Best Cars For Cabs: ಕಡಿಮೆ ಖರ್ಚು, ಹೆಚ್ಚು ಲಾಭ: ಕ್ಯಾಬ್‌ಗಳಿಗೆ ಅತ್ಯುತ್ತಮ ಕಾರುಗಳಿವು!

ಸದ್ಯ ಕ್ಯಾಬ್ ಕ್ಷೇತ್ರದಲ್ಲಿ ಕಡಿಮೆ ಬೆಲೆಯ ಕಾರುಗಳಿಂದ ಹೆಚ್ಚು ಲಾಭ ಪಡೆಯಲು ನೋಡುತ್ತಿರುವವರಿಗಾಗಿ ಬೆಸ್ಟ್ ಕಾರುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಕಾಲ್ ಟ್ಯಾಕ್ಸಿ ವಿಭಾಗದಲ್ಲಿ ಬಳಸಬಹುದಾದ ಟಾಪ್ 5 ಕಾರು ಮಾದರಿಗಳು ಮತ್ತು ಅದರ ಬೆಲೆ, ಮೈಲೇಜ್ ವಿವರಗಳ ಬಗ್ಗೆ ಮಾಹಿತಿಯನ್ನು ಕೂಡ ನೀಡಿದ್ದೇವೆ.

ಮಾರುತಿ ಸುಜುಕಿ ಡಿಜೈರ್ (Maruti Suzuki Dzire): ಟ್ಯಾಕ್ಸಿ ವಿಭಾಗದಲ್ಲಿ ಡಿಜೈರ್ ಅತ್ಯಂತ ಜನಪ್ರಿಯ ಕಾರು ಮಾದರಿಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ ಚಾಲಕ ಸೇರಿದಂತೆ ಐದು ಮಂದಿ (4+1) ಸುಲಭವಾಗಿ ಪ್ರಯಾಣಿಸಬಹುದು. ಅಲ್ಲದೆ, ಲಗ್ಗೇಜ್ ಇಡಲು ಹಿಂಭಾಗದಲ್ಲಿ ಉತ್ತಮ ಸ್ಥಳಾವಕಾಶ ಕೂಡ ನೀಡಲಾಗಿದೆ. ಹಾಗಾಗಿ ಡಿಜೈರ್ ದೀರ್ಘ ಪ್ರಯಾಣಕ್ಕೂ ಉತ್ತಮ ಮಾದರಿಯಾಗಿದೆ.

best-cars-for-cabs-maruti-dzire-innova-crysta-hyundai-aura-ertiga

ಈ ಕಾರಿನ ಆರಂಭಿಕ ಬೆಲೆಯು ರೂ. 6.51 (ಎಕ್ಸ್‌ ಶೋರೂಂ) ಲಕ್ಷಗಳಾಗಿದೆ. ಈ ಸೆಡಾನ್ ಕಾರಿನ ಮೈಲೇಜ್ ಪ್ರತಿ ಲೀಟರ್‌ಗೆ 22.41 ಕಿ.ಮೀ ಇದೆ. ಇದರ ಕೈಗೆಟುಕುವ ಬೆಲೆ ಮತ್ತು ಹೆಚ್ಚಿನ ಮೈಲೇಜ್ ಕಾಲ್ ಟ್ಯಾಕ್ಸಿ ಸೇವೆಯಲ್ಲಿ ಉತ್ತಮ ಲಾಭವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಈ ಕಾರು ಮಾದರಿ ಅನೇಕ ಕ್ಯಾಬ್ ಚಾಲಕರ ಪ್ರಾಥಮಿಕ ಆಯ್ಕೆಯಾಗಿದೆ.

ಹ್ಯುಂಡೈ ಔರಾ (Hyundai Aura): ಔರಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸೆಡಾನ್‌ಗಳಲ್ಲಿ ಹ್ಯುಂಡೈ ಔರಾ ಕೂಡ ಒಂದಾಗಿದೆ. ವೈಯಕ್ತಿಕ ಹಾಗೂ ಕ್ಯಾಬ್ ಉದ್ದೇಶಗಳೆರಡಕ್ಕೂ ಭಾರತದಲ್ಲಿ ಉತ್ತಮ ಆಯ್ಕೆಯಾಗಿದೆ. ಈ ಕಾರಿಗೆ ದೇಶಾದ್ಯಂತ ಉತ್ತಮ ಬೇಡಿಕೆಯಿದ್ದು, ಫೆಬ್ರವರಿ 2024 ರಲ್ಲಿ 5,053 ಕಾರುಗಳು ಮಾರಾಟವಾಗಿವೆ.

best-cars-for-cabs-maruti-dzire-innova-crysta-hyundai-aura-ertiga

ಭಾರತದಲ್ಲಿ ಈ ಕಾರಿನ ಬೆಲೆಯು 6.49 (ಎಕ್ಸ್‌ ಶೋರೂಂ)ಲಕ್ಷ ರೂ.ನಿಂದ ಆರಂಭವಾಗುತ್ತದೆ. ಪ್ರತಿ ಲೀ.ಗೆ 22.42 ಕಿ.ಮೀ ನಿಂದ 23.56 ಕಿ.ಮೀ ವರೆಗೆ ಗರಿಷ್ಠ ಮೈಲೇಜ್ ನೀಡುತ್ತದೆ. ಈ ಕಾರು ಮಾದರಿಯು ಗ್ರಾಹಕರಿಗೆ ಪ್ರೀಮಿಯಂ ರೈಡಿಂಗ್ ಅನುಭವವನ್ನು ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga): ಇದು 7 ಸೀಟರ್ ಎಂಪಿವಿ ಆಗಿದ್ದು, ಕ್ಯಾಬ್ ಸರ್ವಿಸ್ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಕಾರು ಮಾದರಿಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ. ಕ್ಯಾಬ್ ಮಾತ್ರವಲ್ಲದೇ ವೈಯಕ್ತಿಕ ಬಳಕೆಗೂ ಉತ್ತಮ ಆಯ್ಕೆಯಾಗಿದ್ದು, ಅನೇಕ ಜನರು ತಮ್ಮ ಕುಟುಂಬಗಳೊಂದಿಗೆ ಪ್ರಯಾಣಿಸಲು ಈ ಕಾರನ್ನು ಆಯ್ಕೆ ಮಾಡುತ್ತಾರೆ.

best-cars-for-cabs-maruti-dzire-innova-crysta-hyundai-aura-ertiga

ಈ ಕಾರಿನ ನಿರ್ವಹಣಾ ವೆಚ್ಚ ಕೂಡ ತುಂಬಾ ಕಡಿಮೆ. ಭಾರತದಲ್ಲಿ ಈ ಕಾರಿನ ಆರಂಭಿಕ ಬೆಲೆಯು ರೂ. 8.69 (ಎಕ್ಸ್‌ ಶೋರೂಂ)ಲಕ್ಷವಿದೆ. ಪ್ರತಿ ಲೀ.ಗೆ 20 ರಿಂದ 21 ಕಿ.ಮೀ ಮೈಲೇಜ್ ನೀಡುತ್ತದೆ. ಟ್ಯಾಕ್ಸಿ ಸೇವಾ ವಿಭಾಗದಲ್ಲಿ ಈ ಕಾರನ್ನು ಉತ್ತಮವಾಗಿ ಸ್ವೀಕರಿಸಲು ಇದು ಪ್ರಮುಖ ಕಾರಣವಾಗಿದೆ.

ಮಾರುತಿ ಸುಜುಕಿ ಸಿಯಾಜ್ (Maruti Suzuki Ciaz): ಈ ಕಾರು ಮಾದರಿಯನ್ನು ಅಧಿಕೃತವಾಗಿ ಭಾರತದ ಕೆಲವು ಪ್ರಮುಖ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುತ್ತದೆ. ಅಲ್ಲದೇ ಕೆಲವು ಸ್ಟಾರ್ ಹೋಟೆಲ್‌ಗಳು ತಮ್ಮ ಅತಿಥಿಗಳನ್ನು ಕರೆತರಲು ಈ ಕಾರನ್ನು ಬಳಸುತ್ತವೆ. ಒಟ್ಟಾರೆ ಪ್ರೀಮಿಯಂ ಕ್ಯಾಬ್‌ಗೆ ಉತ್ತಮ ಆಯ್ಕೆಯಾಗಿದೆ. ರೂ.9.30 (ಎಕ್ಸ್‌ ಶೋರೂಂ)ಲಕ್ಷದಿಂದ ಬೆಲೆಗಳು ಆರಂಭವಾಗುತ್ತವೆ. 20.04 ಕಿ.ಮೀ ಮೈಲೇಜ್ ನೀಡುತ್ತದೆ.

best-cars-for-cabs-maruti-dzire-innova-crysta-hyundai-aura-ertiga

ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿ (Toyota Innova Crysta MPV): ಇದು ಅನೇಕ ಭಾರತೀಯರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ವಿಶೇಷವಾಗಿ, ರಾಜಕಾರಣಿಗಳು ಈ ಕಾರನ್ನು ಹೆಚ್ಚಾಗಿ ಬಳಸುತ್ತಾರೆ. ಅಂತೆಯೇ, ಟ್ಯಾಕ್ಸಿ ಸೇವಾ ವಿಭಾಗದಲ್ಲಿಯೂ ಈ ಕಾರು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ನೀವು ಟ್ಯಾಕ್ಸಿ ವಿಭಾಗಕ್ಕಾಗಿ ನೋಡುತ್ತಿದ್ದರೆ, ರೂ. 19.99 (ಎಕ್ಸ್‌ ಶೋರೂಂ)ಲಕ್ಷದಿಂದ ಬೆಲೆಗಳು ಆರಂಭವಾಗುತ್ತವೆ. ಇದು 15.60 ಕಿ.ಮೀ ಮೈಲೇಜ್ ನೀಡುತ್ತದೆ.

More from DriveSpark

Article Published On: Wednesday, March 20, 2024, 16:06 [IST]
English summary
Best cars for cabs maruti dzire innova crysta hyundai aura ertiga
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+