'ಬೆಂಗಳೂರಿನ ರೌಡಿ' ರಂಗಣ್ಣ ಪಾತ್ರದಲ್ಲಿ ಧೂಳೆಬ್ಬಿಸಿದ ನಟ ಫಹಾದ್ ಫಾಸಿಲ್ ಮನೆಗೆ ಬಂತು ಹೊಸ ಅತಿಥಿ
ಫಹಾದ್ ಫಾಸಿಲ್ (Fahadh Faasil) ಸದ್ಯ ಸೌತ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿರುವ ಜನಪ್ರಿಯ ನಟರಲ್ಲಿ ಒಬ್ಬರು. ಸಾಧಾರಣ ಪ್ರಾದೇಶಿಕ ಸಿನಿಮಾ ನಾಯಕನಾಗಿ ಅಭಿಯನ ರಂಗಕ್ಕೆ ಕಾಲಿಟ್ಟ ಫಹಾದ್'ಗೆ ಈಗ ಕಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲೆಡೆಯಿಂದ ಉತ್ತಮ ಆಫರ್ಗಳು ಬರುತ್ತಿವೆ. ನಟ ಫಹಾದ್ ಫಾಸಿಲ್ ಪತ್ನಿ ನಜ್ರಿಯಾ ಕೂಡ ಜನಪ್ರಿಯ ದಕ್ಷಿಣ ಭಾರತದ ನಟಿ. ಫಹಾದ್ ಫಾಸಿಲ್ ದಕ್ಷಿಣ ಭಾರತದಲ್ಲಿ ವಿಲನ್ ಪಾತ್ರ ಮತ್ತು ಪಾತ್ರಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಕಾರು ಪ್ರೇಮಿ ಎಂದೇ ಖ್ಯಾತಿಯಾಗಿರುವ ಈ ನಟನ ಗ್ಯಾರೇಜ್ ನಲ್ಲಿ ಸೂಪರ್ ಕಾರುಗಳಿಂದ ತುಂಬಿದೆ.
ನಟ ಫಹಾದ್ ಫಾಸಿಲ್ ಅವರ ಬಳಿ ಲ್ಯಾಂಡ್ ರೋವರ್ ಡಿಫೆಂಡರ್, ಲಂಬೋರ್ಗಿನಿ ಉರುಸ್, ಪೋರ್ಷೆ 911 ಕ್ಯಾರೆರಾ ಎಸ್, ಟೊಯೊಟಾ ವೆಲ್‌ಫೈರ್ ಮತ್ತು ಬಿಎಂಡಬ್ಲ್ಯು 740ಐ ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇದೀಗ ಅವರ ಗ್ಯಾರೇಜ್‌ಗೆ ಮರ್ಸಿಡಿಸ್ G63 AMG ಎಸ್‍ಯುವಿ ಹೊಸ ಸೇರ್ಪಡೆಯಾಗಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ಸುಮಾರು 3.6 ಕೋಟಿ ರೂ. ಆಗಿದ್ದಾರೆ.

ನಟ ಫಹಾದ್ ಫಾಸಿಲ್ ಬಗ್ಗೆ ಹೇಳುವುದಾದರೆ, ಇವರು ಚಾಕ್ಲೆಟ್ ಹೀರೋ ಆಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಆದರೂ ನಟನ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನು ಆಗಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಫಹಾದ್ಗೆ ಅತ್ಯುತ್ತಮ ಸಿನಿಮಾ ಆಫರ್ಗಳು ಬರುತ್ತಿವೆ. ಬಹಳ ಸ್ಪೆಷಲ್ ಎನ್ನುವ ಪಾತ್ರಗಳನ್ನು ಮಾಡಿ ನಟ ಈಗ ಸೌತ್ ಮತ್ತು ನಾರ್ತ್ ನಲ್ಲಿಯೂ ಪ್ರಸಿದ್ಧಿ ಗಳಿಸುತ್ತಿದ್ದಾರೆ.
ತೆಲುಗಿನ ಪುಷ್ಪ ಸಿನಿಮಾ ಹಾಗೂ ಕಾಲಿವುಡ್ನ ವಿಕ್ರಮ್ ಸಿನಿಮಾದಲ್ಲಂತೂ ಫಹಾದ್ ನಟನೆಗೆ ಸಾಟಿಯೇ ಇಲ್ಲ. ಮೊದಲು ಬೆಂಗಳೂರು ಡೇಸ್ ಸಿನಿಮಾ ಬರುವ ತನಕ ಬಹಳಷ್ಟು ಜನರಿಗೆ ಫಹಾದ್ ಪರಿಚಯವೇ ಇರಲಿಲ್ಲ. ಆದರೆ ಆ ಸಿನಿಮಾದಿಂದ ನಟನ ಎರಡನೇ ಇನ್ನಿಂಗ್ಸ್ ಶುರುವಾಯ್ತು. ನಂತರದಲ್ಲಿ ಜೋಜಿ, ಕುಂಬಳಂಗಿ ನೈಟ್ಸ್, ಸಿ ಯೂ ಸೂನ್, ತೊಂಡಿಮುದಲುಂ ದೃಕ್ಷಾಕ್ಷಿಯುಂ ಸೇರಿ ಹಲವು ಸಿನಿಮಾಗಳ ಮೂಲಕ ಫಹಾದ್ ಹೆಚ್ಚಿನ ಜನಪ್ರಿಯತೆ ಗಳಿಸಿದರು.

ಜನಪ್ರಿಯ ನಟ ಫಹಾದ್ ಫಾಸಿಲ್ ಖರೀದಿಸಿದ ಮರ್ಸಿಡಿಸ್ G63 AMG ಕಾರಿನ ಬಗ್ಗೆ ಹೇಳುವುದಾದರೆ, ಇದು ಬೆಂಝ್ ಸರಣಿಯಲ್ಲಿನ ಅತ್ಯಂತ ಶಕ್ತಿಶಾಲಿ ಎಸ್‍ಯುವಿಯಾಗಿದೆ. ಫಹಾದ್-ನಸ್ರಿಯಾ ದಂಪತಿಗಳು ಐಷಾರಾಮಿ ಎಸ್‌ಯುವಿಯ ರುಬೆಲ್ಲೈಟ್ ರೆಡ್ ಮೆಟಾಲಿಕ್ ಬಣ್ಣದ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ. ಇವರು ಹೊಸ ಕಾರಿನಲ್ಲಿ ಪ್ರಯಾಣಿಸುವ ವೀಡಿಯೋ ವೈರಲ್ ಆಗಿದೆ.
ಈ ಮರ್ಸಿಡಿಸ್ G63 AMG ಎಸ್‍ಯುವಿಯಲ್ಲಿ 4.0 ಲೀಟರ್ V8 ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 585 bhp ಪವರ್ ಮತ್ತು 850 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ AMG ಸ್ಪೀಡ್‌ಶಿಫ್ಟ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.
ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಈ ಮರ್ಸಿಡಿಸ್ G63 AMG ಎಸ್‍ಯುವಿಯು 4.5 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಮರ್ಸಿಡಿಸ್ G63 AMG ಎಸ್‍ಯುವಿಯಲ್ಲಿ 4MATIC ತಂತ್ರಜ್ಞಾನವು ಕಾರಿನ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








