Citroen C3: ನವೀಕರಿಸಿದ 'ಸಿಟ್ರಸ್ ಸಿ3' ಆಕರ್ಷಕ ವೈಶಿಷ್ಟ್ಯದೊಂದಿಗೆ ಕಡಿಮೆ ಬೆಲೆಯಲ್ಲಿ ಬಿಡುಗಡೆ

ಪ್ರಮುಖ ಫ್ರೆಂಚ್ ವಾಹನ ತಯಾರಕ ಕಂಪನಿ 'ಸಿಟ್ರಸ್' ಭಾರತದಲ್ಲಿ ಅಗ್ಗದ ಬೆಲೆಯ ಕಾರುಗಳನ್ನು ಬಿಡುಗಡೆ ಮಾಡಿ, ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಸದ್ಯ, ನವೀಕರಿಸಿದ ಸಿ3 ಹ್ಯಾಚ್‌ಬ್ಯಾಕ್‌ನ ಟಾಪ್ ಎಂಡ್ ರೂಪಾಂತರ 'ಶೈನ್'ನ್ನು 13 ಹೊಸ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ರೂ.7.60 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಾಂಚ್ ಮಾಡಿದೆ.

ನವೀಕರಿಸಿದ ಸಿಟ್ರಸ್ ಸಿ3 (Citroen C3) ಶೈನ್ ರೂಪಾಂತರ ಯಾವೆಲ್ಲ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, ಎಲೆಕ್ಟ್ರಿಕಲಿ ಅಡ್ಜಸ್ಟ್ಏಬಲ್ ORVMs, ರೇರ್ ಪಾರ್ಕಿಂಗ್ ಕ್ಯಾಮೆರಾ, ಡೈ/ನೈಟ್ IRVM, 15 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಸ್, ಫಾಗ್ ಲೈಟ್ಸ್, ರೇರ್ ವೈಪರ್ & ವಾಷರ್, ರೇರ್ ಸ್ಕಿಡ್ ಪ್ಲೇಟ್ಸ್ ಜೊತೆಗೆ ರೇರ್ ಡಿಫೊಗರ್ ಅನ್ನು ಪಡೆದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ 35 ಫೀಚರ್ಸ್ ನೊಂದಿಗೆ ಕನೆಕ್ಟ್ದ್ ಕಾರ್ ಟೆಕ್ ಅನ್ನು ಹೊಂದಿದೆ.

Citroen C3: ನವೀಕರಿಸಿದ ಸಿಟ್ರಸ್ ಸಿ3 ಆಕರ್ಷಕ ವೈಶಿಷ್ಟ್ಯದೊಂದಿಗೆ ಕಡಿಮೆ ಬೆಲೆಯಲ್ಲಿ ಬಿಡುಗಡೆ

ಈ ಸಿಟ್ರಸ್ ಸಿ3 ಶೈನ್ ರೂಪಾಂತರದ ಎಂಜಿನ್ ಬಗ್ಗೆ ಹೇಳುವುದಾದರೆ, ಇದು 1.2 ಲೀಟರ್ 3 ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 82 hp ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.

ಭಾರತದ ಮಾರುಕಟ್ಟೆಯಲ್ಲಿ ಶೈನ್ ರೂಪಾಂತರ ಹೊರತುಪಡಿಸಿ, ಖರೀದಿಗೆ ದೊರೆಯುವ ಇತರೆ ಸಿಟ್ರಸ್ ಸಿ3 ಕಾರಿನ ಲೈವ್, ಫೀಲ್ ರೂಪಾಂತರಗಳ ಬಗ್ಗೆ ಮಾತನಾಡುವುದಾದರೆ, ಇವು ರೂ.6 - 7 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 6 ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗಲಿವೆ. ಜೊತೆಗೆ 19.44 - 19.8 kmpl ಮೈಲೇಜ್ ನೀಡಲಿವೆ. 1.2 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಹಾಗೂ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿವೆ.

ಸುರಕ್ಷತೆಯ ದೃಷ್ಟಿಯಿಂದ ಸಿಟ್ರಸ್ ಸಿ3 ಹ್ಯಾಚ್‌ಬ್ಯಾಕ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, ಇದು ಡುಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಫ್ರಂಟ್ ಸೀಟ್ ಬೆಲ್ಟ್ ರೀಮೆಂಡರ್, ರಿವರ್ಸ್ ಕ್ಯಾಮೆರಾ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಸಿಟ್ರಸ್ ಕಂಪನಿ ಜುಲೈ 2022ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ರೂ.5.71 ಲಕ್ಷ ಆರಂಭಿಕ ಬೆಲೆಯಲ್ಲಿ ಸಿ3 ಹ್ಯಾಚ್‌ಬ್ಯಾಕ್ ಬಿಡುಗಡೆ ಮಾಡಿತ್ತು. ಆದರೆ, ಗ್ರಾಹಕರಿಗೆ ಅಗತ್ಯವೆನಿಸುವ ರೇರ್ ವೈಪರ್ಸ್, ಡಿಫೊಗರ್, ರೇರ್ ಕ್ಯಾಮೆರಾ, ಎಲೆಕ್ಟ್ರಿಕಲಿ ಅಡ್ಜಸ್ಟ್ಏಬಲ್ ORVMಗಳನ್ನು ಹೊಂದಿರಲಿಲ್ಲ. ಪ್ರಸ್ತುತ ಲಾಂಚ್ ಆಗಿರುವ ನವೀಕರಿಸಿರುವ ಸಿಟ್ರಸ್ ಸಿ3 ಶೈನ್ ರೂಪಾಂತರ ಇವೆಲ್ಲ ಹೊಸ ಫೀಚರ್ಸ್ ಅನ್ನು ಹೊಂದಿದೆ.

ಭಾರತದ ಮಾರುಕಟ್ಟೆಯಲ್ಲಿ ಸಿಟ್ರಸ್ ಸಿ3 ಕಾರಿನ ಎಲೆಕ್ಟ್ರಿಕ್ ಆವೃತ್ತಿಯಾಗಿ ಇಸಿ3 ಹ್ಯಾಚ್‌ಬ್ಯಾಕ್ ರೂ.11.5 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 29.2 kWh ಬ್ಯಾಟರಿ ಪ್ಯಾಕ್, 57 hp ಗರಿಷ್ಠ ಪವರ್ ಹಾಗೂ 143 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಕೇವಲ 6.8 ಸೆಕೆಂಡುಗಳಲ್ಲಿ 0-60 kph ವೇಗವನ್ನು ಪಡೆಯಲಿದೆ, ಸಂಪೂರ್ಣ ಚಾರ್ಜಿನಲ್ಲಿ 320 km ರೇಂಜ್ ನೀಡಲಿದೆ.

ಸಿಟ್ರಸ್ ಸಿ3 ಹ್ಯಾಚ್‌ಬ್ಯಾಕ್ ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವ್ಯಾಗನ್ ಆರ್, ಸೆಲೆರಿಯೊ, ಟಾಟಾ ಟಿಯಾಗೊ. ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಸದ್ಯ, ನೂತನ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ಸಿಟ್ರಸ್ ಸಿ3 ಶೈನ್ ರೂಪಾಂತರ ಬಿಡುಗಡೆಯಾಗಿದ್ದು, ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

More from DriveSpark

Article Published On: Friday, April 14, 2023, 13:02 [IST]
English summary
Updated citroen c3 shine launched details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+