ಭಾರತೀಯರ ಫೇವರೆಟ್ ಕಾರುಗಳಿವು: ಫೆಬ್ರವರಿಯಲ್ಲಿ ಹೆಚ್ಚು ಮಾರಾಟವಾದ ಕಾರು ಯಾವುದು?

ಭಾರತದಲ್ಲಿ ಕಳೆದ ಫೆಬ್ರವರಿಯಲ್ಲಿ ಆಟೋ ಉದ್ಯಮ ಉತ್ತಮ ಲಾಭ ಗಳಿಸಿದೆ. ಮಾರುತಿ, ಟಾಟಾ, ಹ್ಯುಂಡೈ ಬ್ರಾಂಡ್‌ಗಳ ಕಾರುಗಳು ಭರ್ಜರಿ ಮಾರಾಟ ಕಂಡಿವೆ. ಫೆಬ್ರವರಿ 2024 ರಲ್ಲಿ ಕೇವಲ ಈ ಟಾಪ್ 10 ಕಾರುಗಳೇ ಬರೋಬ್ಬರಿ 1,61,378 ಯುನಿಟ್‌ಗಳ ಸಾಮೂಹಿಕ ಮಾರಾಟವನ್ನು ದಾಖಲಿಸಿವೆ.

ಜೊತೆಗೆ ಕಳೆದ ವರ್ಷ (2023) ಫೆಬ್ರವರಿಯಲ್ಲಿ ಮಾರಾಟವಾಗಿದ್ದ 1,16,992 ಯುನಿಟ್‌ಗಳಿಗೆ ಹೋಲಿಸಿಕೊಂಡರೆ ಈ ವರ್ಷ ಶೇ37.94 ರಷ್ಟು ಬೆಳವಣಿಗೆಯಾಗಿದೆ. ಮಾರುತಿ ಬಲೆನೊ, ಡಿಜೈರ್ ಮತ್ತು ಬ್ರೆಝಾವನ್ನು ಹೊರತುಪಡಿಸಿ, ಟಾಪ್ 10 ನಲ್ಲಿರುವ ಇತರ ಎಲ್ಲಾ ಕಾರುಗಳು ಸಕಾರಾತ್ಮಕ ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿರುವುದು ವಿಶೇಷ.

top-10-cars-in-2024-february-tata-mahindra-maruti-hyundai

ವಿಷಯಕ್ಕೆ ಬಂದರೆ ಮಾರುತಿ ಫ್ರಾಂಕ್ಸ್ 14,168 ಕಾರುಗಳ ಮಾರಾಟದೊಂದಿಗೆ 10ನೇ ಸ್ಥಾನದಲ್ಲಿದ್ದರೆ, 9ನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್ ಇದ್ದು, ನೆಕ್ಸಾನ್ ಬರೋಬ್ಬರಿ 14,395 ಯುನಿಟ್ ಕಾರುಗಳು ಮಾರಾಟವಾಗಿವೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಮಾರಾಟವಾದ 13,914 ಟಾಟಾ ನೆಕ್ಸಾನ್ ಕಾರುಗಳಿಗೆ ಹೋಲಿಸಿದರೆ ವಾರ್ಷಿಕವಾಗಿ 3.46 ರಷ್ಟು ಬೆಳವಣಿಗೆ ಸಾಧಿಸಿದೆ.

ಮಹೀಂದ್ರಾ ಸ್ಕಾರ್ಪಿಯೋ/ಎನ್ 8ನೇ ಸ್ಥಾನದಲ್ಲಿದ್ದು, ಶೇ 116.56 ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸುವ ಮೂಲಕ ಮಾರಾಟವು ದ್ವಿಗುಣಗೊಂಡಿದೆ. ಹ್ಯುಂಡೈ ಕ್ರೆಟಾ 7 ನೇ ಸ್ಥಾನದಲ್ಲಿದ್ದು, ಫೆಬ್ರವರಿಯಲ್ಲಿ 15,276 ಯುನಿಟ್ ಕ್ರೆಟಾ ಕಾರುಗಳು ಮಾರಾಟವಾಗಿವೆ. ವಾರ್ಷಿಕವಾಗಿ ಶೇ 46.59 ರಷ್ಟು ಬೆಳವಣಿಗೆ ಸಾಧಿಸಿದೆ.

top-10-cars-in-2024-february-tata-mahindra-maruti-hyundai

ಮಾರುತಿ ಎರ್ಟಿಗಾ 6ನೇ ಸ್ಥಾನದಲ್ಲಿದ್ದು 15,519 ಕಾರುಗಳನ್ನು ಮಾರಾಟ ಮಾಡಿದೆ. ವಾರ್ಷಿಕವಾಗಿ ಶೇ 139.79 ರಷ್ಟು ಬೆಳವಣಿಗೆ ಸಾಧಿಸಿದೆ. ಮಾರುತಿ ಬ್ರೆಝಾ ಮತ್ತು ಡಿಜೈರ್ ಕ್ರಮವಾಗಿ 5 ಹಾಗೂ 4 ಸ್ಥಾನಗಳನ್ನು ಧಕ್ಕಿಸಿಕೊಂಡಿದ್ದು, ಮಾರಾಟವು 15 ಸಾವಿರಕ್ಕಿಂತ ಹೆಚ್ಚಿದ್ದರೂ, ವಾರ್ಷಿಕವಾಗಿ ಬೆಳವಣಿಗೆಯಲ್ಲಿ ಇಳಿಕೆಯಾಗಿದೆ. ಬ್ರೆಝಾ ಮಾರಾಟವು ಶೇ0.14 ರಷ್ಟು ಹಾಗೂ ಡಿಜೈರ್ ಶೇ5.72 ರಷ್ಟು ಕುಸಿದಿದೆ.

ಬಲೆನೊ ಮೂರನೇ ಸ್ಥಾನದಲ್ಲಿದ್ದು, ಫೆಬ್ರವರಿಯಲ್ಲಿ 17,517 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಾರ್ಷಿಕವಾಗಿ ಶೇ 5.78% ರಷ್ಟು ಇಳಿಕೆಯನ್ನು ಕಂಡಿದೆ. ಬಲೆನೊ ಟಾಪ್ 10 ಪಟ್ಟಿಯಲ್ಲಿ ಶೇ10.85 ಪಾಲನ್ನು ಪಡೆದಿದೆ. ಇನ್ನು ಎಂದಿನಂತೆ ಮಾರುತಿ ಸುಜುಕಿ ಭಾರತದಲ್ಲಿ ಕೆಲ ದಶಕಗಳಿಂದ ಅಗ್ರ ಸ್ಥಾನದಲ್ಲಿ ಮುಂದುವೆರೆಯುತ್ತಿದೆ.

top-10-cars-in-2024-february-tata-mahindra-maruti-hyundai

ಈಗಲೂ ಅದೇ ವೇಗವನ್ನು ಮುಂದುವರಿಸಿದ್ದು, ಫೆಬ್ರವರಿ 2024 ರಲ್ಲಿ ಟಾಪ್ 10 ಪಟ್ಟಿಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. ಟಾಪ್ 10 ಕಾರುಗಳಲ್ಲಿ ಆಶ್ಚರ್ಯಕರವಾಗಿ 6 ಕಾರುಗಳು ಮಾರುತಿ ಕಾರುಗಳಾಗಿವೆ. ಇದರಲ್ಲಿ ವ್ಯಾಗನ್ ಆರ್‌ ಕಾರು ಭಾರತೀಯರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ಬರೋಬ್ಬರಿ 19,412 ಕಾರುಗಳ ಮಾರಾಟದೊಂದಿಗೆ ಮಾರುತಿ ವ್ಯಾಗನ್ ಆರ್ ಮೊದಲ ಸ್ಥಾನದಲ್ಲಿದೆ.

ವಾರ್ಷಿಕವಾಗಿ ಶೇ14.94 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಟಾಪ್ 10 ಕಾರುಗಳಲ್ಲಿ ವ್ಯಾಗನ್ಆರ್ ಪಾಲು ಶೇ12.03 ರಷ್ಟಿದೆ. ಟಾಟಾ ಪಂಚ್ ಎರಡನೇ ಸ್ಥಾನ ಧಕ್ಕಿಸಿಕೊಂಡಿದೆ. ಟಾಟಾ ಪಂಚ್ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡಿದೆ. ಪಂಚ್ ನೆಕ್ಸಾನ್ ಗಿಂತ ಗಮನಾರ್ಹ ಅಂತರದಿಂದ ಮುಂದಿದೆ.

top-10-cars-in-2024-february-tata-mahindra-maruti-hyundai

ಕಳೆದ ವರ್ಷದ ಫೆಬ್ರವರಿಯಲ್ಲಿ ಮಾರಾಟವಾದ 11,169 ಯುನಿಟ್‌ ಕಾರುಗಳಿಗೆ ಹೋಲಿಸಿದರೆ ಈ ಬಾರಿ 18,438 ಯುನಿಟ್ ಕಾರುಗಳನ್ನು ಟಾಟಾ ಮಾರಾಟ ಮಾಡುವ ಮೂಲಕ ಶೇ 65.08 ರಷ್ಟು ಪ್ರಭಾವಶಾಲಿ ಲಾಭವನ್ನು ಟಾಟಾ ಪಂಚ್ ತಂದುಕೊಂಟ್ಟಿದೆ. ಪಟ್ಟಿಯಲ್ಲಿ ಪಂಚ್ ಪಾಲು ಶೇ11.43 ರಷ್ಟಿದೆ.

More from DriveSpark

Article Published On: Tuesday, March 12, 2024, 11:47 [IST]
English summary
Top 10 cars in 2024 february tata mahindra maruti hyundai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+