Tata To Toyota: ಕೈಗೆಟುಕುವ ಬೆಲೆಯಲ್ಲಿ ಧೂಳೆಬ್ಬಿಸಲು ಬರಲಿವೆ ಪ್ರಮುಖ ಕಾರುಗಳು

ಭಾರತದ ಕಾರು ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳು ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆಯಗಳನ್ನು ಗಳಿಸುತ್ತಿವೆ. ಟಾಟಾ, ಟೊಯೊಟಾ, ಕಿಯಾ ಸೇರಿದಂತೆ ವಿವಿಧ ಕಾರು ತಯಾರಕ ಕಂಪನಿಗಳು ಈ ವಿಭಾಗದಲ್ಲಿ ಹಲವು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿರುತ್ತವೆ. ದೇಶದಲ್ಲಿ ಮುಂಬರಲಿರುವ ಕಾಂಪ್ಯಾಕ್ಟ್ ಎಸ್‌ಯುವಿಗಳು ಯಾವುದೆಂದು ತಿಳಿಯೋಣ.

ಮೊದಲಿಗೆ ಟಾಟಾ (Tata) ಕಂಪನಿಯ ಬಹುನೀರಿಕ್ಷಿತ ಪಂಚ್ ಸಿಎನ್‌ಜಿ (Punch CNG) ಕಾಂಪ್ಯಾಕ್ಟ್ ಎಸ್‌ಯುವಿ ಕುರಿತು ತಿಳಿಯೋಣ. ದೆಹಲಿಯಲ್ಲಿ ಕಳೆದ ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಈ ಕಾರು ಕಾಣಿಸಿಕೊಂಡಿತು. ಇದು, 1.2 ಲೀಟರ್ 3 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುವ ಸಾಧ್ಯತೆಯಿದೆ. ಯಾವ ಬೈಕ್ ಗೂ ಕಮ್ಮಿ ಇಲ್ಲದಂತೆ 30 kmpl ಮೈಲೇಜ್ ನೀಡುವ ನಿರೀಕ್ಷೆಯಿದ್ದು ರೂ10 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು.

Tata To Toyota: ಕೈಗೆಟುಕುವ ಬೆಲೆಯಲ್ಲಿ ಧೂಳೆಬ್ಬಿಸಲು ಬರಲಿವೆ ಪ್ರಮುಖ ಕಾರುಗಳು

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ದೊರೆಯುವ ಇಂಧನ ಚಾಲಿತ ಟಾಟಾ ಪಂಚ್ ಕಾರಿನ ಬಗ್ಗೆ ಮಾತನಾಡುವುದಾದರೆ, ಇದು, ರೂ.6 ಲಕ್ಷದಿಂದ ರೂ.9.52 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 88 PS ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್/ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

ಟೊಯೊಟಾ (Toyota) ಕಂಪನಿ ಮಾರುತಿ ಸುಜುಕಿಯೊಂದಿಗೆ ಭಾರತದಲ್ಲಿ ಸಹಭಾಗಿತ್ವ ಹೊಂದಿದೆ. ಅದರ ಭಾಗವಾಗಿ ಫ್ರಾಂಕ್ಸ್‌ ರೀಬ್ಯಾಡ್ಜ್ ಆವೃತ್ತಿಯನ್ನು ಟೈಸರ್ ಹೆಸರಿನಲ್ಲಿ ಬಿಡುಗಡೆಗೊಳಿಸಲು ಟೊಯೊಟಾ ಸಿದ್ಧತೆ ನಡೆಸುತ್ತಿದೆ. ಹೊರಭಾಗ ಹಾಗೂ ಒಳಭಾಗದ ವಿನ್ಯಾಸ ಹಾಗೂ ವೈಶಿಷ್ಟ್ಯದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿರಲಿದ್ದು, 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್, K-ಸೀರಿಯಸ್ ಪೆಟ್ರೋಲ್ ಮತ್ತು 1.0 ಲೀಟರ್ 3 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.

Tata To Toyota: ಕೈಗೆಟುಕುವ ಬೆಲೆಯಲ್ಲಿ ಧೂಳೆಬ್ಬಿಸಲು ಬರಲಿವೆ ಪ್ರಮುಖ ಕಾರುಗಳು

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಫ್ರಾಂಕ್ಸ್‌, ರೂ.7.46 ಲಕ್ಷದಿಂದ ರೂ.13.13 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಲಭ್ಯವಾಗಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 20.01 - 22.89 kmpl
ಮೈಲೇಜ್ ನೀಡುತ್ತದೆ. 9 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಕಂಪನಿಯು ತನ್ನ ನೆಕ್ಸಾನ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಸೆಪ್ಟೆಂಬರ್‌ ನಲ್ಲಿ ಬಿಡುಗಡೆಗೊಳಿಸುವ ನೀರಿಕ್ಷೆಯಿದ್ದು, ಬಹುತೇಕ Curvv ಕಾನ್ಸೆಪ್ಟ್ ಕಾರಿಗೆ ಹೋಲುವ ವಿನ್ಯಾಸ ಹೊಂದಿರಲಿದೆ. 1.2 ಲೀಟರ್ DI ಪೆಟ್ರೋಲ್ ಎಂಜಿನ್, ಆಕರ್ಷಕ ಟಚ್‌ಸ್ಕ್ರೀನ್, 2 ಸ್ಪೋಕ್ ಸ್ಟೀರಿಂಗ್ ವೀಲ್, 360 ಡಿಗ್ರಿ ಕ್ಯಾಮೆರಾಗಳ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗಬಹುದು. ಪ್ರಸ್ತುತ ನೆಕ್ಸಾನ್ ಎಸ್‌ಯುವಿ, ರೂ.8 ಲಕ್ಷದಿಂದ ರೂ.14.60 ಲಕ್ಷ ದರದಲ್ಲಿ ಸಿಗುತ್ತದೆ.

ದಕ್ಷಿಣ ಕೊರಿಯಾದ ಕಿಯಾ (Kia) ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ತನ್ನ ಸೊನೆಟ್ ಫೇಸ್‌ಲಿಫ್ಟ್ ಕಾರನ್ನು ಈ ವರ್ಷದ ಕೊನೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದ್ದು, ಆ ಬಳಿಕ ಅಂದರೆ 2024 ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ನವೀಕರಿಸಿರುವ ಎಂಜಿನ್, ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ. ಸದ್ಯ, ಖರೀದಿಗೆ ಸಿಗುವ ಕಿಯಾ ಸೊನೆಟ್ ರೂ.7.79 ಲಕ್ಷದಿಂದ ರೂ.14.89 ಲಕ್ಷ ಬೆಲೆಯಲ್ಲಿ ಸಿಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Saturday, July 29, 2023, 18:14 [IST]
English summary
Upcoming compact suvs launching soon india tata to toyota details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+