ಮತ್ತೊಂದು ದುಬಾರಿ ಕಾರಿನಲ್ಲಿ ಕಾಣಿಸಿಕೊಂಡ Zomato CEO ದೀಪಿಂದರ್ ಗೋಯಲ್

Zomato CEO ಮತ್ತು ಸಂಸ್ಥಾಪಕ ದೀಪಿಂದರ್ ಗೋಯಲ್ ಅವರು ಹೊಚ್ಚಹೊಸ ಫೆರಾರಿ ರೋಮಾ ಸೂಪರ್‌ಕಾರ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಆ ವೇಳೆ ಅವರ ಕಾರಿನ ಫೋಟೋಗಳು ಸಖತ್ ವೈರಲ್ ಆಗಿದ್ದವು, ಇದೀಗ ಅವರ ಎರಡನೇ ದುಬಾರಿ ಬೆಲೆಯ ಪೋರ್ಷೆ 911 ಟರ್ಬೊ ಎಸ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಪೋರ್ಷೆ 911 ಟರ್ಬೊ ಎಸ್ ಬೆಲೆಯು ರೂ. 3.2 ಕೋಟಿ ಎಕ್ಸ್ ಶೋರೂಂ ಆಗಿದ್ದು, ಗುರುಗ್ರಾಮ್ ರಸ್ತೆಗಳಲ್ಲಿ ಕಾಣಿಸಿಕೊಂಡಿದೆ. ದೀಪಿಂದರ್ ಗೋಯಲ್ ಸುಮಾರು 6 ತಿಂಗಳ ಹಿಂದೆ ಪೋರ್ಷೆ 911 ಟರ್ಬೊ ಎಸ್ ಅನ್ನು ಖರೀದಿಸಿದ್ದರು. ಆದರೆ ಇಲ್ಲಿಯವರೆಗೆ ಈ ಕಾರನ್ನು ರಸ್ತೆಗಳಲ್ಲಿ ಗುರುತಿಸಲಾಗಿರಲಿಲ್ಲ. ಇದೀಗ ಗುರ್ತಿಸಿದ್ದು, ಈ ವೇಳೆ ತೆಗೆದ ಚಿತ್ರಗಳು ಕ್ರಯಾನ್- ಬಣ್ಣದ 911 ಟರ್ಬೊ ಎಸ್ ಅನ್ನು ವಿಶೇಷ ವಿನ್ಯಾಸದ ವೀಲ್‌ಗಳೊಂದಿಗೆ ಸಂಚರಿಸುತ್ತಿರುವುದನ್ನು ತೋರಿಸುತ್ತವೆ.

ಮತ್ತೊಂದು ದುಬಾರಿ ಕಾರಿನಲ್ಲಿ ಕಾಣಿಸಿಕೊಂಡ Zomato CEO ದೀಪಿಂದರ್ ಗೋಯಲ್

ಇದು ಸಾಮಾನ್ಯ ಪೋರ್ಷೆ 911 ಅಲ್ಲ. ಟರ್ಬೊ S ರೂಪಾಂತರವಾಗಿದ್ದು ಇದು ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಬರುತ್ತದೆ. ಗರಿಷ್ಠ 560 PS ಶಕ್ತಿಯನ್ನು ಉತ್ಪಾದಿಸುತ್ತದೆ, ಸ್ಪೋರ್ಟ್ ಕ್ರೊನೊ ಪ್ಯಾಕ್ ಸೇರಿದಂತೆ ಎಲ್ಲಾ ಐಚ್ಛಿಕ ಕಾರ್ಯಕ್ಷಮತೆಯ ಹೆಚ್ಚುವರಿಗಳನ್ನು ಪಡೆಯುತ್ತದೆ. ಈ ಸ್ಪೋರ್ಟ್ಸ್ ಕಾರ್ 20- ಸೆಕೆಂಡ್ ಬರ್ಸ್ಟ್‌ಗಾಗಿ 17.4 psi o 19.6 psi ನಿಂದ ಗರಿಷ್ಠ ಒತ್ತಡವನ್ನು ಹೊರಹಾಕುವ ಓವರ್-ಬೂಸ್ಟ್ ಕಾರ್ಯವನ್ನು ಸಹ ಮಾಡುತ್ತದೆ. ಇದು ಚಾಲಕನಿಗೆ ಅತ್ಯುತ್ತಮ ಅನುಭವವನ್ನು ನೀಡುತ್ತದೆ.

ಈ 20 ಸೆಕೆಂಡ್‌ಗಳ ಓವರ್-ಬೂಸ್ಟ್ ಸಮಯದಲ್ಲಿ, ಎಂಜಿನ್ 700 Nm ನಿಂದ ಬೃಹತ್ 750 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಆಟೋ ಸ್ಟಾರ್ಟ್/ ಸ್ಟಾಪ್ ವೈಶಿಷ್ಟ್ಯದೊಂದಿಗೆ 7- ಸ್ಪೀಡ್ ಡ್ಯುಯಲ್- ಕ್ಲಚ್ PDK ಟ್ರಾನ್ಸ್‌ಮಿಷನ್ ಮಾತ್ರ ಹೊಂದಿದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಕಾರು ಕೇವಲ 3.1 ಸೆಕೆಂಡುಗಳಲ್ಲಿ 0- 100 ಕಿ.ಮೀ ವೇಗವನ್ನು ತಲುಪುತ್ತದೆ. ಇದು ಗರಿಷ್ಠ 318 ಕಿ.ಮೀ ವೇಗವನ್ನು ತಲುಪಬಲ್ಲದು.

ಮತ್ತೊಂದು ದುಬಾರಿ ಕಾರಿನಲ್ಲಿ ಕಾಣಿಸಿಕೊಂಡ Zomato CEO ದೀಪಿಂದರ್ ಗೋಯಲ್

ಕಾರು 20- ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಹಬ್ ವೀಲ್ ಲಾಕ್‌ಗಳನ್ನು ಸಹ ಹೊಂದಿದೆ. ಟರ್ಬೊ S ರೂಪಾಂತರವನ್ನು ನಾಲ್ಕು-ಪಾಯಿಂಟ್ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ಪೂರ್ಣ LED ಹೆಡ್‌ಲ್ಯಾಂಪ್‌ಗಳೊಂದಿಗೆ ಬರುತ್ತದೆ. ಇದು ಕ್ಯಾಮರಾ-ಆಧಾರಿತ ಮುಖ್ಯ ನಿಯಂತ್ರಣ ವ್ಯವಸ್ಥೆಯನ್ನು ಸಹ ಹೊಂದಿದೆ. ಹೆಚ್ಚಿನ ವೇಗದಲ್ಲಿ, ಹಿಂಭಾಗದ ಸ್ಪಾಯ್ಲರ್ ಅನ್ನು ನಿಯೋಜಿಸುವ ಮೂಲಕ ಕಾರು ಹೆಚ್ಚು ಡೌನ್‌ಫೋರ್ಸ್ ಅನ್ನು ರಚಿಸುತ್ತದೆ. ಇದು ಮೂರು-ಹಂತದ ಸ್ಪಾಯ್ಲರ್ ಆಗಿದ್ದು, ಕಾರಿನ ವೇಗವನ್ನು ಅವಲಂಭಿಸಿ ಮೂರು ಸ್ಥಾನಗಳಲ್ಲಿರಬಹುದು.

ಇತ್ತೀಚೆಗೆ ಫೆರಾರಿ ರೋಮಾ ಸೂಪರ್ ಕಾರಿನಲ್ಲಿ ಕಾಣಿಸಿಕೊಂಡಿದ್ದರು:
ಇತ್ತೀಚೆಗೆ ಅವರು 4.3 ಕೋಟಿ ರೂ. ಮೌಲ್ಯದ ಹೊಚ್ಚಹೊಸ ಫೆರಾರಿ ರೋಮಾದಲ್ಲಿ ಪ್ರಯಾಣಿಸುತ್ತಾ ಕಾಣಿಸಿಕೊಂಡಿದ್ದರು. ಅವರ ಹೊಸ ಫೆರಾರಿಯು ಹರಿಯಾಣದ ಗುರುಗ್ರಾಮ್‌ನಲ್ಲಿ ಝೊಮಾಟೊ ಪ್ರಧಾನ ಕಛೇರಿ ಇರುವ ರಸ್ತೆಗಳಲ್ಲಿ ಕಂಡುಬಂದಿದೆ. ಫೆರಾರಿ ರೋಮಾ ಝೊಮಾಟೊ ಬಣ್ಣದಂತೆಯೇ ಕೆಂಪು ಬಣ್ಣದಲ್ಲಿದೆ. ಈ ಕಾರನ್ನು 2021 ರಲ್ಲಿ ಫೆರಾರಿ ಕಂಪನಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಹೊಸ ಫೆರಾರಿ ರೋಮಾ ಮಾದರಿಯ ಕೆಲವೇ ಘಟಕಗಳಿವೆ.

ಮತ್ತೊಂದು ದುಬಾರಿ ಕಾರಿನಲ್ಲಿ ಕಾಣಿಸಿಕೊಂಡ Zomato CEO ದೀಪಿಂದರ್ ಗೋಯಲ್

ಇದರ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ ಸೆಂಟರ್ ಕನ್ಸೋಲ್‌ನಲ್ಲಿ 8.4 ಇಂಚಿನ ಟ್ಯಾಬ್ಲೆಟ್ ಶೈಲಿಯ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದೆ. ಕಾರು 16 ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕೆಪ್ಯಾಸಿಟಿವ್ ಬಟನ್‌ಗಳೊಂದಿಗೆ ಹೊಸ ಸ್ಟೀರಿಂಗ್ ವೀಲ್‌ನೊಂದಿಗೆ ಬರುತ್ತದೆ. ರೋಮಾ 3.9 ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್ V8 ಎಂಜಿನ್‌ನಿಂದ ಪವರ್ ಪಡೆಯುತ್ತದೆ. ಇದು ಗರಿಷ್ಠ 690 ಪಿಎಸ್ ಪವರ್ ಮತ್ತು 760 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಹೊಸ ಫೆರಾರಿ ರೋಮಾ ಕಾರಿನ ವಿನ್ಯಾಸದ ಕುರಿತು ಹೇಳುವುದಾದರೆ, ಇಂಟಿಗ್ರೇಟೆಡ್ ಡಿಆರ್‌ಎಲ್‌ಗಳು ಮತ್ತು ನಾಲ್ಕು ಟೈಲ್ ಲ್ಯಾಂಪ್‌ಗಳೊಂದಿಗೆ ಸ್ಲಿಮ್ ಆಲ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಇದು ಕ್ವಾಡ್ ಎಕ್ಸಾಸ್ಟ್ ಸೆಟಪ್ ಮತ್ತು ಎಲೆಕ್ಟ್ರಾನಿಕ್ ಕಂಟ್ರೋಲ್ ಸ್ಪಾಯ್ಲರ್‌ನೊಂದಿಗೆ ಬರುತ್ತದೆ. ಹೊಸ ಫೆರಾರಿ ರೋಮಾದ ಕ್ಯಾಬಿನ್ ಸಹ ಹಳೆಯ ಫೆರಾರಿಗಳಿಗೆ ಹೋಲಿಸಿದರೆ ಸಂಪೂರ್ಣವಾಗಿ ವಿಭಿನ್ನವಾಗಿದೆ. ಚಾಲಕ ಮತ್ತು ಸಹ-ಚಾಲಕನಿಗಾಗಿ ಇದರಲ್ಲಿ ಎರಡು ಪ್ರತ್ಯೇಕ ಸೆಲ್‌ಗಳನ್ನು ನೋಡಬಹುದು.

More from DriveSpark

Article Published On: Sunday, March 5, 2023, 12:00 [IST]
English summary
Zomato ceo deepinder goyal was spotted in another expensive car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+