ದೇಶೀಯ ವಾಹನ ಕಂಪನಿಗಳ ಮೇಲೆ ಖಂಡಿತ ಗೌರವ ಹೆಚ್ಚಾಗುತ್ತೆ! ಇದನ್ನೊಮ್ಮೆ ಓದಿ

ಈಗಾಗಲೇ ವಿದೇಶಗಳಲ್ಲಿ ಮಹಿಳೆಯರು ತಮ್ಮ ಇಷ್ಟಕ್ಕೆ ಅನುಗುಣವಾಗಿ ಆಟೋ ರಂಗದಲ್ಲಿ ಕೆಲಸ ಮಾಡಬಹುದಾಗಿದೆ. ಹಾಗಯೇ ಈ ಹಿಂದೆ ಭಾರತದಲ್ಲಿ ಪುರುಷರಿಗಷ್ಟೇ ಸೀಮಿತವೆಂಬಂತಿದ್ದ ಆಟೋ ವಲಯದಲ್ಲಿ ಮಹಿಳೆಯರಿಗೆ ಅವಕಾಶವಿರಲಿಲ್ಲ. ಈಗ ಆ ಅಸಮಾನತೆಯನ್ನು ಪಕ್ಕಕ್ಕಿಟ್ಟು ಮಹಿಳೆಯರನ್ನು ಆಟೋ ವಲಯದಲ್ಲಿ ಬೆಳೆಯಲು ಹಾಗೂ ಪುರುಷರಷ್ಟೇ ಶಕ್ತಿವಂತರನ್ನಾಗಿ ಆಟೋ ಉದ್ಯಮ ಬೆಳೆಸುತ್ತಿದೆ.

ಮುಖ್ಯವಾಗಿ ದೇಶದ ಜನಪ್ರಿಯ ಬ್ರಾಂಡ್‌ಗಳಾದ ಟಾಟಾ ಮೋಟಾರ್ಸ್, ಅಶೋಕ್ ಲೇಲ್ಯಾಂಡ್, ಮಹೀಂದ್ರಾ & ಮಹೀಂದ್ರಾ ಮತ್ತು ಹೀರೋ ಮೋಟೋಕಾರ್ಪ್‌ನಂತಹ ಸ್ವದೇಶಿ ವಾಹನ ತಯಾರಕರು ಉದ್ಯೋಗಿಗಳ ವೈವಿಧ್ಯತೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಹೆಚ್ಚಿನ ಮಹಿಳೆಯರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಕಾಣುವ ಫೋಟೋಗಳೆಲ್ಲವು ಪ್ರಮುಖ ಕಾರು ಮತ್ತು ಬೈಕ್ ತಯಾರಕಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಮೆಕಾನಿಕ್‌ಗಳಾಗಿದ್ದಾರೆ.

women-workers-indian-auto-brands-mahindra-tata-hero

ಒಂದು ಕಾಲದಲ್ಲಿ ಈ ಉದ್ಯಮದಲ್ಲಿ ಹೊರಗಿನವರಾಗಿದ್ದ ಮಹಿಳೆಯರು ಈಗ ಕಾರ್ಖಾನೆಗಳಲ್ಲಿ ದ್ವಿಚಕ್ರ ವಾಹನಗಳು, SUVಗಳು ಮತ್ತು ಭಾರೀ ವಾಣಿಜ್ಯ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ನೀಡುತ್ತಿದ್ದಾರೆ. ಹಾಗಾದ್ರೆ ಈ ಪ್ರತಿ ಆಟೋ ಕಂಪನಿಗಳು ಎಷ್ಟು ಮಹಿಳಾ ಉದ್ಯೋಗಿಗಳನ್ನು ಹೊಂದಿದ್ದಾರೆ ಎಂಬ ಅಂದಾಜು ಲೆಕ್ಕಾಚಾರಗಳನ್ನು ಇಲ್ಲಿ ನೋಡೋಣ.

ವಾಣಿಜ್ಯ ವಾಹನ ತಯಾರಕ ಅಶೋಕ್ ಲೇಲ್ಯಾಂಡ್ ತನ್ನ ಏಳು ವಿಭಿನ್ನ ಉತ್ಪಾದನಾ ಘಟಕಗಳಲ್ಲಿ ಸುಮಾರು 991 ಮಹಿಳೆಯರನ್ನು ನೇಮಿಸಿಕೊಂಡಿದೆ. ಒಂದು ದಿನದಲ್ಲಿ ಪ್ರತಿ ಶಿಫ್ಟ್‌ಗೆ 120 ಎಂಜಿನ್‌ಗಳನ್ನು ಉತ್ಪಾದಿಸುವ ಲಘು ವಾಣಿಜ್ಯ ವಾಹನಗಳಿಗಾಗಿ 120 ಮಂದಿಯನ್ನು ಒಳಗೊಂಡಿರುವ ಸಂಪೂರ್ಣ ಮಹಿಳಾ ಅಸೆಂಬ್ಲಿ ಲೈನ್ ಹೊಸೂರಿನ ಸ್ಥಾವರದಲ್ಲಿ ತೊಡಗಿಸಿಕೊಂಡಿದೆ.

women-workers-indian-auto-brands-mahindra-tata-hero

ಟಾಟಾ ಮೋಟಾರ್ಸ್ ತನ್ನ ಪುಣೆ ಕಾರ್ಖಾನೆಯಲ್ಲಿ ಜನಪ್ರಿಯ SUV ಗಳಾದ ಹ್ಯಾರಿಯರ್ ಮತ್ತು ಸಫಾರಿಗಳನ್ನು ಉತ್ಪಾದಿಸುತ್ತಿದ್ದು, ಇಲ್ಲಿ 1,500 ಕ್ಕೂ ಹೆಚ್ಚು ಕಂಪನಿಯ ಮಹಿಳಾ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಟಾಟಾ ಮೋಟಾರ್ಸ್ ತನ್ನ ಆರು ಉತ್ಪಾದನಾ ಘಟಕಗಳಲ್ಲಿ 4,500 ಮಹಿಳೆಯರನ್ನು ನೇಮಿಸಿಕೊಂಡಿದೆ.

ಮಹೀಂದ್ರಾ ಕಂಪನಿಯು ತನ್ನ ಉತ್ಪಾದನಾ ಘಟಕಗಳಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಿಸಿಕೊಂಡು ಪ್ರಸ್ತುತ 1,202 ಕ್ಕೆ ತಲುಪಿದೆ. ಇವರೆಲ್ಲರು ವೆಲ್ಡಿಂಗ್‌ನಿಂದ ಹಿಡಿದು ವಾಹನ ಜೋಡಣೆ, ರೊಬೊಟಿಕ್ಸ್ ಲೋಡಿಂಗ್‌ವರೆಗೆ ಪ್ರಮುಖ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಂಪನಿಯು 25ಕ್ಕೂ ಹೆಚ್ಚು ಕೈಗಾರಿಕಾ ತರಬೇತಿ ಸಂಸ್ಥೆಗಳಿಂದ (ITIs) ನೇಮಕ ಮಾಡಿಕೊಳ್ಳುತ್ತದೆ, ಅವುಗಳಲ್ಲಿ ಕೆಲವು ಮಹಿಳೆಯರಿಗೆಂದೇ ITIಗಳಾಗಿವೆ.

women-workers-indian-auto-brands-mahindra-tata-hero

ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ 1,500ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಆಟೋಮೊಬೈಲ್ ಉದ್ಯಮದಲ್ಲಿ ಮಹಿಳಾ ತಂತ್ರಜ್ಞರು ಮತ್ತು ಇಂಜಿನಿಯರ್‌ಗಳ ಪರಿಕಲ್ಪನೆಯು ಒಂದು ಕಾಲದಲ್ಲಿ ದೂರದ ಕನಸಿನಂತೆ ತೋರುತ್ತಿತ್ತು, ಆದರೆ ಈಗ ನಿಜವಾಗಿದೆ. ಈ ಬಗ್ಗೆ ನಿಮ್ಮ ಅನ್ನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 3, 2023, 16:27 [IST]
English summary
Women workers indian auto brands mahindra tata hero
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+