ಇನ್ನುಮುಂದೆ Maruti ಕಾರುಗಳಲ್ಲಿ 5 ಸ್ಟಾರ್ ಸುರಕ್ಷತೆ?: ಕ್ರ್ಯಾಶ್ ಟೆಸ್ಟ್‌ನಲ್ಲಿರುವ ಈ ಮೂರು ಕಾರುಗಳ ರಿಸಲ್ಟ್ ಏನು?
ಮಾರುತಿ ಕಾರುಗಳ ಬಗ್ಗೆ ಜನರಿಗಿರುವ ಅತೀ ದೊಡ್ಡ ದೂರು ಎಂದರೆ ಅದರ ಸೇಫ್ಟಿ. ಮಾರುತಿ ಸುಜುಕಿ ಕಾರುಗಳಲ್ಲಿ ಫೀಚರ್, ಪರ್ಫಾಮೆನ್ಸ್ ಚೆನ್ನಾಗಿಯೂ ಮತ್ತು ಕಾರಿನ ಬೆಲೆ ಗ್ರಾಹಕರ ಕೈಗೆಟಕುವ ರೀತಿಯಲ್ಲೇ ಇರುತ್ತದೆ. ಆದರೆ ಈ ಬಿಲ್ಡ್ ಕ್ವಾಲಿಟಿ ಮಾತ್ರ ತೀರಾ ಕಳಪೆಯಾಗಿರುತ್ತದೆ ಎಂಬುದು ಹಿಂದಿನಿಂದಲೂ ಕೇಳಿ ಬರುತ್ತಿರುವ ವಿಚಾರ.
ಆದರೆ ಸದ್ಯದಲ್ಲೇ ಈ ಹಣೆಪಟ್ಟಿ ಮಾರುತಿ ಸುಜುಕಿ ಕಾರುಗಳಿದ ಮರೆಯಾಗಲಿದೆ. ಹೌದು, ಇದನ್ನು ನಾವು ನಾಮಕಾವಸ್ತೆಗೆ ಹೇಳುತ್ತಿಲ್ಲ, ಬದಲಾಗಿ ಮಾರುತಿ ಸುಜುಕಿ ತನ್ನ ಕಾರುಗಳ ಬಲಿಷ್ಟತೆಯ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದು, ಮುಂಬರುವ ಭಾರತ್ ಎನ್‌ಕ್ಯಾಪ್ ಟೆಸ್ಟ್‌ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಅನ್ನು ಪಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಭಾರತ್ ಎನ್ ಕ್ಯಾಪ್ (Bharat NCAP) ಎಂಬ ಕ್ರಾಶ್ ಟೆಸ್ಟ್ ಅನ್ನು ಕಳೆದ ವರ್ಷ ಔದ್ಯೋಗಿಕವಾಗಿ ಭಾರತದಲ್ಲಿ ಆರಂಭ ಮಾಡಿತ್ತು. ಈ ಕ್ರ್ಯಾಶ್ ಟೆಸ್ಟ್‌ಗೆ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಕಾರು ನಿರ್ಮಾಣ ಕಂಪನಿಗಳು ತಮ್ಮ ಕೆಲವು ಕಾರು ಮಾದರಿಗಳನ್ನು ಕಳುಹಿಸಿ ಕೊಟ್ಟಿದ್ದವು. ಅದರಲ್ಲಿ ಮಾರುತಿ ಸುಜುಕಿಯೂ ಒಂದು.
ಮಾಹಿತಿಗಳ ಪ್ರಕಾರ ಮಾರುತಿ, ಭಾರತ್ ಎನ್‌ಕ್ಯಾಪ್ ಟೆಸ್ಟ್‌ನಲ್ಲಿ ಮಾರುತಿ ಬ್ರೇಝಾ, ಗ್ರಾಂಡ್ ವಿಟಾರಾ ಮತ್ತು ಬಲೇನೋ ಅಥವಾ ಬಲೇನೋ ಆಧಾರಿತ ಫ್ರಾಂಕ್ಸ್ ಕಾರುಗಳನ್ನು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಈ ಮೂರೂ ಕಾರುಗಳು ಭಾರತ್ ಎನ್-ಕ್ಯಾಪ್ ಕ್ರಾಶ್ ಟೆಸ್ಟ್‌ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಪಡೆಯಲಿದೆ ಎಂಬ ನಿರೀಕ್ಷೆಯಿದೆ.

ಇದರಲ್ಲಿ ಇನ್ನೊಂದು ವಿಚಾರವೆಂದರೆ ಮಾರುತಿ ಸುಜುಕಿ ಬ್ರೆಝಾ ಕಾರು ಈ ಹಿಂದೆ ಗ್ಲೋಬಲ್ ಎನ್‌ಕ್ಯಾಪ್ ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿತ್ತು. ಇದು ಮಾರುತಿ ಸುಜುಕಿ ಕಾರುಗಳು ಕ್ರಾಶ್ ಟೆಸ್ಟ್‌ನಲ್ಲಿ ಪಡೆದಿರುವ ಅತೀ ಹೆಚ್ಚು ಅಂಕಗಳಾಗಿದೆ. ಹಾಗಾಗಿ ಈ ಕಾರು ಭಾರತ್ ಎನ್‌ಕ್ಯಾಪ್‌ನಲ್ಲಿ ೫ ಸ್ಟಾರ್ ರೇಟಿಂಗ್ ಪಡೆಯುವುದು ಪಕ್ಕಾ ಎಂಬುದು ಎನ್ನರ ಅಭಿಪ್ರಾಯ.
ಮೊದಲಿಗೆ ಮಾರುತಿ ಸುಜುಕಿ ಬ್ರೆಝಾ ಪಡೆದುಕೊಂಡಿರುವ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಮಾತನಾಡೋಣ. ಈ ಕಾರು, 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ - ಹೋಲ್ಡ್ ಅಸಿಸ್ಟ್, ಸೀಟ್ ಬೆಲ್ಟ್ ರಿಮೈಂಡರ್ ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಪಡೆದಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara), ಕೂಡ ಸುರಕ್ಷತೆಯ ಸಲುವಾಗಿ 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 - ಡಿಗ್ರಿ ಕ್ಯಾಮೆರಾ, ಹಿಲ್-ಡಿಸೆಂಟ್ ಕಂಟ್ರೋಲ್, ISOFIX ಚೈಲ್ಡ್-ಸೀಟ್ ಆಂಕರ್ಸ್ ಅನ್ನು ಹೊಂದಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಭಾರತ್ ಎನ್‌ಸಿಎಪಿ ಮೊದಲ ಬಾರಿಗೆ ಕ್ರ್ಯಾಶ್ ಟೆಸ್ಟ್ ಫಲಿತಾಂಶವನ್ನು ಪ್ರಕಟಿಸಿಟಿತ್ತು. ವಯಸ್ಕರ ರಕ್ಷಣೆ (Adult Occupant Protection) ಹಾಗೂ ಮಕ್ಕಳ ರಕ್ಷಣೆ (Child Occupant Protection) ವಿಭಾಗದಲ್ಲಿ ಟಾಟಾ ಹ್ಯಾರಿಯರ್, ಸಫಾರಿ ಎಸ್‌ಯುವಿಗಳು 5 - ಸ್ಟಾರ್ ರೇಟಿಂಗ್ ಪಡೆದುಕೊಂಡಿದ್ದವು. ಇವೆರೆಡು ಕಾರುಗಳು ವಯಸ್ಕರ ರಕ್ಷಣೆ ವಿಭಾಗದಲ್ಲಿ ಗರಿಷ್ಠ 32ಕ್ಕೆ 30.08, ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 44.54 ಅಂಕಗಳನ್ನು ಗಳಿಸಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








