾಗವಾಗಿ ಎರ್ಟಿಗಾ ರೀ-ಬ್ಯಾಡ್ಜ್ ಆವೃತ್ತಿಯಾದ ರೂಮಿಯನ್ ಲಾಂಚ್ ಆಗಿದೆ. ಎರ್ಟಿಗಾ ರೂ.10 ಲಕ್ಷದಿಂದ ರೂ.15 ಲಕ್ಷ ದರವನ್ನು ಪಡೆದಿದೆ.
ಟೊಯೊಟಾ ರೂಮಿಯನ್ ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಇದರ, 1.5-ಲೀಟರ್ ಕೆ ಸೀರಿಯಸ್ ಪೆಟ್ರೋಲ್ ಎಂಜಿನ್, 6,000 rpmನಲ್ಲಿ 101bhp ಪವರ್ ಹಾಗೂ 4,400 rpmನಲ್ಲಿ 136.8Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಿಎನ್‌ಜಿ ಕಿಟ್ ಹೊಂದಿರುವ ಕಾರು, ಇದೇ ಎಂಜಿನ್ ಹೊಂದಿದೆ. ಆದರೆ, 5,500 rpmನಲ್ಲಿ 86.63bhp ಪವರ್, 4,200 rpmನಲ್ಲಿ 121.5Nm ಪೀಕ್ ಟಾರ್ಕ್ ಹೊರಹಾಕುತ್ತದೆ.
| Variant | Prices |
| S MT | ₹10.29 Lakh |
| S AT | ₹11.89 Lakh |
| G MT | ₹11.45 Lakh |
| V MT | ₹12.18 Lakh |
| V AT | ₹13.68 Lakh |
| S MT CNG | ₹11.24 Lakh |
ಜೊತೆಗೆ, ರೂಪಾಂತರಗಳಿಗೆ ಅನುಗುಣವಾಗಿ 5 ಸ್ವೀಡ್ ಮ್ಯಾನುವಲ್, 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಮೈಲೇಜ್ ವಿಚಾರವಾಗಿ ಹೇಳುವುದಾದರೆ, 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ರೂಮಿಯನ್ ಯಾವ ಬೈಕಿಗೂ ಕಮ್ಮಿ ಇಲ್ಲದಂತೆ ಇಂಧನ ದಕ್ಷತೆಯನ್ನು ಪಡೆದಿದೆ. ಪೆಟ್ರೋಲ್ ರೂಪಾಂತರ 20.51 km/l ಹಾಗೂ ಸಿಎನ್‌ಜಿ ರೂಪಾಂತರ 26.11 km/kg ಮೈಲೇಜ್ ನೀಡುತ್ತದೆ.
ಹೊಸ ಟೊಯೊಟಾ ರೂಮಿಯನ್ ಎಂಪಿವಿ, ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ನೋಡುಗರನ್ನು ಸೆಳೆಯುವ ಡಿಸೈನ್ ಹೊಂದಿದೆ. ರೂಮಿಯನ್ ಇನ್ನೋವಾ ಕ್ರಿಸ್ಟಾದಂತೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಡ್ಯುಯಲ್ - ಟೋನ್ ಅಲಾಯ್ ವೀಲ್ಸ್ ಅದರ ಸುತ್ತಲೂ ಕ್ರೋಮ್ ಇನ್‌ಸರ್ಟ್‌ಗಳಿವೆ. ಹೊಸದಾದ ಗ್ರಿಲ್ ಮತ್ತು ಎಲ್ಇಡಿ ಟೈಲ್‌ಲೈಟ್ಸ್ ಅನ್ನು ಒಳಗೊಂಡಿದೆ.
ನೂತನ ಟೊಯೊಟಾ ರೂಮಿಯನ್, ಅತ್ಯಾಧುನಿಕ ವಿನ್ಯಾಸವನ್ನು ಪಡೆದಿದೆ. 6 ಏರ್‌ಬ್ಯಾಗ್ಸ್, ಕ್ರೂಸ್ ಕಂಟ್ರೋಲ್, ಟೊಯೊಟಾ ಐ-ಕನೆಕ್ಟ್ ಟೆಕ್ನಲಾಜಿ, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಆಟೋಮೆಟಿಕ್ ಕ್ಲೇಮೇಟ್ ಕೊಟ್ರೋಲ್ ಹೈಟ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್ ಸೇರಿದಂತೆ ವಿವಿಧ ಫೀಚರ್ಸ್ ಹೊಂದಿದೆ.
ಇನ್ನು, ಟೊಯೊಟಾ ಕಂಪನಿ, ರೂಮಿಯನ್ ಎಂಪಿವಿಯನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಇದರಲ್ಲಿ ಇಡೀ ಕುಟುಂಬ ಕುಳಿತುಕೊಂಡು ಪ್ರಯಾಣಿಸಲು ಸಾಧ್ಯವಾಗುವುದರಿಂದ ಹೆಚ್ಚಿನ ಸಂಖ್ಯೆ ಗ್ರಾಹಕರಿಗೆ ಇಷ್ಟವಾಗಬಹುದು. ಹಬ್ಬದ ಋತುವಿನಲ್ಲಿ ಈ ಕಾರಿಗೆ ಮತ್ತಷ್ಟು ಡಿಮ್ಯಾಂಡ್ ಹೆಚ್ಚಾಗುವ ನೀರಿಕ್ಷೆಯಿದ್ದು, ಮಾರುತಿ ಸುಜುಕಿ ಎರ್ಟಿಗಾ ಖರೀದಿಸಬೇಕೆಂದು ಯೋಚಿರುವ ಒಂದಷ್ಟು ಗ್ರಾಹಕರು ಇದರತ್ತ ವಾಲಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications