ರೂ.7 ಲಕ್ಷಕ್ಕಿಂತ ಕಡಿಮೆ ಬೆಲೆ... 25 ಕಿ.ಮೀ ಮೈಲೇಜ್... ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳಿವು!

ಭಾರತದಲ್ಲಿ ಮಧ್ಯಮ ವರ್ಗದವರ ಫೇವರೆಟ್ ಕಾರುಗಳೆಂದು ಜನಪ್ರಿಯವಾಗಿರುವ ಹ್ಯಾಚ್‌ಬ್ಯಾಕ್‌ಗಳನ್ನು ಸಣ್ಣ ಕುಟುಂಬಕ್ಕೆ ಅತ್ಯಂತ ಪರಿಪೂರ್ಣವೆಂದು ಪರಿಗಣಿಸಲಾಗಿದೆ. ಎಸ್‌ಯುವಿಗಳ ಕ್ರೇಜ್ ಎಷ್ಟೇ ಹೆಚ್ಚಿದ್ದರೂ ದೇಶದ ಮಧ್ಯಮ ವರ್ಗದವರಲ್ಲಿ ಇಂದಿಗೂ ಹ್ಯಾಚ್ ಬ್ಯಾಕ್ ಕಾರುಗಳ ಜನಪ್ರಿಯತೆ ಕಡಿಮೆಯಾಗಿಲ್ಲ. ಇದಕ್ಕೆ ನಾವು ಹೇಳಲು ಹೊರಟಿರುವ ಮಾಹಿತಿಯೇ ಸಾಕ್ಷಿಯಾಗಿದೆ.

ಹ್ಯಾಚ್‌ಬ್ಯಾಕ್ ಕಾರುಗಳು ಉತ್ತಮ ಮೈಲೇಜ್ ನೀಡುವುದರ ಜೊತೆಗೆ ಟ್ರಾಫಿಕ್‌ನಲ್ಲಿಯೂ ಓಡಿಸಲು ತುಂಬಾ ಸುಲಭ. ಎಲ್ಲದಕ್ಕಿಂತ ಹೆಚ್ಚಾಗಿ ಬೆಲೆ ತೀರಾ ಕಡಿಮೆಯಿರುವುದರಿಂದಲೆ 2023 ರ ಅಂತ್ಯದ ವೇಳೆಗೆ ಅಂದರೆ ಡಿಸೆಂಬರ್‌ನಲ್ಲಿಯೂ ಹ್ಯಾಚ್‌ಬ್ಯಾಕ್ ಕಾರುಗಳು ಉತ್ತಮವಾಗಿ ಮಾರಾಟವಾಗಿವೆ. ಈಗ ಡಿಸೆಂಬರ್ 2023 ರಲ್ಲಿ ಟಾಪ್-5 ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳನ್ನು ಇಲ್ಲಿ ನೋಡೋಣ.

best-selling-hatchbacks-in-india

ಪಟ್ಟಿಯಲ್ಲಿ ಮೊದಲ ಸ್ಥಾನ ಮಾರುತಿ ಸುಜುಕಿ ಸ್ವಿಫ್ಟ್ ಪಡೆದುಕೊಂಡಿದೆ. ಸ್ವಿಫ್ಟ್ ತನ್ನ ಸೊಗಸಾದ ಡಿಸೈನ್‌ನಿಂದಲೇ ಗ್ರಾಹಕರ ಮನಗೆದ್ದಿದೆ, ತನ್ನ ವಿಭಾಗದಲ್ಲಿನ ಇತರ ಕಾರುಗಳಿಗಿಂತ ಉತ್ತಮ ಮೈಲೇಜ್ ಕೂಡ ನೀಡುತ್ತದೆ. ಇದರ ಎಕ್ಸ್ ಶೋ ರೂಂ ಬೆಲೆಯು ರೂ. 5.99 ಲಕ್ಷದಿಂದ ರೂ. 9.03 ಲಕ್ಷದವರೆಗೆ ಇದೆ. ಡಿಸೆಂಬರ್ 2023 ರಲ್ಲಿ 11,843 ಯುನಿಟ್‌ಗಳು ಮಾರಾಟವಾಗಿವೆ. 2022 ಡಿಸೆಂಬರ್‌ನಲ್ಲಿ 12,061 ಯುನಿಟ್‌ಗಳು ಮಾರಾಟವಾಗಿದ್ದವು.

ಎರಡನೇ ಸ್ಥಾನದಲ್ಲಿ ಮಾರುತಿಯ ಜನಪ್ರಿಯ ಹ್ಯಾಚ್‌ಬ್ಯಾಕ್ ಬಲೆನೊ ಇದೆ. ಈ ಕಾರಿನಲ್ಲಿ, ಕಂಪನಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ನೀಡುತ್ತದೆ. ಇದರಲ್ಲಿ CNG ಆಯ್ಕೆ ಕೂಡ ಇದೆ. ಬಲೆನೊ ಎಕ್ಸ್ ಶೋ ರೂಂ ಬೆಲೆ ರೂ. 6.61 ಲಕ್ಷದಿಂದ ರೂ. 9.88 ಲಕ್ಷವಿದೆ. ಡಿಸೆಂಬರ್ 2023 ರಲ್ಲಿ 10,669 ಯುನಿಟ್‌ಗಳ ಮಾರಾಟ ದಾಖಲಾಗಿದೆ. 2022 ಡಿಸೆಂಬರ್‌ನಲ್ಲಿ 16,932 ಯುನಿಟ್‌ಗಳು ಮಾರಾಟವಾಗಿವೆ.

best-selling-hatchbacks-in-india

ಮಾರುತಿ ವ್ಯಾಗನ್ಆರ್ ದೇಶದಲ್ಲಿ ಮೂರನೇ ಅತಿ ಹೆಚ್ಚು ಮಾರಾಟವಾಗುವ ಹ್ಯಾಚ್‌ಬ್ಯಾಕ್ ಆಗಿದೆ. ಡಿಸೆಂಬರ್ 2023 ರಲ್ಲಿ 8,578 ಯುನಿಟ್‌ಗಳು ಮಾರಾಟವಾಗಿವೆ. ಡಿಸೆಂಬರ್ 2022 ರಲ್ಲಿ 10,181 ಯುನಿಟ್‌ಗಳು ಮಾರಾಟವಾಗಿವೆ. ಮಾರುತಿ ವ್ಯಾಗನ್ಆರ್ 1.0 ಲೀಟರ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ವ್ಯಾಗನ್ಆರ್ ಎಕ್ಸ್ ಶೋ ರೂಂ ಬೆಲೆ ರೂ. 5.54 ಲಕ್ಷದಿಂದ ರೂ. 7.42 ಲಕ್ಷವಿದೆ.

ಹುಂಡೈ ಗ್ರಾಂಡ್ ಐ10 ನಿಯೋಸ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹುಂಡೈ ಗ್ರಾಂಡ್ ಐ10 ನಿಯೋಸ್ ಬೆಲೆ ರೂ. 5.84 ಲಕ್ಷದಿಂದ ರೂ. 8.51 ಲಕ್ಷ (ಎಕ್ಸ್ ಶೋ ರೂಂ)ವಿದೆ. ಹುಂಡೈ ಡಿಸೆಂಬರ್ 2023 ರಲ್ಲಿ ಈ ಹ್ಯಾಚ್‌ಬ್ಯಾಕ್‌ನ 5,247 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2022 ಡಿಸೆಂಬರ್‌ನಲ್ಲಿ ಇದೇ ಕಾರು 8,340 ಯುನಿಟ್‌ಗಳ ಮಾರಾಟವನ್ನು ಕಂಡಿದೆ.

best-selling-hatchbacks-in-india

ಟಾಟಾದ ಟಿಯಾಗೊ ಕಳೆದ ತಿಂಗಳು ದೇಶದಲ್ಲಿ ಹೆಚ್ಚು ಮಾರಾಟವಾದ ಐದನೇ ಹ್ಯಾಚ್‌ಬ್ಯಾಕ್ ಕಾರು. 4-ಸ್ಟಾರ್ GNCAP ಸುರಕ್ಷತಾ ರೇಟಿಂಗ್‌ನೊಂದಿಗೆ ಬರುವ ತನ್ನ ವಿಭಾಗದಲ್ಲಿನ ಏಕೈಕ ಕಾರಿದು. ಡಿಸೆಂಬರ್ 2023 ರಲ್ಲಿ, ಕಂಪನಿಯು ಈ ಕಾರಿನ ಒಟ್ಟು 4,852 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಡಿಸೆಂಬರ್ 2022 ರಲ್ಲಿ 6,052 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Friday, January 12, 2024, 11:27 [IST]
English summary
Maruti swift to tata tiago and hyundai grand i10 nios are the best selling hatchbacks in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+