ಭಾರತದಲ್ಲಿ ಮೊದಲ ಬಾರಿಗೆ ದರ್ಶನ ಕೊಟ್ಟ ದೈತ್ಯ Kia EV9: ಬಿಡುಗಡೆ, ಬೆಲೆ, ವಿಶೇಷತೆಗಳೇನು?

ಕಿಯಾ ಭಾರತಕ್ಕೆ ಎಂಟ್ರಿ ಕೊಟ್ಟ ಅತಿ ಕಡಿಮೆ ಸಮಯದಲ್ಲೇ ಜನಪ್ರಿಯತೆಯನ್ನು ಗಳಿಸಿದೆ. ಕಿಯಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿಂದ ಹಿಡಿದು ಮಿಡ್‌ ಸೈಜ್ ಎಸ್‌ಯುವಿಗಳು, ಎಲೆಕ್ಟ್ರಿಕ್ ಎಸ್‌ಯುವಿಗಳು ಭಾರತದಲ್ಲಿ ಉತ್ತಮ ಬೇಡಿಕೆಯನ್ನು ಗಳಿಸಿವೆ. ಇದೀಗ ಕಿಯಾದ ಮುಂಬರಲಿರುವ ಫುಲ್‌ ಸೈಜ್ ಎಲೆಕ್ಟ್ರಿಕ್ ಎಸ್‌ಯುವಿಯಾದ EV9 ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ.

ಹೌದು ಭಾರತದಲ್ಲಿ ಇತ್ತೀಚೆಗೆ ರಸ್ತೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ EV9 ಕಾಣಿಸಿಕೊಂಡಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ CBU (ಸಂಪೂರ್ಣ ನಿರ್ಮಿತ ಘಟಕ) ಆಗಿ ಭಾರತವನ್ನು ಪ್ರವೇಶಿಸಲಿದೆ. ಇದರ ಬೇಸ್ ಟ್ರಿಮ್ ಅಂದಾಜು 80 ಲಕ್ಷ ರೂ. ಬೆಲೆಯಿರಬಹುದು ಎಂದು ನಿರೀಕ್ಷಿಸಲಾಗಿದೆ. ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರಿನ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

kia-ev9-spotted-testing-in-india-for-the-first-time-launch-soon

Kia EV9 ಪರ್ಫಾಮೆನ್ಸ್ ಮತ್ತು ರೇಂಜ್: ಗ್ರಾಹಕರು ಮೂರು ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯಬಹುದು. ಮೂಲ RWD ವೇರಿಯೆಂಟ್ 76.1 kWh ಬ್ಯಾಟರಿಯನ್ನು ಹೊಂದಿದ್ದು, 215 hp ಸಿಂಗಲ್ ಎಲೆಕ್ಟ್ರಿಕ್ ಮೋಟರ್‌ಗೆ ಸಂಪರ್ಕ ಹೊಂದಿದೆ. ಇದು ಅಂದಾಜು 370 ಕಿ.ಮೀ ವ್ಯಾಪ್ತಿ ನೀಡುತ್ತದೆ.

Kia EV9 ಲಾಂಗ್ ರೇಂಜ್ ವೇರಿಯೆಂಟ್ 99.8 kWh ಬ್ಯಾಟರಿಯನ್ನು ಹೊಂದಿದ್ದು, 201 hp ಸಿಂಗಲ್ ಎಲೆಕ್ಟ್ರಿಕ್ ಮೋಟರ್‌ಗೆ ಸಂಪರ್ಕ ಹೊಂದಿದೆ. ಇದು ಅಂದಾಜು 489 ಕಿ.ಮೀ ರೇಂಜ್ ನೀಡುತ್ತದೆ. ಇದರ ಜೊತೆಗೆ 379 hp ಗರಿಷ್ಠ ಪವರ್ ನೀಡುವ ಡ್ಯುಯಲ್-ಮೋಟರ್ ವೇರಿಯೆಂಟ್ ಕೂಡ ಇದ್ದು, ಇದು ಅಂದಾಜು 450 ಕಿ.ಮೀ ರೇಂಜ್ ನೀಡಬಹುದು.

kia-ev9-spotted-testing-in-india-for-the-first-time-launch-soon

Kia EV9 ಸ್ಥಿರ ಮತ್ತು ಪೋರ್ಟಬಲ್ ಚಾರ್ಜಿಂಗ್ ಆಯ್ಕೆಗಳೊಂದಿಗೆ ಬರುತ್ತದೆ. ಕೇವಲ 15 ನಿಮಿಷಗಳಲ್ಲಿ 248 km ರೇಂಜ್ ಓಡುವಷ್ಟು ಚಾರ್ಜ್ ಮಾಡಬಹುದು. ವೇಗದ ಚಾರ್ಜರ್‌ನೊಂದಿಗೆ, ಕೇವಲ 24 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್ ಮಾಡಬಹುದು. ಹಾಗೆಯೇ ವೆಹಿಕಲ್-ಟು-ಲೋಡ್ (V2L) ಸಾಮರ್ಥ್ಯವನ್ನು ಸಹ ಈ ಕಾರು ಹೊಂದಿದೆ.

Kia EV9 ಉದ್ದಳತೆ: ಕಿಯಾ ಇವಿ9' 5,015 ಎಂಎಂ ಉದ್ದ, 1,980 ಎಂಎಂ ಅಗಲ ಮತ್ತು 1,780 ಎಂಎಂ ಎತ್ತರವಿದೆ. ಇದರ ವೀಲ್‌ಬೇಸ್ 3,100 ಎಂಎಂ ಇದ್ದು, ವಿಶಾಲವಾದ ಒಳಾಂಗಣ ಮತ್ತು ಸಾಕಷ್ಟು ಬೂಟ್ ಜಾಗವನ್ನು ಹೊಂದಿದೆ. Z-ಆಕಾರದ DRLಗಳೊಂದಿಗೆ ಕ್ಯೂಬ್ LED ಹೆಡ್‌ಲ್ಯಾಂಪ್‌ಗಳು, ಮುಚ್ಚಿದ-ಆಫ್ ಗ್ರಿಲ್ ಮತ್ತು ಪ್ರಮುಖ ಬಂಪರ್ ಅನ್ನು ಒಳಗೊಂಡಿದೆ.

kia-ev9-spotted-testing-in-india-for-the-first-time-launch-soon

ಕಿಯಾ EV9 ಇಂಟೀರಿಯರ್: Kia EV9 ಒಳಭಾಗದಲ್ಲಿ 3-ಝೋನ್ ಕ್ಲೈಮೆಟ್ ಕಂಟ್ರೋಲ್, ಮುಂಭಾಗ ಮತ್ತು ಎರಡನೇ ಸಾಲಿನಲ್ಲಿ ವೆಂಟಿಲೇಟ್ ಸೀಟ್‌ಗಳು, ಆಟೋ ಡಿಫಾಗ್ ಸಿಸ್ಟಮ್, ಎಲೆಕ್ಟ್ರಾನಿಕ್ ರಿಯರ್ ವ್ಯೂ ಮಿರರ್, ರೀಜೆನ್ ಬ್ರೇಕಿಂಗ್ ಪ್ಯಾಡಲ್ ಶಿಫ್ಟರ್ ಮತ್ತು ಎತ್ತರ ಹೊಂದಾಣಿಕೆಯ ಸ್ಮಾರ್ಟ್ ಪವರ್ ಟೈಲ್‌ಗೇಟ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ.

12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡ್ರೈವರ್ ಡಿಸ್‌ಪ್ಲೇ ಸ್ಕ್ರೀನ್ ಮತ್ತು 5.3-ಇಂಚಿನ ಕ್ಲೈಮೆಟ್ ಕಂಟ್ರೋಲ್ ಸ್ಕ್ರೀನ್ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಡಿಜಿಟಲ್ ಕೀ, ಫಿಂಗರ್‌ಪ್ರಿಂಟ್ ಗುರುತಿಸುವಿಕೆ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಯುಎಸ್‌ಬಿ-ಸಿ ಪೋರ್ಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಒಟಿಎ ಅಪ್‌ಡೇಟ್‌ಗಳ ಜೊತೆಗೆ ADAS ನಂತಹ ಅಡ್ವಾನ್ಸ್ ಫೀಚರ್‌ಗಳನ್ನು ಒಳಗೊಂಡಿರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Team BHP
Link: https://www.team-bhp.com/forum/electric-cars/276498-kia-ev9-spotted-india-sans-camouflage.html#post5711686

More from DriveSpark

Article Published On: Saturday, February 3, 2024, 13:15 [IST]
English summary
Kia ev9 spotted testing in india for the first time launch soon
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+