ಆರು ಕೊಟಿಯ ಕಾರಿನಲ್ಲಿದ್ದರೂ ವೃದ್ದನಿಗೆ ಭಿಕ್ಷೆ ನೀಡಿದ ನಟ: ಕರುಣಾಮಯಿ ನಟನ ಹೃದಯಕ್ಕೆ ಬೆಲೆಕಟ್ಟಲಾಗದು!
ಬಾಲಿವುಡ್ ಸ್ಟಾರ್‌ಗಳು ತಮ್ಮ ಬಳಿ ದುಬಾರಿ ಕಾರುಗಳಿದ್ದರೂ, ಆ ಕಾರು ಕಲೆಕ್ಷನ್‌ಗೆ ಮತ್ತೆ ಮತ್ತೆ ಕಾರುಗಳನ್ನು ಖರೀದಿಸುತ್ತಲೇ ಇರುತ್ತಾರೆ. ನಾವು ಯಾವುದೇ ಬಾಲಿವುಡ್ ಹೀರೋಗಳನ್ನು ತೆಗೆದುಕೊಂಡರೂ, ಬಹುತೇಕರಲ್ಲಿ ಈ ವಿಷಯವನ್ನು ಕಾಣಬಹುದಾಗಿದೆ. ಇದೀಗ ಈ ಪಟ್ಟಿಗೆ ರಣ್‌ಬೀರ್ ಕಪೂರ್ ಸೇರಿದ್ದು, ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ.
ಹೌದು, ಬಾಲಿವುಡ್‌ನ ಸ್ಟಾರ್ ರಣ್‌ಬೀರ್ ಕಪೂರ್ ಅವರು ವೈಯಕ್ತಿಕವಾಗಿ ಕಾರುಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವವರಾಗಿದ್ದಾರೆ. ಇವರ ಬಳಿ ಇರುವ ದುಬಾರಿ ಕಾರುಗಳ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಇದೀಗ ಮತ್ತೆ ರಣ್‌ಬೀರ್ ಕಪೂರ್ ಅವರು ಸುಮಾರು ೬ ಕೋಟಿ ಬೆಲೆ ಬಾಳುವ ಬ್ರಾಂಡ್ ನ್ಯೂ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರನ್ನು ಖರೀದಿ ಮಾಡಿದ್ದು, ಈ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವೂಂಪಾಲ ಎನ್ನುವ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ರಣ್‌ಬೀರ್ ಕಪೂರ್ ಅವರ ಹೊಸ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಮೊದಲ ವಿಡಿಯೋದಲ್ಲಿ ರಣ್‌ಬೀರ್ ಕಪೂರ್ ವಯಸ್ಸಾದ ವ್ಯಕ್ತಿಯೊಬ್ಬರಿಗೆ ದುಡ್ಡನ್ನು ನೀಡುತ್ತಿರುವುದು ಕಾಣಬಹುದು. ಕ್ಯಾಮೆರಾಮನ್ ಆ ಕಾರಿನ ಬಳಿ ಬರುತ್ತಿದ್ದಂತೆ ರಣ್‌ಬೀರ್ ಅವರು ಕಾರನ್ನು ಡ್ರೈವ್ ಮಾಡಿಕೊಂಡು ಹೊರಟು ಹೋಗುವುದುನ್ನು ಕಾಣಬಹುದು.
ರಣಬೀರ್ ಕಪೂರ್ ಅವರು ಲ್ಯಾಂಡ್ ರೋವರ್ ರೇಂಜ್ ರೋವರ್, ಮರ್ಸಿಡಿಸ್ ಬೆಂಜ್ ಜಿ63 ಎಎಂಜಿ, ಆಡಿ ಎ8 ಎಲ್ ಮತ್ತು ಆಡಿ ಆರ್8 ನಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಈ ಸಾಲಿನಲ್ಲಿ ನಟ ರಣಬೀರ್ ಕಪೂರ್ ಅವರ ಐಷಾರಾಮಿ ಕಾರು ಸಂಗ್ರಹಕ್ಕೆ ಈ ದುಬಾರಿ ಕಾರು ಸೇರಿಕೊಂಡಿದೆ ಎನ್ನಬಹುದು.

ರಣ್‌ಬೀರ್ ಕಪೂರ್ ಅವರ ಈ ಹೊಸ ಬೆಂಟ್ಲಿ ಕಾಂಟಿನೆಂಟಲ್ ಜಿಟಿ (Bentley Continental GT) ಕಾರಿನ ಬಗ್ಗೆ ನೋಡುವುದಾದರೆ, ರಣಬೀರ್ ಕಪೂರ್ ಅವರ ಖರೀದಿಸಿರುವ ಬೆಂಟ್ಲಿ ಕಾಂಟಿನೆಂಟಲ್ ಜಿಟಿಯ V8 (V8) ಆವೃತ್ತಿಯಾಗಿದೆ. ಇದರ ಎಕ್ಸ್ ಶೋ ರೂಂ ಬೆಲೆ 5.23 ಕೋಟಿ ರೂ. ಆನ್ ರೋಡ್ ಬೆಲೆ ಸುಮಾರು 6 ಕೋಟಿ ರೂ.
ಈ ಬೆಂಟ್ಲಿ ಕಾಂಟಿನೆಂಟಲ್ GT ಯ (Bentley Continental GT) ಎಂಜಿನ್ ಮತ್ತು ಇತರ ವಿಷಯಗಳನ್ನು ನೋಡುವುದಾದರೆ, V8 ಆವೃತ್ತಿಯು 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಗರಿಷ್ಠ 542 bhp ಪವರ್ ಮತ್ತು 770 Nm ಟಾರ್ಕ್ ಉತ್ಪಾದಿಸಲು ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ.

ಈ ಶಕ್ತಿಶಾಲಿ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಎಂಜಿನ್‌ನಿಂದ ಉತ್ಪತ್ತಿಯಾಗುವ ಶಕ್ತಿಯನ್ನು ಈ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮೂಲಕ ಕಾರಿನ ಎಲ್ಲಾ 4 ಚಕ್ರಗಳಿಗೆ ಕಳುಹಿಸಲಾಗುತ್ತದೆ. ನಟ ರಣಬೀರ್ ಕಪೂರ್ ತಮ್ಮ ಹೊಸ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನಲ್ಲಿ ವಿವಿಧ ವೈಶಿಷ್ಟ್ಯಗಳೊಂದಿಗೆ ಪ್ರಯಾಣಿಸುವ ವೈರಲ್ ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








