ಹೊಸ ರೇಂಜ್ ರೋವರ್ ಖರೀದಿಸಿದ ಭಜರಂಗಿ ಗಾಯಕ: ಎಲ್ಲವೂ ಆತನ ಕೃಪೆಯೆಂದ ನೆಟ್ಟಿಗರು
ನಮ್ಮಲ್ಲಿ ಬಹುತೇಕ ಸೆಲೆಬ್ರಿಟಿಗಳಿಗೆ ಲಕ್ಷುರಿ ಕಾರುಗಳು, ದುಬಾರಿ ಬೆಲೆಯ ಎಸ್‌ಯುವಿಗಳು ಎಂದರೆ ಒಂದು ರೀತಿಯ ಕ್ರೇಜ್ ಎಂದರೆ ತಪ್ಪಾಗಲಾರದು. ಬಹುತೇಕ ಎಲ್ಲಾ ಸೆಲೆಬ್ರಟಿಗಳು ಸಹ ತಮ್ಮದೇ ಆದ ನೆಚ್ಚಿನ ಕಾರು ಮತ್ತು ಬೈಕುಗಳ ಕಲೆಕ್ಷನ್ ಇಟ್ಟುಕೊಂಡಿರುತ್ತಾರೆ ಎಂಬುದು ನಮ್ಮಲ್ಲಿ ಎಲ್ಲರಿಗೂ ತಿಳಿದಿದೆ.
ಅದೇ ರೀತಿ ಇಲ್ಲೊಬ್ಬ ಪ್ರಸಿದ್ದ ಗಾಯಕ ಕೈಲಾಶ್ ಖೇರ್ ಹೊಸ ಲಕ್ಷುರಿ ಎಸ್‌ಯುವಿಯೊಂದನ್ನು ಖರೀದಿಸಿದ್ದು ಇದೀಗ ಈ ಕುರಿತಾದ ಫೋಟೋ ಮತ್ತು ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದ್ದು, ದೇಶದಾದ್ಯಂತ ಇರುವ ಅಭಿಮಾನಿಗಳು ಶುಭ ಕೋರಿದ್ದಾರೆ. ಕನ್ನಡ ಸೇರಿದಂತೆ ಭಾರತದ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ಹಾಡಿ ಅಭಿಮಾನಿಗಳ ಹೃದಯವನ್ನು ಗೆದ್ದಿರುವ ಈ ಗಾಯಕ ತಮ್ಮ ಕನಸಿನ ಸ್ಪೋರ್ಟ್ಸ್ ಕಾರನ್ನು ಖರೀದಿಸಿ ತಮ್ಮ ಹಲವು ದಿನಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ನಾವು ಹಲವು ಕಡೆ ಸೆಲೆಬ್ರಿಟಿಗಳು ರೇಂಜ್ ರೋವರ್ ಕಾರುಗಳನ್ನು ಸೆಲೆಬ್ರಿಟಿಗಳ ಮನೆಗೆ ಡೋರ್ ಸ್ಟೆಪ್ ಡೆಲಿವರಿ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇಲ್ಲೂ ಸಹ ಕೈಲಾಶ್ ಖೇರ್ ಅವರ ಮನೆ ಬಾಗಿಲಿಗೇನೆ ಕಾರನ್ನು ಡೆಲಿವರಿ ನೀಡಲಾಗುತ್ತಿದ್ದು, ವೈರಲ್ ಆಗುತ್ತಿರುವ ಚಿತ್ರದಲ್ಲಿ ಕೈಲಾಶ್ ಖೇರ್ ಜೊತೆಗೆ ರೇಂಜ್ ರೋವರ್ ಕಂಪನಿಯ ಕೆಲಸಗಾರ ಮತ್ತು ಒಂದು ಪೂಜಾರಿಯನ್ನು ಸಹ ನೋಡಬಹುದಾಗಿದೆ. ಕಾರನ್ನು ಕೈಲಾಶ್ ಖೇರ್ ಹಿಂದೂ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಅನುಸರಿಸಿಕೊಂಡು ಮನೆಗೆ ಬರಮಾಡಿಕೊಂಡಿದ್ದಾರೆ.
ಇನ್ನು ಇದು ಮೂರನೇ ತಲೆಮಾರಿನ ರೇಂಜ್ ರೋವರ್ ಸ್ಪೋರ್ಟ್ ಕಾರಾಗಿದ್ದು ಮೂರನೇ ತಲೆಮಾರನ್ನು ೨೦೨೨ ರಲ್ಲಿ ಭಾರತದಲ್ಲಿ ಲಾಂಚ್ ಮಾಡಲಾಗಿತ್ತು. ಈ ಹೊಸ ಜನರೇಷನ್‌ನ ಎಸ್‌ಯುವಿ ಇದರ ಅಗ್ರೆಸಿವ್ ಲುಕ್ ಮತ್ತು ಸಾಕಷ್ಟು ಫೀಚಚರ್‌ಗಳನ್ನು ಹೊಂದಿರುವ ಈ ರೇಂಜ್ ರೋವರ್ ಸ್ಪೋರ್ಟ್ ದುರ್ಗಮ ಪ್ರದೇಶದಲ್ಲೂ ಚಲಿಸಲು ಹಿಂದೇಟು ಹಾಕಲಾರದು. ಈ ಕಾರಣಕ್ಕಾಗಿಯೇ ಇಂದು ನಮ್ಮಲ್ಲಿ ಹಲವರ ಕನಸಿನ ಎಸ್‌ಯುವಿ ಆಗಿದ್ದರೆ ಹಲವರು ಇದನ್ನು ಖರೀದಿಸಿ ನೆಚ್ಚಿನ ಎಸ್‌ಯುವಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ಸುಧಾರಿತ ಸ್ಟೈಲಿಂಗ್, ಹೆಚ್ಚು ದುಬಾರಿ ಒಳಾಂಗಣ ಮತ್ತು ಪವರ್ ಫುಲ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ಈ ಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ಎಸ್, ಎಸ್ಇ, ಹೆಚ್‌ಎಸ್ಇ ಮತ್ತು ಆಟೋಬಯೋಗ್ರಫಿ ಎಂಬ ರೂಪಾಂತರಗಳಲ್ಲಿ ಲಭ್ಯವಿರಲಿದೆ. ಲ್ಯಾಂಡ್ ರೋವರ್ ಎಲೆಕ್ಟ್ರಿಕರಣ ಪ್ರಯಾಣವನ್ನು ಮುಂದುವರೆಸುತ್ತಿರುವುದರಿಂದ, 2024ರಲ್ಲಿ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯನ್ನು ಎಲೆಕ್ಟ್ರಿಕ್ ಆವೃತ್ತಿಯಾಗಿ ಪರಿಚಯಿಸಲಾಗುವುದು ಎಂದು ಹೇಳಲಾಗುತ್ತಿದೆ.
ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯನ್ನು ಮೊದಲ ಬಾರಿಗೆ 2005 ರಲ್ಲಿ ಪರಿಚಯಿಸಲಾಯಿತು, ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ಪ್ರಪಂಚದ ಅತ್ಯಂತ ಅಪೇಕ್ಷಣೀಯ ಮತ್ತು ಜನಪ್ರಿಯ ಆಧುನಿಕ ಐಷಾರಾಮಿ ವಾಹನವಾಗಿದೆ. ಈ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ನಿಸ್ಸಂದಿಗ್ಧವಾದ ರೇಂಜ್ ರೋವರ್ ಮಾದರಿ ಆಗಿದ್ದು, ಮಸ್ಕಲರ್ ಮತ್ತು ಕ್ರಿಯಾತ್ಮಕ ನಿಲುವನ್ನು ಹೆಚ್ಚಿಸುತ್ತವೆ.

ಈ ಎಸ್‍ಯುವಿಯಲ್ಲಿ 345.98 bhp ಮತ್ತು 700 nm ಟಾರ್ಕ್ ಉತ್ಪಾದಿಸುವ 3.0 ಲೀಟರ್ ಡೀಸೆಲ್ ಎಂಜಿನ್ ಮತ್ತು 394.26 bhp ಮತ್ತು 550 nm ಟಾರ್ಕ್ ಅನ್ನು ಉತ್ಪಾದಿಸುವ 3.0 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡುತ್ತಿದೆ. ಸಂಯೋಜಿತ ಚಾಸಿಸ್ ನಿಯಂತ್ರಣವು ಇತ್ತೀಚಿನ ಸ್ವಿಚ್ ಮಾಡಬಹುದಾದ-ವಾಲ್ಯೂಮ್ ಏರ್ ಸಸ್ಪೆನ್ಷನ್ ಸಿಸ್ಟಮ್‌ನಿಂದ ಡೈನಾಮಿಕ್ ರೆಸ್ಪಾನ್ಸ್ ಪ್ರೊ ಎಲೆಕ್ಟ್ರಾನಿಕ್ ಸಕ್ರಿಯ ರೋಲ್ ನಿಯಂತ್ರಣದವರೆಗೆ ಎಲ್ಲವನ್ನೂ ಸಂಘಟಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








