ಟಾಟಾಗೆ ಸವಾಲಾಗಿ eC3 ಎಲೆಕ್ಟ್ರಿಕ್ ಕಾರಿನ ಶೈನ್ ರೂಪಾಂತರ ಬಿಡುಗಡೆಗೊಳಿಸಿದ ಸಿಟ್ರನ್
ಜನಪ್ರಿಯ ಫ್ರೆಂಚ್ ಕಾರು ತಯಾರಕ ಕಂಪನಿಯಾದ ಸಿಟ್ರನ್ ತನ್ನ eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಹೊಸ ಶೈನ್ ರೂಪಾಂತರವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸಿಟ್ರನ್ eC3 ಶೈನ್ (Citroen eC3 Shine) ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13.20 ಲಕ್ಷವಾಗಿದೆ.
ಹೊಸ ಶೈನ್ ರೂಪಾಂತರವು ಭಾರತದಲ್ಲಿನ ಆಲ್-ಎಲೆಕ್ಟ್ರಿಕ್ ಸಿಟ್ರನ್ eC3 ಸರಣಿಯ ಹೊಸ ಟಾಪ್-ಸ್ಪೆಕ್ ಆವೃತ್ತಿಯಾಗಿದೆ. ಹೊಸ ಶೈನ್ ರೂಪಾಂತರಗಳ ಪರಿಚಯದೊಂದಿಗೆ, ಲೈವ್, ಫೀಲ್ ಮತ್ತು ಶೈನ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. 2024ರ ಹೊಸ ಸಿಟ್ರನ್ eC3 ಶೈನ್ ಲೈವ್ ರೂಪಾಂತರದೊಂದಿಗೆ ಪ್ರಾರಂಭವಾಗುತ್ತದೆ, ಇದರ ಬೆಲೆ ರೂ. 11,61,000 ಆಗಿದ್ದರೆ, eC3 ಫೀಲ್ ರೂಪಾಂತರ ಬೆಲೆಯು ರೂ.12,69,800 ಆಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ವೈಬ್ ಪ್ಯಾಕ್‌ನೊಂದಿಗೆ eC3 ಫೀಲ್ ರೂಪಾಂತರದ ಬೆಲೆಯು ರೂ.12,84,800 ಆಗಿದ್ದು, ಫೀಲ್ ವೈಬ್ ಪ್ಯಾಕ್‌ನ ಡ್ಯುಯಲ್-ಟೋನ್ ಆವೃತ್ತಿಯು ಈಗ ರೂ.12,99,800 ಆಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಪ್ರಕಾರವಾಗಿದೆ. ಈ ಹೊಸ ಸಿಟ್ರನ್ eC3 ಶೈನ್ ಲೈವ್ ರೂಪಾಂತರದ ಬೆಲೆಯು ರೂ.13,19,800 ಆಗಿದೆ.
ಇನ್ನು ಈ ಸಿಟ್ರನ್ eC3 ಶೈನ್‌ಗೆ ವೈಬ್ ಪ್ಯಾಕ್ ಅನ್ನು ಸೇರಿಸಿದ ಬೆಲೆಯು ರೂ.13,34,800 ಆಗಿದ್ದು, ಆದರೆ eC3 ಶೈನ್ ಡ್ಯುಯಲ್ ಟೋನ್ ವೈಬ್ ಪ್ಯಾಕ್ ಮಾದರಿಯ ಬೆಲೆಯು ರೂ.13,49,800 ಆಗಿದೆ. ಈ ಎಲ್ಲಾ ಬೆಲೆಗಳು ಕ್ಸ್ ಶೋರೂಂ ಪ್ರಕಾರವಾಗಿದೆ. ಈ ಹೊಸ ಶೈನ್ ರೂಪಾಂತರದಲ್ಲಿ ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು ಮತ್ತು 15-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳನ್ನು ನೀಡಿದೆ.

ಈ ಹೊಸ eC3 ರೂಪಾಂತರದ ಇತರ ಸೇರ್ಪಡೆಗಳು ಲೆದರ್ ಸುತ್ತುವ ಸ್ಟೀರಿಂಗ್ ವೀಲ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳು, ಹಿಂಭಾಗದ ವೈಪರ್ ಮತ್ತು ವಾಷರ್, ಮತ್ತು ಫೀಲ್ ರೂಪಾಂತರವು ನೀಡುವ ಎಲ್ಲದರ ಜೊತೆಗೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ. ಯಾಂತ್ರಿಕವಾಗಿ, ಹೊಸ eC3 ಶೈನ್ ಭಾರತದಲ್ಲಿ ಈಗಾಗಲೇ ಮಾರಾಟದಲ್ಲಿರುವ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಇತರ ಆವೃತ್ತಿಗಳಂತೆಯೇ ಇದೆ.
ಸಿಟ್ರನ್ eC3 ಕಾರಿನಲ್ಲಿ 29.2kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ಸಿಂಗಲ್ ಚಾರ್ಜ್‌ನಲ್ಲಿ 320 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದರ ಬ್ಯಾಟರಿ ಪ್ಯಾಕ್ ಮುಂಭಾಗದ ಚಕ್ರಗಳಿ ಪವರ್ ಅನ್ನು ನೀಡುವ ಏಕೈಕ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದ್ದು, ಇದು 56 bhp ಪವರ್ ಮತ್ತು 143 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 6.8 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 60 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಲೆಕ್ಟ್ರಿಕ್ ಕಾರು 107 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಎರಡು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುತ್ತದೆ. ಇದು ಇಕೋ ಮತ್ತು ಸ್ಟ್ಯಾಂಡರ್ಡ್ ಆಗಿದೆ. ಜೊತೆಗೆ ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ.
ಈ ಸಿಟ್ರನ್ eC3 ಎಲೆಕ್ಟ್ರಿಕ್ ಕಾರು ರಡು ಚಾರ್ಜಿಂಗ್ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ. ಇದು DC ಫಾಸ್ಟ್ ಚಾರ್ಜರ್ ಮತ್ತು 3.3kW ಆನ್‌ಬೋರ್ಡ್ AC ಚಾರ್ಜರ್ ಆಗಿದೆ. ಹೊಸ ಸಿಟ್ರನ್ eC3 ಶೈನ್ ಆಗಮನದ ಮೂಲಕ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ಗೆ ಹೊಸ ಟಾಪ್-ಸ್ಪೆಕ್ ಟ್ರಿಮ್ ಮಟ್ಟವನ್ನು ಸೇರಿಸಿದೆ. ಹೆಚ್ಚುವರಿ ರೂ. 50,000 ಕ್ಕೆ ವೈಶಿಷ್ಟ್ಯದ ಅಪ್‌ಗ್ರೇಡ್‌ಗಳು ಚಮತ್ಕಾರಿ ಫ್ರೆಂಚ್ ಎಲೆಕ್ಟ್ರಿಕ್ ಹ್ಯಾಚ್‌ಗೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








