Affordable car: ಬೈಕ್ ಬೆಲೆಗೆ ಕಾರು... ಎಲ್ಲರೂ ಖರೀದಿಸಬಹುದು: 33 ಕಿ.ಮೀ ಮೈಲೇಜ್!
Affordable car: ಭಾರತದಲ್ಲಿ ಈಗ ಪ್ರತಿ ಮಧ್ಯಮ ವರ್ಗದವರು ಕೂಡ ಕಾರು ಖರೀದಿಸುವ ಸಾಮರ್ಥ್ಯವಿದೆ. ಆದ್ರೆ ತುಂಬಾ ಜನ ಬೆಲೆ ಹೆಚ್ಚು, ನಿರ್ವಣೆಗೆ ಸುಸ್ತಾಗುತ್ತೇವೆ ಎಂದು ಯೋಚಿಸುತ್ತಾರೆ. ನಿಜಕ್ಕೆ ಇದು ತಪ್ಪು ಕಲ್ಪನೆ, ಕೆಲ ಬ್ರಾಂಡ್‌ಗಳು ಅಗ್ಗದ ಬೆಲೆ, ಉತ್ತಮ ಮೈಲೇಜ್, ಕಡಿಮೆ ನಿರ್ವಣೆಯ ಕಾರುಗಳನ್ನು ಒದಗಿಸುತ್ತಿವೆ.
ಬಿಸಿಲು ಅಥವಾ ಮಳೆ ಇದ್ದರೆ, ಬೈಕಿನಲ್ಲಿ ಓಡಾಡುವುದು ತುಂಬಾ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ, ಕಾರು ಉಪಯುಕ್ತವಾಗಿರುತ್ತದೆ. ಸದ್ಯ ಬೇಸಿಗೆಯ ಟ್ರಾಫಿಕ್ ಪರಿಸ್ಥಿತಿಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸಲು ಪರದಾಡುತ್ತಿರುವವರಿಗಾಗಿ ನಾವು ಕಡಿಮೆ ಬೆಲೆಯೊಂದಿಗೆ ಬೈಕ್‌ನಷ್ಟೇ ಮೈಲೇಜ್ ನೀಡುವ ಕಾರೊಂದನ್ನು ಇಲ್ಲಿ ಪರಿಚಯಿಸಿದ್ದೇವೆ.

ಪ್ರತಿಯೊಬ್ಬರೂ ಕಾರು ಖರೀದಿಸಬಹುದಾದ ಬೆಲೆ, ಅಂದರೆ ಇದು 5 ಲಕ್ಷಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದ್ದು ನೀವು ಕಾರನ್ನು ಸುಲಭ ಕಂತುಗಳಲ್ಲಿಯೂ ಖರೀದಿಸಬಹುದು. ಇಲ್ಲಿ ನಾವು ನಿಮಗೆ ಮಾರುತಿ ಸುಜುಕಿ ಆಲ್ಟೋ ಕೆ 10 (Maruti Suzuki Alto K10) ಬಗ್ಗೆ ಹೇಳುತ್ತಿದ್ದೇವೆ. ಈ ಕಾರಿನ ಮೂಲ ಮಾದರಿಯ ಆನ್ - ರೋಡ್ ಬೆಲೆಯು ರೂ. 4.50 ಲಕ್ಷಗಳಾಗಿದೆ. ನೀವು ಅದರ ಮೂಲ ಮಾದರಿಯಲ್ಲಿ ಅಗತ್ಯ ವೈಶಿಷ್ಟ್ಯಗಳನ್ನು ಸಹ ಪಡೆಯಬಹುದು.
ಇತ್ತೀಚಿನ ದಿನಗಳಲ್ಲಿ ಬೈಕುಗಳು ಸಹ ತುಂಬಾ ದುಬಾರಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ಈ ಕಾರನ್ನು ಖರೀದಿಸಲು ನೀವು ಬೈಕಿನಂತೆಯೇ ಇಎಂಐ ಆಯ್ಕೆ ಕೂಡ ಪಡೆಯಬಹುದು. ಇದಕ್ಕಾಗಿ, ನೀವು ಡೌನ್ ಪೇಮೆಂಟ್ ಆಗಿ ಸ್ವಲ್ಪ ಹಣವನ್ನು ಪಾವತಿಸಬೇಕಾಗುತ್ತದೆ. ಈ ಕಾರಿಗೆ ನೀವು 1.35 ಲಕ್ಷ ರೂ. ಗಳನ್ನು ಡೌನ್ ಪೇಮೆಂಟ್ ಆಗಿ ಪಾವತಿಸಿದರೆ ಸಾಕು.

ಶೇಕಡಾ 9 ರಷ್ಟು ಬಡ್ಡಿದರದಲ್ಲಿ, ಈ ಕಾರಿನ ಕಂತು ಸುಮಾರು 5,000 ರೂ. ಆಗಿ ಪ್ರತಿ ತಿಂಗಳು ಪಾವತಿಸಬೇಕಾಗುತ್ತದೆ. ಅಂದರೆ, ನೀವು ಈ ಕಂತನ್ನು ಸುಲಭವಾಗಿ ಭರ್ತಿ ಮಾಡಬಹುದು. ಸದ್ಯ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಅವರ ಟಾಪ್ ಬೈಕ್ ಮಾಡಲ್‌ಗಳಾದ ಕಾಂಟಿನೆಂಟಲ್ ಜಿಟಿ ಹಾಗೂ ಇಂಟರ್ ಸೆಪ್ಟರ್ ಬೈಕ್‌ಗಳ ಆನ್‌ರೋಡ್ ಬೆಲೆಯೇ ಸುಮಾರು 4 ಲಕ್ಷವಿದೆ.
ಹೆಚ್ಚು ಕಡಿಮೆ ಇದೆ ಬೆಲೆಗೆ ನೀವು Alto K10 ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಖರೀದಿಸಬಹುದು. ಪ್ರಸ್ತುತ ಆಲ್ಟೋ k10 ಅನ್ನು STD, LXI, VXI, VXI+ ಎಂಬ ನಾಲ್ಕು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ, VXI ಮಾದರಿಯನ್ನು CNG ರೂಪಾಂತರಗಳಲ್ಲಿಯೂ ಮಾರಾಟ ಮಾಡಲಾಗುತ್ತದೆ. ಇದರ ಟಾಪ್ ಮಾದರಿಯ ಬೆಲೆಯು ರೂ. 6.61 ಲಕ್ಷಗಳಾಗಿದೆ.

ಎಂಜಿನ್ ಬಗ್ಗೆ ಹೇಳುವುದಾದರೆ, ಆಲ್ಟೋ k10 ಕಾರು 1.0-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 66 Bhp ಪವರ್ ಮತ್ತು 89 Nm ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಯೂನಿಟ್ ಅಥವಾ AMT ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತದೆ. ಇನ್ನು ಇದರ ಪೆಟ್ರೋಲ್ ಆವೃತ್ತಿಯು 24 ಕಿ.ಮೀ ಹಾಗೂ CNG ಆವೃತ್ತಿಯು 33 ಕಿ.ಮೀ ಮೈಲೇಜ್ ಸಿಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








