ಥಾರ್ 5 ಡೋರ್ ಬಿಡುಗಡೆಗೂ ಮುನ್ನವೇ ಎದುರಾಳಿ ರೆಡಿ: ಹೊಸ ಗೂರ್ಖಾಗೆ ನಲುಗುತ್ತಾ ಮಹೀಂದ್ರಾ!
ಕಾರು ಪ್ರೀಯರ ನಾಡುಗಳನ್ನು ತೆಗೆದುಕೊಂಡರೆ ನಮ್ಮ ಭಾರತ ಅದರಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುವುದು ಖಂಡಿತಾ. ಹಲವು ರೀತಿಯ ಭೌಗೋಳಿಕ ಪ್ರದೇಶಗಳನ್ನೊಳಗೊಂಡ ಭಾರತದಲ್ಲಿ ಅದಕ್ಕೆ ತಕ್ಕುದಾದ ರೀತಿಯಲ್ಲಿ ಕಾರುಗಳನ್ನು ನಿರ್ಮಾಣ ಮಾಡಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವುದರಲ್ಲಿ ಕಾರು ನಿರ್ಮಾಣ ಕಂಪನಿಗಳು ಮಗ್ನವಾಗಿ ಬಿಟ್ಟಿವೆ ಎನ್ನಬಹುದು.
ಭಾರತದ ಆಫ್‌ರೋಡ್ ಪ್ರೀಯರ ನೆಚ್ಚಿನ ವಾಹನ ಮಹೀಂದ್ರಾ ಥಾರ್. ಇತರ ಆಫ್‌ರೋಡ್ ವಾಹನಗಳಿಗೆ ಹೋಲಿಸಿದರೆ ಮಹೀಂದ್ರಾ ಥಾರ್, ಬೆಲೆಯಲ್ಲಿ ಕಮ್ಮಿಯೂ ಮತ್ತು ಹೆಚ್ಚಿನ ಪರ್ಫಾಮೆನ್ಸ್ ಅನ್ನು ಸಹ ನೀಡುತ್ತದೆ. ಇನ್ನು ಇದೇ ವರ್ಷದ ಸ್ವಾತಂತ್ರ್ಯ ದಿನದಂದು ಮಹೀಂದ್ರಾ 5 ಡೋರ್ ಥಾರ್ ಅನ್ನು ಸಹ ಮಾರುಕಟ್ಟೆಗೆ ತರಲಿದೆ ಎಂಬ ಮಾಹಿತಿ ಈಗಾಗಲೇ ಹೊರಬಿದ್ದಿದೆ.

ಇನ್ನು ಇದಕ್ಕೆ ಉತ್ತರವಾಗಿ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತೊಂದು ವಾಹನ ನಿರ್ಮಾಣ ಕಂಪನಿ ಗೂರ್ಖಾ ಇದಕ್ಕೊಂದು ಬ್ರಹ್ಮಾಸ್ತ್ರವನ್ನು ತನ್ನ ತೆಕ್ಕೆಯಲ್ಲಿ ಸಿದ್ದಪಡಿಸುತ್ತಿದೆ. ಹೌದು, ಈಗಾಗಲೇ ಮಾರುಕಟ್ಟೆಯಲ್ಲಿ 3 ಡೋರ್ ಗೂರ್ಖಾ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ 5 ಡೋರ್ ಗೂರ್ಖಾ ಸಹ ಬಿಡುಗಡೆಯಾಗುವ ಸನಿಹದಲ್ಲಿದ್ದು, ಇದು ಮಹೀಂದ್ರಾ ಥಾರ್ ಗೆ ಒಂದು ದೊಡ್ಡ ಹೊಡೆತವಾಗಲಿದೆ ಎಂದು ಕಾರು ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಮಾಹಿತಿಗಳ ಪ್ರಕಾರ 2022 ರಿಂದಲೇ ಪೋರ್ಸ್ ತನ್ನ 5 ಡೋರ್ ಗೂರ್ಖಾ (Force Gurkha 5 Door) ಕಾರಿನ ಅಭಿವೃದ್ದಿಯಲ್ಲಿ ತೊಡಗಿದ್ದು, ಆದಷ್ಟು ಬೇಗ ಇದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ತಿಳಿದು ಬಂದಿದೆ. ಮುಖ್ಯವಾಗಿ ಈ ಕಾರಿನಲ್ಲಿ ಸಂಪೂರ್ಣ ಎಲ್‌ಇಡಿ ಹೆಡ್‌ಲೈಟ್‌ಗಳು, ಸ್ಪೋರ್ಟ್ ಫ್ರೆಶ್ ಚೌಕಾಕಾರದ ಹೆಡ್ ಲ್ಯಾಂಪ್‌ಗಳು, 18 ಇಂಚ್ ಡೈಮಂಡ್ ಕಟ್ ಅಲಾಯ್ ವ್ಹೀಲ್‌ಗಳು ಸಿಗಲಿದೆ ಎಂದು ತಿಳಿದು ಬಂದಿದೆ.

ಮುಖ್ಯವಾಗಿ ಈ ಕಾರಿನ ಎಂಜಿನ್ ಅನ್ನು ಗಮನಿಸಬೇಕಾಗಿದ್ದು, ಇದರಲ್ಲಿ ರೋಬಸ್ಟ್ ಮರ್ಸಿಡಿಸ್ ಮೂಲದ 2.5 ಲೀಟರ್ ಡೀಸೆಲ್ ಎಂಜಿನ್ ಬರಲಿದ್ದು, ಜೊತೆಗೆ 5 ಸ್ಪೀಡ್ ಗೇರ್ ಬಾಕ್ಸ್ ಸಹ ಇರಲಿದೆ ಎನ್ನಲಾಗುತ್ತಿದೆ. ಈ ಕಾರು ಬಹುತೇಕ ಇದೇ ವರ್ಷದ ಎಪ್ರಿಲ್ ಅಥವಾ ಜೂನ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ದಾಪುಗಾಲಿಡಲಿದ್ದು, ಭಾರೀ ಗಮನ ಸೆಳೆಯುವ ಸಾಧ್ಯತೆ ಇದೆ.
ಸದ್ಯಕ್ಕೆ ಭಾರತದಲ್ಲಿ ಮೂರು ಡೋರ್‌ಗಳುಳ್ಳ ಗೂರ್ಖಾ ಮಾರಾಟದಲ್ಲಿದ್ದು, ಇದರ ಕುರಿತಾಗಿ ನೋಡುವುದಾದರೆ, ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ 7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಮ್ಯಾನುವಲ್ ಎಸಿ ವೆಂಟ್ಸ್ , 12V ಚಾರ್ಜಿಂಗ್ ಸಾಕೆಟ್ ಮತ್ತು ಡ್ಯುಯಲ್ ಯುಎಸ್‌ಬಿ ಸಾಕೆಟ್ ನೀಡಲಾಗಿದೆ.

ಎಂಜಿನ್ ಕುರಿತಾಗಿ ನೋಡುವುದಾದರೆ, ಈ ಗೂರ್ಖಾ ಕಾರಿನಲ್ಲಿ 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಮಾದರಿಯು 90 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದ್ದು, ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 4X4 ಡ್ರೈವ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








