ವಿಶ್ವದಲ್ಲೇ ಮೊದಲ ಸೋಡಿಯಂ ಐಯಾನ್ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಕಾರು ಅನಾವರಣ

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿ ಆರಂಭವಾಗಿದೆ. ಬಹುತೇಕರು ಇಂಧನ ಚಾಲಿತ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ಆದರೆ, ಇವುಗಳ ಬೆಲೆ ದುಬಾರಿಯಿದ್ದು, ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ, ಚೀನಾದ ಕಂಪನಿಯೊಂದು ದೊಡ್ಡ ಸಾಧನೆ ಮಾಡಿದೆ.

ಎಲೆಕ್ಟ್ರಿಕ್ ವೆಹಿಕಲ್ ಬ್ರ್ಯಾಂಡ್ ಆಗಿರುವ ಜಾಕ್ ಆಟೋ (JAC Auto) ಸೋಡಿಯಂ ಐಯಾನ್ ಬ್ಯಾಟರಿಯಿಂದ ಚಾಲಿತವಾಗಿರುವ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದೆ. ಇದನ್ನು ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಹೇರಳವಾಗಿ ಬಳಕೆ ಮಾಡುವ ಲಿಥಿಯಂ ಐಯಾನ್ ಬ್ಯಾಟರಿಗಳಿಗೆ ಪರ್ಯಾಯವೆಂದು ಹೇಳಲಾಗಿದೆ. ಈ ಸೋಡಿಯಂ ಐಯಾನ್ ಬ್ಯಾಟರಿಯನ್ನು ಬೀಜಿಂಗ್ ಮೂಲದ ಸ್ಟಾರ್ಟಪ್ ಹಿನಾ ಬ್ಯಾಟರಿ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದೆ ಎಂದು ವರದಿಯಾಗಿದೆ.

ವಿಶ್ವದಲ್ಲೇ ಮೊದಲ ಸೋಡಿಯಂ ಐಯಾನ್ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಕಾರು ಅನಾವರಣ: ವಿಶೇಷತೆಗಳೇನು?

ಈ ಸೋಡಿಯಂ ಐಯಾನ್ ಬ್ಯಾಟರಿಯ ದೊಡ್ಡ ಅನುಕೂಲವೆಂದರೆ, ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ಇಂಧನ ಚಾಲಿತ ವಾಹನಗಳಿಗೆ ಹೋಲಿಸಿದರೆ, ಇದು ಎಲೆಕ್ಟ್ರಿಕ್ ವಾಹನಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ನಿರ್ವಹಣಾ ವೆಚ್ಚವನ್ನು ಶೇಕಡ 10% ಕಡಿಮೆ ಮಾಡುತ್ತದೆ. ತಜ್ಞರ ಪ್ರಕಾರ, ಈ ಸೋಡಿಯಂ ಐಯಾನ್ ಬ್ಯಾಟರಿ ತಯರಿಕೆಯಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುವ ಕಚ್ಚಾ ವಸ್ತುಗಳನ್ನು ಬಳಕೆ ಮಾಡಲಾಗಿದೆ. ಸದ್ಯ, ಲಿಥಿಯಂ ಐಯಾನ್ ಬ್ಯಾಟರಿಯಲ್ಲಿ ಬಳಸುವ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗಿದೆ.

ಜಾಕ್ ಆಟೋ ಅನಾವರಣ ಮಾಡಿರುವ ಈ ಕಾರು, 25 kWh ಸಾಮರ್ಥ್ಯದ ಸೋಡಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 250 km ರೇಂಜ್ ನೀಡಲಿದೆ. 'ಕಳೆದ ವರ್ಷ ಲಿಥಿಯಂ ಐಯಾನ್ ಬ್ಯಾಟರಿ ತಯಾರಿಕೆಗೆ ಬಳಕೆ ಮಾಡುವ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾದ ಹಿನ್ನೆಲೆ, ಹಲವು ಕಂಪನಿಗಳಿಗೆ ಹೆಚ್ಚಿನ ಹೊರೆ ಬಿತ್ತು. ಪರಿಣಾಮ, ಬೇರೆ ಆಯ್ಕೆಯನ್ನು ಹುಡುಕುವಾಗ ಸೋಡಿಯಂ ಐಯಾನ್ ಬ್ಯಾಟರಿ ತಯಾರಿಸಲಾಯಿತು' ಎಂದು ಹಿನಾ (Hina) ಕಂಪನಿ ಹೇಳಿಕೊಂಡಿದೆ.

ಸೋಡಿಯಂ ಐಯಾನ್ ಬ್ಯಾಟರಿಗಳ ನಿರ್ವಹಣಾ ವೆಚ್ಚ ಕಡಿಮೆ ಇದ್ದು, ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ. ಅಲ್ಲದೆ, ಹೆಚ್ಚು ಸುರಕ್ಷಿತ ಎಂದು ಹೇಳಲಾಗಿದೆ. ಈ ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, ಕಡಿಮೆ ತಾಪಮಾನದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಚಾರ್ಜಿಂಗ್ ಕೂಡ ವೇಗವಾಗಿ ಆಗುವುದರಿಂದ ಲಿಥಿಯಂ ಐಯಾನ್ ಬ್ಯಾಟರಿಗಳಿಗೆ ಪರ್ಯಾಯ ಎಂದು ಹೇಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದೇ ಬ್ಯಾಟರಿ ಆಧಾರಿತ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಹಲವು ಕಂಪನಿಗಳು ಯೋಜಿಸುತ್ತಿವೆ.

ಜಮ್ಮು ಕಾಶ್ಮೀರಾದ ರಿಯಾಸಿ ಜಿಲ್ಲೆಯ ಸಲಾಲ್ - ಹೈಮಾನಾ ಎಂಬಲ್ಲಿ 59 ಲಕ್ಷ ಟನ್‌ ಲಿಥಿಯಂ ನಿಕ್ಷೇಪವಿರುವುದನ್ನು ಭೂಗರ್ಭಶಾಸ್ತ್ರ ಇಲಾಖೆ ಶೋಧಿಸಿದೆ. ಇದರಿಂದ ಲಿಥಿಯಂ ಐಯಾನ್ ಬ್ಯಾಟರಿ ತಯಾರಿಕೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಎಲ್ಲ ಕಂಪನಿಗಳ ವಾಹನಗಳಲ್ಲಿ ಲಿಥಿಯಂ ಬ್ಯಾಟರಿಯನ್ನೇ ಬಳಕೆ ಮಾಡಲಾಗುತ್ತಿದ್ದು, ಸೋಡಿಯಂ ಐಯಾನ್ ಬ್ಯಾಟರಿಗಳನ್ನು ನಮ್ಮಲ್ಲಿಯೂ ಆವಿಷ್ಕರಿಸುವ ಮೂಲಕ ಗ್ರಾಹಕರಿಗೆ ಕೊಂಚ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಗೆ ನೀಡಬಹುದು.

ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ನಿಧಾನವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿವೆ. ಅದರಲ್ಲಿ ಪ್ರಮುಖವಾಗಿ ಬಿವೈಡಿ, ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿಯನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದೆ. ಈಗಾಗಲೇ ಭಾರತ ಸೇರಿದಂತೆ ಬರೋಬ್ಬರಿ 40 ದೇಶಗಳಲ್ಲಿ ಕಾರ್ಯಚರಣೆ ನಡೆಸುತ್ತಿರುವ ಬಿವೈಡಿ, ಈ ವರ್ಷ ಸುಮಾರು 20 ಲಕ್ಷ ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲು ಯೋಜಿಸಿದೆ.

ಇನ್ನು, ಎಲೆಕ್ಟ್ರಿಕ್ ಕಾರು, ಹಾಗೂ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಭಾರತದ ಪ್ರಮುಖ ವಾಹನ ತಯಾರಕ ಕಂಪನಿಗಳೇನೂ ಹಿಂದೆ ಬಿದ್ದಿಲ್ಲ. ಟಾಟಾ ಅಗ್ಗದ ಬೆಲೆಯ ಟಿಯಾಗೊ ಇವಿಯನ್ನು ಮಾರಾಟ ಮಾಡುತ್ತಿದೆ. ಅಲ್ಲದೆ, ಮಹೀಂದ್ರಾ XUV400 ಎಲೆಕ್ಟ್ರಿಕ್ ಕಾರನ್ನು ಕೆಲವೇ ದಿನಗಳ ಹಿಂದೆ, ಬಿಡುಗಡೆ ಮಾಡಿತ್ತು. ಇದು ಉತ್ತಮ ಬುಕಿಂಗ್ ಪಡೆದುಕೊಂಡಿದೆ. ಜೊತೆಗೆ ಟಿವಿಎಸ್, ಬಜಾಜ್, ಓಲಾ, ಎಥರ್ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾಗಿವೆ.

Article Published On: Tuesday, February 28, 2023, 14:48 [IST]
English summary
Worlds first sodium lon battery powered electric vehicle ready details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+