Tata-Maruti Suzuki-Hyundai: ದೇಶದಲ್ಲಿ ಮಾರಾಟವಾದ ನಂಬರ್ 1 ಕಾರು ಇದು.. ಜನರು ಕ್ಯೂ ಬೇಕಾದರೂ ನಿಲ್ಲುವರು!
ದೇಶದ ಕಾರು ಕಂಪನಿಗಳಿಗೆ 2023 ಮಹತ್ವದ ವರ್ಷವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿಗಳನ್ನು ಸೇಲ್ ಮಾಡಿವೆ. ಕಳೆದ ವರ್ಷ ಅತಿಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿಯ 7, ಟಾಟಾದ 2 ಮತ್ತು ಹ್ಯುಂಡೈನ 1 ಕಾರು ಇದೆ.
ಕಳೆದ ವರ್ಷ (2023) ಭಾರತದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಕಾರುಗಳ ಪಟ್ಟಿಯ ಮೊದಲ ಸ್ಥಾನದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಇದ್ದು, ಕಂಪನಿಯು 2,03,469 ಯುನಿಟ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಸೇಲ್ ಮಾಡಿದೆ. 2022ಕ್ಕೆ ಹೋಲಿಕೆ ಮಾಡಿದರೆ (1,76,424 ಯುನಿಟ್) ಶೇಕಡ 15% ಪ್ರಗತಿ ಸಾಧಿಸಿದೆ. ಪ್ರಸ್ತುತ ಮಾರುತಿ ಸುಜುಕಿ ಸ್ವಿಫ್ಟ್ ರೂ.5.99 ಲಕ್ಷದಿಂದ ರೂ.9.03 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.

ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಸ್ವಿಫ್ಟ್ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 22.38 ರಿಂದ 30.90 ಕಿ.ಮೀ ಮೈಲೇಜ್ ನೀಡುತ್ತದೆ. 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ಸಲುವಾಗಿ ಏರ್ ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.
ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ವ್ಯಾಗನ್-ಆರ್ (Maruti Suzuki Wagon-R) ಇದ್ದು, ಮಾರಾಟದಲ್ಲಿ ಕೊಂಚ ಹಿನ್ನಡೆ ಅನುಭವಿಸಿದೆ. ಆದರೂ ಪ್ರಭಾವ ಕಡಿಮೆಯಾಗಿಲ್ಲ. 2023ರಲ್ಲಿ ಕಂಪನಿಯು 2,01,301 ಯುನಿಟ್ ಕಾರುಗಳನ್ನು ಮಾರಾಟಗೊಳಿಸಿದೆ. ಅದರ ಹಿಂದಿನ ವರ್ಷ 2022ಕ್ಕೆ ಹೋಲಿಸಿದರೆ (2,17,317 ಯುನಿಟ್) ಶೇಕಡ -7% ಇಳಿಕೆ ಕಂಡಿದೆ. ವ್ಯಾಗನ್-ಆರ್ ರೂ.5.54 ಲಕ್ಷದಿಂದ ರೂ.7.42 ಲಕ್ಷ ಎಕ್ಸ್ ಶೋ ರೂಂ ಬೆಲೆಯನ್ನು ಪಡೆದಿದೆ.

ಮೂರನೇ ಸ್ಥಾನವನ್ನು ಮಾರುತಿ ಸುಜುಕಿ ಬಲೆನೊ (Maruti Suzuki Baleno) ಅಲಂಕರಿಸಿದೆ. 2023ರಲ್ಲಿ ಒಟ್ಟು 1,93,989 ಯುನಿಟ್ ಬಲೆನೊ ಕಾರುಗಳನ್ನು ಮಾರಾಟಗೊಳಿಸಲಾಗಿದ್ದು, 2022ಕ್ಕೆ ಹೋಲಿಕೆ ಮಾಡಿದರೆ (1,85,665 ಯುನಿಟ್) ಶೇಕಡ 4% ಬೆಳವಣಿಗೆ ಕಂಡಿದೆ. ನಾಲ್ಕನೇ ಸ್ಥಾನದಲ್ಲಿರುವ ಮಾರುತಿ ಸುಜುಕಿ ಬ್ರೆಝಾಗೆ ಕಂಡು ಕೇಳರಿಯದ ಬೇಡಿಕೆ ಬಂದಿದ್ದು, ಕಳೆದ ವರ್ಷ 1,70,588 ಯುನಿಟ್ ಬ್ರೆಝಾ ಸೇಲ್ ಮಾಡಲಾಗಿದ್ದು, ಶೇಕಡ 31% ಪ್ರಗತಿ ಸಾಧಿಸಲಾಗಿದೆ
ಐದನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್ ಎಸ್‌ಯುವಿ ಇದ್ದು, ಕಂಪನಿಯು 2023ರಲ್ಲಿ 1,70,311 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, 2022ಕ್ಕೆ ಹೋಲಿಸಿದರೆ (1,68,278 ಯುನಿಟ್) ಕೇವಲ 1% ಮುನ್ನಡೆ ಕಾಯ್ದುಕೊಂಡಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ರೂ.8.10 ಲಕ್ಷದಿಂದ ರೂ.15.50 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ.

ಆರನೇ ಸ್ಥಾನವನ್ನು ಮಾರುತಿ ಸುಜುಕಿ ಡಿಸೈರ್ (Maruti Suzuki Dzire) ತನ್ನದಾಗಿಕೊಂಡಿದ್ದು, ಹೋದ ವರ್ಷ (2023) 1,57,522 ಯುನಿಟ್ ಡಿಸೈರ್ ಮಾರಾಟವಾಗಿದ್ದು, 2022ಕ್ಕೆ ಹೋಲಿಕೆ ಮಾಡಿದರೆ ಶೇಕಡ 1% ಕುಸಿತವಾಗಿದೆ. ಏಳನೇ ಹ್ಯುಂಡೈ ಕ್ರೆಟಾ (Hyundai Creta) ಇದ್ದು, ಕಂಪನಿಯು 2023ರಲ್ಲಿ 1,57,311 ಯುನಿಟ್ ಸೇಲ್ ಮಾಡಿ, 2022ಕ್ಕೆ ಹೋಲಿಕೆ ಮಾಡಿದರೆ (1,40,895 ಯುನಿಟ್) ಶೇಕಡ 12% ಬೆಳವಣಿಗೆ ಸಾಧಿಸಿದೆ.
ಎಂಟನೇ ಸ್ಥಾನದಲ್ಲಿ ಟಾಟಾ ಪಂಚ್ (Tata Punch) ಇದ್ದು, ಹೋದ ವರ್ಷ (2023) ಕಂಪನಿಯು 1,50,182 ಯುನಿಟ್ ಮಾರಾಟಗೊಳಿಸಿ, ಶೇಕಡ 16% ಬೆಳವಣಿಗೆ ಸಾಧಿಸಿದೆ. ಅದೇ ರೀತಿಯಲ್ಲಿ ಮಾರುತಿ ಇಕೋ ವ್ಯಾನ್ ಒಂಬತ್ತನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದೆ. 1,36,010 ಯುನಿಟ್ ಸೇಲ್ ಆಗಿದ್ದು, ಶೇಕಡ 9% ಬೆಳವಣಿಗೆಯಾಗಿದೆ. ಹತ್ತನೇ ಸ್ಥಾನವನ್ನು ಮಾರುತಿ ಎರ್ಟಿಗಾ (1,29,968 ಯುನಿಟ್) ಪಡೆದುಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








