Toyota Rumion: ಬೈಕ್‌ನಂತೆ ಮೈಲೇಜ್‌ನ ಟೊಯೊಟಾ ರೂಮಿಯನ್ ಆನ್-ರೋಡ್ ಬೆಲೆ ಬಹಿರಂಗ, ಬೆಂಗಳೂರಿನಲ್ಲಿ ಎಷ್ಟು?
ದೇಶದ ಎಂಪಿವಿ ವಿಭಾಗಕ್ಕೆ ಹೊಸ ಸೇರ್ಪಡೆಯಾಗಿ ಸೋಮವಾರ, ಟೊಯೊಟಾ ರೂಮಿಯನ್ (Toyota Rumion) ಎಂಟ್ರಿ ಕೊಟ್ಟಿದೆ. ಇದು, ಅತ್ಯಂತ ಕೈಗೆಟುಕುವ ಬೆಲೆಗೆ ಖರೀದಿಗೆ ಸಿಗುವ ಕುಟುಂಬದ ಕಾರೆಂದು ಖ್ಯಾತಿಗಳಿಸಿದ್ದು, ಸದ್ಯ, ಪ್ರಮುಖ ನಗರಗಳಲ್ಲಿ ಈ ಎಂಪಿವಿ ರೂಪಾಂತರಗಳ ಆನ್-ರೋಡ್ ಬೆಲೆ ಬಗ್ಗೆ ಮಾಹಿತಿ ಲಭ್ಯವಾಗಿದೆ.
ದೆಹಲಿಯಲ್ಲಿ 'ಎಸ್' ರೂಪಾಂತರ ರೂ.12.08 ಲಕ್ಷ, 'ಜಿ' ವೇರಿಯೆಂಟ್ ರೂ.13.41 ಲಕ್ಷ ಹಾಗೂ 'ವಿ' ರೂಪಾಂತರ ರೂ.14.25 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ಮುಂಬೈನಲ್ಲಿ 'ಎಸ್' ವೇರಿಯೆಂಟ್ ರೂ.12.27 ಲಕ್ಷ, 'ಜಿ' ರೂಪಾಂತರ ರೂ.13.36 ಲಕ್ಷ ಮತ್ತು 'ವಿ' ವೇರಿಯೆಂಟ್ ರೂ.14.48 ಲಕ್ಷ ದರವನ್ನು ಹೊಂದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಟೊಯೊಟಾ ರೂಮಿಯನ್ ಎಂಪಿವಿಯ 'ಎಸ್' ರೂಪಾಂತರ ರೂ.12.77 ಲಕ್ಷ, 'ಜಿ' ವೇರಿಯೆಂಟ್ ರೂ.14.18 ಲಕ್ಷ ಹಾಗೂ 'ವಿ' ರೂಪಾಂತರ ರೂ.15.07 ಆನ್ - ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ರಾಜ್ಯದಲ್ಲಿ ರಸ್ತೆ ತೆರಿಗೆ ಹೆಚ್ಚಿರುವುದರಿಂದ ಇತರೆ ನಗರಗಳಿಗೆ ಹೋಲಿಸಿದರೆ, ಕೊಂಚ ದರ ಅಧಿಕವಿದೆ. ಹೆಚ್ಚಿನ ಮಾಹಿತಿಗೆ ನೀವು ಸಮೀಪದ ಡೀಲರ್‌ಶಿಪ್ ಗೆ ಭೇಟಿ ನೀಡುವುದು ಉತ್ತಮ.
ಹೈದರಾಬಾದಿನಲ್ಲಿ 'ಎಸ್' ವೇರಿಯೆಂಟ್ ರೂ.12.76 ಲಕ್ಷ, 'ಜಿ' ರೂಪಾಂತರ ರೂ.14.17 ಲಕ್ಷ ಮತ್ತು 'ವಿ' ವೇರಿಯೆಂಟ್ ರೂ.15.06 ಲಕ್ಷ ಬೆಲೆಯನ್ನು ಪಡೆದಿದೆ. ಚೆನ್ನೈನಲ್ಲಿ 'ಎಸ್' ರೂಪಾಂತರ ರೂ.12.57 ಲಕ್ಷ, 'ಜಿ' ವೇರಿಯೆಂಟ್ ರೂ.13.96 ಲಕ್ಷ ಹಾಗೂ 'ವಿ' ರೂಪಾಂತರ ರೂ.14.83 ಲಕ್ಷ ಆನ್ - ರೋಡ್ ದರದಲ್ಲಿ ಸಿಗುತ್ತದೆ. ಆಸಕ್ತ ಗ್ರಾಹಕರು, ರೂ.11,000 ಪಾವತಿಸಿ ಬುಕ್ಕಿಂಗ್ ಮಾಡಬಹುದು.
7 ಆಸನ ಆಯ್ಕೆ ವ್ಯವಸ್ಥೆ ಹೊಂದಿರುವ ಮಾರುತಿ ಸುಜುಕಿ ಎರ್ಟಿಗಾ ರೀ - ಬ್ಯಾಡ್ಜ್ ಆವೃತ್ತಿಯಾಗಿರುವ ಟೊಯೊಟಾ ರೂಮಿಯನ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಇದರ, 1.5 - ಲೀಟರ್ ಕೆ ಸೀರಿಯಸ್ ಪೆಟ್ರೋಲ್ ಎಂಜಿನ್, 101 bhp ಗರಿಷ್ಠ ಪವರ್ ಮತ್ತು 136.8 Nm ಪೀಕ್ ಟಾರ್ಕ್ ಹೊರಹಾಕುತ್ತದೆ.
ಸಿಎನ್‌ಜಿ ಕಿಟ್ ಪಡೆದಿರುವ ಕಾರು, ಸ್ವಲ್ಪ ಕಡಿಮೆ ಅಂದರೆ, 86.63 bhp ಪವರ್ ಹಾಗೂ 121.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ, 5 ಸ್ವೀಡ್ ಮ್ಯಾನುವಲ್, 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. ಜೊತೆಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ. ಪೆಟ್ರೋಲ್ ವೇರಿಯೆಂಟ್ 20.51 km/l, ಸಿಎನ್‌ಜಿ ರೂಪಾಂತರ 26.11 km/kg ಮೈಲೇಜ್ ನೀಡುತ್ತದೆ.
ವಿನ್ಯಾಸದ ದೃಷ್ಟಿಯಿಂದ ಕೂಡ ಟೊಯೊಟಾ ರೂಮಿಯನ್ ಅತ್ಯಾಧುನಿಕವಾಗಿದ್ದು, ಇನ್ನೋವಾ ಕ್ರಿಸ್ಟಾದಂತೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಅಲಾಯ್ ವೀಲ್ಸ್ ಹೊಂದಿದೆ. ವೈಶಿಷ್ಟ್ಯದ ವಿಚಾರವಾಗಿ ಮಾತನಾಡುವುದಾದರೆ, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಪಡೆದಿದೆ. ಸುರಕ್ಷತೆಯ ಸಲುವಾಗಿ 6 ಏರ್‌ಬ್ಯಾಗ್ಸ್, ಕ್ರೂಸ್ ಕಂಟ್ರೋಲ್ ಸೇರಿದಂತೆ ವಿಭಿನ್ನ ಫೀಚರ್ಸ್ ಪಡೆದಿದೆ.
ಇನ್ನು, ಟೊಯೊಟಾ ರೂಮಿಯನ್, ಮಾರುತಿ ಸುಜುಕಿ ಎರ್ಟಿಗಾ ರೀ - ಬ್ಯಾಡ್ಜ್ ಆವೃತ್ತಿಯಾಗಿದ್ದರೂ ಹಲವು ಸೂಕ್ಷ್ಮ ಬದಲಾವಣೆಗಳನ್ನು ಹೊಂದಿದೆ. ಜೊತೆಗೆ ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವುದರಿಂದ ಹೆಚ್ಚಿನ ಗ್ರಾಹಕರು ಇದನ್ನು ತಮ್ಮ ಆಯ್ಕೆಯ ವಾಹನವಾಗಿ ಪರಿಗಣಿಸಬಹುದು. ಮುಂಬರುವ ಹಬ್ಬದ ಋತುವಿನಲ್ಲಿ ಮತ್ತಷ್ಟು ಬೇಡಿಕೆ ಬಂದರೂ ಅಚ್ಚರಿ ಇಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications