1-ಲೀ. ಎಂಜಿನ್‌ನೊಂದಿಗೆ ಬರುವ ಅತ್ಯಂತ ಪವರ್‌ಫುಲ್ ಸೆಡಾನ್ ಮತ್ತು ಎಸ್‌ಯುವಿಗಳು!
ಹೊಸ ತಂತ್ರಜ್ಞಾನದೊಂದಿಗೆ ಎಂಜಿನ್ ಅಭಿವೃದ್ಧಿ ಮತ್ತು ಟರ್ಬೋಚಾರ್ಜರ್‌ನ ಮಾಂತ್ರಿಕತೆಯೊಂದಿಗೆ, 1.0 - ಲೀಟರ್ ಟರ್ಬೋ ಎಂಜಿನ್ ಹೊಂದಿರುವ ಕಾರುಗಳನ್ನು ಓಡಿಸುವುದರಲ್ಲಿ ಏನೋ ರೋಮಾಂಚನಕಾರಿ ಅನುಭವ ಇರುತ್ತದೆ. ಭಾರತದಲ್ಲಿ ಸದ್ಯ 1.0-ಲೀಟರ್ ಎಂಜಿನ್ ಹೊಂದಿರುವ 5 ಅತ್ಯಂತ ಪವರ್‌ಫುಲ್ ಕಾರುಗಳನ್ನು ಇಲ್ಲಿ ನೋಡೋಣ.
ಮೊದಲಿಗೆ ಜರ್ಮನ್ ತಯಾರಕರು ತಮ್ಮ ಕಾರುಗಳೊಂದಿಗೆ 1.0-ಲೀಟರ್ ಟರ್ಬೋ ಎಂಜಿನ್‌ಗಳ ಪವರ್ ನಮಗೆ ತೋರಿಸಿದ್ದಾರೆ. ಈಗ, ದಕ್ಷಿಣ ಕೊರಿಯ ತಯಾರಕರು 1.0-ಲೀಟರ್ ಎಂಜಿನ್ ಎಷ್ಟು ವಿನೋದಮಯವಾಗಿರಬಹುದು ಎಂಬುದನ್ನು ನಮಗೆ ತೋರಿಸಿದ್ದಾರೆ. ಇದು ಭಾರತದಲ್ಲಿ ಯಶಸ್ಸು ಕಂಡಿದ್ದೇ ತಡ ತಯಾರಕರನ್ನು ಹೆಚ್ಚಿನ 1.0-ಲೀಟರ್ ಎಂಜಿನ್‌ಗಳನ್ನು ನೀಡಲು ಒತ್ತಾಯಿಸಿದೆ.

ಕಿಯಾ ಸಾನೆಟ್/ಹ್ಯುಂಡೈ ವೆನ್ಯೂ: ಕಿಯಾ ಸಾನೆಟ್ ಮತ್ತು ಹ್ಯುಂಡೈ ವೆನ್ಯೂ ಪ್ಲಾಟ್‌ಫಾರ್ಮ್‌ನಿಂದ ಹಿಡಿದು ಅವುಗಳ ಎಂಜಿನ್ ಆಯ್ಕೆಗಳವರೆಗೆ ಬಹಳಷ್ಟನ್ನು ಹಂಚಿಕೊಂಡಿವೆ. 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಎಸ್‌ಯುವಿ ಹುಡುಕುವವರಿಗೆ ಇವೆರಡೂ ಕಾರುಗಳು ಉತ್ತಮ ಆಯ್ಕೆಯಾಗಿವೆ. 118bhp ಪವರ್ ಹೊರಹಾಕುವ ಎಂಜಿನ್‌ನೊಂದಿಗೆ ವೆನ್ಯೂ ಹಾಗೂ ಸಾನೆಟ್ ಲಭ್ಯವಿದೆ.
ಹುಂಡೈ i20 N ಲೈನ್: ಕಾರು ಉತ್ಸಾಹಿಗಳಿಗೆ ಅತ್ಯಂತ ಮೋಜಿನ-ಡ್ರೈವ್ ಮಾಡಲು ಸಣ್ಣ ಹ್ಯಾಚ್‌ಬ್ಯಾಕ್ ಹುಡುಕುತ್ತಿದ್ದರೆ, ಹ್ಯುಂಡೈ i20 ಇದೆ. ಇದು 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 118bhp ಪವರ್ ಮತ್ತು 172Nm ಟಾರ್ಕ್ ಅನ್ನು ಹೊರಹಾಕುತ್ತದೆ. ಮ್ಯಾನುವಲ್ ಅಥವಾ DCT ಗೇರ್‌ಬಾಕ್ಸ್‌ಗೆ ಆಯ್ಕೆ ಹೊಂದಿದೆ. ಇದರ ಎಕ್ಸಾಸ್ಟ್ ಕೂಡ ಮೋಜಿನ ಸವಾರಿ ಅನುಭವ ನೀಡುತ್ತದೆ.

ಮಾರುತಿ ಸುಜುಕಿ ಫ್ರಾಂಕ್ಸ್: ನೀವು ಮೇಡ್-ಇನ್-ಇಂಡಿಯಾ ವಾಹನವನ್ನು ಹುಡುಕುತ್ತಿದ್ದರೇ, ಮಾರುತಿ ಸುಜುಕಿ ಫ್ರಾಂಕ್ಸ್ ಇದೆ ನೋಡಿ. ಏಕೆಂದರೆ ಬಲೆನೊ ಆಧಾರಿತ ಕ್ರಾಸ್ಒವರ್ 1.0-ಲೀಟರ್ ಬೂಸ್ಟರ್‌ಜೆಟ್ ಎಂಜಿನ್ ಅನ್ನು ಪಡೆದಿದೆ. ಇದು ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್‌ನೊಂದಿಗೆ 99bhp ಪವರ್ ಮತ್ತು 148Nm ಟಾರ್ಕ್ ಹೊರಹಾಕುತ್ತದೆ.
ಸ್ಕೋಡಾ ಸ್ಲಾವಿಯಾ/ಫೋಕ್ಸ್‌ವ್ಯಾಗನ್ ವರ್ಟಸ್: ಫೋಕ್ಸ್‌ವ್ಯಾಗನ್ ವರ್ಟಸ್ ಅಥವಾ ಸ್ಕೋಡಾ ಸ್ಲಾವಿಯಾ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಜರ್ಮನ್ ತಯಾರಕರಿಂದ ಭಾರತದಲ್ಲಿ ಅತ್ಯುತ್ತಮ ಕೊಡುಗೆಗಳಾಗಿವೆ. ಹ್ಯುಂಡೈ ಮತ್ತು ಕಿಯಾದಂತೆ, VW ಮತ್ತು ಸ್ಕೋಡಾ ಒಂದೇ ಪ್ಲಾಟ್‌ಫಾರ್ಮ್ ಮತ್ತು ಎಂಜಿನ್‌ಗಳನ್ನು ಹಂಚಿಕೊಳ್ಳುತ್ತವೆ. 1.0-ಲೀಟರ್ ಎಂಜಿನ್‌ನೊಂದಿಗೆ ಇವು 114bhp ಪವರ್ ಮತ್ತು 178Nm ಟಾರ್ಕ್ ಹೊರಹಾಕುತ್ತವೆ. ಮ್ಯಾನ್ಯುವಲ್ ಗೇರ್‌ಬಾಕ್ಸ್ ಅಥವಾ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಯ್ಕೆಯಿದೆ.

ಸ್ಕೋಡಾ ಕುಶಾಕ್/ವೋಕ್ಸ್‌ವ್ಯಾಗನ್ ಟೈಗನ್: ಜರ್ಮನ್ ವಾಹನ ತಯಾರಕರ ಮತ್ತೆರಡು ಕೊಡುಗೆಗಳೆಂದರೆ ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್, ಇವು 114bhp ಪವರ್ ಹೊರಹಾಕುವ 1.0-ಲೀಟರ್ ಎಂಜಿನ್ ಆಯ್ಕೆಗಳನ್ನು ಪಡೆದಿವೆ. ಕುಶಾಕ್ ಮತ್ತು ಟೈಗುನ್ ಎರಡು ಕಾರು ತಯಾರಕರಿಗೆ ಹೆಚ್ಚು ಮಾರಾಟವಾದವುಗಳಲ್ಲಿ ಒಂದಾಗಿವೆ. ಇವು ಒಂದೇ ರೀತಿಯ ಆಧಾರವನ್ನು ಹಂಚಿಕೊಳ್ಳುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








