ಪ್ರಮುಖ ಕಂಪನಿಯ ಈ ಕಾರುಗಳು ರೂ.8 ಲಕ್ಷದೊಳಗೆ ಸಿಗುತ್ತವೆ: ಜಾಸ್ತಿ ಮೈಲೇಜ್.. ಹತ್ತಾರು ವೈಶಿಷ್ಟ್ಯಗಳು
ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ಕಾರು ಖರೀದಿಸಬೇಕೆಂಬ ದೊಡ್ಡ ಆಸೆಯಿರುತ್ತದೆ. ಇಲ್ಲಿ ಗರಿಷ್ಠ ಮೈಲೇಜ್‌ನೊಂದಿಗೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದು, ರೂ.8 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಟಾಟಾ ಪಂಚ್, ಮಾರುತಿ ಸುಜುಕಿ ಇಗ್ನಿಸ್ ಮತ್ತು ರೆನಾಲ್ಟ್ ಟ್ರೈಬರ್ ಕಾರುಗಳ ಬಗ್ಗೆ ವಿವರಿಸಿದ್ದೇವೆ.
ಮೊದಲಿಗೆ ಟಾಟಾ ಪಂಚ್ (Tata Punch) ಮೈಕ್ರೋ ಎಸ್‌ಯುವಿ ಕುರಿತು ಮಾತನಾಡೋಣ. ಈ ಕಾರು ರೂ.6.13 ಲಕ್ಷದಿಂದ ರೂ.10.20 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. 1.2- ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್/ 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. 18.8 ರಿಂದ 26.99 ಕಿ.ಮೀ ಮೈಲೇಜ್ ನೀಡುತ್ತದೆ.

ಈ ಟಾಟಾ ಪಂಚ್ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಕನೆಕ್ಟ್ದ್ ಕಾರ್ ಟೆಕ್, ಆಟೋಮೆಟಿಕ್ ಎಸಿ, ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ರೇರ್ ವ್ಯೂ ಕ್ಯಾಮೆರಾ, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಪಡೆದಿದೆ.
ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ರೂ.5.84 ಲಕ್ಷದಿಂದ ರೂ.8.11 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಸಿಗ್ಮಾ, ಡೆಲ್ಟಾ ಸೇರಿದಂತೆ ವಿವಿಧ ರೂಪಾಂತರ ಹಾಗೂ ನೆಕ್ಸಾ ಬ್ಲೂ, ಲ್ಯೂಸೆಂಟ್ ಆರೆಂಜ್, ಸಿಲ್ಕಿ ಸಿಲ್ವರ್, ಟರ್ಕೋಯಿಸ್ ಬ್ಲೂ, ಗ್ಲಿಸ್ಟೆನಿಂಗ್ ಗ್ರೇ ಒಳಗೊಂಡಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಇಗ್ನಿಸ್ ಕಾರು 20.89 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್ ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಒಳಗೊಂಡಿದೆ.
ರೆನಾಲ್ಟ್ ಟ್ರೈಬರ್ (Renault Triber) ರೂ.6 ಲಕ್ಷದಿಂದ ರೂ.8.97 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಈ ಕಾರು 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 72 ಪಿಎಸ್ ಗರಿಷ್ಠ ಪವರ್ (ಶಕ್ತಿ) 96 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 5-ಸ್ವೀಡ್ ಮ್ಯಾನುವಲ್ ಅಥವಾ 5-ಸ್ವೀಡ್ ಆಟೊಮೇಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

ಹೊಸ ರೆನಾಲ್ಟ್ ಟ್ರೈಬರ್ ಕಾರು ರೆನಾಲ್ಟ್ ಟ್ರೈಬರ್ 18.2 ರಿಂದ 20 ಕೆಎಂಪಿಎಲ್ ಮೈಲೇಜ್ ಕೊಡಲಿದ್ದು, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಚಾರ್ಜರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ಸಲುವಾಗಿ 4 ಏರ್‌ಬ್ಯಾಗ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), HSA (ಹಿಲ್ ಸ್ಟಾರ್ಟ್ ಅಸಿಸ್ಟ್) ಅನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








