ಒಬ್ಬರೇ ಬಂದು 1 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
ಪ್ರಮುಖ ಫ್ರೆಂಚ್ ಕಾರು ತಯಾರಕ ಕಂಪನಿಯಾದ ಸಿಟ್ರನ್ ಇಂದು 1,000 ಸಿಟ್ರನ್ e-C3 ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸುವುದಾಗಿ OHM E ಲಾಜಿಸ್ಟಿಕ್ಸ್‌ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ. ಮೊದಲ ಫ್ಲೀಟ್ ಇಂಡಕ್ಷನ್ ಹಂತವು ಹೈದರಾಬಾದ್‌ನಲ್ಲಿ 120 ಸಿಟ್ರೊಯೆನ್ e-C3 ವಾಹನಗಳ ವಿತರಣೆಯನ್ನು ಒಳಗೊಂಡಿರುತ್ತದೆ ಎಂದು ಕಂಪನಿ ತಿಳಿಸಿದೆ.
Citroen e-C3 ಎಲೆಕ್ಟ್ರಿಕ್ ಕಾಂಪ್ಯಾಕ್ಟ್ SUV, ARAI ಪ್ರಕಾರ ಸಿಂಗಲ್ ಚಾರ್ಜ್‌ನಲ್ಲಿ 320 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಅತ್ಯಾಧುನಿಕ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಈ ಕಾರು, ಒಂದು ಗಂಟೆಯೊಳಗೆ ಪೂರ್ಣ ಚಾರ್ಜ್ ಅನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ವಿಶಾಲವಾದ ಒಳಾಂಗಣ ಮತ್ತು ಸರಕು ಸಾಮರ್ಥ್ಯವು ವಿವಿಧ ಲಾಜಿಸ್ಟಿಕ್ಸ್ ಅವಶ್ಯಕತೆಗಳಿಗೆ ಸೂಕ್ತವಾದ ಆಯ್ಕೆಯಾಗಿದೆ ಎಂದು ಸಿಟ್ರನ್ ಹೇಳಿದೆ.

ಇನ್ನು ಹೈದರಾಬಾದ್‌ನಲ್ಲಿ 120 ಸಿಟ್ರನ್ e-C3 ವಾಹನಗಳ ಮೊದಲ ಬ್ಯಾಚ್ ವಿತರಣೆಯು, OHM ಲಾಜಿಸ್ಟಿಕ್ಸ್ ಮತ್ತು ಸಿಟ್ರನ್ ಇಂಡಿಯಾ ನಡುವಿನ ಉತ್ತಮ ಪಾಲುದಾರಿಕೆಯ ಆರಂಭವನ್ನು ಸೂಚಿಸುತ್ತಿದೆ ಎಂದು OHM ಲಾಜಿಸ್ಟಿಕ್ಸ್ ಹೇಳಿದೆ. ಮುಂದಿನ 12 ತಿಂಗಳುಗಳಲ್ಲಿ, OHM E ಲಾಜಿಸ್ಟಿಕ್ಸ್ ತನ್ನ ಫ್ಲೀಟ್‌ಗೆ ಉಳಿದ 880 ವಾಹನಗಳನ್ನು ಕ್ರಮೇಣವಾಗಿ ವಿತರಣೆ ಪಡೆಯಲು ಯೋಜಿಸಿದೆ.
OHM ತನ್ನ ಪ್ರಯಾಣವನ್ನು ಅಕ್ಟೋಬರ್ 2022 ರಲ್ಲಿ 100 ಎಲೆಕ್ಟ್ರಿಕ್ ಕ್ಯಾಬ್‌ಗಳೊಂದಿಗೆ ಪ್ರಾರಂಭಿಸಿತು, ಇವುಗಳನ್ನು ವಿಮಾನ ನಿಲ್ದಾಣದಿಂದ ಮತ್ತು ವಿಮಾನ ನಿಲ್ದಾಣಕ್ಕೆ ಸುಸ್ಥಿರ ಸಾರಿಗೆ ವಿಧಾನವನ್ನು ಪಡೆಯಲು ಬಯಸುವ ಪ್ರಯಾಣಿಕರಿಗಾಗಿ ಸೇವೆ ಒದಗಿಸುತ್ತಿದೆ. ಇದೀಗ ಈ ಕ್ಯಾಬ್‌ಗಳ ಸಂಖ್ಯೆಯನ್ನು ಸಾವಿರಕ್ಕೆ ಏರಿಸಲು ಸಜ್ಜಾಗಿದ್ದು, ಶೀಘ್ರದಲ್ಲೇ ತಮ್ಮ ಗುರಿಯನ್ನು ಸಾಧಿಸುವುದಾಗಿ ಕಂಪನಿ ಹೇಳಿಕೊಂಡಿದೆ.

ಸಿಟ್ರನ್ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಶಿಶಿರ್ ಮಿಶ್ರಾ ಮಾತನಾಡಿ, "OHM E ಲಾಜಿಸ್ಟಿಕ್ಸ್ ಪ್ರೈವೇಟ್‌ನೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ. ಸುಸ್ಥಿರ ಸಾರಿಗೆ ಪರಿಹಾರಗಳನ್ನು ಅಳವಡಿಸಿಕೊಳ್ಳುವ ತಮ್ಮ ಪ್ರಯತ್ನದಲ್ಲಿ Citroen e-C3 ಕಾರ್ಯಕ್ಷಮತೆ, ಸೌಕರ್ಯ ಮತ್ತು ಪರಿಸರ ಸ್ನೇಹಪರತೆಯ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ ಎಂದರು.
ಇದು ಹಸಿರು ಚಲನಶೀಲತೆಯ ಆಯ್ಕೆಗಳ ಕಡೆಗೆ ಪರಿವರ್ತನೆ ಮಾಡಲು ಬಯಸುವ ವ್ಯವಹಾರಗಳಿಗೆ ಸೂಕ್ತವಾದ ಆಯ್ಕೆಯಾಗಿದೆ. ಈ ಪಾಲುದಾರಿಕೆಯು ವಿದ್ಯುತ್ ಚಲನಶೀಲತೆಯನ್ನು ಉತ್ತೇಜಿಸುವ ಮತ್ತು ಚಲನಶೀಲತೆಯ ವಲಯದಲ್ಲಿ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ನಮ್ಮ ಹಂಚಿಕೆಯ ದೃಷ್ಟಿಯನ್ನು ಒತ್ತಿಹೇಳುತ್ತದೆ ಎಂದು ಶಿಶಿರ್ ಮಿಶ್ರಾ ಹೇಳಿದರು.

OHM ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ನಿರ್ಮಲ್ ರೆಡ್ಡಿ ಮಾತನಾಡಿ, " ಹೊಸ ಸಿಟ್ರನ್ eC3 ನೊಂದಿಗೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸುಸ್ಥಿರ ಇಂಧನ ಪರಿಹಾರಗಳ ನಮ್ಮ ಪ್ರಗತಿಯ ಪ್ರಯಾಣದಲ್ಲಿ OHM ನ ಕ್ಯಾಪ್‌ನಲ್ಲಿ ಮತ್ತೊಂದು ಗರಿಯನ್ನು ಸೇರಿಸಲು ನಾವು ಉತ್ಸುಕರಾಗಿದ್ದೇವೆ. ಭೂಮಿಯನ್ನು ಹೆಚ್ಚು ಹಸಿರು ಮತ್ತು ಕಾರ್ಯಸಾಧ್ಯವಾಗಿ ಸಮರ್ಥನೀಯವಾಗಿಸುವುದು ನಮ್ಮ ಧ್ಯೇಯವಾಗಿದೆ ಎಂದು ಡಾ. ನಿರ್ಮಲ್ ರೆಡ್ಡಿ ಹೇಳಿದರು."
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








