ನಿಮ್ಮ ಬಳಿ 10 ಲಕ್ಷ ರೂಪಾಯಿ ಇದ್ರೆ ಸಾಕು.. ಈ ಸುರಕ್ಷಿತ ಕಾರುಗಳನ್ನು ಮನೆಗೆ ತರಬಹುದು!

ಹೊಸ ಕಾರು ಖರೀದಿಸುವ ಬಹುತೇಕರು, ಅದರ ಬೆಲೆಗಿಂತ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಕುಟುಂಬಕ್ಕೆ ಸೂಕ್ತ ರಕ್ಷಣೆಯನ್ನು ಒದಗಿಸುವ ವಾಹನಗಳನ್ನು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಇಲ್ಲಿ ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಗೆ ಒಳಪಟ್ಟು, ರೂ.10 ಲಕ್ಷದೊಳಗೆ ಸಿಗುವ ಸೇಫ್ಟಿ ಕಾರುಗಳ ಕುರಿತು ವಿವರಿಸಿದ್ದೇವೆ.

ಮೊದಲಿಗೆ ಟಾಟಾ ಪಂಚ್ (Tata Punch) ಮೈಕ್ರೋ ಎಸ್‌ಯುವಿಯ ಬಗ್ಗೆ ಮಾತನಾಡೋಣ. ಇದು ರೂ.6.1 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ವಯಸ್ಕರ ರಕ್ಷಣೆ ವಿಭಾಗ (Adult Protection Category)ದಲ್ಲಿ 17ಕ್ಕೆ 16.45 ಅಂಕಗಳನ್ನು ಗಳಿಸುವ ಮೂಲಕ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗ (Child Protection Category)ದಲ್ಲಿ 49ಕ್ಕೆ 40.89 ಅಂಕಗಳನ್ನು ಪಡೆದು, 4-ಸ್ಟಾರ್ ರೇಟಿಂಗ್ ಅನ್ನು ಹೊಂದಿದೆ.

Safest Cars Under Rs 10 Lakhs Tata Punch Nexon Altroz Mahindra Xuv300 Nissan Magnite

ಟಾಟಾ ಪಂಚ್‌ ಸಾಕಷ್ಟು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡುಯಲ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಬ್ರೇಕ್ ಸ್ವೇ ಕಂಟ್ರೋಲ್, ಲೊ-ಟ್ರಾಕ್ಷನ್ ಮೋಡ್, ಸೀಟ್‌ಬೆಲ್ಟ್ ರಿಮೈಂಡರ್, ಹೈ-ಸ್ಪೀಡ್ ಅಲರ್ಟ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ.

ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ (Tata Nexon facelift) ಸುರಕ್ಷೆತೆಗೂ ಹೆಸರುವಾಸಿಯಾಗಿದ್ದು, ಗ್ಲೋಬಲ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ತನ್ನದಾಗಿಸಿಕೊಂಡಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 32.22 ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 44.52 ಅಂಕಗಳನ್ನು ಗಳಿಸಿದೆ. ಈ ಕಾರಿನ ದರ ರೂ 8.15 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುತ್ತದೆ. 6 ಏರ್‌ಬ್ಯಾಗ್‌ ಸೇರಿದಂತೆ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Safest Cars Under Rs 10 Lakhs Tata Punch Nexon Altroz Mahindra Xuv300 Nissan Magnite

ಟಾಟಾ ಆಲ್ಟ್ರೋಜ್ (Tata Altroz) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ರೂ.6.7 ಲಕ್ಷ (ಎಕ್ಸ್ ಶೋರೂಂ) ಪ್ರಾರಂಭಿಕ ಬೆಲೆಯನ್ನು ಹೊಂದಿದೆ. ಸುರಕ್ಷತೆಗಾಗಿ 5-ಸ್ಟಾರ್ ರೇಟಿಂಗ್ ಪಡೆದಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 17ಕ್ಕೆ 16.13 ಅಂಕಗಳನ್ನು ಗಳಿಸಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಈ ಕಾರು ಡುಯಲ್ ಏರ್‌ಬ್ಯಾಗ್‌, ರೇರ್ ಪಾರ್ಕಿಂಗ್ ಸೇನಾರ್ಸ್ & ರೇರ್ ಕ್ಯಾಮೆರಾವನ್ನು ಪಡೆದಿದೆ.

ಮಹೀಂದ್ರಾ ಎಕ್ಸ್‌ಯುವಿ300 (Mahindra XUV300) ಕಾರಿನ ದರ ರೂ.7.99 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುತ್ತದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 17ಕ್ಕೆ 16.42 ಅಂಕಗಳನ್ನು ಪಡೆಯುವ ಮೂಲಕ 5-ಸ್ಟಾರ್ ರೇಟಿಂಗ್ ಗಳಿಸಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 17ಕ್ಕೆ 16.42 ಅಂಕಗಳನ್ನು ಗಳಿಸಿ 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಈ ಕಾರು, 6 ಏರ್ ಬಾಗ್ಸ್, ಫ್ರಂಟ್ & ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಒಳಗೊಂಡಿದೆ.

Safest Cars Under Rs 10 Lakhs Tata Punch Nexon Altroz Mahindra Xuv300 Nissan Magnite

ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಎಸ್‌ಯುವಿ ರೂ.6 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 17ಕ್ಕೆ 11.85 ಅಂಕಗಳನ್ನು ಗಳಿಸುವ ಮೂಲಕ 4-ಸ್ಟಾರ್ ರೇಟಿಂಗ್ ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 24.88 ಅಂಕಗಳನ್ನು ಪಡೆದು 2-ಸ್ಟಾರ್ ರೇಟಿಂಗ್ ಗಳಿಸಿದೆ. ಡುಯಲ್ ಫ್ರಂಟ್ ಏರ್‌ಬ್ಯಾಗ್‌, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 ಡಿಗ್ರಿ ಕ್ಯಾಮೆರಾ ಒಳಗೊಂಡಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ.

Safest Cars Under Rs 10 Lakhs Tata Punch Nexon Altroz Mahindra Xuv300 Nissan Magnite

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, April 27, 2024, 10:46 [IST]
English summary
Safest cars under rs 10 lakhs tata punch nexon altroz mahindra xuv300 nissan magnite
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+