ಭಾರತದಲ್ಲಿ ದುರ್ಬಲ ಕಾರುಗಳೇ ಹೆಚ್ಚು ಮಾರಾಟ: ಸುರಕ್ಷತೆಯಿಲ್ಲಿ-0, ಮಾರಾಟದಲ್ಲಿ ನಂ.1

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ದೇಶದ ಅತಿದೊಡ್ಡ ಕಾರು ಕಂಪನಿಯಾಗಿದೆ. ಕಳೆದ ಹಲವು ವರ್ಷಗಳಲ್ಲಿ ಭಾರತದಲ್ಲಿ ಇನ್ಯಾವುದೇ ಕಂಪನಿಯು ಮಾರಾಟದಲ್ಲಿ ಮಾರುತಿಯನ್ನು ಹಿಂದಿಕ್ಕಿಲ್ಲ. ಪ್ರತಿ ತಿಂಗಳು ಟಾಪ್-10 ಅತ್ಯುತ್ತಮ ಮಾರಾಟ ಕಂಡ ಕಾರುಗಳ ಪಟ್ಟಿಯಲ್ಲಿ 6 ರಿಂದ 7 ಕಾರುಗಳು ಮಾರುತಿ ಸುಜುಕಿಯದ್ದೇ ಆಗಿರುತ್ತವೆ.

ಮಾರುತಿ ಸುಜುಕಿಗೆ ವಿಶೇಷವಾಗಿ ವ್ಯಾಗನ್ ಆರ್ ಮತ್ತು ಸ್ವಿಫ್ಟ್ ಯಾವಾಗಲೂ ಟಾಪ್ -5 ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಪಡೆಯುತ್ತವೆ. ಅಲ್ಲದೆ, ಇವೆರಡು ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ಗಳೊಂದಿಗೆ ಅತ್ಯುತ್ತಮ ಮೈಲೇಜ್ ನೀಡುವುದರಿಂದ ಭಾರೀ ಬೇಡಿಕೆ ಪಡೆದಿವೆ. ಹೆಚ್ಚು ಮಾರಾಟವಾಗುವ ಈ ಕಾರುಗಳ ಬೆಲೆ ಜನರ ಬಜೆಟ್‌ನಲ್ಲಿದೆ. ಆದರೆ ಮಾರುತಿಯ ಈ ಕಾರುಗಳು ಸುರಕ್ಷತೆಯ ವಿಷಯದಲ್ಲಿ ಹಿಂದುಳಿದಿವೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಸುಜುಕಿಯ 3 ಕಾರುಗಳು ನಿರಾಸೆಗೊಳಿಸಿವೆ. ಈ ಪಟ್ಟಿಯಲ್ಲಿ ವ್ಯಾಗನ್ಆರ್ ಮತ್ತು ಸ್ವಿಫ್ಟ್ ಜೊತೆಗೆ ಆಲ್ಟೋ ಕೆ 10 ಕೂಡ ಇದೆ.

maruti-suzuki-swift-alto-k10-wagon-r-sales-and-safety-rating

ಮಾರುತಿ ಸುಜುಕಿ ಆಲ್ಟೋ ಕೆ10: Maruti suzuki alto k10 ಕಾರು, 2024ರ ಆರ್ಥಿಕ ವರ್ಷದಲ್ಲಿ 1,11,955 ಯುನಿಟ್‌ಗಳು ಮಾರಾಟವಾಗಿವೆ. ಆದರೆ ಇದರ ಸುರಕ್ಷತಾ ರೇಟಿಂಗ್ ತೀರಾ ಕೆಟ್ಟದಾಗಿದೆ. ವಾಸ್ತವವಾಗಿ, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ, ಇದು ವಯಸ್ಕರ ಸುರಕ್ಷತೆಯಲ್ಲಿ 2 - ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆಯಲ್ಲಿ 0 - ಸ್ಟಾರ್ ರೇಟಿಂಗ್ ಪಡೆದಿದೆ.

ಆಲ್ಟೋ ಕೆ10 ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 3.90 ಲಕ್ಷಗಳಾಗಿದೆ. ಇದು ಪೆಟ್ರೋಲ್ ಎಂಜಿನ್‌ನೊಂದಿಗೆ ಪ್ರತಿ ಲೀಟರ್‌ಗೆ 24.90 ಕಿ.ಮೀ ಮತ್ತು ಸಿಎನ್‌ಜಿಯೊಂದಿಗೆ 33.85 ಕಿ.ಮೀ / ಕೆಜಿ ಮೈಲೇಜ್ ನೀಡುತ್ತದೆ. ಬಜೆಟ್ ಬೆಲೆ ಹಾಗೂ ಉತ್ತಮ ಮೈಲೇಜ್‌ನಿಂದಾಗಿ ಭಾರತದಲ್ಲಿ ಈ ಕಾರು ಹೆಚ್ಚಾಗಿ ಮಾರಾಟವಾಗುತ್ತಿದೆ.

maruti-suzuki-swift-alto-k10-wagon-r-sales-and-safety-rating

ಮಾರುತಿ ಸುಜುಕಿ ಸ್ವಿಫ್ಟ್: Maruti suzuki swift 2024ರ ಆರ್ಥಿಕ ವರ್ಷದಲ್ಲಿ 1,95,312 ಯುನಿಟ್‌ಳು ಮಾರಾಟವಾಗಿವೆ. ಇದರ ಸುರಕ್ಷತಾ ರೇಟಿಂಗ್ ಕೂಡ ಕೆಟ್ಟದಾಗಿದ್ದು, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ವಯಸ್ಕರ ಸುರಕ್ಷತೆಗಾಗಿ 1 - ಸ್ಟಾರ್ ಮತ್ತು ಮಕ್ಕಳ ಸುರಕ್ಷತೆಗಾಗಿ 1 - ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಬೆಲೆಯು ರೂ. 5,99,450 ರೂ. (ಎಕ್ಸ್ ಶೋರೂಂ) ನಿಂದ ಆರಂಭವಾಗುತ್ತದೆ. ಇದು ಪೆಟ್ರೋಲ್ ಎಂಜಿನ್ ನೊಂದಿಗೆ ಪ್ರತಿ ಲೀಟರ್‌ಗೆ 22.56 ಕಿ.ಮೀ ಮತ್ತು ಸಿಎನ್‌ಜಿಯೊಂದಿಗೆ 30.90 ಕಿ.ಮೀ/ಕೆಜಿ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ವ್ಯಾಗನ್ಆರ್: ದೇಶದಲ್ಲಿ ಅತೀ ಹೆಚ್ಚು ಮಾರಾಟದೊಂದಿಂಗೆ ಮೊದಲನೇ ಸ್ಥಾನದಲ್ಲಿರುವ Maruti suzuki wagon R, 2024ರ ಆರ್ಥಿಕ ವರ್ಷದಲ್ಲಿ 2,00,177 ಯುನಿಟ್‌ಗಳು ಮಾರಾಟವಾಗಿವೆ. ಇದರ ಸುರಕ್ಷತಾ ರೇಟಿಂಗ್ ನೋಡಿದ್ರೆ ನಿಮಗೆ ತಲೆ ತಿರುಗಬಹುದು. ವಾಸ್ತವವಾಗಿ, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ, ಇದು ವಯಸ್ಕರ ಸುರಕ್ಷತೆಯಲ್ಲಿ 1-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆಗಾಗಿ 0-ಸ್ಟಾರ್ ರೇಟಿಂಗ್ ಪಡೆದಿದೆ.

maruti-suzuki-swift-alto-k10-wagon-r-sales-and-safety-rating

ವ್ಯಾಗನ್ ಆರ್‌ನ ಆರಂಭಿಕ ಎಕ್ಸ್ ಶೋರೂಂ ಬೆಲೆ 5,54,500 ರೂ. ಇದೆ. ಇದು ಪೆಟ್ರೋಲ್ ಎಂಜಿನ್ ನೊಂದಿಗೆ ಪ್ರತಿ ಲೀಟರ್ ಗೆ 25.19 ಕಿ.ಮೀ ಮತ್ತು ಸಿಎನ್ ಜಿಯೊಂದಿಗೆ ಕೆ.ಜಿಗೆ 33.47 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಈ ಸುರಕ್ಷತಾ ರೇಟಿಂಗ್ ನೋಡಿದ ಬಳಿಕ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 16, 2024, 16:21 [IST]
English summary
Maruti suzuki swift alto k10 wagon r sales and safety rating
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+