13 ಲಕ್ಷಕ್ಕೂ ಕಡಿಮೆ ಬೆಲೆಗೆ ಭರ್ಜರಿ ಕಂಫರ್ಟ್‌: ಹಿಂಬದಿ ಪ್ರಯಾಣಿಕರಿಗೆ ಸೂಪರ್‌ ಕಂಫರ್ಟ್‌ ನೀಡುವ ಕಾರುಗಳು

ಕಾರು ಓಡಿಸುವವರಿಗೆ ಸಾಕಷ್ಟು ಆರಾಮದಾಯಕವಾಗಿರುತ್ತದೆ. ಬಹುತೇಕ ಕಾರುಗಳಲ್ಲಿ ಮುಂಬದಿ ಪ್ರಯಾಣಿಸುವವರಿಗೆ ಇರುವಷ್ಟು ಆರಾಮದಾಯಕವಾಗಿರುವುದಿಲ್ಲ ಹಿಂಬದಿ ಪ್ರಯಾಣಿಕರ ಪ್ರಯಾಣ. ಕೋಟಿ ಬೆಲೆಯ ಕಾರುಗಳು ಹಿಂಬದಿ ಸಿಟ್‌ನಲ್ಲಿ ಕುಳಿತಿರುವವರಿಗಾಗಿ ವಿನ್ಯಾಸಗೊಳಿಸಿದರೂ, ಬಹುತೇಕರಿಗೆ ಅಷ್ಟು ಬೆಲೆ ಕೊಟ್ಟು ಕಾರು ಕೊಳ್ಳುವ ಶಕ್ತಿ ಇರುವುದಿಲ್ಲ ಎಂದೇ ಹೇಳಬಹುದು.

ಇಂದಿನ ಈ ಲೇಖನದಲ್ಲಿ 13 ಲಕ್ಷ ರೂ ಬಜೆಟ್‌ನಲ್ಲಿ ಹಿಂಬದಿ ಪ್ರಯಾಣಿಕರಿಗೆ ಆರಾಮವಾಗಿ ಪ್ರಯಾಣಿಸಲು ಸಾಧ್ಯವಾಗುವ ಸೂಪರ್ ಕಂಫರ್ಟಬಲ್‌ ಬಜೆಟ್‌ ಕಾರುಗಳ ಕುರಿತಾಗಿ ನೋಡಲಿದ್ದೇವೆ. ಇದರ ಕುರಿತಾಗಿನ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ನೊಡಿ. ವಿವಿಧ ಕಂಪನಿಗಳ ಕಾರುಗಳನ್ನು ನಾವಿಲ್ಲಿ ಸೇರಿಸಿದ್ದು, ನಿಮ್ಮ ನೆಚ್ಚಿನ ಕಾರು ಇದ್ದರೂ ಇರಬಹುದು.

Super Comfort Cars For Rear Passengers Under 13 Lakh Kia Maruti Ciaz Honda Elevate And More

1. ಮಾರುತಿ ಸಿಯಾಜ್‌: ಮಾರುತಿ ಸುಜುಕಿ ಕಾರಿನ ಜನಪ್ರಿಯ ಸೆಡಾನ್‌ ಕಾರುಗಳಲ್ಲಿ ಪ್ರಮುಖವಾದುದು ಈ ಸುಜುಕಿ ಸಿಯಾಜ್‌. ವಿಶಾಲವಾದ ಇಂಟೀರಿಯರ್‌ ಸ್ಥಳಾವಕಾಶ ಹೊಂದಿರುವ ಈ ಕಾರು ಹಲವರ ನೆಚ್ಚಿನ ಕಾರಾಗಿದೆ. ಹಲವರು ಈ ಕಾರನ್ನು ದಿನಂಪ್ರತಿ ಬಳಕೆಗೆ ಮಾತ್ರವಲ್ಲದೇ ದೂರ ಪ್ರಯಾಣಕ್ಕೂ ಇದನ್ನು ಬಳಸುತ್ತಿರುವುದನ್ನು ನಾವು ಕಾಣಬಹುದಾಗಿದೆ.

2. ಕಿಯಾ ಕಾರೆನ್ಸ್‌: ಹಿಂಬದಿ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುವ ಮತ್ತೊಂದು ಕಾರು ಈ ಕಿಯಾ ಕಾರೆನ್ಸ್‌. ಕಾರೆನ್ಸ್ ಕಾರು ಮಾದರಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯಲ್ಲಿರುವಂತೆ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಎಂಜಿನ್ ಆಯ್ಕೆಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.

Super Comfort Cars For Rear Passengers Under 13 Lakh Kia Maruti Ciaz Honda Elevate And More

3. ಹೋಂಡಾ ಎಲಿವೇಟ್: ಎಲಿವೇಟ್ ನ್ಯಾಚುರಲ್ಲಿ ಆಸ್ಪಿರೇಟೆಡ್ DOHC, 1.5-ಲೀಟರ್, 4 ಸಿಲಿಂಡರ್, i-VTEC ಪೆಟ್ರೋಲ್ ಎಂಜಿನ್ ಹೊಂದಿದೆ. ಹೊಸ ಹೋಂಡಾ ಎಲಿವೇಟ್‌ನಲ್ಲಿ (Honda Elevate), ಎಂಜಿನ್ 6,600 ಆರ್‌ಪಿಎಂ ನಲ್ಲಿ 119.35 ಬಿಹೆಚ್‌ಪಿ ಪವರ್ ಮತ್ತು 4,300 ಆರ್‌ಪಿಎಂ ನಲ್ಲಿ 145 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.

ಎಲಿವೇಟ್ ತನ್ನ ಮುಂಭಾಗದ ಚಕ್ರಗಳಿಗೆ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಿಂದ ಸಹಾಯವನ್ನು ನೀಡುತ್ತದೆ. ಮ್ಯಾನುಯಲ್ ಗೇರ್‌ಬಾಕ್ಸ್‌ನೊಂದಿಗೆ ಎಲಿವೇಟ್ 15.31km/l ಮೈಲೇಜ್ ಅನ್ನು ಹಿಂದಿರುಗಿಸುತ್ತದೆ, ಹಾಗೆಯೇ CVT ನೋಡಿಕೊಂಡರೆ 16.92km/l ಗೆ ಮೈಲೇಜ್ ನೀಡುತ್ತದೆ.

Super Comfort Cars For Rear Passengers Under 13 Lakh Kia Maruti Ciaz Honda Elevate And More

4. ಮಾರುತಿ ಸುಜುಕಿ XL6: ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ಎಂಪಿವಿ ರೂ.11.61 ಲಕ್ಷದಿಂದ ರೂ.14.77 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಈ ಕಾರು ಜಿಟಾ, ಅಲ್ಫಾ ಸೇರಿದಂತೆ ವಿವಿಧ ರೂಪಾಂತರ ಹಾಗೂ ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದ್ದು, ಪೆಟ್ರೋಲ್ ರೂಪಾಂತರಗಳು 20.27 ರಿಂದ 20.97 ಕೆಎಂಪಿಎಲ್, ಸಿಎನ್‌ಜಿ ಮಾದರಿ 26.32 ಕೆಎಂ/ಕೆಜಿ ಮೈಲೇಜ್ ನೀಡುತ್ತ

5. ಹೋಂಡಾ ಸಿಟಿ: ಈ ಹೊಸ ಹೋಂಡಾ ಸಿಟಿ ಕಾರಿನ ಆರಂಬಿಕ ಬೆಲೆಯು ಬೆಲೆಯು ರೂ.12.08 ಲಕ್ಷವಾಗಿದೆ. ಈ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು SV, V, VX ಮತ್ತು ZX ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಹೋಂಡಾ ಸಿಟಿ ಫೇಸ್‌ಲಿಫ್ಟ್‌ ಕಾರಿನಲ್ಲಿ 1.5-ಲೀಟರ್, ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

Super Comfort Cars For Rear Passengers Under 13 Lakh Kia Maruti Ciaz Honda Elevate And More

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 4, 2024, 13:12 [IST]
English summary
Super comfort cars for rear passengers under 13 lakh kia maruti ciaz honda elevate and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+