Acer Faster Awards 2024: ಸಮಾರಂಭಕ್ಕೆ ಅದ್ದೂರಿ ತೆರೆ.. ವರ್ಷದ ಅತ್ಯುತ್ತಮ ಕಾರು, ಬೈಕ್ ಯಾವುದು ಗೊತ್ತಾ?
ದೇಶದ ಆಟೋಮೋಟಿವ್ ಮಾಧ್ಯಮಗಳ ಸಂಘಟನೆ 'ಫಾಸ್ಟರ್' ಜನಪ್ರಿಯ ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ನೀಡುವ ಏಸರ್ ಫಾಸ್ಟರ್ ಪ್ರಶಸ್ತಿ (Acer Faster Awards 2024) ಸಮಾರಂಭ ಗುರುವಾರ ನವದೆಹಲಿಯಲ್ಲಿ ನಡೆಯಿತು. ವರ್ಷದ ಬೈಕ್ ಪ್ರಶಸ್ತಿಯನ್ನು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಪಡೆದರೆ, ವರ್ಷದ ಕಾರೆಂಬ ಗೌರವಕ್ಕೆ ಹ್ಯುಂಡೈ ವೆರ್ನಾ ಪಾತ್ರವಾಯಿತು.
ಫಾಸ್ಟರ್ ಪ್ರಶಸ್ತಿಯನ್ನು ವಿವಿಧ ವಿಭಾಗಗಳಲ್ಲಿ ನೀಡಲಾಗುತ್ತದೆ. ಪ್ರಮುಖವಾಗಿ 2023ರ ಅತ್ಯುತ್ತಮ ನಾಲ್ಕು ಚಕ್ರದ ವಾಹನ, ದ್ವಿಚಕ್ರ ವಾಹನ, ಸಾರ್ವಜನಿಕ ಸಂಪರ್ಕ ಸಂಸ್ಥೆ ಮತ್ತು ಆಟೋಮೋಟಿವ್ ಕ್ಷೇತ್ರದ ಖ್ಯಾತ ನಾಮರನ್ನು ಒಳಗೊಂಡಿರುತ್ತದೆ. ಫಾಸ್ಟರ್ ಸಂಘಟನೆಯಲ್ಲಿ ನಮ್ಮ 'ಡ್ರೈವ್ ಸ್ಪಾರ್ಕ್' ಕೂಡ ಭಾಗವಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಈ ಬಾರಿಯೂ ಕಾರ್ಯಕ್ರಮವನ್ನು ಪ್ರಖ್ಯಾತ ನಿರೂಪಕ ಎಮ್ಸೆಸ್ ರವಿನ್ ಕುಂದು ನಡೆಸಿಕೊಟ್ಟರು.

2024ರ ಏಸರ್ ಫಾಸ್ಟರ್ ಪ್ರಶಸ್ತಿ ಪಟ್ಟಿ ಇಲ್ಲಿದೆ
* ವರ್ಷದ ಕಾರು: ಹ್ಯುಂಡೈ ವೆರ್ನಾ
* ವರ್ಷದ ಬೈಕ್: ರಾಯಲ್ ಎನ್‌ಫೀಲ್ಡ್ ಹಿಮಾಲಯನ್
* ವರ್ಷದ ಪ್ರೀಮಿಯಂ ಕಾರು: ಮರ್ಸಿಡಿಸ್-ಬೆಂಜ್ ಜಿಎಲ್‍ಸಿ
* ವರ್ಷದ ಪ್ರೀಮಿಯಂ ಬೈಕ್: ರಾಯಲ್ ಎನ್‌ಫೀಲ್ಡ್ ಮೆಟಿಯರ್ 650
* ವರ್ಷದ ಸ್ಕೂಟರ್: ಹೀರೋ ಜೂಮ್
* ವರ್ಷದ ಇವಿ (4 ವೀಲರ್ - ನಾಲ್ಕು ಚಕ್ರದ ವಾಹನ): ಹ್ಯುಂಡೈ ಐಯೋನಿಕ್ 5
* ವರ್ಷದ ಇವಿ (2 ವೀಲರ್ - ದ್ವಿಚಕ್ರ ವಾಹನ): ರಿವರ್ ಇಂಡೀ
* ವರ್ಷದ ನವೀಕರಣ (Update of the Year): ಕಿಯಾ ಸೆಲ್ಟೋಸ್
* ವರ್ಷದ ಆಟೋ ಟೆಕ್: ಟಿವಿಎಸ್ ಅಪಾಚೆ ಆರ್‌ಟಿಆರ್ 310ನಲ್ಲಿ ಕೂಲ್ಡ್ & ಹೀಟೆಡ್ ಸೀಟ್ಸ್
* ವರ್ಷದ ಅತ್ಯುತ್ತಮ ಉದ್ಯಮದ ವ್ಯಕ್ತಿ (Industry Personality of the Year): ಸಿ.ವಿ.ರಾಮನ್ (ಸಿಟಿಒ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್)
* ವರ್ಷದ ಅತ್ಯುತ್ತಮ ಸಂವಹನ ವ್ಯಕ್ತಿ (Communications Personality of the Year): ಸಂಜೀವ್ ಹಂಡಾ (ಹಿರಿಯ ಉಪಾಧ್ಯಕ್ಷ - ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನಲ್ಲಿ ಪಿಆರ್ & ಕಮ್ಯುನಿಕೇಷನ್ಸ್)
* ವರ್ಷದ ಅತ್ಯುತ್ತಮ ಮೋಟಾರ್ ಕ್ರೀಡಾ ಸ್ಪರ್ಧಿ (Motorsport Personality of the Year): ಹರಿತ್ ನೋಹ್ (ಟಿವಿಎಸ್ ಮೋಟಾರ್ ಕಂಪನಿಗಾಗಿ ಮೋಟಾರ್‌ಸ್ಪೋರ್ಟ್ ಅಥ್ಲೀಟ್)
* ಗೌರವ ಪ್ರಶಸ್ತಿ (Award of Honour): ಮನೀಶ್ ಟಂಡನ್ (ವಿಭಾಗೀಯ ವ್ಯವಸ್ಥಾಪಕ - ಗ್ರಾಹಕರ ಒಳನೋಟ & ಉತ್ಪನ್ನ ನಿರ್ವಹಣೆ ಬಜಾಜ್ ಆಟೋ ಲಿಮಿಟೆಡ್)
* ವರ್ಷದ ಸಿಎಸ್ಆರ್ (ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ) ಪ್ರಶಸ್ತಿ: ಎಂಜಿ ಸೇವಾ
* ವರ್ಷದ ಕಾರ್ಪೊರೇಟ್ ಸಂವಹನ ತಂಡ (Corporate Communications Team of the Year): ಕಿಯಾ ಇಂಡಿಯಾ
* ವರ್ಷದ ಪಿಆರ್ (ಸಾರ್ವಜನಿಕ ಸಂಪರ್ಕ) ತಂಡ: ಫ್ಲಿಶ್‌ಮನ್ ಹಿಲಾರ್ಡ್
* ವರ್ಷದ ಅತ್ಯುತ್ತಮ ಪಿಆರ್ ವ್ಯಕ್ತಿ: ಸಾಹಿರ್ ಸೇಠ್ (ಆಡ್ಫಾಕ್ಟರ್ಸ್ ಪಿಆರ್)
* ವರ್ಷದ ಅತ್ಯುತ್ತಮ ಸ್ವಯಂ ಜಾಹೀರಾತು ಪ್ರಚಾರ (Auto Ad Campaign of the Year): ಮಾರುತಿ ಸುಜುಕಿ ಜಿಮ್ನಿ.

ವಿಶ್ವದಾದ್ಯಂತ 250 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಓದುಗರನ್ನು ತಲುಪುವ ಮಾಧ್ಯಮ ಸಂಸ್ಥೆಗಳ ಅನುಭವಿ ಆಟೋಮೋಟಿವ್ ಪತ್ರಕರ್ತರ ತಂಡ 2024ರ ಏಸರ್ ಫಾಸ್ಟರ್ ಪ್ರಶಸ್ತಿಯ ಮೂರನೇ ಆವೃತ್ತಿಗೆ ವಿಜೇತ ಪಟ್ಟಿಯನ್ನು ಅಂತಿಮಗೊಳಿಸಿತ್ತು. ಅದಕ್ಕಾಗಿ ಗುರುಗ್ರಾಮ್‌ನಲ್ಲಿ ಫೆಬ್ರವರಿ 8, 9 2024ರಂದು ತೀರ್ಪುಗಾರರು ಹಲವು ಹಂತಗಳಲ್ಲಿ ವಿಶ್ಲೇಷಿಸಿ ಮತ್ತು ಚರ್ಚೆಗಳನ್ನು ನಡೆಸಿ ಒಮ್ಮತದಿಂದ ಪ್ರಶಸ್ತಿ ಪಟ್ಟಿಯನ್ನು ತಯಾರಿಸಿದ್ದರು.

ತೀರ್ಪುಗಾರರ ಪಟ್ಟಿ
* ಅಮಿತ್ ಚಂಗನಿ - ಮೋಟಾರುಡ್ಸ್
* ನರೇನ್ ಶರ್ಮಾ - ಗೇರ್‌ಫ್ಲೈಕ್
* ರೋಹಿತ್ ಖುರಾನಾ - ಕಾರ್ಬ್ಲಾಗ್ ಇಂಡಿಯಾ
* ಗೌರವ್ ಯಾದವ್ - ಗಾಡಿವಾಡಿ
* ರೋಶನ್ ಜೋಸೆಫ್ - ಪೈಲಟ್ ಆನ್ ವೀಲ್ಸ್
* ಪ್ರಮೀತ್ ಘೋಷ್ - ಡ್ರೈವ್ ಸ್ಪಾರ್ಕ್
* ಆಯುಷ್ - ಇಂಡಿಯನ್ ಟಾರ್ಕ್

ಕಾರ್ಯಕ್ರಮದ ಬಗ್ಗೆ ಮೋಟಾರುಡ್ಸ್ ಸಂಪಾದಕ, ಫಾಸ್ಟರ್ ಸಂಘಟನೆ ಅಧ್ಯಕ್ಷ ಅಮಿತ್ ಚಂಗಾನಿ ಹಾಗೂ ಗೇರ್‌ಫ್ಲೈಕ್ ಸಂಪಾಕದಕ, ಫಾಸ್ಟರ್ ಕಾರ್ಯದರ್ಶಿ ನರೇಂದ್ರ ಶರ್ಮಾ ಅವರು ಮಾತನಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಈ ಫಾಸ್ಟರ್ ಪ್ರಶಸ್ತಿ ಸಮಾರಂಭಕ್ಕೆ ಪ್ರಮುಖ ಲ್ಯಾಪ್‌ಟಾಪ್ ತಯಾರಕ ಕಂಪನಿ 'ಏಸರ್' ಪ್ರಾಯೋಜಕತ್ವ ವಹಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








