ಭಾರತದಲ್ಲಿ ಬಿಡುಗಡೆಯಾಗಲಿರುವ ಕೈಗೆಟುಕುವ ಕಾಂಪ್ಯಾಕ್ಟ್ ಕಾರುಗಳಿವು...
ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಡುಕುವ ಬೆಲೆಯ ಹಲವು ಕಾರುಗಳಿವೆ. ಕೈಗೆಟುಕುವ ಕಾರುಗಳಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ, ಹ್ಯಾಚ್‌ಬ್ಯಾಕ್ ಮತ್ತು ಕಾಂಪ್ಯಾಕ್ಟ್ ಸೆಡಾನ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಇದರಿಂದ ಹಲವು ಕಂಪನಿಗಳು ಕಾಂಪ್ಯಾಕ್ಟ್ ಕಾರುಗಳ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಕಾಂಪ್ಯಾಕ್ಟ್ ಕಾರುಗಳ (Compact Cars) ಬಗ್ಗೆ ಮಾಹಿತಿ ಇಲ್ಲಿದೆ.
ಮಾರುತಿ ಸ್ವಿಫ್ಟ್ ಮತ್ತು ಸ್ವಿಫ್ಟ್ ಡಿಜೈರ್: ಮಾರುತಿ ಮಾರಾಟದಲ್ಲಿ ಮತ್ತಷ್ಟು ಬೆಳವಣಿಗೆಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಮಾರುತಿ ಸುಜುಕಿ ಕಂಪನಿಯು ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ನಡುವೆ ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಕಾರನ್ನು 2023ರ ಜಪಾನ್ ಮೊಬಿಲಿಟಿ ಶೋನಲ್ಲಿ ಕಾನ್ಸೆಪೃ ರೂಪದಲ್ಲಿ ಪ್ರದರ್ಶಿಸಿದರು. ಈ ಹೊಸ ಸ್ವಿಫ್ಟ್ ಕಾರಿನಲ್ಲಿ ಕೋಡ್ ನೇಮ್ Z12 ಎಂಬ 1.2 ಲೀಟರ್ 3-ಸಿಲಿಂಡರ್ ಎಂಜಿನ್ ಅನ್ನು ಹೊಂದಿರಲಿದೆ.

ಪ್ರಸ್ತುತ ಇರುವ 1.2 ಲೀಟರ್ 4-ಸಿಲಿಂಡರ್ K-ಸರಣಿ ಮೋಟಾರ್ ಅನ್ನು ಬದಲಿಸಲಾಗುತ್ತದೆ. ಸ್ವಿಫ್ಟ್‌ನ ಜಿ-ಸೀರಿಸ್ ಎಂಜಿನ್‌ನ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ 3-ಸಿಲಿಂಡರ್ ಕಾನ್ಫಿಗರೇಶನ್, ಹಿಂದಿನ 4-ಸಿಲಿಂಡರ್ ಸೆಟಪ್ ಅನ್ನು ಬದಲಾಯಿಸುತ್ತದೆ. ಈ ಕಾರು ಬರೊಬ್ಬರಿ 40 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಮಾರುತಿ ಸುಜುಕಿ ಕಂಪನಿಯು ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಲಿದೆ.
ಟಾಟಾ ಪಂಚ್ ಇವಿ: ಟಾಟಾ ಕಂಪನಿಯು ತನ್ನ ಮೈಕ್ರೋ ಎಸ್‌ಯುವಿ ಪಂಚ್ ಅನ್ನು ಎಲೆಕ್ಟ್ರಿಕ್ ಆಗಿಯೂ ಬಿಡುಗಡೆಗೊಳಿಸಲಿದೆ ಎಂದು ತಿಳಿದು ಬಂದಿದೆ. ಇದು ಬಹು ನಿರೀಕ್ಷಿತ ಅಪ್‌ಡೇಟ್ ಆಗಿದ್ದು, ಟಾಟಾ ಪಂಚ್ ಏನಾದರೂ ಎಲೆಕ್ಟ್ರಿಕ್ ರೂಪದಲ್ಲಿ ಬಂದರೆ ಅದು ಟಾಟಾ ಮೋಟಾರ್ಸ್‌ನ ಯಶಸ್ಸನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯುವುದಂತೂ ಖಂಡಿತ. ಮಾಹಿತಿಗಳ ಪ್ರಕಾರ ಮುಂದಿನ ವರ್ಷ ಆರಂಭದಲ್ಲಿ ಅಥವಾ ಮಧ್ಯ ವೇಳೆಯಲ್ಲಿ ಟಾಟಾ ಮೋಟಾರ್ಸ್ ಪಂಚ್ ಎಲೆಕ್ಟ್ರಿಕ್ ಅನ್ನು ಮಾರುಕಟ್ಟೆಗೆ ತರಲಿದ್ದಾರೆ.

ಸೋರಿಕೆಯಾಗಿರುವ ಚಿತ್ರಗಳಲ್ಲಿ ಕ್ಯಾಮೋ ಫ್ಲ್ಯಾಗ್ ಸುತ್ತಿರುವುದರಿಂದ ಕಾರಿನ ವಿನ್ಯಾಸದ ಬದಲಾವಣೆಯಲ್ಲಿ ಬದಲಾವಣೆಗಳು ಇರಲಿವೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಸಾಧರಣವಾಗಿ ಟಾಟಾ ಎಲೆಕ್ಟ್ರಿಕ್ ವಾಹನಗಳಲ್ಲಿ ಪೆಟ್ರೋಲ್/ಡೀಸೆಲ್ ವಾಹನಗಳಿಗಿಂತ ವಿಭಿನ್ನವಾದ ಡಿಸೈನ್ ಅನ್ನು ಇನ್ನು ಈ ಟಾಟಾ ಪಂಚ್ ಎಲೆಕ್ಟ್ರಿಕ್ ಚಿತ್ರಗಳನ್ನು ನೋಡಿದರೆ ಇದರ ಮುಂಭಾದಲ್ಲಿ ಯಾವುದೇ ಬದಲಾವಣೆ ಆದಂತೆ ಕಾಣಿಸುತ್ತಿಲ್ಲ. ಆದರೆ ಎಲೆಕ್ಟ್ರಿಕ್ ವಾಹನಗಳಲ್ಲಿ ಸಾಮಾನ್ಯವಾಗಿ ಕ್ಲೋಸ್ಡ್ ಗ್ರಿಲ್ ಇರುವುದರಿಂದ ಈ ಕಾರಿನಲ್ಲೂ ನಾವು ಅದನ್ನು ನಿರೀಕ್ಷಿಸಬಹುದಾಗಿದೆ.
ಕಿಯಾ ಸೊನೆಟ್: ಹೊಸ ಸೆಲ್ಟೋಸ್‌ನಿಂದ ಪ್ರೇರಿತವಾದ ಗಮನಾರ್ಹ ವಿನ್ಯಾಸದ ಬದಲಾವಣೆಗಳೊಂದಿಗೆ, ರಿಫ್ರೆಶ್ ಮಾಡಿದ ಕಿಯಾ ಸೋನೆಟ್ 2024 ರ ಆರಂಭದಲ್ಲಿ ಶೋರೂಮ್‌ಗಳನ್ನು ಅಲಂಕರಿಸಲು ಸಿದ್ಧವಾಗಿದೆ. ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ತಂತ್ರಜ್ಞಾನದ ಪರಿಚಯವು ಪ್ರಮುಖ ಹೈಲೈಟ್ ಆಗಿದೆ, ಇದು 7-8 ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಒಳಭಾಗದಲ್ಲಿ ಹೊಸ ಡ್ಯಾಶ್‌ಬೋರ್ಡ್, ಡ್ಯುಯಲ್-ಸ್ಕ್ರೀನ್ ಸೆಟಪ್ ಮತ್ತು 360-ಡಿಗ್ರಿ ಕ್ಯಾಮೆರಾದೊಂದಿಗೆ ಫೇಸ್‌ಲಿಫ್ಟ್ ಅನ್ನು ಪಡೆಯುತ್ತದೆ.

ಮಹೀಂದ್ರಾ XUV300: ಈ ಎಸ್‍ಯುವಿ ಯಾವುದೇ ಪ್ರಮುಖ ನವೀಕರಣವಿಲ್ಲದೆ ಸ್ವಲ್ಪ ಸಮಯದವರೆಗೆ ಸಬ್-4 ಮೀಟರ್ ಎಸ್‍ಯುವಿ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ. ಅಂದಹಾಗೆ, ಮಹೀಂದ್ರಾ ಕೆಲವು ಸಮಯದಿಂದ XUV300 ಎಸ್‍ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ. ಹೊಸ ಮಹೀಂದ್ರಾ XUV300 ಫೇಸ್‌ಲಿಫ್ಟ್ ಎಸ್‍ಯುವಿ ಲೋ ಬೀಮ್ ಗಳಿಗೆ ಪ್ರೊಜೆಕ್ಟರ್ ಮಾದರಿಯ ಯುನಿಟ್ ಅನ್ನು ಹೊಂದಿದ್ದರೂ ಸಹ ಸಾಮಾನ್ಯ ಹ್ಯಾಲೊಜೆನ್ ಬಲ್ಬ್‌ಗಳನ್ನು ಹೊಂದಿದೆ.
ಹೋಲಿಸಿದರೆ, ಅದರ ಹೆಚ್ಚಿನ ಸ್ಪರ್ಧಿಗಳು ಈಗ ಹೆಚ್ಚು ಸುಧಾರಿತ ಎಲ್ಇಡಿ ಹೆಡ್ ಲೈಟ್ ಸೆಟಪ್ ಅನ್ನು ಹೊಂದಿರುತ್ತಾರೆ. ಮುಂಬರುವ ಮಹೀಂದ್ರಾ XUV300 ಫೇಸ್‌ಲಿಫ್ಟ್ ಆವೃತ್ತಿಯು ನವೀಕರಿಸಿದ ಮುಂಭಾಗದ ಬಂಪರ್, ಗ್ರಿಲ್, ಹಿಂಭಾಗದ ಬಂಪರ್ ಮತ್ತು ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಇತರ ಬದಲಾವಣೆಗಳೊಂದಿಗೆ LED ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಟೈಲ್‌ಲ್ಯಾಂಪ್‌ಗಳು ಈಗ ಪ್ರೀಮಿಯಂ ನೋಟಕ್ಕಾಗಿ 3D ಅಂಶಗಳನ್ನು ಒಳಗೊಂಡಿರುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications








