ಪಾಕಿಸ್ತಾನಕ್ಕೆ ಒಂದು ತಿಂಗಳಾದರೆ, ಭಾರತಕ್ಕೆ ಒಂದೇ ದಿನ ಸಾಕು! ವಿಶ್ವವೇ ತಿರುಗಿ ನೋಡುತ್ತಿದೆ!

ಭಾರತವು ಆಟೋ ಉದ್ಯಮದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ. ನಿತ್ಯ ಸಾವಿರಾರು ಕಾರುಗಳು ಭಾರತದಲ್ಲಿ ಮಾರಾಟವಾಗುತ್ತವೆ, ಹಬ್ಬದ ಸೀಸನ್‌ಗಳಲ್ಲಿ ಲಕ್ಷಾಂತರ ಕಾರುಗಳು ಮಾರಾಟವಾದ್ರೂ ಆಶ್ಚರ್ಯವೇನಿಲ್ಲ. ಆದ್ರೆ ನಮ್ಮ ನೆರೆಯ ದೇಶ ಪಾಕಿಸ್ತಾನ ಆಟೋ ಉದ್ಯಮವು ಸಂಪೂರ್ಣ ಕುಸಿದಿದೆ. ತಿಂಗಳು ಪೂರ್ತಿ ಮಾರಾಟ ಮಾಡಿದ್ರೂ ಕೇವಲ 7,672 ಕಾರುಗಳು ಸೇಲ್ ಆಗಿವೆ.

ಪಾಕಿಸ್ತಾನದಲ್ಲಿ ಒಂದು ತಿಂಗಳಲ್ಲಿ ಮಾರಾಟವಾದ ಕಾರುಗಳು ನಮ್ಮ ಭಾರತದಲ್ಲಿ ಕೇವಲ ಅರ್ಧ ದಿನದಲ್ಲಿ ಮಾರಾಟವಾಗುತ್ತವೆ. ಪ್ರಪಂಚದಾದ್ಯಂತದ ವಾಹನ ಉದ್ಯಮಗಳು ಹೆಚ್ಚುತ್ತಿರುವ ಇನ್ಪುಟ್ ವೆಚ್ಚಗಳು, ಒಟ್ಟಾರೆ ಹಣದುಬ್ಬರದೊಂದಿಗೆ ಹೆಣಗಾಡುತ್ತಿದ್ದರೆ, ಪಾಕಿಸ್ತಾನಿ ಖರೀದಿದಾರರು ಇತ್ತೀಚೆಗೆ ಆರ್ಥಿಕತೆಯ ಕಳಪೆ ಸ್ಥಿತಿ, ಕರೆನ್ಸಿಯ ಅಪಮೌಲ್ಯ ಮತ್ತು ವಾಹನ ಖರೀದಿಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸುವಂತಹ ಇತರ ಸವಾಲುಗಳನ್ನು ಸಹ ನಿಭಾಯಿಸಬೇಕಾಗಿದೆ. ಮತ್ತೊಂದೆಡೆ ದಕ್ಷಿಣ ಏಷ್ಯಾ ದೇಶಗಳಲ್ಲಿ ವಾಹನ ತಯಾರಕರ ನಡುವಿನ ಸ್ಪರ್ಧೆ ಹೆಚ್ಚುತ್ತಿರುವ ಕಾರಣ ತನ್ನ ಹಿಡಿತವನ್ನು ಉಳಿಸಿಕೊಳ್ಳಲು ಪಾಕಿಸ್ತಾನ ಹೆಣಗಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.

india-vs-pakistan-monthly-car-sales-comparison-2024-march

2023ರ ಕೊನೆಯ ತ್ರೈಮಾಸಿಕದಲ್ಲಿ ಪಾಕಿಸ್ತಾನದ ಕಾರು ಮಾರಾಟವು ಸುಧಾರಣೆಯ ಲಕ್ಷಣಗಳನ್ನು ಕಂಡಿಲ್ಲ, ಅಲ್ಲಿನ ಪ್ರಯಾಣಿಕ ವಾಹನಗಳ ಮಾರಾಟವು 5,000 ಕ್ಕಿಂತ ಕಡಿಮೆಯಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅವರು ಇನ್ನೂ ಸ್ವಲ್ಪ ಕುಸಿತವನ್ನು ಅನುಭವಿಸಿದ್ದಾರೆ. ವಾಸ್ತವವಾಗಿ, ಹಲವಾರು ಪ್ರಮುಖ ಕಾರು ತಯಾರಕರು ಈಗಾಗಲೇ ಪಾಕಿಸ್ತಾನದಲ್ಲಿ ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ.

ಇನ್ನುಳಿದ ಪಾಕಿಸ್ತಾನದಲ್ಲಿನ ವಾಹನ ತಯಾರಕರು, ಅಲ್ಲಿನ ಪರಿಸ್ಥಿತಿಗಳು ಸುಧಾರಣೆ ಕಾಣದಿದ್ದಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಲು ನೋಡುತ್ತಿದ್ದಾರೆ ಎಂದು ವದಂತಿಗಳಿವೆ. ಅಲ್ಲಿನ ಪರಿಸ್ಥಿತಿಗಳು ಸುಧಾರಣೆ ಕಾಣದಿದ್ದಲ್ಲಿ ಮುಂಬರುವ ದಿನಗಳಲ್ಲಿ ಪಾಕಿಸ್ತಾನದ ಜನಸಾಮಾನ್ಯರಿಗೆ ಒಂದೊತ್ತು ಊಟಕ್ಕೂ ಪರದಾಡುವ ಸ್ಥಿತಿ ಬರಲಿದೆ ಎಂದು ವರದಿಗಳು ಹೇಳುತ್ತಿವೆ.

india-vs-pakistan-monthly-car-sales-comparison-2024-march

ಪಾಕಿಸ್ತಾನ ಆಟೋಮೋಟಿವ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಹಂಚಿಕೊಂಡ ಮಾಸಿಕ ಮಾರಾಟ ದತ್ತಾಂಶದ ಪ್ರಕಾರ, ಮಾರ್ಚ್ 2024 ರಲ್ಲಿ ಕೇವಲ 7,672 ಕಾರುಗಳು ಪಾಕಿಸ್ತಾನದಲ್ಲಿ ಮಾರಾಟವಾಗಿವೆ. ಆದ್ರೆ ಭಾರತದಲ್ಲಿ ಮಾರ್ಚ್ 24 ರಲ್ಲಿ ಬರೋಬ್ಬರಿ 3.69 ಲಕ್ಷಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ. ವಿವರವಾಗಿ ನೋಡುವುದಾದ್ರೆ, ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು ಕೇವಲ ಮಾರ್ಚ್‌ ತಿಂಗಳ ಒಂದರಲ್ಲೇ 3,69,381 ಯುನಿಟ್‌ ಕಾರುಗಳು ಮಾರಾಟ ವಾಗಿವೆ. ಅಂದರೆ ಪ್ರತಿದಿನ ಅಂದಾಜು 12,000ಕ್ಕೂ ಹೆಚ್ಚು ಕಾರುಗಳು ಮಾರಾಟ ಕಾಣುತ್ತಿವೆ.

ಭಾರತದಲ್ಲಿ ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 3,35,976 ಯುನಿಟ್ ಗಳಿಗೆ ಹೋಲಿಸಿದರೆ ಇದು ಶೇಕಡಾ 10 ರಷ್ಟು ಗಣನೀಯ ಬೆಳವಣಿಗೆಯನ್ನು ದಾಖಲಿಸಿದೆ. ಪೂರೈಕೆ ಸರಪಳಿ ನಿರ್ಬಂಧಗಳು, ಹೆಚ್ಚುತ್ತಿರುವ ಇನ್ಪುಟ್ ವೆಚ್ಚಗಳು ಮುಂತಾದ ಸವಾಲುಗಳನ್ನು ಎದುರಿಸುತ್ತಿದ್ದರೂ ಭಾರತೀಯ ಆಟೋ ಮಾರುಕಟ್ಟೆಯು ಬೆಳವಣಿಗೆ ಕಾಣುತ್ತಿದೆ.

india-vs-pakistan-monthly-car-sales-comparison-2024-march

ವಿಶ್ವದ ಜನಪ್ರಿಯ ಬ್ರಾಂಡ್‌ಗಳು ಭಾರತದಲ್ಲಿ ತಮ್ಮ ಹೂಡಿಕೆಗೆ ಮುಂದಾಗುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಹಲವು ಕಾರು ಬ್ರಾಂಡ್‌ಗಳು ಭಾರತಕ್ಕೆ ಎಂಟ್ರಿ ಕೊಟ್ಟು ಇಲ್ಲಿ ಲಾಭವನ್ನು ಕಂಡಿವೆ. ಬಿವೈಡಿ, ಟೆಸ್ಲಾದಂತಹ ಅಂತರಾಷ್ಟ್ರೀಯ ಎಲೆಕ್ಟ್ರಿಕ್ ಕಾರು ಬ್ರಾಂಡ್‌ಗಳು ಕೂಡ ಭಾರತದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಮುಂದಾಗಿವೆ. ಸದ್ಯಕ್ಕೆ ಭಾರತ ವಿಶ್ವ ಆಟೋ ಉದ್ಯಮದಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರೆಯುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, April 26, 2024, 17:49 [IST]
English summary
India vs pakistan monthly car sales comparison 2024 march
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+