ಕೇಂದ್ರದ ಸ್ಕ್ರ್ಯಾಪೇಜ್ ನೀತಿ: ಹೊಸ ಕಾರಿನ ಮೇಲೆ ಶೇ25 ರಸ್ತೆ ತೆರಿಗೆ, ಶೇ100 ನೋಂದಣಿ ಶುಲ್ಕ ಮನ್ನಾ!

ಹಳೆಯ ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಿ, ಕಡಿಮೆ ಕಾರ್ಬನ್ ಹೊರಸೂಸುವಿಕೆಯೊಂದಿಗೆ ಬರುವ ಇತ್ತೀಚಿನ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನ ಮಾರಾಟವನ್ನು ಉತ್ತೇಜಿಸಲು ಯೋಜಿಸಲಾದ ಅನೇಕ ಕ್ರಮಗಳ ಪೈಕಿ ಸ್ಕ್ರ್ಯಾಪೇಜ್ ನೀತಿ (scrappage policy) ಕೂಡ ಒಂದು. ಭಾರತ ಸರ್ಕಾರವು ಇದೀಗ ವಾಹನ ಸ್ಕ್ರ್ಯಾಪೇಜ್ ನೀತಿಗಾಗಿ ಕರಡನ್ನು ಬಿಡುಗಡೆ ಮಾಡಿದೆ.

ಅನೇಕ ಕಾರು ಮಾಲೀಕರಿಗೆ ಹೊಸ ಕಾರಿಗಿಂತ ತಮ್ಮ ಹಳೆಯ ಕಾರನ್ನು ಮೇಂಟೇನ್ ಮಾಡುವುದೇ ಹೆಚ್ಚು ದುಬಾರಿಯಾಗಿರುತ್ತದೆ. 15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಹೋಲಿಸಿದರೆ ಹೊಸ ಕಾರುಗಳು ಅತ್ಯುತ್ತಮವಾದ ಪರ್ಫಾಮೆನ್ಸ್ ಮತ್ತು ಮೈಲೇಜ್ ನೀಡುತ್ತವೆ. ಹಾಗೆಯೇ ಹೊಸ ವಾಹನಗಳು ಕಟ್ಟುನಿಟ್ಟಾದ ಕಾರ್ಬನ್ ಹೊರಸೂಸುವಿಕೆ ಮಾನದಂಡಗಳಿಗೆ ಅನುಗುಣವಾಗಿರುವುದರಿಂದ ಅವು ಕಡಿಮೆ ಮಾಲಿನ್ಯವನ್ನು ಉಂಟುಮಾಡುತ್ತವೆ.

scrappage-policy-25-road-tax-rebate-on-new-car-100-registration-fee-waiver

ಆದ್ದರಿಂದ ಸ್ಕ್ರ್ಯಾಪೇಜ್ ನೀತಿಯು, ಖರೀದಿದಾರರು ತಮ್ಮ ಹಳೆಯ ಕಾರುಗಳನ್ನು ಬೇಗ ಹೊಸ ಕಾರುಗಳೊಂದಿಗೆ ಬದಲಾಯಿಸಲು ಪ್ರೋತ್ಸಾಹಿಸುತ್ತದೆ. ಸ್ಕ್ರ್ಯಾಪ್‌ಪೇಜ್ ನೀತಿಯ ಕರಡು ಪ್ರಕಾರ, ವಾಹನದ ಫಿಟ್‌ನೆಸ್ ಪರೀಕ್ಷೆಯಲ್ಲಿ ಮೌಲ್ಯಮಾಪನ ಮಾಡಲಾಗುವ ಅಗತ್ಯ ಮಾನದಂಡಗಳನ್ನು ಪೂರೈಸಿದರೆ 15 ವರ್ಷಕ್ಕಿಂತ ಹಳೆಯದಾದ ಕಾರುಗಳನ್ನು ನೀವು ಇನ್ನೂ ಬಳಸಬಹುದು.

ಮುಂದಿನ ಐದು ವರ್ಷಗಳವರೆಗೆ ನಿಮ್ಮ ಹಳೆಯ ಕಾರನ್ನು ಬಳಸುವುದನ್ನು ಮುಂದುವರಿಸಲು ನೀವು ಮರು-ನೋಂದಣಿ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಹಾಗದ್ರೆ ವಾಹನ ಸ್ಕ್ರ್ಯಾಪೇಜ್ ನೀತಿಯ ಅಡಿಯಲ್ಲಿ ನಿಮ್ಮ ಹಳೆಯ ಕಾರನ್ನು ಸ್ಕ್ರಾಪ್ ಮಾಡುವ ಮೂಲಕ ಹೊಸ ಕಾರು ಖರೀದಿಯಲ್ಲಿ ಯಾವೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ಇಲ್ಲಿ ನೋಡೋಣ.

scrappage-policy-25-road-tax-rebate-on-new-car-100-registration-fee-waiver

ಸ್ಕ್ರ್ಯಾಪೇಜ್ ಪ್ರಯೋಜನಗಳು: ಹೊಸ ಕಾರು ಖರೀದಿಸುವ ಮುನ್ನ ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಲು ಬಯಸಿದರೆ ಈ ನೀತಿಯು ನಿಮಗೆ ಯಾವೆಲ್ಲಾ ಪ್ರಯೋಜನಗಳನ್ನು ನೀಡುತ್ತದೆ ಗೊತ್ತಾ? ನೀತಿಯ ಪ್ರಕಾರ, ಸ್ಕ್ರ್ಯಾಪೇಜ್ ಸೆಂಟರ್ ನಿಮಗೆ ವಾಹನದ ಎಕ್ಸ್ ಶೋ ರೂಂ ಬೆಲೆಯ ಶೇ 4 ರಿಂದ 6 ರಷ್ಟು ಮೊತ್ತವನ್ನು ತಕ್ಷಣವೇ ಒದಗಿಸುತ್ತದೆ. ಹೆಚ್ಚುವರಿ ಪ್ರಯೋಜನಗಳಲ್ಲಿ ನಿಮ್ಮ ಹೊಸ ಕಾರಿಗೆ ರಸ್ತೆ ತೆರಿಗೆಯಲ್ಲಿ ಶೇ25 ರಷ್ಟು ರಿಯಾಯಿತಿ ಒಳಗೊಂಡಿದೆ.

ಜೊತೆಗೆ ಸ್ಕ್ರ್ಯಾಪ್‌ಪೇಜ್ ಸೆಂಟರ್ ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಲು ಪ್ರಮಾಣಪತ್ರವನ್ನು ನೀಡುತ್ತದೆ. ಇದನ್ನು ಹೊಸ ಕಾರಿನ ನೋಂದಣಿ ಶುಲ್ಕದಲ್ಲಿ ಶೇ100 ರಷ್ಟು ಮನ್ನಾ ಪಡೆಯಲು ಬಳಸಿಕೊಳ್ಳಬಹುದು. ಈ ಪ್ರಮಾಣಪತ್ರವನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಬಹುದು ಇದರಿಂದ ಅವರು ಕೂಡ ಹೊಸ ಕಾರಿನ ಖರೀದಿಯಲ್ಲಿ ಪ್ರಯೋಜನಗಳನ್ನು ಪಡೆಯಬಹುದು.

scrappage-policy-25-road-tax-rebate-on-new-car-100-registration-fee-waiver

ಡ್ರಾಫ್ಟ್ ಪ್ರಕಾರ, ನಿಮ್ಮ ಹಳೆಯ ಕಾರಿನ ಸ್ಕ್ರ್ಯಾಪೇಜ್ ಪ್ರಮಾಣಪತ್ರವನ್ನು ತೋರಿಸಿದ ನಂತರ ಹೊಸ ವಾಹನದ ಬೆಲೆಯಲ್ಲಿ ಶೇಕಡಾ 5 ರಷ್ಟು ರಿಯಾಯಿತಿಯನ್ನು ನೀಡಲು ವಾಹನ ತಯಾರಕರಿಗೆ ಸಲಹೆ ನೀಡಲಾಗಿದೆ. ಒಟ್ಟಾರೆ ಈ ನೀತಿಯು ಅನರ್ಹವಾಗಿರುವ ಅಥವಾ ಕಾರ್ಬನ್ ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸಲು ವಿಫಲವಾದ ಹಳೆಯ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಗಮನಿಸಿ: ವಾಹನ ಸ್ಕ್ರ್ಯಾಪೇಜ್ ನೀತಿಯ ಅಡಿಯಲ್ಲಿ ಮೇಲೆ ತಿಳಿಸಲಾದ ಪ್ರಯೋಜನಗಳನ್ನು ಇನ್ನೂ ಕಾರ್ಯಗತಗೊಳಿಸಲಾಗಿಲ್ಲ ಎಂಬುದನ್ನು ದಯವಿಟ್ಟು ಗಮನಿಸಬೇಕು. ಈ ಪ್ರೋತ್ಸಾಹಕಗಳ ಅನ್ವಯವು ಬ್ರ್ಯಾಂಡ್‌ಗಳು ಮತ್ತು ಮಾಡಲ್‌ಗಳ ನಡುವೆ ಬದಲಾಗಬಹುದು. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಕಾರ್ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

scrappage-policy-25-road-tax-rebate-on-new-car-100-registration-fee-waiver

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, February 17, 2024, 16:19 [IST]
English summary
Scrappage policy 25 road tax rebate on new car 100 registration fee waiver
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+