ಜನಸಾಮಾನ್ಯರ ಮಾರುತಿ ಕಾರು: ಸೇಪ್ಟಿಯಲ್ಲಿ ಸ್ವಿಫ್ಟ್ ನೆಕ್ಸ್ಟ್ ಲೆವೆಲ್, ಬೈಕ್‌ಗಿಂತ ಹೆಚ್ಚು ಮೈಲೇಜ್?
ಭಾರತದಲ್ಲಿ ಅದೇಷ್ಟೇ ಅತ್ಯಾಧುನಿಕ ಕಾರುಗಳು ಬಂದರೂ ಮಾರುತಿ ಸ್ವಿಫ್ಟ್ ಕಾರಿಗೆ ತಮ್ಮದ ಆದ ಅಭಿಮಾನಿ ಬಳಗವಿದೆ. ಈ ಬಹುಬೇಡಿಕೆಯ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift ) ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಯಾಗಿತ್ತು. ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಇಂದಿನ ಸ್ವಿಫ್ಟ್ 2018ರಲ್ಲಿ ಎಂಟ್ರಿಯಾದ ಮಾದರಿಯಾಗಿದೆ.
ಇದೀಗ ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಸ್ವಿಫ್ಟ್‌ನ ನ್ಯೂ ಜನರೇಷನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಈ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಭಾರತದಲ್ಲಿ 2024ರ ಮೇ 9 ರಂದು ಬಿಡುಗಡೆಯಾಗಲಿದೆ. ಈ ಕಾರಿನ ಖರೀದಿಗಾಗಿ ಈಗಾಗಲೇ ರಾಷ್ಟ್ರವ್ಯಾಪಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಆಸಕ್ತ ಗ್ರಾಹಕರು ರೂ.11,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

2024ರ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ಹೊಸ Z-ಸೀರಿಸ್ ಪೆಟ್ರೋಲ್ ಎಂಜಿನ್ ಮತ್ತು ಫ್ರಾಂಕ್ಸ್‌ನಿಂದ ಪ್ರೇರಿತವಾದ ಒಳಾಂಗಣವನ್ನು ಗಮನಾರ್ಹವಾಗಿ ಸುಧಾರಿತ ವಿನ್ಯಾಸದೊಂದಿಗೆ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ. ಹೊಸ ಎಂಜಿನ್ 3-ಸಿಲಿಂಡರ್ ಯುನಿಟ್ ಆಗಿದ್ದು, ಇದು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದ ಆಯ್ಕೆಯೊಂದಿಗೆ ಲಭ್ಯವಿರುತ್ತದೆ. ಸೋರಿಕೆಯಾದ ಮಾಹಿತಿಯ ಪ್ರಕಾರ, ಹೊಸ ಸ್ವಿಫ್ಟ್ 5,700rpm ನಲ್ಲಿ 81.6 PS ಮತ್ತು 4,300rpm ನಲ್ಲಿ 112Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇದು ಹಿಂದಿನ ಮಾದರಿಗೆ ಹೋಲಿಸಿದರೆ ಹೆಚ್ಚಿನ 8.2PS ಪವರ್ ಮತ್ತು 1Nm ಟಾರ್ಕ್ ಅನ್ನು ಹೆಚ್ಚು ಉತ್ಪಾದಿಸುತ್ತದೆ. ಸುಜುಕಿಯ Z-ಸೀರಿಸ್ ಗ್ಯಾಸೋಲಿನ್ ಎಂಜಿನ್ 25.72 ಕಿ.ಮೀ ಮೈಲೇಜ್ ಅನ್ನು ಎಂದು ನಿರೀಕ್ಷಿಸಲಾಗಿದೆ. ಇದು ಹಿಂದಿನ ಆವೃತ್ತಿಗಿಂತ 3.34 ಕಿ.ಮೀ (ಮ್ಯಾನುವಲ್ ಟ್ರಾನ್ಸ್‌ಮಿಷನ್) ಮತ್ತು 3.16 (ಆಟೋಮ್ಯಾಟಿಕ್ ಗೇರ್ ಬಾಕ್ಸ್) ಸುಧಾರಣೆಯಾಗಿದೆ.

ಪ್ರಸ್ತುತ ಮಾದರಿಯಂತೆಯೇ, ನಾಲ್ಕನೇ ತಲೆಮಾರಿನ ಸ್ವಿಫ್ಟ್ 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಎರಡನ್ನೂ ನೀಡುವ ಸಾಧ್ಯತೆಯಿದೆ. ಇನ್ನು ಬಿಡುಗಡೆಗೆ ಕೆಲವು ದಿನಗಳು ಬಾಕಿಯಿರುವಾಗಲೇ ಡೀಲರ್‌ಶಿಪ್ ಮುಂದೆ ನೂತನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ನಿಂತಿರುವ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಆಕರ್ಷಕವಾದ ವಿನ್ಯಾಸ (ಡಿಸೈನ್)ವನ್ನು ಹೊಂದಿದೆ.
ಈ ಕಾರಿನ ಮುಂಭಾಗ (ಫ್ರಂಟ್) ನವೀನವಾಗಿರುವ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ - ಆಕಾರದ ಎಲ್ಇಡಿ ಡಿಆರ್‌ಎಲ್‌ಗಳು ಹಾಗೂ ಇಂಡಿಕೇಟರ್ ಗಳಲ್ಲಿ ಹ್ಯಾಲೊಜೆನ್ ಬಲ್ಬ್ ಗಳನ್ನು ಒಳಗೊಂಡಿದೆ. ಗ್ರಿಲ್ ಮೇಲ್ಭಾಗದಲ್ಲಿ 'ಸುಜುಕಿ' ಲೋಗೋ (ಲಾಂಛನ)ವನ್ನು ಪಡೆದಿದ್ದು, ಎಲ್ಇಡಿ ಫಾಗ್ ಲೈಟ್‌ನ್ನು ತನ್ನದಾಗಿಸಿಕೊಂಡಿದೆ. ಈ ಕಾರಿನ ಬದಿ (ಸೈಡ್)ಗಳ ವಿನ್ಯಾಸವು ಅತ್ಯುತ್ತಮವಾಗಿದೆ.

ಇದರೊಂದಿಗೆ 16-ಇಂಚಿನ 10-ಸ್ಪೋಕ್ ಡೈಮಂಡ್ ಕಟ್ ಅಲಾಯ್ ವೀಲ್ಸ್, ಹಿಂಬದಿಯ ಬಾಗಿಲುಗಳಲ್ಲಿ ಸಾಂಪ್ರದಾಯಕ ಶೈಲಿ (Traditional-Style)ಯಲ್ಲಿರುವ ಹ್ಯಾಂಡಲ್ (ಹಿಡಿಕೆ)ಗಳನ್ನು ಸಹ ಪಡೆದಿದೆ. ಹಿಂಭಾಗವು ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, ಸಿ - ಆಕಾರಕ್ಕೆ ಹೋಲುವ ಎಲ್ಇಡಿ ಟೈಲ್ ಲೈಟ್‌ಗಳನ್ನು ಹೊಂದಿದೆ. ಒಳಭಾಗದಲ್ಲಿಯೂ ನೂತನ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆದಿದೆ.
ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಹಳೆಯ ಮಾದರಿಯಂತೆಯೇ ಬೂಟ್ ಸ್ಪೇಸ್ ಹೊಂದಿದ್ದು, ಮುಂಭಾಗದಲ್ಲಿರುವ ಡ್ಯಾಶ್‌ಬೋರ್ಡ್ ಮೇಲೆ 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಹಾಗೂ ಜಬರ್ದಸ್ ಸ್ಟೀರಿಂಗ್ ವೀಲ್ ಒಳಗೊಂಡಿರುವುದನ್ನು ನೋಡಬಹುದು. ಹೊಸ ಸ್ವಿಫ್ಟ್ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications