Tata, MG Electric Cars: ಕಡಿಮೆ ಬೆಲೆಯಲ್ಲಿ ಸಿಗಲಿವೆ ಟಾಟಾ, ಎಂಜಿ ಎಲೆಕ್ಟ್ರಿಕ್ ಕಾರುಗಳು.. ಅವೇ ನಂಬರ್ 01 ಪಕ್ಕಾ!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗುತ್ತಿದೆ. ಅದರಲ್ಲಿ ಗರಿಷ್ಠ ಪಾಲನ್ನು ದೇಶೀಯ ಸಂಸ್ಥೆ ಟಾಟಾ ಮೋಟಾರ್ಸ್ ಹೊಂದಿದೆ. ಜೊತೆಗೆ ವಿದೇಶಿ ಕಂಪನಿಗಳು ತಾವೇನೂ ಕಮ್ಮಿಯಿಲ್ಲ ಎಂಬಂತೆ ವಿವಿಧ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ. ಮುಂಬರಲಿರುವ ಟಾಟಾ, ಎಂಜಿ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮೊದಲಿಗೆ ಕಡಿಮೆ ಬೆಲೆಗೆ ಖರೀದಿಗೆ ದೊರೆಯುವ ಪುಟ್ಟ 2 ಡೋರ್ ಎಲೆಕ್ಟ್ರಿಕ್ ಕಾರದ ಎಂಜಿ ಕಾಮೆಟ್ ಬಗ್ಗೆ ತಿಳಿಯೋಣ. ಇದು ಚೀನಾದ ಮಾರುಕಟ್ಟೆಯಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಗಳಿಸಿರುವ ಎಂಜಿ ಏರ್ ಅಥವಾ ವುಲಿಂಗ್ ಏರ್ ಇವಿಯನ್ನು ಆಧರಿಸಿದ್ದು, ಮುಂದಿನ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ದೇಶದ ಸಣ್ಣ ರಸ್ತೆಗಳಲ್ಲಿ ಚಲಿಸುವಂತೆ ಈ ಕಾರನ್ನು ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ.

Tata, MG Electric Cars: ಕಡಿಮೆ ಬೆಲೆಯಲ್ಲಿ ಸಿಗಲಿವೆ ಟಾಟಾ, ಎಂಜಿ ಎಲೆಕ್ಟ್ರಿಕ್ ಕಾರುಗಳು.. ಅವೇ ನಂಬರ್ 01 ಪಕ್ಕಾ!

ಈ ನೂತನ ಎಂಜಿ ಕಾಮೆಟ್ ಕಾರಿನಲ್ಲಿ 20 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಳವಡಿಕೆ ಮಾಡಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 250-300 km ರೇಂಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಈ ಕಾರನ್ನು 'ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್' (GSEV) ಪ್ಲಾಟ್‌ಫಾರ್ಮ್‌ನಡಿ ಡಿಸೈನ್ ಮಾಡಲಾಗಿದ್ದು, ರೂ.15 ಲಕ್ಷದೊಳಗೆ ಖರೀದಿಗೆ ಸಿಗಲಿದ್ದು, ಸದ್ಯ, ಭಾರತದಲ್ಲಿ 2 ಡೋರ್ ಕಾರಿನ ವಿಭಾಗದಲ್ಲಿ ಕಾಮೆಟ್ ಯಾವುದೇ ಪ್ರತಿಸ್ಪರ್ಧಿ ಹೊಂದಿಲ್ಲ. ಆದರೂ ಬೆಲೆ ವಿಚಾರದಲ್ಲಿ ಸಿಟ್ರಸ್ ಇಸಿ3 ಪೈಪೋಟಿ ನೀಡಲಿದೆ.

ಎಂಜಿ ಕಂಪನಿ, ದೇಶೀಯ ಗ್ರಾಹಕರಿಗಾಗಿ ವರ್ಷಕ್ಕೆ ಸರಿ-ಸುಮಾರು 36,000 ಯುನಿಟ್ ಕಾಮೆಟ್ ಕಾರುಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿದೆ. ಈ ಕಾರು, FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, ಇರುವುದರಲ್ಲಿಯೇ ಭರಪೂರ ವೈಶಿಷ್ಟ್ಯಗಳನ್ನು ಪಡೆದಿದೆ. ಅವುಗಳಲ್ಲಿ 10.25-ಇಂಚಿನ ಡಿಸ್ಪ್ಲೇ, ಆಟೋಮೆಟಿಕ್ ಎಸಿ, ಕೀಲೆಸ್ ಎಂಟ್ರಿ, ಕನೆಕ್ಟ್ದ್ ಕಾರ್ ಟೆಕ್ ಹಾಗೂ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Tata, MG Electric Cars: ಕಡಿಮೆ ಬೆಲೆಯಲ್ಲಿ ಸಿಗಲಿವೆ ಟಾಟಾ, ಎಂಜಿ ಎಲೆಕ್ಟ್ರಿಕ್ ಕಾರುಗಳು.. ಅವೇ ನಂಬರ್ 01 ಪಕ್ಕಾ!

ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿ ಟಾಟಾ, ತನ್ನ ಬಹುನೀರಿಕ್ಷಿತ ಪಂಚ್ ಇವಿಯನ್ನು ಮುಂದಿನ ಕೆಲವು ತಿಂಗಳಲ್ಲಿ ಬಿಡುಗಡೆ ಮಾಡಲಿದೆ. ಇದು ಆಲ್ಟ್ರೊಜ್ ಹ್ಯಾಚ್‌ಬ್ಯಾಕ್‌ನಂತೆಯೇ ಆಲ್ಫಾ ಪ್ಲಾಟ್‌ಫಾರ್ಮ್ ಅನ್ನು ಹೊಂದಿರಲಿದ್ದು, ಟಾಟಾದ ಟಿಯಾಗೊ ಇವಿ ಪಡೆದಿರುವ ಜಿಪ್ಟ್ರಾನ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಲಿದೆ. ಜೊತೆಗೆ 90-100 hp ಪವರ್, 170-200 Nm ಪೀಕ್ ಟಾರ್ಕ್ ಉತ್ಪಾದಿಸಬಹುದು.

ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ICE ಚಾಲಿತ ಪಂಚ್ ಕಾರಿಗಿಂತ ವಿಭಿನ್ನವಾಗಿ ಕಾಣಲು ವಿನ್ಯಾಸದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಹೊಂದಿರಲಿದೆ. ಇದು ರೂ.10 ಲಕ್ಷದಿಂದ 14 ಲಕ್ಷದವರೆಗೆ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಬಿಡುಗಡೆಯಾದ ಮೇಲೆ ಭಾರತದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಿಗೆ ಕಾರಣವಾಗಬಹುದು. ಟಾಟಾ ಈಗಾಗಲೇ ಟಿಯಾಗೊ ಹಾಗೂ ನಿಕ್ಸನ್ ಇವಿಗಳನ್ನು ಮಾರಾಟ ಮಾಡುತ್ತಿದೆ.

ಇಂಧನ ಚಾಲಿತ ಪಂಚ್ ಕಾರಿನ ಮಾರಾಟದಲ್ಲಿ ಟಾಟಾ ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಿಸಿದೆ. 2021ರ ಅಕ್ಟೋಬರ್ ತಿಂಗಳಲ್ಲಿ ಲಾಂಚ್ ಆದ ಈ ಕಾರಿನ 1.75 ಲಕ್ಷ ಯುನಿಟ್‌ಗಳನ್ನು ಈವರೆಗೆ ಮಾರಾಟ ಮಾಡಿದೆ. ಪಂಚ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ರೂ.6 ಲಕ್ಷದಿಂದ ರೂ. 9.47 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

ಒಟ್ಟಾರೆಯಾಗಿ ಭಾರತದ ಮಾರುಕಟ್ಟೆಯಲ್ಲಿ 2022ರಲ್ಲಿ ಸುಮಾರು 10 ಲಕ್ಷ ಇವಿಗಳು ಸೇಲ್ ಆಗಿದ್ದು, ಮುಂಬರುವ ದಿನಗಳಲ್ಲಿ ಅದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಟೊಯೊಟಾ, ಹೋಂಡಾ, ನಿಸ್ಸಾನ್, ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರಾ ಮತ್ತು ರೆನಾಲ್ಟ್‌ ಕಂಪನಿಗಳು ಕೂಡ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ. ಇದೀಗ, ಕೆಲವೇ ತಿಂಗಳಲ್ಲಿ ಎಂಜಿ ಹಾಗೂ ಟಾಟಾದಿಂದ ಲಾಂಚ್ ಆಗಲಿರುವ ಎಲೆಕ್ಟ್ರಿಕ್ ಕಾರುಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Article Published On: Tuesday, March 28, 2023, 18:20 [IST]
English summary
Upcoming tata punch mg coment electrik car in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+