JSW MG ಮೋಟಾರ್ ಹೊಸ ಕಾರಿನ ಬಿಡುಗಡೆಗೆ ದಿನಗಣನೆ: ವಿಶೇಷತೆಗಳೇನು?

JSW MG ಮೋಟಾರ್ ಭಾರತದಲ್ಲಿ ತನ್ನ ಹೊಸ ಕಾರು ಬಿಡುಗಡೆಗೆ ಸಜ್ಜಾಗಿದೆ. ಈ ಹೊಸ ಕಾರು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದ್ದು, 'ವುಲಿಂಗ್ ಕ್ಲೌಡ್ EV' ಹೆಸರಿನಲ್ಲಿ ಜನಪ್ರಿಯತೆ ಗಳಿಸಿದೆ. ಇದೀಗ ಈ ಕಾರನ್ನು ಭಾರತದಲ್ಲಿ 'MG ವಿಂಡ್ಸರ್ EV' ಹೆಸರಿನಲ್ಲಿ ಕಂಪನಿಯು ಸೆಪ್ಟೆಂಬರ್ 11 ರಂದು ಬಿಡುಗಡೆ ಮಾಡಲಿದೆ. ಕಾರು ತಯಾರಕರು ಕಳೆದ ಎರಡು ವಾರಗಳಿಂದ ಕಾರಿನ ಟೀಸರ್ ಚಿತ್ರಗಳ ಮೂಲಕ ನಿರೀಕ್ಷೆಗಳನ್ನು ಹೆಚ್ಚಿಸಿದ್ದಾರೆ. ಇದೀಗ JSW MG ಮೋಟಾರ್ ಮುಂಬರುವ ವಿಂಡ್ಸರ್ EV ಯ ಅಲಾಯ್ ವೀಲ್ ವಿನ್ಯಾಸವನ್ನು ಬಹಿರಂಗಪಡಿಸಿದೆ.

MG ವಿಂಡ್ಸರ್ EV ಯ ಟಾಪ್-ಸ್ಪೆಕ್ ಮಾಡೆಲ್ ಡೈಮಂಡ್-ಕಟ್ ವಿನ್ಯಾಸದೊಂದಿಗೆ 18-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿರುತ್ತದೆ ಎಂಬುದನ್ನು ಈ ಟೀಸರ್ ಬಹಿರಂಗಪಡಿಸಿದೆ. ಟೈರ್ ಆಯಾಮಗಳು 215/55 R18 ಎಂದು ನಿರೀಕ್ಷಿಸಲಾಗಿದ್ದು, ಬಿಡುಗಡೆಯಾದ ನಂತರ, MG ವಿಂಡ್ಸರ್ EV ಇತ್ತೀಚೆಗೆ ಬಿಡುಗಡೆಯಾದ Tata Curvv EV ಜೊತೆಗೆ BYD e6 ನೊಂದಿಗೆ ಸ್ಪರ್ಧಿಸುತ್ತದೆ.

mg-motor-launches-new-teaser-of-windsor-ev

ಕಾರಿನ ಡಿಸೈನ್ ಬಗ್ಗೆ ಹೇಳುವುದಾದರೆ MG ಮೋಟಾರ್ ಈ ಹೊಸ ವಿನ್ಯಾಸವನ್ನು AeroGlide ಡಿಸೈನ್ ಎಂದು ಹೆಸರಿಸಿದೆ. ಹಾಗಯೇ ಕಾರಿನಲ್ಲಿ 135 ಡಿಗ್ರಿ ರಿಕ್ಲೈನಬಲ್ ಸೀಟ್‌ಗಳನ್ನು ನೀಡಲಾಗಿದೆ. ಇದು ಏರೋಪ್ಲೇನ್‌ನಲ್ಲಿ ಬಿಸಿನೆಸ್ ಕ್ಲಾಸ್‌ನಂತಹ ಸೌಕರ್ಯವನ್ನು ಹೊಂದಿರಲಿದೆ. ಅಲ್ಲದೆ, ದೊಡ್ಡ 15-ಇಂಚಿನ ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೀಡಲಾಗಿದೆ.

ಎಂಜಿ ವಿಂಡ್ಸರ್ ಇವಿ 50.6 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಸಾಧ್ಯತೆಯಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 460 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಬಹುದು ಎಂದು ಹೇಳಲಾಗಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 136 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 200 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಬಹುದು ಎನ್ನಲಾಗಿದೆ. ಇದು 5-ಆಸನಗಳನ್ನು ಸಹ ಪಡೆದುಕೊಂಡಿರಲಿದೆ.

mg-motor-launches-new-teaser-of-windsor-ev

ಹೊಸ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಹೊಸ ಎಂಜಿ ವಿಂಡ್ಸರ್ ಇವಿ ಕಾರಿಗಾಗಿ ದೇಶಾದ್ಯಂತ ಆಯ್ದ ಡೀಲರ್‌ಶಿಪ್‌ಗಳು ಗ್ರಾಹಕರಿಂದ ಆರ್ಡರ್ ಪಡೆಯುವುದನ್ನು ಶುರು ಮಾಡಿವೆ ಎಂದು ತಿಳಿದುಬಂದಿದೆ. ಹೊಸ ವಿಂಡ್ಸರ್ ಇವಿ ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದ್ದು, ರೂ.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಹೊಸ MG ವಿಂಡ್ಸರ್ EV ಕಾರು ZS EV ಮತ್ತು ಕಾಮೆಟ್ EV ನಂತರ ಭಾರತದಲ್ಲಿ ಕಂಪನಿಯ ಮೂರನೇ ಎಲೆಕ್ಟ್ರಿಕ್ ಕಾರ್ ಆಗಿ ಬರಲಿದೆ. ಭಾರತದಲ್ಲಿ ಈಗಾಗಲೇ ಮಾರಾಟದಲ್ಲಿರುವ ಅದರ ಎರಡು ಎಲೆಕ್ಟ್ರಿಕ್ ಕಾರುಗಳ ನಡುವೆ ಸ್ಥಾನ ಪಡೆಯಲಿದೆ. ಈ ಹೊಸ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, September 4, 2024, 12:30 [IST]
English summary
Mg motor launches new teaser of windsor ev
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+